ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಮನುಷ್ಯನು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಉತ್ತಮ ಆಹಾರವನ್ನು ಸೇವಿಸಿ ಪರಿಸರದ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ಆರೋಗ್ಯ ಭದ್ರತೆ ಮಾಡಿಕೊಳ್ಳಬೇಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ನೀಡಿದೆ ಎಂದು ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಸಂಪೂರ್ಣ ಸುರಕ್ಷಾ ಯೋಜನೆ ಕುರಿತು ಮಾಹಿತಿ ನೀಡಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಸಂಪೂರ್ಣ ಸುರಕ್ಷಾ ಯೋಜನೆ ಕುರಿತು ಮಾಹಿತಿ ನೀಡಿ ಮಾತನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಸರಕಾರದ ಜಿಲ್ಲಾ ಮಟ್ಟದ ಕೆಡಿಪಿ ಸಮಿತಿ ಕಾರ್ಯಾಚರಿಸುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಸರಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಅನುಭವ ಹೊಂದಿರುವ ರಾಜು ಪೂಜಾರಿ ಅವರನ್ನು ಕೆಡಿಪಿ ಸಮಿತಿಯ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರಕಾರವು ಆದೇಶ ಹೊರಡಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಇಲ್ಲಿನ ಪರಿಸರದಲ್ಲಿ ನಡೆಸುತ್ತಿರುವ ಉಚಿತ ಮಾನಸಿಕ ಆರೋಗ್ಯ ಶಿಬಿರದ ಪ್ರಯೋಜನ ಪರಿಸರದ ಬಡ ರೋಗಿಗಳು ಪಡೆದುಕೊಳ್ಳುವಂತಾಗಲಿ ಎಂದು ಕೋಟ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್ ಹೇಳಿದರು. ಮನಸ್ಮಿತ ಫೌಂಡೇಶನ್ ಕೋಟ, ಪರಿವರ್ತನ ಪುನರ್ವಸತಿ ಕೇಂದ್ರ ಕೋಟ, ಲಯನ್ಸ್ ಕ್ಲಬ್ ಬ್ರಹ್ಮಾವರ, ಬಾರ್ಕೂರು ಇವರ ವತಿಯಿಂದ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರವನ್ನು ಉದ್ಘಾಟಿಸಿ ಮಾನಾಡಿದರು. ಇಂತಹ ಒಂದು ಉತ್ತಮ ಕಾರ್ಯವನ್ನು ಪ್ರತಿ ತಿಂಗಳು ಹಮ್ಮಿಕೊಂಡಿರುವ ಈ ಸಂಸ್ಥೆಗಳ ಪ್ರಯತ್ನ ನಿಜವಾಗಲೂ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಭರತ್ ಸೆಲೆಬ್ರೇಶನ್‌ನ ಚೇರ್‌ಮನ್, ಉದ್ಯಮಿ ಭರತ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರಂತರವಾಗಿ ಸಾಗಲಿ, ಜನರು ಯಾವುದೇ ಹಿಂಜರಿಕೆಯಿಲ್ಲದೆ ಮಾನಸಿಕ ಶಿಬಿರಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು. ಮನೋವೈದ್ಯರಾದ ಡಾ| ಪ್ರಕಾಶ್ ತೋಳಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿವಿ, ಮೂಗು, ಗಂಟಲು ವೈದ್ಯರಾದ ಡಾ| ಸತೀಶ್ ಪೂಜಾರಿ ಸಭೆಯ ಅಧ್ಯಕ್ಷೆ ವಹಿಸಿದ್ದರು. ಲಯನ್ಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪರಿಸರವನ್ನು ಉಳಿಸಿಬೆಳೆಸುವಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳು ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಇತರರಲ್ಲೂ ಆ ಬಗೆಗ ಪ್ರಜ್ಞೆಯನ್ನು ಮೂಡಿಸಬೇಕು ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶಿನಾಥ ಪೈ ಅಭಿಪ್ರಾಯಪಟ್ಟರು ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರದ ಅರಿವು ನೆರವು ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ನಿಶ್ಮಿತಾ ಮತ್ತು ಅನುಷಾ ಶೆಣೈ ಪರಿಸರ ರಕ್ಷಣೆಯ ಕುರಿತಂತೆ ವಿಚಾರಗಳನ್ನು ಮಂಡಿಸಿ ನಮ್ಮ ದಿನನಿತ್ಯದ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿಯೂ ಕೂಡ ಪರಿಸರಕ್ಕೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇರುವ ಪರಿಸರವನ್ನು ರಕ್ಷಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದರು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಕವಿತಾ ಎಮ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ನಾಗರಾಜ ನಾಯಕ್ ಕಾರ‍್ಯಕ್ರಮ ನಿರೂಪಿಸಿದರು. ನಾಗೇಂದ್ರ ಮೊಗವೀರ ವಂದಿಸಿದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ಥಳೀಯ ಪತ್ರಿಕೆಯೊಂದರಲ್ಲಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಕ್ಷಾಧಾರಗಳಿಲ್ಲದೆ ನಿರಂತರವಾಗಿ ವ್ಯಕ್ತಿಯೋರ್ವರ ಮಾನಹಾನಿ ಮಾಡಲಾಗುತ್ತಿರುವುದನ್ನು ಖಂಡಿಸಿ ಬೈಂದೂರು ಹೊಬಳಿಯ ಸಾರ್ವಜನಿಕರು ಬೈಂದೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಮಾತನಾಡಿ, ಅಕ್ಷತಾ ದೇವಾಡಿಗಳ ಕೊಲೆಯ ಕುರಿತಾಗಿ ಪತ್ರಿಕೆಯೊಂದರಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ನಿರಂತವಾಗಿ ಮಾಡುತ್ತಾ ತೇಜೋವಧೆ ಮಾಡಿರುವುದಲ್ಲದೇ ಅಕ್ಷತಾಳ ಕುಟುಂಬಕ್ಕೂ ಮತ್ತೆ ಕರಾಳ ದಿನವನ್ನು ನೆನಪಿಸುವಂತೆ ಮಾಡಲಾಗುತ್ತಿದೆ. ಇಂತಹ ಘಟನೆಗಳು ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟುಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸಲು ದಾರಿಮಾಡಿಕೊಡುತ್ತವೆ ಎಂದರು. ಕುಂದಾಪ್ರ ಡಾಟ್ ಕಾಂ ವರದಿ ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ ಅಕ್ಷತಾ ದೇವಾಡಿಗ ಪ್ರಕರಣವನ್ನು ಸ್ವತಃ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಅವರೇ ಕೈಗೆತ್ತಿಕೊಂಡು ತನಿಕೆ ನಡೆಸಿ ನೈಜ ಆರೋಪಿಯನ್ನು ಬಂಧಿಸಿದ್ದಾರೆ. ಆದಾಗ್ಯೂ ಇನ್ನೂ ಕೆಲವು ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿ ನಿರಂತರವಾಗಿ ಪತ್ರಿಕೆಯಲ್ಲಿ ಬರೆದು ಸಮಾಜಕ್ಕೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಂಡ್ಲೂರು