ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ,ಫೆ.24: ಇಲ್ಲಿನ ಕೋಟೇಶ್ವರ ಕೈಗಾರಿಕಾ ವಲಯದಲ್ಲಿರುವ ದಾಮೋದರ ಕೆಮಿಕಲ್ ಇಂಡಸ್ಟ್ರಿಗೆ ಬೆಂಕಿ ತಗುಲಿ ಇಡಿ ಕಾರ್ಖಾನೆಯ ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ ಘಟನೆಯ ವಿವರ: ವಾಹನದ ಬ್ರೇಕ್ ಲೈನರ್‌ಗೆ ಬಳಸುವ ಆಯಿಲ್ ತಯಾರಿಸುವ ಕಾರ್ಖಾನೆಯ ಗೋಡನ್‌ನಲ್ಲಿ ಸುಮಾರು ೪೦ ಟನ್ ಆಯಿಲ್ ಶೇಖರಿಸಿಡಲಾಗಿತ್ತು. ಒಂದೇ ಸಮನೆ ಏರಿದ ಉಷ್ಟಾಂಶದಿಂದಾಗಿ ಆಯಿಲ್ ಟ್ಯಾಂಕಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಏಕಾಏಕಿ ಬೆಂಕಿಯ ಧಗೆಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂಧಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಘಟನೆಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ದಾಮೋದರ ಕೆಮಿಕಲ್ ಇಂಡಸ್ಟ್ರೀಸ್ ಯಘ್ನೇಶ್ ಭಟ್ ಅವರ ಒಡೆತನಕ್ಕೆ ಸೇರಿದ್ದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪುರಸಭೆ ಅಭಿವೃದ್ಧಿಗೆ ದುಡ್ಡಿಲ್ಲ ಅಂತ್ರಲ್ಯಾ.. ಹಂಗಂದ್ರೆ ಹ್ಯಾಂಗೆ. ನಮ್ ಕಾಲದ್ಹಾಗೆ ಅಭಿವೃದ್ಧಿ ಮಾಡ್ಲಿಲ್ಯಾ? ನಮ್ ಕಿಸಿಗ್ ಹಾಯ್ಕಂಬುಕೆ ದುಡ್ಡ್ ಕೇಂತಿಲ್ಲ. ಪುರಸಭೆ ಅಭಿವೃದ್ಧಿಗೆ ಕೇಂತಿಪ್ಪುದ್. ನಿಮ್ದ್ ಸಚಿವರಿದ್ರ್, ಸರಕಾರ ಇತ್. ಹಾಂಗಿದ್ರೂ ಅನುದಾನ ಕೇಂಬುಕ್ ಹಿಂದಾಯ್ಕಂಬ್ದ್ ಯಾಕೆ? ನಮ್ ಅಧಿಕಾರ ಇಪ್ಪತಿಗೆ ಪುರಸಭೆಗೆ ಮಸ್ತ್ ಅನುದಾನ ತಂದಿತ್. ಅನುದಾನ್ ತಂದಿತ್ ಅಂದ್ಹೇಳಿ ಹೇಳ್ತ್ರಿ ಬಿಟ್ರೆ ಏಷ್ಟ್ ಅಂದೇಳಿ ಹೇಳಿ ಹೇಳುದಿಲ್ಲೆ. ೫ ವರ್ಷದಲ್ಲ್ ೫ ಕೋಟಿ ಹಣ ತಂದ್ಕಂಡ್ ಅನುದಾನ ತಂದಿತ್ ಅಂತ್ರಿ. ಆಗ ನಿಮ್ದೇ ಸರ್ಕಾರ ಇದ್ದಿತ್ ಆರೂ ಜಾಸ್ತಿ ಅನುದಾನ ತಪ್ಪುಕ್ ಆಯಿಲ್ಲೆ ನಿಮ್ಗೆ. ನಮ್ ಸರ್ಕಾರ ಬಂದ್ ಎರ್ಡೂವರೇ ವರ್ಷ ಆಯ್ತ್ ಅಷ್ಟೇ. ಇನ್ನು ಅನುದಾನ ಕೊಡ್ತೆ ಅಂದೇಳಿ ಉಸ್ತುವಾರಿ ಸಚಿವ್ರ್ ಹೇಳಿರ್. ಇನ್ನೂ ಎರ್ಡೂವರಿ ವರ್ಷ ಇತ್. ನಾವು ಅನುದಾನ್ ತಕಬತ್ತ್. ಅಭಿವೃದ್ಧಿ ಮಾಡಿ ತೋರ‍್ಸತ್ ಕಾಣಿ. ಕುಂದಾಪುರ ರಿಂಗ್ ರಸ್ತೆಯ ಅಭಿವೃದ್ಧಿಯಗಾಗಿ ಪುರಸಭೆ ಡಾ. ವಿ.ಎಸ್. ಆಚಾರ್ಯ…
ಕುಂದಾಪುರ ತಾಲೂಕು
