ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪತಿ ಹಾಗೂ ಪತಿ ಮನೆಯವರ ನಿರಂತರ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಹಾಲಾಡಿ-76 ತತ್ತೋಟ್ಟು ಎಂಬಲ್ಲಿ ನಡೆದಿದೆ. ರೇಖಾ(28) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆ ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಗಂಡ, ಮಾವ, ಅತ್ತೆ, ಭಾವ, ಮೈದುನ ಮೇಲೆ ದೂರು ದಾಖಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ವಿಶ್ವ ಹಿಂದೂ ಪರಿಷತ್ – ಭಜರಂಗದಳ ಘಟಕ ಉದ್ಘಾಟನಾ ಸಮಾರಂಭ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ವಿಹಿಂಪ ಬೈಂದೂರು ಪ್ರಖಂಡದ ಅದ್ಯಕ್ಷ ಶ್ರೀದರ ಬಿಜೂರು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೂಕ್ತೇಸರರಾದ ವಿ.ಕೆ.ಶಿವರಾಮ ಶೆಟ್ಟಿ ಸಭೆಯ ಅದ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಗೌರವಾದ್ಯಕ್ಷ ಕೊಳ್ತ ಗೋಪಾಲ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತನ ಅದ್ಯಕ್ಷ ಎಲ್. ಎನ್. ಆಚಾರಿ, ಭಜರಂಗದಳ ಸಂಚಾಲಕ ಶರತ ಬಿಲ್ಲಾ, ಯಕ್ಷೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪಾತ್ರಿ ಭಾಸ್ಕರ, ಸಂಸ್ಥೆಯ ಸಂಚಾಲಕರಾದ ಮಹೇಶ ಗಾಣಿಗ, ಮಂಜುನಾಥ ಶಾರ್ಕೆ, ಪ್ರಕಾಶ ಪೂಜಾರಿ ಜೆಡ್ಡು, ಸಂದೀಪ ಚಂದನ, ರಿತೇಶ ಕುಮಾರ ಶೆಟ್ಟಿ, ಸಂಪತ್, ಸುಧಾಕರ ಪೂಜಾರಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ತಿನ ವಂಡ್ಸೆ ಘಟಕದ ಅದ್ಯಕ್ಷ ಎಲ್.ಎನ್. ಆಚಾರಿ ಸ್ವಾಗತಿಸಿದರು. ಜೀವನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್ನಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಘನ ದ್ರವ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತ್ತು ಯೋಜನೆಯ ಸಂಯೋಜಕ ಸುಧೀರ್ ಈ ಕುರಿತು ವಿವರವಾದ ಮಾಹಿತಿ ನೀಡಿದರು. ಮನೆ, ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗುವ ಘನ, ದ್ರವ ತ್ಯಾಜ್ಯವನ್ನು ಮೂಲದಲ್ಲಿ ಬೇರ್ಪಡಿಸುವ ಅಗತ್ಯತೆ, ಗ್ರಾಮ ಪಂಚಾಯತ್ನಿಂದ ಅದರ ಸಂಗ್ರಹ, ನಿರ್ವಹಣಾ ಸ್ಥಳದಲ್ಲಿ ಮರು ಬೇರ್ಪಡಿಸಿ ಸಂಪನ್ಮೂಲವಾಗಿ ಪರಿವರ್ತನೆಯ ವಿಧಾನ, ಸಾರ್ವಜನಿಕರ ಪಾತ್ರ, ಪಾವತಿಸಬೇಕಾದ ಶುಲ್ಕ, ಇತ್ಯಾದಿ ವಿವರ ನೀಡಿದರು. ಪ್ಲಾಸ್ಟಿಕ್ ಬಳಕೆಯ ಅಪಾಯಗಳು, ಅದನ್ನು ಎಸೆಯುವುದರಿಂದ, ಹೂಳುವುದು ಮತ್ತು ಸುಡುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಮಾಹಿತಿ ನೀಡಿ ಅದರ ಬಳಕೆಯನ್ನು ತಗ್ಗಿಸುವ ಮತ್ತು ವಿಲೇವಾರಿಯ ಕ್ರಮಗಳನ್ನು ವಿವರಿಸಿದರು. ಸಂಜೀವ ಖಾರ್ವಿ, ವಿಜಯ ಕ್ರಾಸ್ತಾ, ಗುರುರಾಜ್ ಎತ್ತಿದ ಸಂಶಯಗಳಿಗೆ ಸೂಕ್ತ ಪರಿಹಾರ ಸೂಚಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರೋಟರಿ ಸಂಸ್ಥೆಯು ಕಳೆದ ಹಲವು ದಶಕಗಳಿಂದ ಸಾಮಾಜಿಕ ಚಳವಳಿಯಲ್ಲಿ ತೊಡಗಿಕೊಳ್ಳುವ ಮೂಲಕ ಅನೇಕ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡಿದೆ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಪಾತ್ರ ಅವಿಸ್ಮರಣೀಯ. ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ರೋಟರಿ ಸಂಸ್ಥೆಯ ಸದಸ್ಯರು ತೊಡಗಿಸಿಕೊಂಡು ಅನಕ್ಷರತೆಯನ್ನು ತೊಡೆದುಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ವಿಶ್ವದ ಎಲ್ಲಾ ದೇಶಗಳಲ್ಲಿ ರೋಟರಿ ಸಂಸ್ಥೆ ತನ್ನ ಜಾಲವನ್ನು ಹೊಂದಿದ್ದು, ರೋಟರಿ ಮೂಲಕ ಸ್ನೇಹ ವಿಶ್ವಾಸ ವೃದ್ಧಿಯಾಗುತ್ತದೆ ಎಂದು ರೋಟರಿ ಜಿಲ್ಲೆ ೩೧೮೨ರ ಗವರ್ನರ್ ಜಿ.ಎನ್.ಪ್ರಕಾಶ್ ಹೇಳಿದರು. ಅವರು ಗಂಗೊಳ್ಳಿ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ನೀಡಿ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಸಂಜೆ ಜರಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಂಗೊಳ್ಳಿ ರೋಟರಿ ಸಂಸ್ಥೆಯ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಉನ್ನತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಶಾಲೆಗೆ ದಾನಿಗಳ ಸಹಕಾರದೊಂದಿಗೆ ಕಂಪ್ಯೂಟರ್ ಮತ್ತಿತರ ಸಾಧನಗಳನ್ನು ಒದಗಿಸಲು ಮುಂದಾಗಿರುವುದು ಅಭಿನಂದನೀಯ ಎಂದರು. ಗಂಗೊಳ್ಳಿ ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಯ ಕರ್ನಾಟಕ ತಾಲೂಕು ಘಟಕ, ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು. ಜಯ ಕರ್ನಾಟಕದ ಜಿಲ್ಲಾ ಪ್ರದಾನ ಸಂಚಾಲಕ ಅಣ್ಣಪ್ಪ ಕುಲಾಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಯುವಕರ ಸಂಘಟನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾನತೆ, ಭ್ರಾತೃತ್ವ ಮತ್ತು ಸಾಮರಸ್ಯದ ಸಂಕೇತವೇ ಜಯ ಕರ್ನಾಟಕ ಸಂಘಟನೆ. ಸಮಾಜದಲ್ಲಿ ನೊಂದವರ, ನಿರ್ಗತಿಕರ ಸೇವೆಗಾಗಿ ಜಯಕರ್ನಾಟಕ ಸಂಘಟನೆಯನ್ನು ಅಸ್ಥತ್ವಕ್ಕೆ ತರಲಾಯಿತು. ಆದರೆ ಬೈಂದೂರಿನಲ್ಲಿ ಜಯ ಕರ್ನಾಟಕ ಸಂಘಟನೆ ಮಾಡುವುದನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದ್ದೆ. ಜಯ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದವರು ಇದರಲ್ಲಿ ಇಲ್ಲ, ನಾವು ರಾಜಕೀಯದವರ ಪರವಾಗಿಲ್ಲ ಕೇವಲ ಸಂಘಟನೆಯ ಪರವಾಗಿ ಹಾಗೂ ನೊಂದವರ ಪರವಾಗಿ ಇದ್ದೇವೆ. ಮುಂದಿನ ದಿನಗಳಲ್ಲಿ ಬೈಂದೂರಿನಲ್ಲಿ ಜಯ ಕರ್ನಾಟಕ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡಬೇಕು. ನೊಂದವರ ಬಾಳಿಗೆ ನಾವು