ಸಂತ ಅಂತೋನಿ ಪ್ರಾರ್ಥನಾ ಮಂದಿರದ ಆವರಣದ ಎದುರಿನಲ್ಲಿ ನಿಲ್ಲಿಸಲಾಗಿದ್ದ ಸಂತ ಅಂತೋನಿ ಮೂರ್ತಿಯನ್ನು ದುಷ್ಕರ್ಮಿಗಳು ಒಡೆದುಹಾಕಿದ ಘಟನೆ ವರದಿಯಾಗಿದೆ. ಕಂಡ್ಲೂರಿನ ಪ್ರಾರ್ಥನಾ ಮಂದಿರ ನಾಲ್ಕು ಬದಿಗಳಲ್ಲಿ ಸಂತ ಅಂತೋನಿ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಅದಕ್ಕೆ ಕೋಣೆಯನ್ನು ನಿರ್ಮಿಸಲಾಗಿತ್ತು. ಭಾನುವಾರ ರಾತ್ರಿ ಬಳಿ ಮಳೆ ಇದ್ದುದನ್ನು ತಮ್ಮ ಕುಕೃತ್ಯಕ್ಕೆ ಬಳಸಿಕೊಂಡ ದುಷ್ಕರ್ಮಿಗಳು ಮೂರ್ತಿಯನ್ನು ಒಡೆದು ಪುಡಿಗೈದಿದ್ದಾರೆ. ಬೆಳಿಗ್ಗೆ ವೇಳೆಗೆ ಒಡೆದ ಮೂರ್ತಿಯನ್ನು ಕಂಡ ಸ್ಥಳೀಯರು ಧರ್ಮಗುರು ವಿಶಾಲೋ ಲೋಬೋ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್‌ನ ಅಧೀನಕ್ಕೊಳಪಟ್ಟಿದ್ದು ಕಂಡ್ಲೂರಿನ ಪ್ರಾರ್ಥನಾ ಮಂದಿರವೂ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರೂ ನಿರ್ಭೀತವಾಗಿ ದುಷ್ಕೃತ್ಯ ನಡೆಸಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿರುವುದನ್ನು ಸರ್ವಧರ್ಮದ ಮುಖಂಡರು ಖಂಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಲೆಸಿಮೀಯ ಮೇಜರ್ (ರಕ್ತ ಹೀನತೆ) ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ನಿವಾಸಿಯಾಗಿರುವ ಮೂರು ವರ್ಷದ ಬಾಲಕಿ ಗ್ರಿಷ್ಮಿತಾ ವೈದ್ಯಕೀಯ ಚಿಕಿತ್ಸೆಗಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ. ಬೆಂಗಳೂರಿನಲ್ಲಿ ಬೀಡಾ ಅಂಗಡಿ ನಡೆಸುತ್ತಿರುವ ಕಟ್‌ಬೇಲ್ತೂರು ಗ್ರಾಮದ ಸುಳ್ಸೆ ನಿವಾಸಿ ಮಧುಕರ ಪೂಜಾರಿ ಎಂಬುವರ ಏಕೈಕ ಪುತ್ರಿ ಮೂರು ವರ್ಷದ ಬಾಲಕಿ ಗ್ರಿಷ್ಮಿತಾಳಿಗೆ ತಲೆಸಿಮೀಯ ಮೇಜರ್ (ರಕ್ತಹೀನತೆ) ಕಾಯಿಲೆ ಇರುವುದು ವೈದ್ಯರ ತಾಪಾಸಣೆಯಿಂದ ಕಂಡು ಬಂದಿದೆ. ಇದರಿಂದಾಗಿ ಪ್ರತಿ ತಿಂಗಳಿಗೊಮ್ಮೆ ರಕ್ತವನ್ನು ಜೀವನ ಪರ್ಯಂತ ನೀಡಬೇಕಾಗುತ್ತದೆ ಅಲ್ಲದೆ ಇದರ ಚಿಕಿತ್ಸೆಗಾಗಿ ಮೋನ್ ಮೆರೋ ಟ್ರಾನ್ಸ್‌ಪ್ಲೆಂಟ್ (ಅಸ್ತಿಮಜ್ಜೆ) ಮಾಡಬೇಕಾಗುತ್ತದೆ. ಈ ಚಿಕಿತ್ಸೆಗೆ ಸುಮಾರು 30 ಲಕ್ಷದಿಂದ ೩೫ ಲಕ್ಷದವರೆಗೆ ಖರ್ಚು ತಗುಲಬಹುದು ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞ ವೈದ್ಯರು ತಿಳಿಸಿದ್ದಾರೆ. ಮಧುಕರ ಪೂಜಾರಿ ಆರ್ಥಿಕವಾಗಿ ತೀರ ಬಡವರಾಗಿದ್ದು, ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಂಗಳೂರಿನಲ್ಲಿ ಬೀಡಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದಾರೆ. ಊರಿನ ಮನೆಯಲ್ಲಿ ತಾಯಿಯಿಬ್ಬರೇ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಮೊವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಾ, ಭಾವನಾ ಮತ್ತು ಆರ‍್ವಿನ್ ಬಿ.