ಕುಂದಾಪುರ: ಕಾಕತಾಳಿಯವೋ ಏನೋ. ಫೆ.23ರ ಬೆಳಿಗ್ಗೆ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ ಅವರ ಮನೆಯಲ್ಲಿ ಅರಳಿದ ಕಮಲ ಗೆಲುವಿನ ಮುನ್ಸೂಚನೆ ನೀಡಿತ್ತು. ನಾಲ್ಕು ಜಿಪಂ ಸೀಟುಗಳ ನಿರೀಕ್ಷೆಯಲ್ಲಿದ್ದ ಅಧ್ಯಕ್ಷರಿಗೆ ಅಂದು ಒಂದು ಕ್ಷೇತ್ರ ಬೋನಸ್ ದೊರೆತಿತ್ತು. ಹದಿನೈದು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿಯೂ ಕಮಲ ಅರಳಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಳೆದ ಫೆ.20 ರಂದು ನಡೆದ ಕುಂದಾಪುರ ತಾಪಂ, ಜಿಪಂ ಚುನವಾವಣೆ ಮತ ಎಣಿಕೆ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್‌ನಲ್ಲಿ ಬೆಳಗ್ಗೆ 8 ರಿಂದ ಆರಂಭವಾಗಲಿದೆ. ಕುಂದಾಪುರ ಕ್ಷೇತ್ರದ ಹತ್ತು ಜಿಲ್ಲಾ ಪಂಚಾಯತ್ ಮತ್ತು ಮುವತ್ತೇಳು ತಾಲೂಕ್ ಪಂಚಾಯತಿಗೆ ಚುನಾವಣೆ ನಡೆದಿದ್ದು ತಾಪಂ ಒಟ್ಟು 37 ಸ್ಥಾನಕ್ಕ ಒಟ್ಟು 99 ಅಭ್ಯರ್ಥಿಗಳು ಮತ್ತು ಹತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಮಾಜಿ ಜಿಪಂ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಮದನ್ ಕುಮಾರ್, ತಾರಾನಾಥ ಶೆಟ್ಟಿ, ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ಸಾಧು ಎಸ್.ಬಿಲ್ಲವ, ರಾಜು ದೇವಾಡಿಗ ಅವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಎರಡು ಕೊಠಡಿಗಳಿದ್ದು, ೧೫ ಟೇಬಲ್‌ಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿದ್ದ ದೇವಳದ ಡಿ ದರ್ಜೆಯ ನೌಕರ ಶಿವರಾಮ್ ಅವರನ್ನು ಕೊಲ್ಲೂರು ಪೊಲೀಸರು ಸೋಮವಾರ ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದು ಪ್ರಕರಣದ ಸತ್ಯಾಸತ್ಯಗಳ ಬಗ್ಗೆ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಫೆ.15ರಂದು ದೇವಳದ ತಿಜೋರಿಯ ಕೀಲಿಕೈಯೊಂದಿಗೆ ಹಾಗೂ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದ ಶಿವರಾಮ್, ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನಗೊಂಡ ದೇವಳದ ಕಾರ್ಯನಿರ್ವಹಣಾಧೀಕಾರಿ ಭಾನುವಾರ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಕೊಲ್ಲೂರು ಪೋಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಆತನ ವಿಚಾರಣೆ ನಡೆಸಿದ್ದು ಆ ಬಗ್ಗೆ ಪೊಲೀಸರು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 2012ರಿಂದಲೂ ಆರೋಪಿ ಶಿವರಾಮ ದೇವಳದ ತಿಜೋರಿ ಕೀಲಿಕೈ ತನ್ನ ಬಳಿ ಇಟ್ಟುಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ದೇವಳಕ್ಕೆ 47 ನಾನಾ ನಮೂನೆಯ ಚಿನ್ನಾಭರಣದ ಸೊತ್ತುಗಳು ಹರಕೆಯ ರೂಪದಲ್ಲಿ ಸಂದಾಯವಾಗಿದೆ ಆ ಎಲ್ಲಾ ಸ್ವತ್ತುಗಳನ್ನು ತಿಜೋರಿಯಲ್ಲಿ ಇಡಲಾಗಿದೆ ಎನ್ನಲಾಗಿದೆ. ಆದರೆ ಈಗ ಆ ತಿಜೋರಿಯಲ್ಲಿ…