ಬೆಳಕು ತೊರಿಸಬೇಕು ಇದು ನಮ್ಮ ಸಿದ್ಧಾಂತ. ಜಯ ಕರ್ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಾಜ್ಯ ಸಚಿವ ರೋಷನ್ಬೇಗ್ ರಾಜೀನಾಮೆಗೆ ಆಗ್ರಹಿಸಿ ನಾವುಂದ, ಮರವಂತೆ, ಕಿರಿಮಂಜೇಶ್ವರ ಬಿಜೆಪಿ ಘಟಕದ ವತಿಯಿಂದ ಅರೆಹೊಳೆ ಬೈಪಾಸಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನೇತೃತ್ವವಹಿಸಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ಗೆ ವಿನಾಶಕಾಲೇ ವಿಪರೀತ ಬುದ್ದಿ ಬಂದಿದ್ದು, ಅದರ ಅವನತಿಗೆ ಭಸ್ಮಾಸುರ ಕೈ ಎಳೆದಾಯಿತು. ಮುಂದಿನ ಚುನಾವಣೆಯಲ್ಲಿ ಹಿಂದು ವಿರೋಧಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು. ಇನ್ನುಳಿದ ಕಾಲದಲ್ಲಾದರೂ ಸರ್ಕಾರದಲ್ಲಿರುವ ಸಚಿವರುಗಳಿಗೆ ದೇವರು ಒಳ್ಳೆಯ ಬುದ್ದಿಕೊಡಲಿ. ಕಾಂಗ್ರೆಸ್ ರಾಜ್ಯದಿಂದಲೇ ತೊಲಗಲಿ ಎಂದರು. ಈ ಸಂದರ್ಭ ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಗ್ರಾಪಂ ಅಧ್ಯಕ್ಷೆ ಅನಿತಾ ಆರ್. ಕೆ. ಮಾತನಾಡಿದರು. ಕಿರಿಮಂಜೇಶ್ವರ ಗ್ರಾಪಂ ಉಪಾಧ್ಯಕ್ಷ ಶೇಖರ ಖಾರ್ವಿ, ಮರವಂತೆ ಗ್ರಾಪಂ ಉಪಾಧ್ಯಕ್ಷ ಗಣೇಶ ಪೂಜಾರಿ, ರಾಜೇಂದ್ರ ಬಿಜೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನದಲ್ಲಿ ಪಾತ್ರೋಚಿತ ನಟನೆ, ರಂಗನಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪುರಾಣ ಪ್ರಸಂಗಗಳ ಜವಾಬ್ದಾರಿಯುತ ಪಾತ್ರಗಳಾದ ಭೀಷ್ಮ ವಿಜಯದ ಅಂಬೆ, ದಕ್ಷಯಜ್ಞದ ಗೌರಿ, ದ್ರೌಪದಿ ವಸ್ತ್ರಾಪಹರಣದ ದ್ರೌಪದಿ ಇತ್ಯಾದಿ ಪಾತ್ರಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿ ಅಸಂಖ್ಯಾತ ಕಲಾಪ್ರೇಕ್ಷಕರ ಮನ ಗೆದ್ದದ್ದು ಮಾತ್ರವಲ್ಲದೆ ಕಾಲ್ಪನಿಕ ಪ್ರಸಂಗಗಳಲ್ಲಿಯೂ ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸುತ್ತಿರುವ ಬಡಗುತಿಟ್ಟಿನ ಯುವ ಸ್ತ್ರೀ ವೇಷಧಾರಿ ಶ್ರೀ ಶಶಿಕಾಂತ ಶೆಟ್ಟಿ ಇವರಿಗೆ ೨೦೧೭ನೇ ಸಾಲಿನ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ನೀಡುವುದಾಗಿ ಪುರಸ್ಕಾರ ಸಮಿತಿಯು ನಿರ್ಧರಿಸಿದೆ. ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಸತತ ೪೧ ವರ್ಷಗಳಿಂದ ನವಂಬರ್ ೧ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ತಾಳಮದ್ದಳೆಯನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡುತ್ತಿರುವ ಭರವಸೆಯ ಯುವ ಕಲಾವಿದರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಸತತ ಆರು ವರ್ಷಗಳಿಂದ ನೀಡುತ್ತಾ ಬಂದಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಡೆಯಲಿರುವ ತಾಳಮದ್ದಳೆಯ ಜೊತೆಗೆ ಈ ಪುರಸ್ಕಾರ ನೀಡುವುದಾಗಿ ಕಾಲೇಜಿನ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಜರುಗಿದ ಜಿಎಸ್ಬಿ ಅಂಡರ್-19 ಕ್ರಿಕೆಟ್ ಪಂದ್ಯಾಟದಲ್ಲಿ ಕೋಟೇಶ್ವರದ ಕೊಂಕಣ್ ಎಕ್ಸ್ಪ್ರೆಸ್ ತಂಡ ವಿಜೇತರಾಗಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಜಿಎಸ್ಬಿ ಕೋಟ ತಂಡ ಪಡೆದುಕೊಂಡಿದೆ. ಅಂತಿಮ ಪಂದ್ಯದ ಪಂದ್ಯಶ್ರೇಷ್ಟ ಮತ್ತು ಉತ್ತಮ ದಾಂಡಿಗ ಪ್ರಶಸ್ತಿಯನ್ನು ಕಾರ್ತಿಕ್ ಶ್ಯಾನುಭಾಗ್, ಉತ್ತಮ ಎಸೆತಗಾರನಾಗಿ ಅನಂತ ಶೆಣೈ, ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ವಿವೇಕ ಪ್ರಭು ಪಡೆದರು. ಕೊಂಕಣ್ ಎಕ್ಸ್ಪ್ರೆಸ್ ಪುರುಷೋತ್ತಮ ಕಾಮತ್ ತಂಡಕ್ಕೆ ಶುಭಕೋರಿದರು. ತಂಡದ ಅಧ್ಯಕ್ಷರಾದ ಸತೀಶ ಕಾಮತ್, ಉಪಾಧ್ಯಕ್ಷರಾದ ರಾಜೇಶ ಪ್ರಭು, ರವೀಂದ್ರ ನಾಯಕ್ ಹಾಗೂ ಸರ್ವಸದಸ್ಯರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜೆಸಿಐ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರಂಗ ಸೈಕಲಿನಲ್ಲಿ ಛದ್ಮವೇಷ ಸ್ವರ್ಧೆ ನೋಡುಗರ ವಿಶೇಷ ಗಮನ ಸೆಳೆಯಿತು. ಯೂರೋಪ್ ಮೂಲದ ದೇಶಗಳಲ್ಲಿ ಸಾಕಷ್ಟು ಪ್ರಖ್ಯಾತ ಪಡೆದಿರುವ ಈ ಸೈಕಲ್ ಛದ್ಮವೇಷ ಜನಾಕರ್ಷಣೆಯ ಕೇಂದ್ರ ಬಿಂದು. ಭಾರತದಲ್ಲಿ ಇದರ ಕುರಿತು ಮಾಹಿತಿ ಕಡಿಮೆ ಇದ್ದರು ಕೂಡ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಕುಂದಾಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸೈಕಲ್ ಛದ್ಮವೇಷಕ್ಕೆ ಹಲವು ವೇಷಧಾರಿಗಳು ರಂಗು ತಂದರು. ಚಿಕ್ಕ ಮಕ್ಕಳಿಂದ ಹಿಡಿದು ಆಸಕ್ತ ಹಿರಿಯರು ಕೂಡ ಸೈಕಲ್ ಛದ್ಮವೇಷದಲ್ಲಿ ಕುಂದಾಪುರದ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು. ಕುಂದಾಪುರ ಜೇಸಿಐ ಇದರ ಒಂದು ವಾರದ ರಂಗ ಸಪ್ತಾಹದ ಪ್ರಾರಂಭದ ದಿನದಂದು ಕುಂದಾಪುರ ಲಕ್ಷ್ಮೀ ನರಸಿಂಹ ಕಲಾ ಮಂದಿರದ ಮುಂಭಾಗದಿಂದ ಪ್ರಾರಂಭಗೊಂಡ ಸೈಕಲ್ ಜಾಥಾ ಮತ್ತು ಸೈಕಲ್ ಛದ್ಮವೇಷ ಕಾರ್ಯಕ್ರಮವನ್ನು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಂದಾಪುರ ಉದ್ಘಾಟಿಸಿದರು. ಇದೇ ಸಂದರ್ಭ ಕುಂದಾಪುರ ಸೈಕ್ಲಿಂಗ್ ಕ್ಲಬ್ನ ಲಾಂಛನದ ಬಿಡುಗಡೆ ನಡೆಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಶ್ರೀ ಮಾತಾ ಆಸ್ಪತ್ರೆಯಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಮಾನಸಿಕ ರೋಗ ಎಂಬುದು ವ್ಯಕ್ತಿಯ ಮನಸ್ಸಿನ ರೋಗವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಭೌತಿಕ, ಶೈಕ್ಷಣಿಕ ಪ್ರಭಾವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಮನೋ ವೈದ್ಯಾಧಿಕಾರಿಗಳಿಂದ ಸೂಕ್ತ ಸಲಹೆ ಪಡೆದು, ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಒಂದು ಅಂದಾಜಿನ ಪ್ರಕಾರ ನಮ್ಮ ಜೀವನದ ಶೇಕಡಾ ೭೦ ರಷ್ಟು ಭಾಗವನ್ನು…
