ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಹಾಲಿ ತಾಪಂ ಸದಸ್ಯ ಎಸ್. ರಾಜು ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಜನರ ನಡುವೆಯೇ ಇದ್ದು ಜನಸೇವೆ ಮಾಡುತ್ತಾ ಬಂದಿರುವ ತನಗೆ ಬೈಂದೂರಿನ ಮತದಾರರು ಈ ಭಾರಿಯೂ ಬಹುಮತದಿಂದ ಆಯ್ಕೆಮಾಡುವರೆಂಬ ವಿಶ್ವಾಸವಿದೆ. ಹಲವು ಚುನಾವಣೆಯನ್ನು ಎದುರಿಸಿರುವುದರಿಂದ ಸ್ವರ್ಧಿಸುವ ಬಗ್ಗೆ ಭಯವಿಲ್ಲ. ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವುದರಿಂದ ಪ್ರತಿ ಮತದಾರರನ್ನೂ ಭೇಟಿ ಸುಲಭವಾಗುತ್ತಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಬಟ್ಟೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು ಅಂಗಡಿಯಲ್ಲಿದ್ದ ಮಾಲಿಕನೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ತಲ್ಲೂರಿನ ಕೋಟಿ ಪೂಜಾರಿ(75) ಮೃತ ದುರ್ದೈವಿ. ತಲ್ಲೂರಿನ ನಗರ ಭಾಗದಲ್ಲಿ ಕಳೆದ 25 ವರ್ಷಗಳಿಂದ ಗಣೇಶ ಡ್ರೆಸ್ ಸೆಂಟರ್ ಹೆಸರಿನ ಬಟ್ಟೆ ಅಂಗಡಿ ನಡೆಸುತ್ತಿದ್ದ ತಲ್ಲೂರು ಗರಡಿ ನಿವಾಸಿ ಕೋಟಿ ಪೂಜಾರಿ (75) ಇಂದು ಮುಂಜಾನೆ ವಾಕಿಂಗ್ ತೆರಳುವ ಸಂದರ್ಭದಲ್ಲಿ ಬಟ್ಟೆಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಶಟರ್ ಮುಚ್ಚಿದ್ದ ಅಂಗಡಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು, ಶಟರ್ ತೆರೆದಾಗ ಅಂಗಡಿಗೆ ಬೆಂಕಿ ಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರಾದರೂ ಅಂಗಂಡಿಯಲ್ಲಿ ಕೋಟಿ ಪೂಜಾರಿ ಬಟ್ಟೆಯೊಂದಿಗೆ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಂಗಡಿಗೆ ಆಕಸ್ಮಾತ್ ಬೆಂಕಿ ತಗಲಿದ್ದೂ ಇಲ್ಲವೇ ಆತ್ಮಹತ್ಯೆಯೋ ಎಂಬ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಬೈಂದೂರು: ಕುಂದಾಪುರ ತಾಲೂಕಿನ ತುತ್ತ ತುದಿಯ ಊರು ಶಿರೂರು. ಶಿರಭಾಗದ ಊರಾದ ಕಾರಣ ಶಿರೂರು ಎಂಬ ಹೆಸರು ಬಂತು ಎಂದು ಕೆಲವರು ಹೇಳಿದರೆ ಒಂದು ಕಾಲದಲ್ಲಿ ಸಿರಿ ತುಂಬಿದ ಊರಾಗಿದ್ದ ಕಾರಣ ಶಿರೂರು ಎಂದು ಕರೆಯಲಾಯಿತು ಎನ್ನತ್ತಾರೆ. ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಇಷ್ಟು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೂ ಗುರುತಿಸಬಹುದಾದ ಕೆಲವು ಅಭಿವೃದ್ಧಿ ಕಾಮಗಾರಿಗಳು ಒಂದಿರಡು ವರ್ಷಗಳ ಈಚೆಗೆ ನಡೆದಿವೆ. (ಕುಂದಾಪ್ರ ಡಾಟ್ ಕಾಂ ವರದಿ) ಈ ಭಾರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಬಂದಿರುವುದರಿಂದ ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ತಾಪಂ ಸದಸ್ಯ ಮದನಕುಮಾರ್ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪಡುವರಿ ಗ್ರಾಪಂ ಹಾಲಿ ಸದಸ್ಯ ಸುರೇಶ್ ಬಟ್ವಾಡಿ ಸ್ವರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಹಾಲಿ ತಾಪಂ ಸದಸ್ಯ ರಾಮ ಕೆ. ಪಕ್ಷದಿಂದ ಟಿಕೇಟ್ ವಂಚಿತರಾಗಿದ್ದರಿಂದ ಶಿರೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ವರ್ಧಿಸುತ್ತಿದ್ದಾರೆ. ಒಂದು ನೋಟ: ಗ್ರಾಮೀಣ ಪ್ರದೇಶವೇ ಹೆಚ್ಚಿರುವ ಶಿರೂರು…
ಕುಂದಾಪುರ: ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರ ಹಾಗೂ ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಮಾಲಿನಿ ಕೆ. ನಾಮಪತ್ರ ಸಲ್ಲಿಸಿದರೆ, ಯಡ್ತರೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಸುಜಾತ ದೇವಾಡಿಗ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀ ನಾರಾಯಣ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ಕೃಷ್ಣಯ್ಯ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ನ ವಾರ್ಷಿಕ ಉತ್ಸವ ತೆರಾಲಿಗೆ ಪೂರ್ವಭಾವಿಯಾಗಿ ನಡೆಯುವ ಕೋಂಪ್ರಿ ಪೆಸ್ತ್ ಸಡಗರದಿಂದ ಆಚರಿಸಲಾಯಿತು. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಗಂಗೊಳ್ಳಿ ಚರ್ಚ್ನ ಧರ್ಮಗುರು ರೆ. ಫಾ. ಆಲ್ಬರ್ಟ್ ಕ್ರಾಸ್ತಾ, ಎಲ್ಲವರನ್ನು ನಮ್ಮವರೆಂದು ತಿಳಿದು ದೀನ-ದಲಿತರ, ಬಡವರ, ರೋಗಿಗಳ, ಖೈದಿಗಳ ಹಾಗೂ ನಮ್ಮ ನೆರೆಹೊರೆಯವರ ಸುಖ-ಕಷ್ಟಗಳಗೆ ಸ್ಪಂದಿಸುವ ಮೂಲಕ ಮಾನವೀಯತೆ ತೋರಬೇಕು. ಮಾನವೀಯ ಧರ್ಮದ ಮೂಲಕ ಸಾಮರಸ್ಯ ಕಾಪಾಡಿಕೊಂಡು ಪರಸ್ಪರ ಪ್ರೀತಿಯಿಂದ ಬದುಕುವುದೇ ನಿಜವಾದ ಜೀವನ ಎಂದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಚರ್ಚ್ನಿಂದ ಹೊರಟು ಯಡ್ತರೆವರೆಗೆ ಸಾಗಿದ ಪುರಮೆರವಣಿಗೆಯಲ್ಲಿ ಪರಮಪ್ರಸಾದವನ್ನು ಸ್ಥಬ್ದಚಿತ್ರ ವಾದ್ಯಘೋಷಗಳೊಂದಿಗೆ ಕೊಂಡೊಯ್ದರು. ಲಿಯೋ ನಜ್ರತ್ ಮತ್ತು ತಂಡದವರ ಗಾಯನ ಕಾರ್ಯಕ್ರಮ ಮೆರವಣಿಗೆಗೆ ಮೆರುಗು ನೀಡಿತ್ತು. ಬೈಂದೂರು ಚರ್ಚ್ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ, ಕಾರ್ಯದರ್ಶಿ ಸಿಸಿಲಿಯಾ ರೆಬೆರೊ, ಉಪಾಧ್ಯಕ್ಷ ರಾಬಟ್ ರೆಬೆಲ್ಲೊ ಉತ್ಸವದ ನೇತೃತ್ವವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಾಂಗ್ರೆಸ್ ಪಕ್ಷದ ಮುಂದಾಳು, ಗೋಳಿಹೊಳೆ ಗ್ರಾಪಂ ಮಾಜಿ ಅದ್ಯಕ್ಷ ಮಂಜಯ್ಯ ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ಜಿಪಂ ಬಿಜೆಪಿ ಅಭ್ಯರ್ಥಿ ಶಂಕರ ಪೂಜಾರಿ, ರಾಜ್ಯ ಬಿಜೆಪಿ ರೈತಮೋರ್ಚಾದ ಉಪಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾಲ್ತೋಡು ತಾಪಂ ಅಭ್ಯರ್ಥಿ ಬಿ.ಎಸ್. ಸುರೇಶ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು: ಕರ್ನಾಟಕ ಫ್ರೌಡ ಶಿಕ್ಷಣಾ ಪರೀಕ್ಷಾ ಮಂಡಳಿ 2015-16ರ ಅವಧಿಗೆ ನಡೆಸಿದ ಹಿಂದುಸ್ಥಾನಿ ಸಂಗೀತದ ಜ್ಯೂನಿಯರ್ ವಿಭಾಗದಲ್ಲಿ ಉಪ್ಪುಂದದ ಅಕ್ಷತಾ ದೇವಾಡಿಗ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ಉಪ್ಪುಂದದ ವಿಜಯಾ ಓಂಗಣೇಶ್ ಕಾಮತ್ ಅವರ ಶಿಷ್ಯೆ. ಹಾಗೂ ಸ್ಯಾಕ್ಸೋಫೊನ್ ವಾದಕ ಮಂಜುನಾಥ ದೇವಾಡಿಗ ಹಾಗೂ ವಿನೋದ ದೇವಾಡಿಗರ ಪುತ್ರಿ.
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಜಿಲ್ಲಾ ಪಂಚಾಯಿತ್ ಕ್ಷೇತ್ರವಾದ ವಂಡ್ಸೆ ಕುಂದಾಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವೂ ಹೌದು. ಧಾರ್ಮಿಕ, ರಾಜಕೀಯ ಹಾಗೂ ತಾಲೂಕು ಹೋರಾಟ ಮುಂತಾದ ಕಾರಣದಿಂದಾಗಿ ಆಗಾಗ ಸುದ್ದಿ ಮಾಡುತ್ತಲೇ ಬಂದಿರುವ ಕ್ಷೇತ್ರವಿದು. ಮಾರಣಕಟ್ಟೆ ದೇವಸ್ಥಾನಕ್ಕೆ ತೆರಳುವ ಭಕ್ತರು ಚಕ್ರ ನದಿಯಲ್ಲಿ ಮಿಂದು ಬಟ್ಟೆ ಒಣಗಿಸಿ ಶುದ್ದ ಬಟ್ಟೆ ತೊಟ್ಟು ಹೋಗುತ್ತಿದ್ದ ಪ್ರದೇಶಕ್ಕೆ ಹಿಂದೆ ವಣಸೆ ಎಂಬ ಹೆಸರಿತ್ತು. ಕಾಲಕ್ರಮೇಣ ಆಡುಭಾಷೆಯಲ್ಲಿ ವಂಡ್ಸೆ ಎಂಬ ಹೆಸರು ಶಾಶ್ವತವಾಯಿತು ಎಂಬುದು ಊರಿನ ಹೆಸರಿನ ಹಿಂದಿನ ಕಥೆ. ಕಳೆದ ಭಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರ ಪರ ಬಂದಿದ್ದ ಮೀಸಲಾತಿ, ಈ ಭಾರಿ ಸಾಮಾನ್ಯ ಮೀಸಲು ಬಂದಿದ್ದರಿಂದ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸ್ಪರ್ಧಿಸುವ ಸಮಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಮೂರು ಪಕ್ಷಗಳಿಂದ ಪುರುಷ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಹಾಲಿ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಕಣದಲ್ಲಿದ್ದರೇ, ಕಾಂಗ್ರೆಸ್ ಹಾಲಿ ತಾಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ…