ಕುಂದಾಪುರ: ಬಾರ್ ಅಸೋಸಿಯೇಶನ್ ಪುತ್ತೂರಿನ ಆಶ್ರಯದಲ್ಲಿ ಉಡುಪಿ, ದಕ್ಷಿಣಕನ್ನಡ, ಕೊಡಗು ಜಿಲ್ಲೆಯನ್ನೊಳಗೊಂಡ ವಕೀಲರಿಗಾಗಿ ಏರ್ಪಡಿಸಿದ ಜಿಲ್ಲಾ ಇಂಟರ್ ಬಾರ್ ಕ್ರಿಕೆಟ್ ಪಂದ್ಯಾ ಕೂಟದಲ್ಲಿ ಭಾಗವಹಿಸಿದ ನ್ಯಾಯವಾದಿ ರಾಘವೇಂದ್ರಚರಣ ನಾವಡ ನಾಯಕತ್ವದ ಕುಂದಾಪುರ ಬಾರ್ ಅಸೋಸಿಯೇಶನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ತಂಡದ ನಾಯಕ ರಾಘವೇಂದ್ರಚರಣ ನಾವಡ ಅವರಿಗೆ ಸೆಮಿ ಫೈನಲ್‌ವರೆಗೆ ಉತ್ತಮ ನಿರ್ವಹಣೆಗಾಗಿ ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ನೀಡಲಾಯಿತು.
ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ. 24ರಿಂದ 26ರವರೆಗೆ 1008 ತೆಂಗಿನಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಫೆ. 24ರಂದು ಬೆಳಿಗ್ಗೆ ೮ರಿಂದ ಶ್ರೀಗುರು ಗಣೇಶ ಪ್ರಾರ್ಥನೆ, ಪುಣ್ಯಾಹ, ನಾಂದೀ, ವಿವಿಧ ಮಂತ್ರ ಜಪಾನುಷ್ಠಾನ, ನವಗ್ರಹ ಹವನ, ಬ್ರಹ್ಮಣಸ್ಪತಿ ಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಹವನ, ಧನ್ವಂತರಿ ಹವನ ನಡೆಯಲಿದೆ. ಫೆ. 25ರಂದು ಬೆಳಿಗ್ಗೆ ೮ರಿಂದ ನವಾಕ್ಷರೀ ಮಂತ್ರಜಪ ಹಾಗೂ ಹವನ, ಗಣಸೂಕ್ತ ಹವನ, ರುದ್ರಪಾರಾಯಣ ಹಾಗೂ ರುದ್ರಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತಾ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ ಜರುಗಲಿದೆ. ಫೆ. 26ರಂದು ಬೆಳಿಗ್ಗೆ 8ರಿಂದ 1008 ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ, ಅಧಿವಾಸ ಹವನ, ಕಲಾ ತತ್ವ ಹವನ, ಶ್ರೀ…
ಕುಂದಾಪುರ: ತಾಲೂಕು ಯುವ ಬಂಟರ ಸಂಘದ ಕ್ರೀಡಾ ಸಂಚಾಲಕರಾಗಿ ರಾಜಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರ ತಾಲೂಕಿನ ಹೈಕಾಡಿಯ ನಿವಾಸಿಯಾಗಿದ್ದು, ಪ್ರಸ್ತುತ ಎಣ್ಣೆಹೊಳೆ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ಬಂಟರ ಕ್ರೀಡೋತ್ಸವ-2016 ಎಪ್ರಿಲ್ 16 ಮತ್ತು 17ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹೊಸಮಠ ಸುಕೇಶ್ ಶೆಟ್ಟಿ ತಿಳಿಸಿದ್ದಾರೆ.