ಎಸ್.ಇ.ಆರ್.ಟಿ ಯಿಂದ ನಡೆಸಲ್ಪಡುವ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯೋಪಧ್ಯಾಯರು ಮತ್ತು ಶಿಕ್ಷಕರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ಧಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಸುಮಾರು ೩೮ ವರುಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀನಾಗ ಪೂಜಾರಿ ಅವರನ್ನು ಕುಂದಾಪುರದ ಮೆಸ್ಕಾಂ ಕಛೇರಿಯಲ್ಲಿ ಬೀಳ್ಕೋಡಲಾಯಿತು. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಪುಟ್ಟಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಅಶೋಕ್ ಪೂಜಾರಿ, ರಾಘವೇಂದ್ರ, ಅಶೋಕ್ ಅಂಕೋಲ್ದೇಕರ್, ಕೃಷ್ಣಮೂರ್ತಿ ಹಾಗೂ ನೌಕರರ ಸಂಘದ ಬಾಬಣ್ಣ ಪೂಜಾರಿ, ಮಲ್ಲಿಕಾರ್ಜುನ. ಎಸ್ ಉಳ್ಳಾಗಡ್ಡಿ, ಉಪಸ್ಧಿತರಿದ್ದರು. ಶ್ರೀನಾಗ ಪೂಜಾರಿ ಅವರು ರೋಟರಿ ಕುಂದಾಪುರ ವತಿಯಿಂದ ಬೆಸ್ಟ್ ಲೈನಮ್ಯಾನ್ ಪ್ರಶಸ್ತಿಯನ್ನು. ಹಾಗೆಯೇ ಇಂಜಿನಿಯರಿಂಗ್ ಅಸೋಸಿಯೇಷನ್ ವತಿಯಿಂದ ಬೆಸ್ಟ್ ಕಂಪನಿ ಲೈನಮಾನ್ ಪ್ರಶಸ್ತಿಯನ್ನು ಹಾಗೂ ಮೆಸ್ಕಾಂ ಮಟ್ಟದಲ್ಲಿ ಉತ್ತಮ ಮಾರ್ಗದಾಳು ಪ್ರಶಸ್ತಿಯನ್ನು ಪಡೆದಿದ್ದು ಕುಂದಾಪುರದ ಶಾಖೆಯಲ್ಲಿ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶಿಕ್ಷಣ ಸಂಸ್ಥೆಯೊಂದು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಶಿಕ್ಷಕರ ಬೋಧನೆಯ ಮೇಲೆ ವಿದ್ಯಾರ್ಥಿಗಳ ಕಲಿಕೆ ನಿರ್ಧಾರವಾಗುವುದರಿಂದ ಶಿಕ್ಷಕರಿಗೆ ಪುನರ್‌ಚೈತನ್ಯ ನೀಡುವುದು ಅಗತ್ಯವಾಗಿರುತ್ತದೆ. ಈ ಉದ್ದೇಶದಿಂದ ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ಶಿಕ್ಷಕರಿಗೆ ಮೂರು ದಿನಗಳ ಪುನರ್‌ಚೈತನ್ಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ವಿವಾ ಪಬ್ಲಿಕೇಷನ್‌ರವರು ಆಯೋಜಿಸಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದಯಾ ಎಸ್. ಉನ್ನಿ ಹಾಗೂ ಆಪ್ತಸಮಾಲೋಚನಾ ಮನಃಶಾಸ್ತ್ರಜ್ಞೆ ದೀಕ್ಷಾ ಎಸ್. ಉನ್ನಿ ಇವರುಗಳು ಶಿಕ್ಷಕರಿಗೆ ನಾಯಕತ್ವ ಕೌಶಲ, ತಂಡ ರಚನೆ, ತರಗತಿ ಕೋಣೆಯ ನಿರ್ವಹಣೆ, ಪಾಠಯೋಜನೆಯ ಹಂತಗಳಂತಹ ಉಪಯುಕ್ತ ಅಂಶಗಳ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ ಮಾಹಿತಿ ಒದಗಿಸಿಕೊಡುವುದರ ಮೂಲಕ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಇವರು ಶಿಕ್ಷಕರನ್ನು ಉದ್ದೇಶಿಸಿ ಶಿಕ್ಷಕರು ಇಂತಹ ಪುನರ್‌ಚೈತನ್ಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಸಂಸ್ಥೆಗೆ ಉತ್ತಮ ಸೇವೆಯನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಪ್ರಜೆಗಳನ್ನು ನೀಡಲು ಸಾಧ್ಯವಾಗುತ್ತದೆ. ಹಾಗೆ…
