ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವೈದ್ಯಕೀಯ ಸೇವೆ ಜಗತ್ತಿನಲ್ಲಿ ಅತ್ಯುನ್ನತವಾದ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ವೈದ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಸರಕಾರ ತರಲುದ್ದೇಶಿಸಿದ ವಿಧೇಯಕಗಳಲ್ಲಿ ಶುಲ್ಕ ಕಡಿತಗೊಳಿಸುವ ವಿಚಾರಗಳಷ್ಟೆ ಎಂದು ಜನ ಭಾವಿಸಿದ್ದರು ಆದರೆ ವೈದ್ಯ ಸಮೂಹಕ್ಕೆ ಭಾದಕವಾಗುವಂತ ಹಲವಾರು ಸಂಗತಿಗಳು ಅದರಲ್ಲಿ ಅಡಕವಾಗಿರುವುದನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ವೈದ್ಯಕೀಯ ಸಂಘ ಮಾಡಬೇಕಿತ್ತು ಎಂದು ಕೆಎಂಸಿ ಮಣಿಪಾಲದ ಇಎನ್ಟಿ ವಿಭಾಗದ ಪ್ರೋಫೆಸರ್ ಡಾ. ಬಾಲಕೃಷ್ಣನ್ ಹೇಳಿದರು. ಅವರು ಸಹನಾ ಕನ್ವೆನ್ಶನ್ ಹಾಲ್ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ನೂತನ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಅವರು ನೂತನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿ, ಪ್ರತಿಷ್ಠಿತ ಐಎಂಎ ಕುಂದಾಪುರದ ಸರ್ವಸದಸ್ಯರ ವಿಶ್ವಾಸಗಳಿಸಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ತಿಳಿಸಿದರು. ಐಎಂಎ ಸೆಂಟ್ರಲ್ ಕೌನ್ಸಿಲ್ ಸದಸ್ಯರಾದ ಡಾ. ಕೆ.ಎಸ್.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಬುನಾದಿಯನ್ನೊದಗಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು. ಈ ಕಾಲೇಜಿನ ಸಂಸ್ಥಾಪಕರಾದ ಡಾ.ಟಿ.ಎಂ.ಎ ಪೈ ಹಾಗೂ ಡಾ.ಎ.ಎಸ್. ಭಂಡಾರ್ಕಾರ್ ಅವರು ಅಂದು ಶಿಕ್ಷಣಕ್ಕಾಗಿ ಹಾಕಿಕೊಟ್ಟ ಮಾರ್ಗ ಇಂದು ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ಸಂಸ್ಮರಣೆ ೨೦೧೭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಟಿ.ಎಂ.ಎ. ಪೈ ಅವರು ಯಾವ ಕಾಲದಲ್ಲಿಯೂ ರಾಜಕೀಯ ಪ್ರವೇಶಿಸಿದವರಲ್ಲ. ಅವರ ಧ್ಯೇಯ ಕೇವಲ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅವರ ಈ ಉತ್ತಮ ಉದ್ದೇಶದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಲವರ ಪಾಲಿಗೆ ಬೆಳಕಾಗಿ ಮೂಡಿಬಂದಿದೆ. ಅನಕ್ಷರತೆ, ಅನಾರೋಗ್ಯ, ಬಡತನ ಇವುಗಳು ಮನುಷ್ಯರ ಪಾಲಿಗೆ ಯಾವಾಗಲೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಒಂದೆ ಮಾತರಂ ಗೀತೆಯಿಂದ ಈ ದೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಿದೆ ಎಂದು ಕೋಟದ ಹೋಟೆಲ್ ಉದ್ಯಮಿ ಕೆ ವೆಂಕಟೇಶ ಪ್ರಭು ಹೇಳಿದ್ದಾರೆ ಶುಕ್ರವಾರ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಪಾರಂಭಗೊಂಡ ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟ ವಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶಕ್ಕೆ ನಮ್ಮವರಿಂದಲೆ ಸಮಸ್ಯೆ ಎದುರಿಸುತ್ತಿದ್ದೇವೆ ಅದು ನಮ್ಮ ಭಕ್ತಿಯ ಕೇಂದ್ರವಾದ ಶಬರಿಮಲೈ ದಿವ್ಯ ಜ್ಯೋತಿಯ ವಿಚಾರವಾಗಿ ಅನುಮಾನ ಹುಟ್ಟಿಸುವ ವಾತಾವರಣ ನಿರ್ಮಾಣಗೈಯುತ್ತಿರುವುದು ಅಲ್ಲದೆ ನಮ್ಮ ಬೇರೆ ಬೇರೆ ವಿಚಾರದಲ್ಲೂ ಇದೇ ರೀತಿಯ ಸಮಸ್ಯೆ ಸೃಷ್ಟಿಸುತ್ತಾರೆ ಇದಕ್ಕೆ ಆಸ್ಪದ ಕೊಡಬಾರದು ಇದರ ಬಗ್ಗೆ ಹಿಂದೂ ಧರ್ಮ ಜಾಗೃತರಾಗಬೇಕಿದೆ ಎಂದರು. ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದ ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಧನಂಜಯ ಕುಂದಾಪುರ ಈ ದೇಶದಲ್ಲಿ ಮೂಲವಾಗಿ ಕಾಡುತ್ತಿರುವ ಭಯೋತ್ಪಾದನೆ ,ಮತ್ತಾಂತರ,ಲವ್ ಜಿಹಾದ್ ,ಲ್ಯಾಂಡ್ ಜಿಹಾದ್ನಿಂದ ಎದುರಾಗುತ್ತಿರುವ ಸಮಸ್ಯೆಗಳ ವಿರುದ್ಧ ಯಾವ ಸರಕಾರಗಳು ಧ್ವನಿ ಎತ್ತುವುದಿಲ್ಲ ಕ್ರಮಗಳು ಜರಗಿಸುವುದಿಲ್ಲ ಬರೆ ಓಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಪ್ರಥಮ ಸರ್ವಸುಸಜ್ಜಿತ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀ ಸೌಪರ್ಣಿಕಾ ಡೆವೆಲಪರ್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ’ಓಂ ಮಹಾವೀರ’ ಅಪಾರ್ಟ್ಮೆಂಟ್ಗೆ ಬಹಳ ಬೇಡಿಕೆ ಇದ್ದು, ಎಲ್ಲಾ ಫ್ಲಾಟ್ಗಳು ಮುಂಗಡವಾಗಿ ಬುಕ್ ಆಗಿದೆ. ಕ್ಷೀಪ್ರಗತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೊದಲ ಅಂತಸ್ತು ಪೂರ್ಣಗೊಂಡು ಎರಡನೇ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ೧ ಬಿಹೆಚ್ಕೆ ಹಾಗೂ ೨ ಬಿಹೆಚ್ಕೆ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿ ವಿಶೇಷ ಮುತುವರ್ಜಿಯೊಂದಿಗೆ ಸಾಗುತ್ತಿದೆ. ಉತ್ತಮ ಗುಣಮಟ್ಟದ ನಿರ್ಮಾಣ ಪರಿಕರಗಳನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯ ಪ್ರತಿ ಹಂತದ ಪ್ರಗತಿ ಹಾಗೂ ಗುಣಮಟ್ಟವನ್ನು ಪರೀಕ್ಷಿಸಲು ಅನುಭವಿ ಮೇಲ್ವಿಚಾರಕರು ಇರುವುದಲ್ಲದೇ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೇಗಿರುತ್ತೆ ಅಪಾರ್ಟ್ಮೆಂಟ್: * ವಾಸ್ತುವಿಗೆ ಸರಿಹೊಂದುವ ಪ್ಲಾಟ್ * ವಿಶಾಲ ಪಾರ್ಕಿಂಗ್ ಸೌಲಭ್ಯ * ಎಲ್ಲಾ ಕಾಲದಲ್ಲೂ ಸಮೃದ್ಧ ನೀರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ಕೊಡುವುದು ದೊಡ್ಡ ಕೆಲಸ. ಮಕ್ಕಳಿಗೆ ಕೊಡಬೇಕಾಗಿರುವುದು ಅವಕಾಶವೇ ಹೊರತು ಬಹುಮಾನವಲ್ಲ. ಕಲೆಯ ಉದ್ದೇಶ ಇನ್ನಷ್ಟು ಮಾನವೀಯರಾಗುವುದು, ಸಮಾಜಶೀಲರಾಗುವುದು ಮತ್ತು ಆ ಮೂಲಕ ದೇಶ ಸೇವೆಗೆ ತೊಡಗಿಕೊಳ್ಳುವಂತೆ ಮಾಡುವುದೇ ಆಗಿದೆ ಎಂದು ಆಕಾಶವಾಣಿ ಕಲಾವಿದ ಚಂದ್ರಶೇಖರ ಕೆದ್ಲಾಯ ಅಭಿಪ್ರಾಯಪಟ್ಟರು. ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಕುಸುಮಾಂಜಲಿ-2017ರ ’ಗಾನಕುಸುಮ’ ಸಂಗೀತ ಸ್ಪರ್ಧಾಳುಗಳ ಅಯ್ಕೆ (ಅಡಿಶನ್ ರೌಂಡ್) ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮತನಾಡಿದರು. ಇಂದು ಮಕ್ಕಳ ತಲೆಮೇಲೆ ಬೇಡದ ಹೊರೆಯನ್ನು ಹೊರಿಸಿ ಅವರಲ್ಲಿನ ಲವಲವಿಕೆ, ಭಾವನಾತ್ಮಕೆಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಎಲ್ಲದಲ್ಲೂ ಪ್ರತಿಫಲಾಕ್ಷೆ ಬಯಸುತ್ತಿರುವುದು ಹೊಸ ತಲೆಮಾರಿನ ಮಕ್ಕಳನ್ನು ಕಂಗೆಡಿಸಿಬಿಟ್ಟಿದೆ. ಸಂಗೀತ ಮನಸ್ಸು ಹಗುರಗೊಳಿಸುವ ಮೂಲಕ ಭಾವನೆಗಳನ್ನು ಹೆಚ್ಚಿಸಿ ಮೆಚ್ಚಿಸಲು ಸಹಕಾರಿಯಗುತ್ತದೆ ಎಂದರು. ಕುಸುಮಾ ಗೂಪ್ ಪ್ರವರ್ತಕ ನಳಿನ್ಕುಮಾರ್ ಶೆಟ್ಟಿ ಪ್ರಾಸ್ತಾವಿಸಿ, ತಾಲೂಕಿನ ಪ್ರತಿಭಾನ್ವಿತ ಕಲಾವಿದರನ್ನು, ಗಾಯಕರನ್ನು ಗುರುತಿಸಿ ಪ್ರೋತ್ಸಾಸುವ ಸಂಕಲ್ಪದೊಂದಿಗೆ ಸಂಸ್ಥೆ ತನ್ನ ಮೂರನೇ ಗಾನಕುಸುಮ ಅವೃತ್ತಿಯನ್ನು ಪ್ರಾರಂಭಿಸಲಾಗುತ್ತಿದೆ. ಸ್ಪರ್ಧೆಯು ಮೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಭಾನುವಾರ ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಹಟ್ಟಿಕುದ್ರು ಜನರ ಬಹುದಿನಗಳ ಕನಸು ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆ ನೆನೆಗುದಿಗೆ ಬಿದ್ದಿದೆ. ಮೂಲಭೂತ ಸೌಕರ್ಯಗಳಿಗಾಗಿ ಬಸ್ರೂರನ್ನೇ ಅವಲಂಬಿಸಿರುವ ಹಟ್ಟಿಕುದ್ರು ಕಳೆದ ಎರಡು ದಶಕಗಳಿಂದ ಬಸ್ರೂರು-ಸಂಪರ್ಕ ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳಲ್ಲಿ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಸ್ಪಂದನ ದೊರಕದೇ ಸಮಸ್ಯೆಗಳ ಸುಳಿಯಲ್ಲೇ ಜೀವನ ಸಾಗಿಸಬೇಕಾದ ದುಸ್ತರ ಸ್ಥಿತಿ ನಿರ್ಮಾಣವಾಗಿದೆ ಹುಟ್ಟಿಕುದ್ರು ದ್ವೀಪ: ಕುಂದಾಪುರ ಸಮೀಪ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಟ್ಟಿಕುದ್ರು ದ್ವೀಪವಾಗಿದೆ. ಪ್ರಾಕೃತಿಕವಾಗಿ ಸಮೃದ್ಧವಾಗಿದ್ದು, ಸುಮಾರು ೩೫೦ರಷ್ಟು ಮನೆಗಳು, ಮೂರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಕುಂದಾಪುರ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಟ್ಟಿಕುದ್ರು ಜನತೆಗೆ ನೀಡಿದ ಭರವಸೆಯ ಹಿನ್ನಲೆಯಲ್ಲಿ ಸರಕಾರದ ಗಮನ ಸೆಳೆದು ಹಟ್ಟಿಕುದ್ರುವಿಗೆ ಸಂಪರ್ಕ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದರು. ಆದರೆ ಈ ಯೋಜನೆ ಹಟ್ಟಿಕುದ್ರು ಮತ್ತು ಹಟ್ಟಿಯಂಗಡಿಯ ನಡುವಿನ ಸಂಪರ್ಕ ಸೇತುವೆಯಾಗಿ ಆ ಭಾಗದಲ್ಲಿ ಸಂಚರಿಸುವವರಿಗೆ ವರದಾನವಾಗಿತ್ತು. ಎಲ್ಲದಕ್ಕೂ ಬಸ್ರೂರು ಆಸರೆ:…
ಲವು ಸಂಸ್ಸೃತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು. ‘ಕರ್ನಾಟಕ:ಬಹುತ್ವದ ನೆಲೆಗಳು’ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎನ್. ರಾಮಚಂದ್ರನ್, “ಪ್ಲೂರಲಿಜ಼ಮ್ ಅಥವಾ ಬಹುತ್ವ” ದ ಕಲ್ಪನೆಯು ಇಂದಿಗೆ ಪ್ರಸ್ತುತವಾದುದು; ಇದು ಅಸ್ಮಿತತೆಯ ರಾಜಕಾರಣ/ ಐಡೆಂಟಿಟಿ ಪಾಲಿಟಿಕ್ಸ್ ಆಗಿ ಬದಲಾಗುತ್ತಿದೆ. ಹಲವು ಸಂಸ್ಕೃತಿಗಳ ಸಹಬಾಳ್ವೆ ಹಾಗು ಬೆಳವಣಿಗೆಯಿಂದ ಬಹುತ್ವ ಸಾಧಿಸಬೇಕಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದರಲ್ಲೂ ಬಹುತ್ವವನ್ನು ಕಾಣಬಹುದು. ಬಹುತ್ವದ ಜೊತೆಗೆ ಬರುವ ಮತ್ತೊಂದು ವಿಚಾರವೆಂದರೆ ಅಸ್ಮಿತೆಯದ್ದು. ಬಹುತ್ವದಲ್ಲಿರುವ ಅಸ್ಮಿತೆ ಒಂದು ದಿಕ್ಕಿನಲ್ಲಿದ್ದರೆ, ಬಹುತ್ವೆಂಬ ವಿಶಾಲ ಪರಿಕಲ್ಪನೆ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಇದರ ಮಧ್ಯೆ ಸಾಮರಸ್ಯವನ್ನು ಸಾಧಿಸಬೇಕಾದ್ದು ತುಂಬಾ ಮುಖ್ಯ’ ಎಂದರು. ಅಸ್ಮಿತೆ ಹಾಗೂ ಬಹುತ್ವಗಳ ಬಗ್ಗೆ ವಿವರಿಸಿದ ಅವರು, ಪ್ರತಿಯೊಂದು ಭಾಷೆ, ಧರ್ಮ, ಸಂಸ್ಕೃತಿ, ಪದ್ಧತಿಗಳೂ ತಮ್ಮ ಅಸ್ಮಿತೆಯ ಉಳಿವಿಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ನೆಲದ ಸಂಸ್ಕೃತಿ, ಸಂಪ್ರದಾಯ, ಆಚರಣೆಯನ್ನು ಬಿಂಬಿಸುವ ಸಲುವಾಗಿ ಕಾಣಿ ಸ್ಟುಡಿಯೋ ಕೋಟೇಶ್ವರ-ಬೆಂಗಳೂರು ಇವರ ಆಶ್ರಯದಲ್ಲಿ ಕೋಟೇಶ್ವರ ಕೊಡಿ ಹಬ್ಬದಲ್ಲಿ ತೃತೀಯ ವರ್ಷದ “ಕೊಡಿ ಹಬ್ಬ ಸೆಲ್ಫಿ ಹಬ್ಬ ಸೆಲ್ಫಿ ಪೋಟೋಗ್ರಫಿ ಸ್ಪರ್ಧೇ ಡಿ.3 ಬೆಳಿಗ್ಗೆ 6 ರಿಂದ ಡಿ.4ರ ಬೆಳಿಗ್ಗೆ 6 ರವರೆಗೆ ಜರುಗಲಿದೆ. ಐಸಿರಿ ಎಂಟರ್ಪ್ರೈಸಸ್, ಹನಿಕೊಂಬ್ ಗ್ರೂಪ್, ವರ್ಣ ಪ್ರೀಟಿಂಗ್, ರೋಟರಿ ಕ್ಲಬ್ ಕೋಟೇಶ್ವರ, ರೋಟರ್ಯಾಕ್ಟ್ ಕ್ಲಬ್ ಕೋಟೇಶ್ವರ, ಕೆನರಾ ಕಿಡ್ಸ್, ರಾಮನಾಥಗೋಳಿಕಟ್ಟೆ ಫ್ರೇಂಡ್ಸ್, ಐಶ್ವರ್ಯ ಡಿಜಿಟಲ್ ಸ್ಟುಡಿಯೋ, ಐಶ್ವರ್ಯ ಮೀಡಿಯಾ, ಯಶಸ್ವಿ ಶಾಮಿಯಾನ ವಕ್ವಾಡಿ, ಅಮಯ್ ಇವೆಂಟ್, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು ಇವರ ಪ್ರಾಯೋಜಕತ್ವದಲ್ಲಿ ಕಾಣಿ ಸ್ಟುಡೀಯೋ ಸಂಯೋಜನೆಯಲ್ಲಿ ಈ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ಜರುಗಲಿದೆ. ಸ್ಪರ್ಧೇಯ ವಿಷಯ: ಕೊಡಿ ಹಬ್ಬದಲ್ಲಿ ವಿವಾಹಿತ ಜೋಡಿ, ಕೊಡಿ ಹಬ್ಬದ ಸಂಭ್ರಮದಲ್ಲಿ ಕುಟುಂಬ, ಕೊಡಿ ಹಬ್ಬದ ಸಂಭ್ರಮ ಎಂಬ ೩ ವಿಷಯಗಳಲ್ಲಿ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ನಡೆಯಲಿದೆ. ಸ್ಪರ್ಧೇಯ ನಿಯಮ: ಈ ಸೆಲ್ಫಿ…
