Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಆಯ್ಕೆಯಾಗಿದ್ದಾರೆ. ಪ್ರದೀಪ ಡಿ.ಕೆ. (ಐಪಿಪಿ), ದುರ್ಗಾರಾಜ್ ಪೂಜಾರಿ, ಉದಯಶಂಕರ ರಾವ್, ಲಕ್ಷ್ಮೀಕಾಂತ ಮಡಿವಾಳ (ಉಪಾಧ್ಯಕ್ಷರು), ನಾರಾಯಣ ಇ.ನಾಯ್ಕ್ (ಕಾರ್ಯದರ್ಶಿ), ಜನಾರ್ದನ ಪೂಜಾರಿ ಪೆರಾಜೆ, ಪ್ರಕಾಶ ಪೂಜಾರಿ (ಜತೆ ಕಾರ್ಯದರ್ಶಿಗಳು), ಉಮೇಶ ಮೇಸ್ತ (ಕ್ಲಬ್ ಸರ್ವಿಸ್ ನಿರ್ದೇಶಕ), ವಾಸುದೇವ ಶೇರುಗಾರ್ (ಕಮ್ಯುನಿಟಿ ಸರ್ವಿಸ್ ನಿರ್ದೇಶಕ), ಡಾ.ಕಾಶೀನಾಥ ಪೈ (ವೊಕೇಶನಲ್ ಸರ್ವಿಸ್ ನಿರ್ದೇಶಕ), ಎಚ್. ಗಣೇಶ ಕಾಮತ್ (ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕ), ಶಿವಾನಂದ ಪೂಜಾರಿ (ನ್ಯೂ ಜನರೇಶನ್ ನಿರ್ದೇಶಕ), ಲಿಪ್ಟನ್ ಒಲಿವೇರಾ (), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಥೋಮಸ್ ಪಿ.ಎ. (ಬುಲೆಟಿನ್ ಎಡಿಟರ್), ಎಚ್.ಗಣೇಶ್ ಕಾಮತ್, ಜನಾರ್ದನ ಪೂಜಾರಿ, ಉಮೇಶ ಮೇಸ್ತ (ಸಲಹೆಗಾರರು) ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಜಮೀನಿಗೆ ಅರ್ಜಿ ಸಲ್ಲಿಸಿದ ೫೮ ಕುಟುಂಬಗಳಿಗೆ ಶಾಸಕ ಗೋಪಾಲ ಪೂಜಾರಿ ಹಕ್ಕುಪತ್ರ ವಿತರಿಸಿದರು. ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ವಿಜಯ ಶೆಟ್ಟಿ, ಬೋಜ ನಾಯ್ಕ, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ತಾ.ಪಂ. ಸದಸ್ಯ ರಮೇಶ ಗಾಣಿಗ, ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ರಿಯಾಜ್ ಅಹಮದ್, ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದಿನ ಸಾಲಿನ ಸಾಧನೆಗಳ ವರದಿ, ಇಲಾಖೆಗಳ ಕಾರ್ಯಕ್ರಮಗಳ ಮಾಹಿತಿ ಜತೆಗೆ ಸಾರ್ವಜನಿಕರು ಎತ್ತಿದ ವಿಷಯಗಳ ಕುರಿತು ಉಪಯುಕ್ತ ಚರ್ಚೆಗೆ ನಡೆದ ಮರವಂತೆ ಗ್ರಾಮಸಭೆ ವೇದಿಕೆಯಾಯಿತು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನಧಿಕೃತವಾಗಿ ತೆರೆಯಲಾಗುತ್ತಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಅಂಗನವಾಡಿ ಪ್ರಾಯದ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಇಂಗ್ಲಿಷ್ ಕಲಿಸುತ್ತಿರುವುದನ್ನು ನಾಗರಾಜ್ ಬಲವಾಗಿ ವಿರೋಧಿಸಿ, ಮಕ್ಕಳ ಆರಂಭಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕು ಎಂದು ಪ್ರತಿಪಾದಿಸಿದರು. ಉತ್ತರಿಸಿದ ಅಂಗನವಾಡಿ ಮೇಲ್ವಿಚಾರಕಿ ಈ ಬಗ್ಗೆ ಸವಿತಾ ಶೆಟ್ಟಿ ತಮಗೂ ಈ ಬಗ್ಗೆ ಆತಂಕವಿದೆ ಎಂದು ಹೇಳಿ ಈ ಮಕ್ಕಳು ಸರಕಾರದ ಮಹತ್ವಾಕಾಂಕ್ಷೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಆದರೆ ತಾವು ಈ ವಿಷಯದಲ್ಲಿ ಅಸಹಾಯಕರು ಎಂದರು. ಜನಾರ್ದನ ಖಾರ್ವಿ, ರಾಮಕೃಷ್ಣ ಖಾರ್ವಿ, ಮೋಹನ ಖಾರ್ವಿ ಸೋಲಾರ್ ಬೀದಿದೀಪ ಅಳವಡಿಸುವಾಗ ಎಲ್ಲ ವಾರ್ಡ್‌ಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಹಲವೆಡೆ ಬೀದಿದೀಪಗಳು ಬೆಳಗದಿರುವುದನ್ನು ಪ್ರಸ್ತಾಪಿಸಿದ ಚಂದ್ರ ಖಾರ್ವಿ, ಎಂ. ವಿನಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಆಂಡ್ ರಿಸರ್ಚ್ ಸಂಸ್ಥೆಯಿಂದ ನಡೆದ ಬಿಎಸ್ಪಿ ಇಡ್ ಹಾಗೂ ಎಂಎಸಿ ಇಡ್ ಪ್ರವೇಶ ಪ್ರರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಲಕ್ಷ್ಮಿ ರಾಜ್ಯಮಟ್ಟದಲ್ಲಿ 9ನೇ ರ‍್ಯಾಂಕ್ ಹಾಗೂ ರಾಷ್ಟ್ರೀಯ ಮಟ್ಟದ 35ನೆಯ ರ‍್ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ಹಿರಿಯರು ಬಹಳ ಹಿಂದಿನಿಂದಲೂ ಆಯುರ್ವೇದಿಕ್ ಔಷಧಿಗಳನ್ನು ಉಪಯೋಗಿಸುತ್ತಿದ್ದು, ಇಂದಿನ ದಿನಗಳಲ್ಲಿ ಯುವಜನರು ಅಲೋಪತಿ ಔಷಧಿಗಳನ್ನು ಬಳಸುತ್ತಿದ್ದಾರೆ. ಅಲೋಪತಿ ಔಷಧಿಗಳ ಅತಿಯಾದ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಜನರು ಆಯುರ್ವೇದ ಔಷಧಿಗಳನ್ನು ಬಳಸಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ನಾಕುದಾ ಜೂನುಲ್ ಅಭಿದ್ದೀನ್ ಸಾಹೇಬ್ ಹೇಳಿದರು. ಅವರು ಗಂಗೊಳ್ಳಿಯ ಮೊಯಿದ್ದೀನ್ ಮಸೀದಿ ಕಟ್ಟಡದಲ್ಲಿ ಆಲ್‌ಪೈನ್ ಅಸೋಸಿಯೇಟ್ಸ್ ಮಂಗಳೂರು ಇವರ ಆಲ್‌ಪೈನ್ ಆಯುರ್ವೇದಿಕ್ ಎಂಡ್ ಯುನಾನಿ ಮೆಡಿಕಲ್ಸ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮೌಲಾನಾ ಅಬ್ದುಲ್ ಮತೀನ್, ಮೌಲಾನಾ ಅಬ್ದುಲ್ ವಹಾಬ್, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ಮುಖ್ಯೋಪಾಧ್ಯಾಯ ಮಹಮ್ಮದ್ ರಫೀಕ್ ಮೊದಲಾದವರು ಶುಭ ಹಾರೈಸಿದರು. ಮೊಮಿನ್ ಮಹಮ್ಮದ್ ಗೌಸ್, ಮೆಡಿಕಲ್ಸ್‌ನ ಮಾಲೀಕ ಜಹೀರ್ ಅಹಮ್ಮದ್ ನಾಕುದಾ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಂಕೋಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಡಸ್ಟರ್ ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ಟಿ.ಟಿ ರಸ್ತೆಯ ನಿವಾಸಿ ಗುರುರಾಜ ಪೂಜಾರಿ (29) ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಕುಂದಾಪುರದ ಕಂಪ್ಯೂಟರ್ ಸೆಂಟರೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗುರುರಾಜ್, ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಕೆಲಸದ ನಿಮಿತ್ತ ಸ್ನೇಹಿತನೊಂದಿಗೆ ತೆರಳಿ ಕುಂದಾಪುರಕ್ಕೆ ಮರುಳುತ್ತಿರುವಾಗ ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಸ್ಟರ್ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿತ್ತು. ಅಫಘಾತದ ತೀವ್ರತೆಗೆ ಟ್ಯಾಂಕ್ ಮಗುಚಿ ಬಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಕಾರು ಚಲಾಯಿಸುತ್ತಿದ್ದ ಗುರುರಾಜ್ ಗೆ ಗಂಭೀರ ಗಾಯಗಳಾಗಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಣಿಪಾಲಕ್ಕೆ ಕೊಂಡೊಯ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಸ್ನೇಹಿತ ಅಪಘಾತದಿಂದ ಪಾರಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಟಿ.ಟಿ ರಸ್ತೆಯ ಆನಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರ ಇಕ್ಕೆಲಗಳಲ್ಲಿರುವ ಎರಡು ವಾಣಿಜ್ಯ ಸಂಕೀರ್ಣಗಳ 6 ಅಂಗಡಿಗಳಿಗೆ, ಹಾಗೂ ಸಮೀಪದ ದೇವಸ್ಥಾನದ ಪಕ್ಕದಲ್ಲಿರುವ ಇರುವ ಒಂದು ಅಂಗಡಿಗೆ ಕನ್ನ ಹಾಕಿರುವ ಕಳ್ಳರ ತಂಡ ಚಿನ್ನದಂಗಡಿಯ 2 ಕೆ.ಜಿ ಬೆಳ್ಳಿ ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದು, ಈ ಕುಕೃತ್ಯ ಅಂಗಡಿಗಳಿಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆದ್ದಾರಿ ಬದಿಯ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಮುಂದಾಗಿದ್ದ 6 ಜನರ ತಂಡ ಹೈಡ್ರೋಲಿಕ್ ಜಾಕ್ ಬಳಸಿ ಶಟರ್ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದ್ದು, ಮೆಡಿಕಲ್ ಶಾಪ್ ಹಾಗೂ ಒಂದು ಕಾಂಪ್ಲೆಕ್ಸ್ ನಲ್ಲಿ ಹಾಕಲಾಗಿದ್ದ ಸಿಸಿ ಟಿವಿಯಲ್ಲಿ ಕಳ್ಳರ ಚಲನವಲನವನ್ನು ಗುರುತಿಸಲಾಗಿದೆ. ಕಳ್ಳರು ತೆಕ್ಕಟ್ಟೆಯು ಶಾರದಾ ಜ್ಯುವೆಲ್ಲರ್ಸ್ ನಿಂದ ಸುಮಾರು 2 ಕೆ.ಜಿ ಬೆಳ್ಳಿ, ಕೃಷ್ಣ ಮೆಡಿಕಲ್ಸ್’ನಿಂದ ಸುಮಾರು 15,000ರೂ ನಗದು, ಆರ್ಯ ಪೆಂಟ್ಸ್ ಹಾಗೂ ವಿಜಯಲಕ್ಷ್ಮಿ ಟ್ರೇಟರ್ಸ್’ನಿಂದ ತಲಾ 3,000ರೂ ನಗದು, ಶ್ರೀ ಮಹಾಲಿಂಗೇಶ್ವರ ಕಾಂಡಿಮೆಂಟ್ಸ್’ನಿಂದ 1000ರೂ ನಗದು ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರ ನೂತನ ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಚ್ಚಿಲ ಮಹಾಲಕ್ಷ್ಮಿ ಧರ್ಮದರ್ಶಿ ರಾಘವೇಂದ್ರ ಉಪಾಧ್ಯಾಯ ಮಾತನಾಡಿ ಚದುರಂಗದ ನಿಯಮಗಳಲ್ಲಿ ಬರುವ ನೀತಿ ನಿರ್ಬಂಧನೆಗಳು ಮನುಷ್ಯನು ತನ್ನ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದರು. ಮಹಾಭಾರತದ ಕಾಲದಿಂದಲೂ ಚದುರಂಗಕ್ಕೆ ಪ್ರಮುಖ ಸ್ಥಾನವನ್ನು ಕೊಟ್ಟಿದ್ದಾರೆ ಎಂದು ನುಡಿದರು. ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡೆರಿಕ್ ಚೆಸ್ ಸ್ಕೂಲ್ ಮಂಗಳೂರು ಸಂಸ್ಥಾಪಕ ಡೆರಿಕ್ ಪಿಂಟೋ ಮಾತನಾಡಿ, ಚೆಸ್ ಕೇವಲ ಕ್ರೀಡೆಯಲ್ಲ ಮನೋರಂಜನೆಯ ಬೆಳಕು ಕುಂದಾಪುರದಲ್ಲಿ ಒಬ್ಬ ಹೊಸ ಚೆಸ್ ಗ್ರಾಂಡ್ ಮಾಸ್ಟರ್ ಹುಟ್ಟಿ ಬರಲೆಂದು ಆಶಿರ್ವದಿಸಿದರು. ಹಾಗೆ ಈ ಸಂಧರ್ಭದಲ್ಲಿ ಎರೋಸ್ ಗ್ರೂಪ್ ದುಬೈ ಮಾರ್ಕೆಟಿಂಗ್ ಮ್ಯಾನೇಜರ್ ನಂದೀಶ್ ರಾವ್, ಅಂತಾರಾಷ್ಟ್ರೀಯ ಮಟ್ಟ ಚೆಸ್ ತರಬೇತಿಗಾರ ಪ್ರಸನ್ನ ರಾವ್, ಕುಂದಾಪುರ ಪುರಸಭೆ ವಸಂತಿ ಸಾರಂಗ್, ಜೆ ಸಿ ಐ ವಿಷ್ಣು, ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ದೈಹಿಕ ಶಿಕ್ಷಕರಾದ ಸುಜಾಜ್ ಶೆಟ್ಟಿ, ಕಟ್ಟಡದ ಮಾಲೀಕ ವಿಮಲೇಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಸಮಾಜದ ವಿವಿಧ ಸ್ತರಗಳ ಬಗೆಗೆ ನಮ್ಮಲ್ಲಿ ಎಚ್ಚರ ಇರಬೇಕು. ಜೊತೆಗೆ ಸಮಾಜದ ಅಗತ್ಯ ವರ್ಗದ ಅಗತ್ಯತೆಗಳಿಗೆ ಸ್ಪಂದಿಸುವ ಸಹೃದಯೀ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂದಲ್ಲಿ ೨೦೧೫-೧೬ನೇ ಸಾಲಿನ ದ್ವಿತೀಯ ಪಿಯುಸಿಯ ವಿಜ್ಞಾನದ ಎರಡು ವಿಭಾಗಗಳಲ್ಲಿನ ಅಗ್ರಸ್ಥಾನಿಗಳಿಗೆ ತಮ್ಮ ವತಿಯಿಂದ ತಲಾ ೨೫೦೦೦ ರೂಪಾಯಿಗಳ ನಗದು ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡಿದರು. ಪಠ್ಯ ಕಲಿಕೆಯ ಜೊತೆ ಬದುಕನ್ನು ಸಾಗಿಸಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ನಿಜವಾದ ಬದುಕಿನ ಸಂತೋಷವನ್ನು ಅನುಭವಿಸಲು ಸಾಧ್ಯ ಎಂದು ಅವರು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಕವಿತಾ ಎಮ್ ಸಿ ವಹಿಸಿದ್ದರು. ಜಿ.ಎಸ್ ವಿ.ಎಸ್ ಅಸೋಷಿಯೇಷನ್ನಿನ ಅಧ್ಯಕ್ಷ ಡಾ. ಕಾಶೀನಾಥ ಪೈ ಶುಭ ಹಾರೈಸಿದರು.ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪ್ರಕೃತಿಯ ಋಣವನ್ನು ತಿರಿಸಲು ಯಾರಿಗೂ ಸಾಧ್ಯವಿಲ್ಲ. ಮಳೆ ಕಡಿಮೆ ಆದರೆ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತದೆ. ನಾವು ಯಾವುದೇ ವಸ್ತುವನ್ನು ಪ್ರೀತಿಸಿದರೆ ಮಾತ್ರ ಅದರ ಮೇಲೆ ನಮಗೆ ಪ್ರೀತಿ . ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪರಿಸರದ ಗಿಡ ಮರಗಳನ್ನು ಪ್ರೀತಿಸಬೇಕು ಎಂದು ಕುಂದಾಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿ ತುಳಸಿ ಹೇಳಿದರು. ಅವರು ಬಗ್ವಾಡಿಯಲ್ಲಿ ಅರಣ್ಯ ಇಲಾಖೆ, ಶ್ರೀ ಮಹಿಷಮರ್ದಿನಿ ಯುವಕ ಮಂಡಲ ಹಾಗೂ ಹರೆಗೋಡು ಮಹಾವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಚ್ಚು ನಾಯ್ಕ್ ಹಾಗೂ ಕೃಷಿಕ ನಾಗಪ್ಪಯ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರಸಿಂಹ ಗಾಣಿಗ ಹರೆಗೋಡು, ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಹರೆಗೋಡು, ಮಾಹವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ ಡಿ.ಎಚ್., ಕೃಷಿಕ…

Read More