ಬೈಂದೂರು: ಜೆ.ಸಿ.ಐ ಶಿರೂರು ಹಾಗೂ ಸಾರ್ವಜನಿಕರ ಪ್ರಾಯೋಜಿಕತ್ವದ ಸಹಯೋಗದೊಂದಿಗೆ ಶಿರೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅದ್ದೂರಿಯ ಸಾಂಸ್ಕ್ರತಿಕ ವೈಭವ ಫೆಬ್ರವರಿ 6ರಂದು ಸಂಜೆ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸುಮಾರು 400ಕ್ಕೂ ಅದಿಕ ವಿದ್ಯಾರ್ಥಿಗಳಿಂದ ಅದ್ದೂರಿಯ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮದ ಯೋಜನೆಯ ತಯಾರಿ ಭರದಿಂದ ನಡೆಯುತ್ತಿದೆ.ಸುಮಾರು 12 ಸಾವಿರಕ್ಕೂ ಅದಿಕ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.ಅಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮೋಹನ ಆಳ್ವಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ 3 ಗಂಟೆ 30 ನಿಮಿಷಗಳ ಕಾಲ ದೇಶ-ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ, ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಾಟ್ಯಂ, ಬಡಗುತಿಟ್ಟು ಯಕ್ಷ ಪ್ರಯೋಗ ರಾಸಲೀಲೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ರೋಪ್ ಕಸರತ್ತು, ಭರತನಾಟ್ಯ,ನವದುರ್ಗೆಯರು,ಮಣಿಪುರಿ ಸ್ಟಿಕ್ ಡ್ಯಾನ್ಸ್, ದೋಲ್ ಚಲಂ ಜಾನಪದ ನೃತ್ಯ, ಗುಜರಾತಿನ ಗಾಂಡಿಯ-ಗಾರ್ಬ, ಆಂದ್ರದ ಜನಪದ ಬಂಜಾರ ನೃತ್ಯ, ಪಶ್ಚಿಮ ಬಂಗಾಳದ ಸಿಂಹ ನೃತ್ಯ, ತೆಂಕು ತಿಟ್ಟು ಯಕ್ಷಗಾನ ಕಥಕ್ ನವರಂಗ್, ಮಹಾರಾಷ್ಟ್ರದ…
ಬೈಂದೂರು: ಮಗಳು ನಾಪತ್ತೆಯಾಗಿದ್ದರಿಂದ ಮನನೊಂದು ಮನನೊಂದ ಆಕೆಯ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಜೂರು ಗ್ರಾಮದ ಬವಳಾಡಿ ಎಂಬಲ್ಲಿ ನಡೆದಿದೆ. ಬವಳಾಡಿಯ ನಿವಾಸಿ ಪಾರ್ವತಿ (46) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಘಟನೆಯ ವಿವರ: ಬವಳಾಡಿಯ ಮೃತ ಪಾರ್ವತಿ ಅವರ ಮಗಳ ವಿದ್ಯಾಶ್ರಿ (22) ಕಳೆದ ಎರಡು ವರ್ಷದ ಹಿಂದೆ ಅಲ್ಬಾಡಿ ಗ್ರಾಮದ ಆರ್ಡಿಯ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆ ಈ ವಿವಾಹಕ್ಕೆ ಮುನ್ನವೇ, ಮುರ್ಡೇಶ್ವರದ ನಾಡವರಕೇರಿ ನಿವಾಸಿ ರವಿ ಮಂಜು ಶೆಟ್ಟಿ (24) ಎಂಬುವವನು ಪರಸ್ಪರ ಪ್ರೀತಿಸುತ್ತಿದ್ದರು. ಜ.26ರಂದು ತನ್ನ ತವರು ಮನೆಯಿಂದ ಆರ್ಡಿಯಲ್ಲಿರುವ ಗಂಡನ ಮನೆಗೆ ಹೋಗಿಬರುತ್ತೇನೆ ಎಂದು ಹೊರಟ ಆಕೆ ಅಲ್ಲಿಗೂ ತೆರಳದೆ, ಮನೆಗೂ ಹಿಂತಿರುಗದೇ ನಾಪತ್ತೆಯಾಗಿದ್ದಳು. ಪತ್ನಿ ಕಾಣೆಯಾದ ಬಗ್ಗೆ ಆಕೆಯ ಪತಿ ಸಂತೋಷ ಶೆಟ್ಟಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ತನ್ನ ಮಗಳು ಅನ್ಯ ಯುವಕನೊಬ್ಬನೊಂದಿಗೆ ನಾಪತ್ತೆಯಾದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಬಗ್ಗೆ ತಿಳಿದ ಆಕೆಯ ತಾಯಿ…
