ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ. ಆಪಾದಿತ ನೌಕರ ಶಿವರಾಮ ಪತ್ತೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿದ್ದ ದೇವಳದ ಡಿ ದರ್ಜೆಯ ನೌಕರ ಶಿವರಾಮ್ ಅವರನ್ನು ಕೊಲ್ಲೂರು ಪೊಲೀಸರು ಸೋಮವಾರ ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದು ಪ್ರಕರಣದ ಸತ್ಯಾಸತ್ಯಗಳ ಬಗ್ಗೆ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

Call us

Click Here

ಫೆ.15ರಂದು ದೇವಳದ ತಿಜೋರಿಯ ಕೀಲಿಕೈಯೊಂದಿಗೆ ಹಾಗೂ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದ ಶಿವರಾಮ್, ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನಗೊಂಡ ದೇವಳದ ಕಾರ್ಯನಿರ್ವಹಣಾಧೀಕಾರಿ ಭಾನುವಾರ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಕೊಲ್ಲೂರು ಪೋಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಆತನ ವಿಚಾರಣೆ ನಡೆಸಿದ್ದು ಆ ಬಗ್ಗೆ ಪೊಲೀಸರು ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

2012ರಿಂದಲೂ ಆರೋಪಿ ಶಿವರಾಮ ದೇವಳದ ತಿಜೋರಿ ಕೀಲಿಕೈ ತನ್ನ ಬಳಿ ಇಟ್ಟುಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ದೇವಳಕ್ಕೆ 47 ನಾನಾ ನಮೂನೆಯ ಚಿನ್ನಾಭರಣದ ಸೊತ್ತುಗಳು ಹರಕೆಯ ರೂಪದಲ್ಲಿ ಸಂದಾಯವಾಗಿದೆ ಆ ಎಲ್ಲಾ ಸ್ವತ್ತುಗಳನ್ನು ತಿಜೋರಿಯಲ್ಲಿ ಇಡಲಾಗಿದೆ ಎನ್ನಲಾಗಿದೆ. ಆದರೆ ಈಗ ಆ ತಿಜೋರಿಯಲ್ಲಿ ಎಷ್ಟು ಸೊತ್ತುಗಳಿವೆ ಎನ್ನುವ ಬಗ್ಗೆ ಅದನ್ನು ತೆರೆದ ಮೇಲಷ್ಟೆ ತಿಳಿಯಲಿದೆ. ಮಂಗಳವಾರ 2012ರಿಂದ ದೇವಳದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ದೇವಳದ ತಿಜೋರಿ ತೆರೆಯಲಾಗುವುದು ಎಂದು ಡಿಎಸ್ಪಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ
►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .
► ದೇವಳದ ಭದ್ರತೆಯ ಬಗ್ಗೆ ಅನುಮಾನ. ಅಧಿಕಾರಿಗಳ ಬಗ್ಗೆ ಭಕ್ತರ ಆಕ್ರೋಶ – http://kundapraa.com/?p=11401 .

Leave a Reply