Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಏಳು ಕೋಟಿ ಕನ್ನಡಿಗರು ಇರುವ ರಾಜ್ಯದಲ್ಲಿ ಎರಡು ಲಕ್ಷದಷ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳಿದ್ದು, ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕಂಪನ್ನು ತಲುಪಿಸಬೇಕಾದ ಗುರುತರ ಜವಾಬ್ದಾರಿ ಇದೆ. ಹೊಬಳಿ ಮಟ್ಟದಲ್ಲಿಯೂ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಹಿಂದೆ ಕನ್ನಡಿಗರನ್ನು ಸಂಘಟಿಸುವ ಉದ್ದೇಶವೂ ಅಡಗಿದೆ ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಬೈಂದೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೋಬಳಿ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿರಿಯ ಸಾಹಿತಿ ಶೇಷಪ್ಪಯ್ಯ ಹೆಬ್ಬಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ. ಅದರ ಬಗೆಗೆ ಪ್ರೀತಿ ಇದ್ದರೆ ಮಾತ್ರ ನಮ್ಮ ನಡುವೆಯೇ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು. ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಗಣಪತಿ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಸಾಪ ಕುಂದಾಪುರದ ನಿಟಕಪೂರ್ವಾಧ್ಯಕ್ಷ ನಾರಾಯಣ ಖಾರ್ವಿ, ಬೈಂದೂರು ರೋಟರಿ ಅಧ್ಯಕ್ಷ ರಘುರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿಯ ಮೂವತ್ತುಮುಡಿ ಹೊಳೆಗೆ ಬುಧವಾರ ಬಿದ್ದದ್ದ ಲಾರಿಯನ್ನು ಮೇಲಕ್ಕೆತ್ತಲು ಹರಸಾಹಸ ಪಡಬೇಕಾಯಿತು. ಹನ್ನೆರಡು ಚಕ್ರದ ಭಾರಿ ಗ್ರಾತ್ರದ ಲಾರಿಯಾಗಿದ್ದರಿಂದ ಕ್ರೇನ್ ಕೂಡಲೇ ಮೂಲಕ ಮೇಲೆತ್ತಲು ಸಾಧ್ಯವಾಗದೇ ಬೆಳಿಗ್ಗಿನಿಂದ ಒದ್ದಾಡುತ್ತಿದ್ದುದು ಕಂಡುಬಂತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಬ್ಲಾಕ್ ಮಾಡಿದ್ದರಿಂದ ಇತರ ವಾಹನಗಳಿಗೆ ತೀವ್ರ ಅಡಚಣೆ ಉಂಟಾಯಿತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು ಒಂದು ಕಿ.ಮೀ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ಕೆಲಕಾಲ ನಿಂತಿರುವುದು ಕಂಡುಬಂತು. ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ವಿಆರ್‌ಎಲ್ ಸಂಸ್ಥೆಗೆ ಸೇರಿದ ಲಾರಿಯು ಬುಧವಾರ ರಾತ್ರಿ ಚಾಲಕನ ಅಜಾಗರೂಕತೆಯಿಂದಾಗಿ ಮೂವತ್ತುಮುಡಿ ಬಳಿಯ ವಿದ್ಯುತ್ ಕಂಬಕ್ಕೆ ಗುದ್ದಿ, ಕಿರುಸೇತುವೆಯ ಬದಿಯನ್ನು ಒಡೆದುಕೊಂಡು ಹೊಳೆಗೆ ಬಿದ್ದಿತ್ತು. ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಇನ್ನಿರ್ವರನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಶಿರೂರಿನಿಂದ ತೂದಳ್ಳಿಗೆ ತೆರಳುವ ರಸ್ತೆಯ ಆಲಂದೂರು ಕನ್ನದ ಬಾಗಿಲಿನ ತಿರುವಿನಲ್ಲಿ ಆಟೋ ರಿಕ್ಷವೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಯಡ್ತರೆ ಗ್ರಾಮದ ಹೊಸೂರಿನ ರಾಮ ಮರಾಠಿ ಮೃತಪಟ್ಟಿದ್ದು, ಸಂಕ್ರಪ್ಪ, ಚೇತನ, ನಾಗರತ್ನ, ಸೀತು ಮರಾಠಿ ಹಾಗೂ ವಿಜಯ ಎಂಬುವವರು ಗಾಯಗೊಂಡಿದ್ದಾರೆ. ಕನ್ನದ ಬಾಗಿಲು ತಿರುವಿನಲ್ಲಿ ವೇಗವಾಗಿ ಬಂದ ರಿಕ್ಷ ಒಂದೇ ಸಮಗೆ ತಿರುಗಿಸಿದಾಗ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಮೋರಿಯ ಕಟ್ಟೆಗೆ ಡಿಕ್ಕಿಯಾಗಿ ಪಲ್ಟಿ ಹೊಡೆದು ನೀರಿನ ತೋಡಿಗೆ ಬಿದ್ದಿತ್ತು. ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಾಮ ಮರಾಠಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಿ ಮೃತಪಟ್ಟಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೋರಿದ್ದ ಮಹಿಳೆಯೋರ್ವರಿಗೆ ಮಾಹಿತಿ ನೀಡದೇ ಕರ್ತವ್ಯಲೋಪವೆಸಗಿದ್ದ ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯ್ಕ್ ಅವರ ನಿಲುವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಮಾಹಿತಿ ಹಕ್ಕು ಆಯೋಗ, ಅವರಿಗೆ ಹತ್ತು ಸಾವಿರ ರೂ. ದಂಡ ವಿಧಿಸಿವ ಮೂಲಕ ಕರ್ತವ್ಯಲೋಪವೆಸಗುವ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಏನಿದು ಪ್ರಕರಣ? ಕುಂದಾಪುರದ ಮಹಿಳೆಯೊಬ್ಬರು ಭೂಮಿಯೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಕಾಯ್ದೆಯಡಿಯಲ್ಲಿ ಕೇಳಿದ್ದ ಮಾಹಿತಿಗೆ ಸ್ಪಂದಿಸದ ಕುಂದಾಪುರ ತಹಸೀಲ್ದಾರ್ ವಿರುದ್ದ ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಅಂತಿಮವಾಗಿ ದೂರು ನೀಡಿಲಾಗಿತ್ತು. ಇದರಂತೆ 2015 ಫೆ11ರಂದು ವಿಚಾರಣೆಗೆ ಹಾಜರಾಗುವಂತೆ ಕುಂದಾಪುರ ತಹಸೀಲ್ದಾರ್ ಅವರಿಗೆ ಅಯೋಗ ಸೂಚಿದ್ದರೂ ಅವರು ಗೈರಾಗಿದ್ದು ಮತ್ತೊಮ್ಮೆ ಕೇಳಿದ ಮಾಹಿತಿ ಅಂಚೆ ಮೂಲಕ ರವಾನಿಸಿ ವರದಿ ನೀಡುವಂತೆ ಆಯೋಗ ಸೂಚಿಸಿತ್ತು. ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಏಕೆ ದಂಡ ವಿಧಿಸಬಾರದು ಎಂದು ಲಿಖಿತವಾಗಿ ಕೇಳಿದ್ದು, ಲಿಖಿತ ಸಮಜಾಯಿಸಿ ಮುಂದಿನ ವಿಚಾರಣೆ ವೇಳೆ ನೀಡುವಂತೆ ಆಯೋಗ ಕೇಳಿತ್ತು. ಆದರೆ ಗಾಯತ್ರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಿನೇ ದಿನೇ ಏರುತ್ತಿರುವ ದಿನಬೆಳಕೆಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ಧೋರಣೆಯೇ ಕಾರಣವಾಗಿದ್ದು, ಶೀಘ್ರವೇ ಬೆಲೆಯರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಜನಸಾಮಾನ್ಯರ ಅಗತ್ಯ ವಸ್ತುಗಳಾದ ಬೆಳೆಕಾಳು, ತರಕಾರಿ, ದಿನಸಿ ಸಾಮಾಗ್ರಿಗಳು, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಕೇಂದ್ರ ಸರಕಾರ ಅವುಗಳನ್ನು ಹತೋಟಿಗೆ ತರಲು ಸಂಪೂರ್ಣ ವಿಫಲವಾಗಿದೆ. ಕಳೆದ ಎರಡು ವರ್ಷದಲ್ಲಿ ಅಚ್ಚೇ ದಿನ್ ಹೇಳಿಕೊಂಡು ಬರುತ್ತಿರುವ ಸರಕಾರದ ಬಣ್ಣ ಬಯಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ನಾರಾಯಣ ಆಚಾರ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜಾ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಕುಂದಾಪುರ, ರೊಟರಿ ಕ್ಲಬ್ ಕುಂದಾಪುರ ದಕ್ಷಿಣ ಇವುಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಮಲೇರಿಯಾ ಮಾಸಾಚರಣೆ ಮತ್ತು ಸ್ವಚ್ಚತಾ ಸಪ್ತಾಹ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿರುವ ಶಾಲೋಮ್ ಸಭಾಗಂಣದಲ್ಲಿ ನಡೆಯಿತು. ಸಭೆಗೂ ಮುನ್ನ ನಡೆದ ಜಾಗೃತಿ ಜಾಥಾವನ್ನು ಪುರಸಭಾಧ್ಯಕ್ಷೆ ವಸಂತಿ ಮೋಹನ ಸಾರಂಗ್ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿದರು. ಜಾಥಾವು ಶಾಸ್ತ್ರೀ ಸರ್ಕಲ್‌ನಿಂದ ಶಾಲೋಮ್ ಸಭಾಂಗಣದವರೆಗೆ ಸಾಗಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರೋಹಿಣಿ, ಸೊಳ್ಳೆಗಳ ಉತ್ಪತ್ತಿಯಾಗುವುದು ಮಳೆಗಾಲದ ಆರಂಭದಲ್ಲಿ ಈ ಸಂದರ್ಭ ಎಲ್ಲಿಯೂ ನೀರು ನಿಲ್ಲದಂತೆ ಜಾಗೃತೆವಹಿಸಬೇಕು, ಕಳೆದೆರಡು ವರ್ಷಗಳಿಂದ ಮಲೇರಿಯಾ ತೊಂದರೆ ಕುಂದಾಪುರದಲ್ಲಿ ಕಡಿಮೇ ಇದೆ ಎಕೆಂದರೆ ಕಟ್ಟಡ ಕಾಮಗಾರಿಗಳು ನಡೆಯುತ್ತಿರುವುದು ಕಡಿಮೇಯಾಗಿದೆ. ಕಳೆದೆರಡು ವರ್ಷಗಳ ಹಿಂದೆ ಕುಂದಾಪುರ ಕಾರ್ಕಳದಲ್ಲಿ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: . ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಕೋಟ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಪಲ್ಟಿಯಾಗಿ, ಬಸ್ಸಿನಲ್ಲಿದ್ದವರಿಗೆ ಸಣ್ಣ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಗುರುವಾರದ ಬೆಳಿಗ್ಗೆ ಕುಂದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕೋಟ ಅಂಡರ್ ಪಾಸ್ ಮೇಲೆ, ಲಾರಿಯೊಂದನ್ನು ಓವರಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿ ಬಂದ ಕಾರಣ, ಓವರಟೇಕ್ ಮಾಡುವ ಭರದಲ್ಲಿ ಅಂಡರ್‌ಪಾಸ್ ಮೇಲ್ಭಾಗದಲ್ಲಿದ್ದ ಸೈಡ್ ಕಾಂಕ್ರೀಟ್ ಬ್ಯಾರಿಕೇಡ್‌ಗೆ ಗುದ್ದಿ, ಅಂಡರ್‌ಪಾಸ್ ಮೇಲ್ಭಾಗದಲ್ಲಿಯೇ ಪಲ್ಟಿ ಹೊಡೆದು ಬಿದ್ದಿದೆ. ಜೋರಾಗಿ ಮಳೆ ಮಳೆ ಬರುತ್ತಿದ್ದ ಕಾರಣ ರಸ್ತೆ ಸಂಪೂರ್ಣ ನೀರು ಹರಿದಿದ್ದು, ಬ್ರೇಕ್ ಹಾಕಿದ್ದರು ಕೂಡ ಬಸ್ ನಿಲ್ಲದೇ ಬ್ಯಾರಿಕೆಡ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿರಬಹುದು ಎನ್ನಲಾಗಿದೆ. ಅಪಘಾತ ನಡೆದ ವೇಳೆ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕನನ್ನು ಹೊರತುಪಡಿಸಿ ೩ ೪ ಮಂದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಕೊಡೇರಿ ಬಂದರು ಬಳಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಮೃತರನ್ನು ಕೇರಳ ಮಂಜೇಶ್ವರದ ಸಂತೋಷ್ (43) ಎಂದು ಗುರುತಿಸಲಾಗಿದೆ. ಕೊಡೇರಿಯ ಕಿನಾರೆಯಲ್ಲಿ ಮೃತದೇಹವನ್ನು ಕಂಡ ಸ್ಥಳೀಯರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೈಂದೂರು ಶವಾಗಾರಕ್ಕೆ ಸಾಗಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಎ.ಕೆ. ರೆಸಿಡೆನ್ಸಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಆಲ್ಟೋ ಕಾರು ಹಾಗೂ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದರೇ, ಕಾರು ಚಲಾಯಿಸುತ್ತಿದ್ದ ಪೇರ್ಡೂರು ಮೇಳದ ಕಲಾವಿದ ಥಂಡೀಮನೆ ಶ್ರೀಪಾದ ಭಟ್ ಅಲ್ಪಸ್ವಲ್ಪ ಗಾಯಗೊಂಡಿದ್ದು, ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇಡುಗುಂಜಿಯಿಂದ ಆನೆಗುಡ್ಡೆಗೆ ತೆರಳುತ್ತಿದ್ದ ಕಾರು ಬೈಂದೂರು ಕಡೆಗೆ ಬರುತ್ತಿದ್ದ ರಿಕ್ಷಾಗೆ ಎದುರಿನಿಂದಲೇ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಗಾಯಳುಗಳನ್ನು ಬೈಂದೂರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದ ಅಧ್ಯಯನ ಕೇಂದ್ರವು ಡಾ|| ಕನರಾಡಿ ವಾದಿರಾಜ ಭಟ್ಟ ಮತ್ತು ಮಿತ್ರರೊಡಗೂಡಿ ಸಂಪಾದಿಸಿದ ಹೊಳ್ಳ ದಂಪತಿ ಕುರಿತ ಅಭಿನಂದನಾ ಗ್ರಂಥವನ್ನು ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಜುಲೈ ೨ರಂದು ಅಪರಾಹ್ನ ಮೂರು ಘಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಗಡೆ ವಹಿಸಲಿರುವರು ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಶುಭಾಶಂಸನೆ ಗೈಯಲಿರುವರು. ಬೆಂಗಳೂರಿನ ಮಾದ್ಯಮ ಭಾರತಿ ನಿರ್ದೇಶಕ ಎಮ್ ಜಯರಾಮ ಅಡಿಗರು ಉದ್ಘಾಟಿಸಲಿರುವರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿನಂದನಾ ಭಾಷಣಗೈಯಲಿದ್ದಾರೆ. ಕುಂದ ಅಧ್ಯಯನ ಕೇಂದ್ರದಿಂದ ಪ್ರತಿವರ್ಷ ನಾಡಿನ ಆಯ್ದ ಸಂಶೋದಕರಿಗೆ ಮತ್ತು ಸಮಾಜ ಸಂಘಟಕರಿಗೆ ಕುಂದಶ್ರೀ ಪ್ರಶಸ್ತೀ ನೀಡುವ ಯೋಜನೆಯ ಪ್ರಥಮ ಸಾಲಿನ ಪ್ರಶಸ್ತಿಯನ್ನು ವೇ|ಮೂ| ರಾಮಕೃಷ್ಣಜೋಶಿ, ಧರ್ಮದರ್ಶೀ ಬಿ. ಅಪ್ಪಣ್ಣ ಹೆಗ್ಗಡೆ, ಡಾ| ಯಶೋದ ಭಟ್ ಮತ್ತು ಶ್ರೀ ನಾರಾಯಣ ಪರಮೇಶ್ವರ ಭಟ್ (ಧಾರವಾಡ),…

Read More