ಕುಂದಾಪುರ: ಸಾಹಿತ್ಯ ಮತ್ತು ಚಿತ್ರಕಲೆಯ ಮೂಲಕ ಏಕಕಾಲದಲ್ಲಿ ಜನರಿಗೆ ನಾಟುವ ಶಕ್ತಿ ಇರುವುದು ಕಾರ್ಟೂನಿಗೆ ಮಾತ್ರ. ಕಲಾತ್ಮಕ, ಸಾರ್ವಕಾಲಿಕ ಹಾಗೂ ತಕ್ಷಣಕ್ಕೆ ಸ್ಪಂದಿಸುವಂತೆ ಮಾಡುವ ಗುಣ ಇದರಲ್ಲಿದೆ ಎಂದು ರಂಗಕರ್ಮಿ ಸುರೇಶ್ ಆನಗಳ್ಳಿ ಹೇಳಿದರು ಅವರು ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾದ ’ಕಾರ್ಟೂನು ಹಬ್ಬ’ದ ಮೂರನೇ ದಿನ ’ಮಾಸ್ಟರ್ ಸ್ಟ್ರೋಕ್ಸ್’ – ವ್ಯಂಗ್ಯಚಿತ್ರಕಾರರೊಂದಿಗಿನ ಸಂವಾದ ಉದ್ಘಾಟಿಸಿ ಮಾತನಾಡಿದರು. ಕಾರ್ಟೂನು ಕಲೆಯನ್ನು ಚಳುವಳಿಯ ಹಾಗೆ ಬೆಳೆಸುತ್ತಾ ಅಧ್ಯಯನ ಶಿಸ್ತಿಗೆ ಒಳಪಡಿಸುವುದಕ್ಕೆ ಅಡಿಪಾಯವನ್ನು ಸತೀಶ್ ಆಚಾರ‍್ಯ ಹಾಕುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಕಂಡಿದ್ದ ಕಾರ್ಟೂನು ಕಾಳಜಿ ಮತ್ತೆ ಕಾಣುವಂತಾಗಿದೆ ಎಂದವರು ಶ್ಲಾಘಿಸಿದರು. ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿ ಕಾರ್ಟೂನು ಸಮಾಜವನ್ನು ಕೆರಳಿಸುವ ಬದಲಿಗೆ ಅರಳಿಸುವ ಕೆಲಸ ಮಾಡುತ್ತದೆ. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಅದನ್ನು ಒಪ್ಪುವ ಮತ್ತು ತಿದ್ದಿಕೊಳ್ಳುವ ಬದ್ಧತೆ ನಮ್ಮಲ್ಲಿರಬೇಕು ಎಂದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಉಪಸ್ಥಿತರಿದ್ದರು. ವ್ಯಂಗಚಿತ್ರಕಾರರಾದ ಪಿ.…
Author: ನ್ಯೂಸ್ ಬ್ಯೂರೋ
ಕುಂದಾಪುರ: ಶ್ರೀ ಹಾಗುಳಿ ಸೇವಾ ಸಮಿತಿ ಬಾಳಿಕೆರೆ ನೇತೃತ್ವದಲ್ಲಿ ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆಂಚನೂರು, ಯಕ್ಷಮಿತ್ರ ಬಳಗ ಕೆಂಚನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ದಿ.ಕಾಳಿಂಗ ನಾವಡರ ಒಡನಾಡಿ, ಎರಡು ದಶಕಗಳ ಹಿಂದೆ ಯಕ್ಷಗಾನ ಭಾಗವತರಾಗಿ, ವಿವಿಧ ಪ್ರಯೋಗಗಳನ್ನು ನಡೆಸಿದ ಸದಾಶಿವ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ ಇದರ ನರಸಿಂಹ ಪೂಜಾರಿ ಪಡುಕೋಣೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಬಾಳಿಕೆರೆ, ರವಿ ಗಾಣಿಗ ಕೆಂಚನೂರು, ಚಂದ್ರ ಬಾಳಿಕೆರೆ, ಗುರುರಾಜ್ ಭಟ್ ಶಂಕರಪ್ಪನಕೊಡ್ಲು ಉಪಸ್ಥಿತರಿದ್ದರು.ಕಲಾಭಿಮಾನಿಗಳ ನೆಚ್ಚಿನ ತಾಣವಾದ ಇಲ್ಲಿ ಯಕ್ಷಗಾನಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದ್ದು, ವಜ್ರಮಾನಸಿ ಯಶಸ್ವಿ ಪ್ರದರ್ಶನಕ್ಕೆ ಸಹಕರಿಸಿದ ಮೇಳದ ಕಲಾವಿದರಿಗೂ, ಮೇಳದ ಯಜಮಾನರಿಗೂ, ನೆರೆದ…
ಪ್ರೀತಿಯ ಅಮಲ ಏರಿದರೇ ಅವರ ನಡೆ-ನುಡಿಗಳ ಅಂಕೆಯಲ್ಲಿರುವುದಿಲ್ಲ ಎಂಬುದನ್ನು ಸಾಕಷ್ಟು ಪ್ರಕರಣಗಳು ಸಾಕ್ಷೀಕರಿಸಿವೆ. ಎದೆಯ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವುದು, ಕೈಯಲ್ಲಿ ಬ್ಲೇಡಿನಿಂದ ಬರೆದುಕೊಳ್ಳುವುದು, ರಕ್ತದಲ್ಲಿ ಪ್ರೇಮಪತ್ರ ಬರೆದು ಪ್ರೇಮ ಪರಾಕಾಷ್ಟೆ ತೋರಿಸುವುದು ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ನೂರು ರೂಪಾಯಿ ನೋಟಿನ ಮೇಲೆ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಅನುಮತಿ ಕೋಡಿ ಎಂದು ಬರೆದುಕೊಂಡು ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಬೇಡಿದ್ದಾನೆ. ಅಷ್ಟೇ ಅಲ್ಲದೇ ಈ ನೋಟು ಸಿಕ್ಕಿದವರು ನಮಗೆ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾನೆ. ದೇವರು ಆಶಿರ್ವಾದ ಮಾಡಿದರೋ ಇಲ್ಲವೋ ಗೊತ್ತಿಲ್ಲ. ಅಷ್ಟಕ್ಕೂ ಅದು ಕಾಣಿಕೆ ಹುಂಡಿಗೆ ಹೋಗಿ ಬಂದ ನೋಟೋ ಅಥವಾ ತಮಾಷೆಗಾಗಿ ಯಾರೋ ಬರೆದದ್ದೋ ಗೊತ್ತಿಲ್ಲ ಆದರೆ ಪಿಗ್ಮಿ ಸಂಗ್ರಾಹಕರೊಬ್ಬರು ಈ ನೋಟನ್ನು ‘ಕುಂದಾಪ್ರ ಡಾಟ್ ಕಾಂ’ಗೆ ನೀಡಿದ್ದಾರೆ. ಅದೇನೇ ಇದ್ದರೂ ಸಹ ಭಾರತೀಯ ರಿಸರ್ವ ಬ್ಯಾಂಕಿನ ಚಲಾವಣೆಯಲ್ಲಿರುವ ನೋಟಿನ ಮೇಲೆ ಈ ರೀತಿ ಬರೆಯುವುದು ತಪ್ಪು ಎಂದು ತಿಳಿದಿದ್ದರೂ ಪ್ರೀತಿಯ ಅಮಲು ಹಾಗೆ ಮಾಡಿಸಿರಬೇಕು ಎಂದು ನೋಟು ಸಿಕ್ಕವರು…
ಕುಂದಾಪುರ: ಕಾರ್ಕಳದ ಬೈಲೂರಿನಲ್ಲಿ ನಡೆದ 2015-16ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕುಂದಾಪುರ ತಾಲೂಕು ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನುಷಾ ೨೦೦ಮೀಟರ್ ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ’ಜಿಲ್ಲಾ ಚಾಂಪಿಯನ್’ ಕ್ರೀಡಾ ಪಟುವಾಗಿ ಹೊರಹೊಮ್ಮಿದ್ದಾರೆ. ಮುಂದೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಗುಲಾಬಿ ಮತ್ತು ನಾಗೇಶ ಪೂಜಾರಿ ನಾರ್ಕಳಿಯವರ ಪುತ್ರಿಯಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕ ವೀರೇಂದ್ರ ಜೋಗಿಯವರು ತರಬೇತಿ ನೀಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ಶಶಿಧರ ಶೆಟ್ಟಿ ವಂಡ್ಸೆ ಮತ್ತು ಶಿಕ್ಷಕವೃಂದದವರು ಸೂಕ್ತ ಪ್ರೋತ್ಸಾಹ ನೀಡಿದ್ದಾರೆ.
ಮರವಂತೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಲಾಡ್ಯರು, ಶ್ರೀಮಂತರು, ರಾಜಕೀಯ ಧುರೀಣ ಸ್ಥಾಪಿತ ಹಿತಾಶಕ್ತಿಗಳು ಸರಕಾರಿ ಜಾಗವನ್ನು ಅನಧೀಕೃತವಾಗಿ ಅತಿಕ್ರಮಿಸಿ, ಅಕ್ರಮವಾಗಿ ಸ್ಥಳ ಸ್ವಾಧೀನತೆ ಹೊಂದಿರುವುದನ್ನು ಈ ಕೂಡಲೇ ತೆರವುಗೊಳಿಸಿ-ಬಡತನ ರಹಿತರಿಗೆ ಮಂಜೂರು ಮಾಡಲು ಕಂದಾಯ ಇಲಾಖೆ ಕ್ರಮವಹಿಸಬೇಕು ಎಂದು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಸರಕಾರವನ್ನು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಆಶ್ರಯದಲ್ಲಿ ೫ ನವಂಬರ್ ೨೦೧೫ ರಂದು ಮರವಂತೆ ಸಾಧನಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿಐಟಿಯು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ, ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ, ವೆಂಕಟೇಶ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಹಾಗು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು, ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೆದೂರು ಸರಕಾರಿ ಪ್ರೌಡಶಾಲೆಯಲ್ಲಿ ಉಚಿತ ಕಣ್ಣಿನ ಪೊರೆ ರೋಗ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಚೇರ್‌ಮೆನ್ ಜಯರಾಮ ಶೆಟ್ಟಿ ಉದ್ಘಾಟಿಸಿ, ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಶಿಭಿರಾರ್ಥಿಗಳು ಉಚಿತವಾಗಿ ನೀಡಲಾಗುವ ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಭ್-ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ಕೆ.ಮಹೇಶ್ ಬೆಟ್ಟಿನ್ ವಹಿಸಿದ್ದರು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸೇವಾನಿರತೆ ಸಂಗೀತ, ಕೆದೂರು ಯುವಕ ಮಂಡಲ(ರಿ)ಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಕೋಟೇಶ್ವರದ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕೆದೂರು ಪ್ರಾಥಮಿಕ…
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಮೇ 2015ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಾದ ಸ್ವಾತಿ.ಆರ್.ಆಚಾರ್ಯ ಪ್ರಥಮ ರ‍್ಯಾಂಕ್, ಅಶ್ಮಿತಾ ಕಾಮತ್ ಏಳನೇ ರ‍್ಯಾಂಕ್, ಸುಕನ್ಯಾ ಹತ್ತನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯು ಅಭಿನಂದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುವರ್ಯರ ದೇವರ ಕೋಣೆ ಹಾಗೂ ವರದೇಂದ್ರ ಸಭಾಗೃಹ ಸಮರ್ಪಣಾ ಕಾರ್ಯಕ್ರಮ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಬಿ.ಎನ್.ಪ್ರಭು ಸ್ವಾಗತಿಸಿದರು ಹಾಗೂ ಬಸ್ರೂರು ಶಾಖಾ ಮಠದ ಮುಖ್ಯಸ್ಥರಾದ ಶ್ರೀಧರ ವಿಠ್ಠಲ ಕಾಮತರವರು ಪ್ರಸ್ಥಾವನೆಗೈದರು. ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸುತ್ತಾ ಶ್ರೀ ಕಾಶೀ ಮಠದ ಪರಂಪರೆಯಲ್ಲಿ ವಾರಣಾಸಿಯ ಮೂಲ ಮಠದ ನಂತರ ಎರಡನೇ ಮಠ ಹಾಗೂ ದಕ್ಷಿಣ ಭಾರತದ ಮೊದಲ ಶಾಖಾ ಮಠವಾಗಿ ಬಸ್ರೂರಿನಲ್ಲಿ ಸ್ಥಾಪನೆಗೊಂಡಿತು. ಗುರುಪರಂಪರೆಯ ಎಲ್ಲಾ ಯತಿಗಳು ಇಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನದ ಬಗ್ಗೆ ಕೂಡ ಅವರು ಉಲ್ಲೇಖಿಸಿದರು. ಶ್ರೀ ಹರಿ ಗುರು ಸೇವಾ ಪ್ರತಿಷ್ಟಾನದ ಕುಂದಾಪುರ ಶ್ರೀನಿವಾಸ ಪ್ರಭು ಹಾಗೂ ಎನ್. ಗಣೇಶ…
ಬೈಂದೂರು: ಕಾಲೇಜಿಗೆಂದು ತೆರಳಿದ ಯುವತಿಯೋರ್ವಳು ಮನೆಗೆ ಹಿಂತಿರುಗಿ ಬಾರದೇ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಬೈಂದೂರು ನಿವಾಸಿ, ಕೋಟಾದ ಆಶ್ರೀತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ನಿಧಿ (21) ನಾಪತ್ತೆಯಾದ ಯುವತಿ. ಮೈಸೂರು ಮೂಲದವಳಾದ ನಿಧಿ, ಬೈಂದೂರಿನ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದು, ಕೋಟಾದ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಎಂದಿನಂತೆ ಕಾಲೇಜಿಗೆ ಹೋಗಿದ್ದವಳು ಹಿಂತಿರುಗಿ ಮನೆಗೆ ಬಂದಿರಲಿಲ್ಲ. ತಕ್ಷಣ ಸಂಭಂಧಿಕರ ಮನೆಗಳಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತುಸು ಎಣ್ಣೆಗಪ್ಪು ಮೈಬಣ್ಣದ ಈಕೆ ನೀಲಿ ಬಣ್ಣದ ಚೂಡಿದಾರ ಧರಿಸಿದ್ದಾರೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುವ ಇವರನ್ನು ಯಾರಾದರೂ ಗುರುತಿಸಿದರು ಬೈಂದೂರು ಠಾಣೆಗೆ ಮಾಹಿತಿ ನೀಡುವಂತೆ (08254 251033) ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ವರದಿ. ‘ಕಾರ್ಟೂನ್ ತೋರ‍್ಸದ್ ಹೊರ‍್ತು ನಮ್ ಎಮ್ಮಿ ಹಾಲ್ ಕೊಡುದಿಲ್ಲೇ’ ಎಂದು ಲಾಲುವನ್ನು ಛೇಡಿಸಿದ ಸ್ವಾಗತ ‘ಬಂಗ್ಡಿ ಮಿಡಕ್ತಾ ಅಂದ್ಹೇಳಿ ನಮ್ಮನಿಯವ್ಳಿಗೆ ವಾಟ್ಸಪಂಗೆ ಕಾಣ್ಕೆ ಅಬ್ರ್ ಮಾರಾಯ್ತಿ’ ಎಂದು ಮೀನು ಕೊಳ್ಳುವವನು ಹೇಳಿದ್ದಕ್ಕೆ ‘ಅದು ವಿಡ್ಕುದ್ ಹನಿಸಿಂಗ್ ಪದ್ಯ ಹಾಕಿದಾಗ’ ಎಂದು ಜಾಡಿಸುವ ಉತ್ತರ. ಇದು ಕುಂದಾಪುರ ಕಲಾಮಂದಿರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಕಾರ್ಟೂನು ಹಬ್ಬ’ದಲ್ಲಿ ಕಂಡ ಕಾರ್ಟೂನ್ ಡೈಲಾಗ್‌ಗಳು. ಕಾರ್ಟೂನು ವೀಕ್ಷಣೆಗೆ ಬಂದ ವೀಕ್ಷಕರ ತುಡಿಯಂಚಿನಲ್ಲೂ ಪದೇ ಪದೇ ಮಾತುಗಳು ಹೊರಳುತ್ತಿದ್ದವು. [quote bgcolor=”#ffffff” arrow=”yes” align=”right”]ಕುಂದಾಪುರದಲ್ಲಿ ಸಾಕಷ್ಟು ವ್ಯಂಗ್ಯಚಿತ್ರಕಾರರ ದೊಡ್ಡ ತಂಡವೇ ಇದ್ದು, ಅವರು ಸಾಗಿಬಂದ ದಾರಿಯ ಸಿಂಹಾವಲೋಕನ ಮಾಡುವುದರೊಂದಿಗೆ, ಯುವಜನರಲ್ಲಿ ವ್ಯಂಗ್ಯಚಿತ್ರದತ್ತ ಒಲವು ಮೂಡಿಸುವ ಮತ್ತು ಅವರಿಗೊಂದು ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಟೂನು ಹಬ್ಬವನ್ನು ಆಯೋಜಿಸಲಾಗಿದೆ. -ಸತೀಶ್ ಆಚಾರ‍್ಯ, ಕಾರ್ಟೂನಿಷ್ಠ್[/quote] ಯಮ ಅಂಕಲ್ ನಾನೇ ಫಸ್ಟ್, ವೇಗ ಕೊಲ್ಲುತ್ತೆ, ನಮ್ ಮನಿ ಗಂಡ್ ಎಷ್ಟ್ ಚಂದ ಕಾರ್ ಓಡ್ಸತ್ ಕಾಣಿ, ನಮ್ಮ ಹಾಗೂ ನಮ್ಮ…
