ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾಸರಗೋಡು: ಪತ್ರಕರ್ತರ ವೇದಿಕೆ ರಿ. ಬೆಂಗಳೂರು, ಉಡುಪಿ-ದ.ಕ ಜಿಲ್ಲಾ ಘಟಕ ಕಳೆದ 8 ವರ್ಷಗಳಿಂದ ಪತ್ರಿಕಾ ದಿನದ ಅಂಗವಾಗಿ ಯಾಶಸ್ವಿಯಾಗಿ ಆಯೋಜಿಸುತ್ತಿರುವ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಈ ವರ್ಷ ಡೆಕ್ಕನ್ ಹೆರಾಲ್ಡ್, ನವಭಾರತ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಅಪೂರ್ವ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ಕಾಸರಗೋಡು ಶಿರಿಯಾದ ಮಲಾರ್ ಜಯರಾಮ ರೈಗಳ ನಿವಾಸದಲ್ಲಿ ನಡೆದ ವಿನೂತನ ಕಾರ್ಯಕ್ರಮದಲ್ಲಿ ಸಂಘಟಕ, ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಟ ಪುನರೂರು ಅವರು ರೈಗಳಿಗೆ ಲೇಖನ ಪರಿಕರಗಳು ಹಾಗೂ ಪ್ರಶಸ್ತಿ ಫಲಕವನ್ನಿತ್ತು ಗೌರವಿಸಿದರು. ಬಳಿಕ ಹರಿಕೃಷ್ಟ ಪುನರೂರು ಮಾತನಾಡಿ, ಮಲಾರು ಜಯರಾಮ ರೈ ಅವರಂತಹ ಹಿರಿಯ ಹಾಗೂ ಕರ್ತವ್ಯ ನಿಷ್ಠ ಪತ್ರಕರ್ತರನ್ನು ಗುರುತಿಸಿ ಗೌರವಿಸಿತ್ತಿರುವುದು ಶ್ಲಾಘನಾರ್ಹ. ಶೇಖರ ಅಜೆಕಾರು ಅವರು ಪತ್ರಕರ್ತರ ವೇದಿಕೆ ಮೂಲಕ ಹಲವಾರು ಹಿರಿಯ ಪತ್ರಕರ್ತರು ಹಾಗೂ ವೃತ್ತಿನಿರತ ಪತ್ರಕರ್ತರ ಮುಖಮುಖಿಯಾಗಿಸುವ ಕಾರ್ಯ ಮಾಡಿ ಕಾರ್ಯಕ್ರಮಕ್ಕೊಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳು ಬಣ್ಣಗಳ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು.ರಂಗಿ ತರಂಗದ ವಿಷಯವನ್ನಾದರಿಸಿ ಕಟ್ಟಡವನ್ನು ರಂಗುರಂಗಾಗಿ ಅಲಂಕರಿಸಲಾಗಿತ್ತು. ಮಕ್ಕಳೆಲ್ಲರೂ ಬಣ್ಣಬಣ್ಣದ ಉಡುಪುಗಳಲ್ಲಿ ರಂಜಿಸುತ್ತಿದ್ದರು.ಶಿಕ್ಷಕಿಯರು ಬಣ್ಣಗಳ ವಿಧಗಳಾದ ಪ್ರಾಥಮಿಕ,ಮಾಧ್ಯಮಿಕ ಮತ್ತು ನೈಸರ್ಗಿಕ ಬಣ್ಣಗಳ ಬಗ್ಗೆ ವಸ್ತುಸಮೇತ ಸಾದೃಶ್ಯವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮ ಎಸ್.ಶೆಟ್ಟಿ ,ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲ ಶೆಟ್ಟಿ ಹಾಗೂ ಎಲ್ಲಾ ಶಿಕ್ಷಕಿಯರೂ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿಗಳ ಮಂತ್ರಿ ಮಂಡಲ ಹಾಗೂ ಪಠ್ಯ ಪೂರಕ ಚಟುವಟಿಕೆಗಳ ಕಾರ್ಯಕ್ರಮ ಸಿಸಿಎಯನ್ನು ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಉದ್ಘಾಟಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಪಂಚದಲ್ಲಿ ಅಗ್ರಸ್ಥಾನದಲಿ ಭಾರತಕ್ಕೆ ಅದೇ ಕಾರಣಕ್ಕೆ ವಿಶೇಷ ಗೌರವ ದೊರಕುತ್ತಿದೆ. ಪ್ರಜೆಗಳೇ ಪ್ರಭುಗಳು ಎನ್ನುವ ಆಶಯದಲ್ಲಿ ಸಂವಿಧಾನ ಮತ್ತು ಶಾಸನಗಳ ಜೊತೆಯಲ್ಲಿ ದೇಶವನ್ನು ಮುನ್ನಡೆಸುವಾಗ ಪ್ರತಿಯೊಬ್ಬ ಪ್ರಜೆಯೂ ನಾಯಕನಾಗುತ್ತಾನೆ. ಅದೇ ಮಾದರಿಯನ್ನು ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡಾಗ ಉತ್ತವ ಸಮಾಜ ನಿರ್ಮಾಣ ಸಾಧ್ಯ ಎಂದರು. ಶಿಕ್ಷಣದ ಜೊತೆಗೆ ನೈತಿಕ ಹಾಗೂ ಮೌಲಿಕ ಶಿಕ್ಷಣವನ್ನು ಅರಿತುಕೊಂಡು ಅನುಸರಿಸಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದು ಸಾಧ್ಯ ಎಂದರು. ನಂತರ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಎಲ್ದೋ ಪುತ್ತನ್ ಕಂಡತ್ತಿಲ್ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಆಂಗ್ಲ ಭಾಷೆ ಎನ್ನುವುದು ಪ್ರತಿಯೊಬ್ಬನ ಮುಂದಿನ ಬದುಕಿಗೆ ಅಗತ್ಯವಾಗಿದ್ದು, ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಾತನಾಡುವುದರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಮ್ಜಾನ್ ಹಬ್ಬ ಸಮೀಪಿಸುತ್ತಿದ್ದು ಧಾರ್ಮಿಕ ಸೂಕ್ಷ್ಮ ಪ್ರದೇಶದಲ್ಲಿ ಕೋಮು ಸೌಹಾರ್ದ ಕಾಪಿಡುವ ನೆಲೆಯಲ್ಲಿ ಕುಂದಾಪುರ ಪೊಲೀಸರು ಅಲ್ಲಲ್ಲಿ ಶಾಂತಿಸಭೆ ನಡೆಸಿ ಸರ್ವಧರ್ವದ ಮುಖಂಡರಿಗೆ ಮಾರ್ಗದರ್ಶವನ್ನಿತ್ತು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವಂತೆ ಕೋರಿಕೊಂಡರು. ಕುಂದಾಪುರದ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾತನಾಡಿ ಕುಂದಾಪುರ ಮತ್ತು ಬೈಂದೂರಿನಲ್ಲಿ ೫೨ ಮಸೀದಿಗಳಿವೆ. ರಮ್ಜಾನ್ ಹಬ್ಬದಂದು ೫ ಮೆರವಣಿಗೆ ನಡೆಯಲಿದೆ. ಬಾನರ್, ಮೈಕ್ ಪರವಾನಗಿ ಮುಂಚಿತವಾಗಿ ತೆಗೆದುಕೊಳ್ಳಬೇಕು. ಎಲ್ಲಾ ಧರ್ಮದವರು ಸೇರಿ ಆಚರಿಸುವ ಹಬ್ಬವಾಗಿದ್ದು, ಕಳೆದ ಮೂರು ವರ್ಷಗದಿಂದ ರಮಜಾನ್ ಹಬ್ಬದ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ವರ್ಷವೂ ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ರಾಷ್ರ್ಟೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ, ಅಪರಿಚಿತ ವ್ಯಕ್ತಿಗಳ ತಪಾಸಣೆ ಹಾಗೂ ಜಾನುವಾರು ಕಳ್ಳಸಾಗಣೆ ತಡೆಯಲಾಗುತ್ತದೆ. ಈಗಾಗಲೇ ಮಾರ್ಗಸೂಚಿಯನ್ನು ಇಲಾಖಾ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು. ತಾಲೂಕು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜನಸಾಮಾನ್ಯರು ನಿತ್ಯ ಒಂದಲ್ಲ ಒಂದು ಕಾರಣದಿಂದ ಸರಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿರುತ್ತಾರೆ. ಜನರ ನಿತ್ಯ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ಅನುಪಯುಕ್ತ ವಸ್ತುಗಳು, ಕಾಗದದ ಚೂರುಗಳು, ಪ್ಲಾಸ್ಟಿಕ್ ಇನ್ನಿತರ ಕಸಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದನ್ನು ಕಾಣುತ್ತೇವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕುಂದಾಪುರ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಸಲುವಾಗಿ ಡಸ್ಟ್‌ಬಿನ್‌ನ್ನು ಕೊಡುಗೆಯಾಗಿ ನೀಡಿದೆ. ಕುಂದಾಪುರ ಸಹಾಯಕ ಉಪ ವಿಭಾಗಾಧಿಕಾರಿಯವರ ಕಚೇರಿ, ತಹಶೀಲ್ದಾರ್ ಅವರ ಕಚೇರಿ, ಕುಂದಾಪುರ ಪೋಲಿಸ್ ಠಾಣೆ, ಕುಂದಾಪುರದ ಸರಕಾರಿ ಆಸ್ಪತ್ರೆ, ಕುಂದಾಪುರ ತಾಲೂಕು ಪಂಚಾಯತ್ ಕಚೇರಿ, ಭಾರತೀಯ ಜೀವವಿಮಾ ನಿಗಮ ಕಚೇರಿಗಳಲ್ಲಿ ಸ್ವಚ್ಚತೆಯ ದೃಷ್ಠಿಯಿಂದ ಡಸ್ಟ್‌ಬಿನ್‌ಗಳನ್ನು ಕ್ಲಬ್‌ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳಿಗೆ ಹಸ್ತಾಂತರಿಸಿ, ಕೊಡುಗೆಯ ಸದ್ಭಳಕೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ 2016-17ನೇ ಸಾಲಿನ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಹಣಾಧಿಕಾರಿ ಅನುಪಮ ಎಸ್. ಶೆಟ್ಟಿ ಹಾಗೂ ಶಾಲೆಯ ಉಪ ಪ್ರಾಂಶುಪಾಲರಾದ ಸುನಂದಾ ಪಾಟೀಲ್ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಪರಿಸರ ಕಾಳಜಿಯನ್ನು ಮೂಡಿಸಿಕೊಳ್ಳಬೇಕು, ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು. ವಿವಿಧ ಔಷಧೀಯ ಸಸ್ಯಗಳ ಮಹತ್ವವನ್ನು ತಿಳಿ ಹೇಳಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಔಷಧೀಯ ಗಿಡಗಳನ್ನು ನೆಡುವುದರ ಮೂಲಕ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೊಟೋ ಅಳವಡಿಸಿರುವ ಬಗ್ಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪೋಟೋ ತೆರವುಗೊಳಿಸುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರುದ್ವನಿಯಲ್ಲಿ ಮಾತುಕತೆಗಳು ನಡೆದು ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರ ಕೊಠಡಿಯಲ್ಲಿ ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪೋಟೋದೊಂದಿಗೆ ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋವನ್ನೂ ಹಾಕಲಾಗಿತ್ತು. ಆದರೆ ಇದಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿರುವುದರಿಂದ ಅವರ ಪೊಟೋ ಹಾಕಲಾಗಿದೆ ಎಂದು ಬಿಜೆಪಿ ಪಕ್ಷದ ತಾಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಮಜಾಯಸಿ ನೀಡಿದ್ದರೇ, ಪೊಟೋ ಹಾಕುವುದಿದ್ದರೇ ಯುಪಿಎ ಸರಕಾರದ ಪ್ರಧಾನ ಮಂತ್ರಿ ಮನಮೋಹನಸಿಂಗ್ ಪೊಟೋವನ್ನು ಹಾಕುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಡುವರಿ ಗ್ರಾಪಂ ವ್ಯಾಪ್ತಿಯ ಸೋಮೇಶ್ವರದ ಭಂಡಾರಿಮನೆ ಬಚ್ಚಿ ನಾರಾಯಣ ಮೋಗವೀರ ಎಂಬುವರ ಮನೆಯ ಮೇಲೆ ಭಾರಿ ಗಾಳಿ ಮಳೆಯಿಂದಾಗಿ ತೆಂಗಿನಮರ ಉರುಳಿ ಮನೆ ಸಂಪೂರ್ಣ ಹಾನಿಗೀಡಾದ ಘಟನೆ ವರದಿಯಾಗಿದೆ. ಅಪಾರ ಹಾನಿ: ಮಧ್ಯಾಹ್ನದ ಸಮಯದಲ್ಲಿ ಮನೆಯ ಮೇಲೆ ಮರ ಬಿದ್ದಿದ್ದು, ಮೂರು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಯಾಗಿ ವಿಶ್ರಾಂತಿ ಪಡೆಯುತ್ತಿದ್ದ ಕೃಷ್ಣ ಮೊಗವೀರ ಎಂಬುವವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣ ಇವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಟಿವಿ, ಗ್ರೈಂಡರ್, ಗ್ಯಾಸ್ ಸ್ಟೋವ್ ಸೇರಿದಂತೆ ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು ಸುಮಾರು ರೂ. 3 ಲಕ್ಷ ನಷ್ಟ ಅಂದಾಜಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಪಿಡಿಒ ಮಂಜುನಾಥ ಶೆಟ್ಟಿ, ಗ್ರಾಮ ಕರಣಿಕ ಪ್ರಕಾಶ್, ಜಿಪಂ ಅಭಿಯಂತರ ಅರುಣ್‌ಕುಮಾರ್ ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗೊಳ್ಳಿ, ಮರವಂತೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು, ಶಿರೂರು ಸೇರಿದಂತೆ ಮುಂತಾದ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ, ಕೆಲವಡೆ ತಾತ್ಕಲಿಕವಾಗಿ ಅಳವಡಿಸಿದ ಕಲ್ಲು ಸಮುದ್ರದ ಅಲೆಗೆ ಕೊಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿದೆ, ಇದರಿಂದಾಗಿ ಸಮುದ್ರ ದಡದಲ್ಲಿ ಕೊರೆತ ಉಂಟಾಗಿದ್ದು, ಇಲ್ಲಿನ ಹತ್ತಾರು ತೆಂಗಿನಮರ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ತೀವ್ರ ಕಡಲ್ಕೊರೆತ ಉಂಟಾದ ಹೊಸಹಿತ್ಲು ಭಾಗಕ್ಕೆ ಬೈಂದೂರು ವಿಶೇಷ ತಹಶೀಲ್ದಾರ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ನಾಲ್ಕುದಿನಗಳಿಂದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೆಲ ಭಾಗಗಳಲ್ಲಿ ನೆರೆ ಸೃಷ್ಠಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಸಮರ್ಪಕ ನಿರ್ವಹಣೆ, ಗ್ರಾಮ ಪಂಚಾಯತಿಗಳ ನಿರ್ಲಕ್ಷ್ಯ ದೋರಣೆಯಿಂದಾಗಿ ಹಲವೆಡೆ ಕೃತಕ ನೆರೆ ಸೃಷ್ಠಿಯಾಗಿದೆ. ಯಡ್ತರೆ ಗ್ರಾಪಂ ವ್ಯಾಪ್ತಿಯ ಬೈಂದೂರು ಬೈಪಾಸಿನ ಹತ್ತಿರವಿರುವ ಸಮಾರು ಆರು ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ದ್ವೀಪವಾಗಿದೆ. ಮೂರು ಮನೆಯವರು ಮನೆಯನ್ನು ಕೂಡಾ ಬಿಟ್ಟು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಬೈಂದೂರು ರಾ.ಹೆ. ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹೋಗುವ ತೋಡುಗಳು ರೋಡಾಗಿ ಮಾರ್ಪಟ್ಟಿದೆ. ಮಳೆಯ ನೀರು ಮೊದಲಿನ ಹಾಗೆ ಚರಂಡಿಯಲ್ಲಿ ಹರಿದು ಹೋಗುತ್ತಿಲ್ಲ. ಹೆದ್ದಾರಿ ಬದಿಯಲ್ಲಿ ಮಣ್ಣು ಹಾಕಿರುವ ಕಾರಣ ಇದರಿಂದ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ. ಚರಂಡಿಯಲ್ಲಿ ತುಂಬಿದ ಹೂಳು ಕೂಡಾ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