ಬೈಂದೂರು: ಹಳಗೇರಿಯಲ್ಲಿ ಅಲ್-ವಫಾ ವೆಲ್‌ಫೇರ್ ಸೋಸೈಟಿ ವತಿಯಿಂದ ಜಾಮೀಯಾ ಮಸೀದಿ ವಠಾರದಲ್ಲಿ ಅಂತರ್ ಜಿಲ್ಲಾಮಟ್ಟದ ನಅತ್ ಸ್ಪರ್ಧೆ ನಡೆಯಿತು. ನಅತ್ ಸ್ಪರ್ಧಾ ವಿಜೇತರು: ಹಿರಿಯರ ವಿಭಾಗದಲ್ಲಿ ಮರುಡೇಶ್ವರದ ಅಬ್ದುಲ್ ರೆಹೆಮಾನ್(ಪ್ರಥಮ), ವಲ್ಕಿ ಗ್ರಾಮದ ಶಬ್ಬೀರ್ ವಲ್ಕಿ(ದ್ವಿತೀಯ), ಫಿರ್‌ದವಾಸ್ ನಗರದ ಸಜ್ಜಾ(ತೃತೀಯ) ಮತ್ತು ಕಿರಿಯರ ವಿಭಾಗದಲ್ಲಿ ಹಳಗೇರಿ ಸಾಯಿಮ್(ಪ್ರಥಮ), ಶಿರೂರಿನ ಮೊಹಮ್ಮದ್ ಸಮ್ಮಾನ್(ದ್ವಿತೀಯ), ಗಂಗೊಳ್ಳಿಯ ಮೊಹಮ್ಮದ್ ಆಸಿಮ್(ತೃತೀಯ) ಬಹುಮಾನ ಪಡೆದರು. ಈ ಸಂದರ್ಭ ಭಟ್ಕಳದ ಖ್ಯಾತಕವಿ ಸಮಿವುಲ್ಲ ಬರ್ಮಾವರ್ ಇವರಿಂದ ನವಾಯಿತಿ ಶಾಯಿರಿ ಮತ್ತು ಕಂಡ್ಲೂರಿನ ಜಾಮೀಯಾ ಝಿಯಾವುಲ್ ಉಲೂಮ್ ವಿದ್ಯಾರ್ಥಿಗಳಿಂದ ನಡೆದ ಬೈತ್‌ಬಾಝಿ ಎಲ್ಲರನ್ನು ಆಕರ್ಷಿಸಿತು. ಕಂಡ್ಲೂರು ಝಿಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಾಕಾಧ್ಯಕ್ಷ ಮೌಲಾನಾ ಉಬೇದುಲ್ಲ ನದ್ವಿ ಅಧ್ಯಕ್ಷತೆವಹಿಸಿದ್ದರು. ಮೌಲಾನಾ ಶಕೀಲ್ ಅಹ್ಮದ್ ನದ್ವಿ, ಉಡುಪಿ ಜಿಲ್ಲಾ ವಕ್ಷ್‌ಬೋರ್ಡಿನ ಚೇರ್‌ಮನ್ ನಾಕ್ವಾ ಯಾಹ್ಯಾ, ಹಳಗೇರಿ ಶಬ್ಬೀರ್ ಖಾಝಿ, ಕಿರಿಮಂಜೇಶ್ವರ ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಜಮೀರ್ ಅಹ್ಮದ್ ರಶ್ದಿ, ಹಿರಿಯರಾದ ಜನಾಬ್ ಬುಡಾನ್ ಸಾಹೇಬ್ ಇವರುಗಳನ್ನು ಸನ್ಮಾನಿಸಲಾಯಿತು. ಮೌಲಾನಾ ಅಬ್ದುಲ್ ಕರೀಮ್…
