ಕುಂದಾಪ್ರ ಡಾಟ್ ಕಾಂ. ಬೆಂಗಳೂರು: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ. ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಊರಿನಲ್ಲಿ ದಿನನಿತ್ಯ ಸುಮಾರು ೩೦ಕ್ಕೂ ಹೆಚ್ಚು ಮೇಳಗಳು ಕಲಾ ತಿರುಗಾಟ ಮಾಡುತ್ತಿರುತ್ತವೆ. ಮಳೆಗಾಲದ ಶುರು ಆಗುತ್ತಿದಂತೆ ಅವುಗಳಲ್ಲಿ ಆಯ್ದ ಕೆಲವರು ತಮ್ಮಲ್ಲಿಯೇ ಒಂದು ತಂಡ ಕಟ್ಟಿಕೊಂಡು ಮುಂಬಯಿ, ಬೆಂಗಳೂರು, ಹೈದರಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ. ಈ ಮೂಲಕ ತಮ್ಮ ಮಳೆಗಾಲದ ಜೀವನವನ್ನು ಸರಿದೂಗಿಸಿಕೊಳ್ಳುತ್ತಾರೆ. ಜೂನ್ ಪ್ರಾರಂಭವಾಗುತ್ತಿದ್ದಂತೆ ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಒಂದು ಸಂಭ್ರಮ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಯಕ್ಷಗಾನ ಆಗುತ್ತಲೆ ಇರುತ್ತದೆ. ‘ಆತ ಎಲ್ಲಿ ಸಿಗದೆ ಇದ್ರೂ ಕಲಾಕ್ಷೇತ್ರದಲ್ಲಿ ಖಂಡಿತ ಸಿಗುತ್ತಾನೆ’ ಕಲಾಪ್ರೇಮಿಯ ಕುರಿತು ನಮ್ಮಲ್ಲಿ ಇಂತಹದೊಂದು ಮಾತಿದೆ. ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ. ಇಲ್ಲಿ ಪೌರಾಣಿಕ, ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ಕಿಶಾನ್‌ಸಭಾಕ್ಕೆ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ರೈತ ಸಂಘದ ಕುಂದಾಪುರ ತಾಲೂಕು ಸಂಘಟನಾ ಸಮಿತಿ ನೇತೃತ್ವದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕುಂದಾಪುರ ಸಹಾಯಕ ಕಮಿಷನರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯವ್ಯಾಪಿ ಜರುಗುವ ಪ್ರತಿಭಟನಾ ಹೋರಾಟ ಕಾರ್ಯಕ್ರಮದ ಅಂಗವಾಗಿ ರೈತರ ಪ್ರಮುಖ ಬೇಡಿಕೆಗಳಾದ – ತೆಂಗು, ರಬ್ಬರ್, ಮತ್ತು ಅಡಿಕೆ ಬೆಳೆಗಾರರನ್ನು ರಕ್ಷಿಸಿ, ಬೆಳೆಗೆ ಬೆಲೆ ಹೆಚ್ಚಳ ಮಾಡಬೇಕು. ನಮೂನೆ 50 ಮತ್ತು 53 ರಲ್ಲಿ ಅಕ್ರಮ ಸಕ್ರಮಿಕರಣ ಕೋರಿ ಅರ್ಜಿ ಸಲ್ಲಿಸಿದ ಬಡ ರೈತರಿಗೆ ಕೂಡಲೇ ಭೂಮಿ ಮಂಜೂರಾತಿ ಹಕ್ಕು ಪತ್ರ ನೀಡಬೇಕು. ಕುಂದಾಪುರ ತಾಲೂಕಿನ ರಬ್ಬರ್ ಮತ್ತು ಅಡಿಕೆ ಕೃಷಿಕರು ಸಾಲ ಬಾಧೆಯಿಂದ ೫ ಮಂದಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡಬೇಕು. ಮಧ್ಯವರ್ತಿ ಶ್ರೀಮಂತ ವ್ಯಾಪಾರಸ್ತರ ಲಾಭಕೋರ ನೀತಿಯನ್ನು ತಡೆಗಟ್ಟಬೇಕು. ಇತ್ಯಾದಿ ಬೇಡಿಕೆಗಳ ಮನವಿಯನ್ನು ಸಹಾಯಕ ಕಮಿಷನ್‌ರವರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಪ್ರಾಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಈ ಈಗಿನ ಸರಕಾರದ ಬಗೆಗೆ ಮಾತನಾಡಿದರೆ ಅದು ಸರಕಾರದ ವಿರುದ್ದ ಟೀಕೆ ಮಾಡಿದಂತಾಗುವುದು. ಹೇಳಿ ಕೇಳಿ ನಾವು ಬಿಜೆಪಿಗರು. ಆದರೆ ನಮ್ಮ ಬದಲಿಗೆ ಕಾಂಗ್ರೆಸ್ ಪಕ್ಷದವರೇ ಸರಕಾರದ ವಿರುದ್ದ ಹೇಳಿಕೊಂಡು ತಿರುಗುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದ ಬಗ್ಗೆ ಅವರ ಪಕ್ಷದ ಹಿರಿಯ ಸದಸ್ಯರು, ಸಭಾಧ್ಯಕ್ಷರು ಸರ್ಕಾರಕ್ಕೆ ಪದೇ ಪದೇ ಚಾಟೀ ಬೀಸುತ್ತಿದ್ದಾರೆ. ಈ ನೆಲೆಯಲ್ಲಿ ಯಾವ ಹಂತಕ್ಕೆ ಆಡಳಿತ ಯಂತ್ರ ಕುಸಿದಿರಬಹುದೆಂದು ಅಂದಾಜಿಸಬಹುದು. ಇಷ್ಟು ಕೆಟ್ಟ ಸರ್ಕಾರ ಇದೇ ಮೊದಲು ರಾಜ್ಯವಾಳುತ್ತಿದೆ ಎಂದು ಕರ್ನಾಟಕ ರಾಜ್ಯ ಲೋಕೋಪಯೋಗಿ ಮಾಜಿ ಸಚಿವ ಸಿಎಂ ಉದಾಸಿ ಹೇಳಿದರು. ಉದಾಸಿ ತಮ್ಮ ದಾಂಪತ್ಯ ಜೀವನದ ೫೦ ವರ್ಷಾಚರಣೆಯ ಪ್ರಯುಕ್ತ ಪತ್ನಿ ನಿಲಾಂಬಿಕಾ ಹಾಗೂ ಸಹೋದರಿ ಶಿವಗಂಗಾ ಜೊತೆಗೂಡಿ ಕೊಲ್ಲೂರಿಗೆ ಭೇಟಿನೀಡಿ ಶ್ರೀಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹೇರೂರು ಗ್ರಾಪಂ ವ್ಯಾಪ್ತಿಯ ಮೇಕೋಡು ಶ್ರೀ ದುರ್ಗಾಪರಮೇಶ್ವರಿ (ಮೇಕೋಡಮ್ಮ) ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮೀಪದ ಗೋಪಾಡಿಯಲ್ಲಿ ನೆಲೆಸಿ ಹಿಂದುಸ್ಥಾನಿ ಸಂಗೀತ ಕಲಿಸುತ್ತಿರುವ ಗುರುದಂಪತಿ ಸತೀಶ ಭಟ್ ಮಾಳಕೊಪ್ಪ, ಪ್ರತಿಮಾ ಭಟ್ ತಮ್ಮ ಶಿಷ್ಯರಿಗೆ ಪರಸ್ಪರರ ಪ್ರತಿಭೆಯ ಪರಿಚಯ ಮಾಡಿಸಲು, ಸೀಮಿತ ವೇದಿಕೆ ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಲು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಕಲಿಕೆಯ ಬಗೆಗೆ ಭರವಸೆ ಮೂಡಿಸಲು ಕಂಡುಕೊಂಡ ದಾರಿ ಆಗಾಗ ನಡೆಸುವ ‘ಶಿಷ್ಯ ಸಂಗೀತ ಸಮಾಗಮ’. ಒಬ್ಬೊಬ್ಬ ಪೋಷಕರ ಪ್ರಾಯೋಜಕತ್ವದಲ್ಲಿ ಸರದಿಯಂತೆ ನಡೆಯುವ ಕಾರ್ಯಕ್ರಮದ ಈ ಬಾರಿಯ ಆವೃತ್ತಿ ಜತೀಂದ್ರ ಮರವಂತೆ, ಡಾ. ರೂಪಶ್ರೀ ದಂಪತಿಯ ನೇತೃತ್ವದಲ್ಲಿ ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಸಂಪನ್ನವಾಯಿತು. ಸಂಗೀತ ವಿದ್ಯಾರ್ಥಿಗಳ ಪಾಲಕರು, ಸಂಗೀತಾಸಕ್ತ ಹಿರಿಯರು ಉಪಸ್ಥಿತರಿದ್ದರು. ಬೆಳಗ್ಗಿನ ಅವಧಿ ಕಿರಿಯ ಶಿಷ್ಯರಿಗೆ ಮೀಸಲಾಗಿತ್ತು. ಸಿದ್ದಾಪುರದ ಶ್ರವಣ ಪೈ ಬೈರವ್ ರಾಗದ ಮೂಲಕ ಸಮಾಗಮದ ನಾಂದಿ ಹಾಡಿದರು. ಕಿರಿಯ ವಿದ್ಯಾರ್ಥಿಗಳಾದ ಕೋಟದ ಪ್ರೀತಮ್ ಹೆಗಡೆ ಮತ್ತು ಕೇದಾರ ಮರವಂತೆ ಯಮನ್ ರಾಗ ಪ್ರಸ್ತುತಪಡಿಸಿದರು. ಕೋಟೇಶ್ವರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಮಹತ್ವಾಕಾಂಕ್ಷಿ ಯುಡಿಜಿ ಯೋಜನೆಯಲ್ಲಿ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆ ಸಾಧಕ, ಬಾಧಕಗಳೇನು. ಮಳೆಗಾದಲ್ಲಿ ರಸ್ತೆ ಕಟ್ಟಿಂಗ್ ಮಾಡಿದರೆ ಸಮಸ್ಯೆ ಆಗುತ್ತದೆ. ಯುಡಿಜಿ ಯೋಜನೆ ಸಂಪೂರ್ಣ ಮಾಹಿತಿ ನೀಡಿವಂತೆ ಸದಸ್ಯ ಮೋಹನದಾಸ್ ಶೆಣೈ ಪ್ರಶ್ನಿಸಿದರು. ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಅವರು ಮಾತನಾಡಿದರು. ಪುರಸಭಾ ಸದಸ್ಯ ಕುಂದಾಪುರ ಪ್ರಮುಖ ಜನದಟ್ಟಣೆ ಪ್ರದೇಶವಾದ ಖಾರ್ವಿಕೇರಿಯಲ್ಲಿ ರಿಂಗ್ ರಸ್ತೆ ಹಾದು ಹೋಗಿದ್ದು ಯುಡಿಜಿ ಯೋಜನೆಯಿಂದ ಹೊರತು ಪಡಿಸಲಾಗಿದೆ. ಯೋಜನೆ ಅಧಿಕಾರಿಗಳ ಕೇಳಿದರೆ ಮತ್ತೆ ಸೇರಿಸುವ ಎನ್ನುವ ಉಡಾಪೆ ಉತ್ತರ ಸಿಗುತ್ತದೆ. ಯುಡಿಬಿ ಯೋಜನೆ ಫಲಾನುಭವಿ ಪಟ್ಟಿಯಿಂದ ಖಾರ್ವಿಕೇರಿ ಹೊರಗಿಟ್ಟಿದ್ದೇಕೆ. ಖಾರ್ವಿಕೇರಿ ಕೂಡಾ ಯುಡಿಬಿ ಯೋಜನೆಗೆ ಸೇರಬೇಕು ಎಂದರು. ಕುಂದಾಪುರ ಪುರಸಭೆ ಎದುರು ರಸ್ತೆ ವಿವಾದ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಕ್ಫ ಮಂಡಳಿಗೆ ಜಾಗ ಬಿಟ್ಟು ಕೊಡುವಂತೆ ಮನವಿ ಮಾಡಬೇಕು. ಹಾಗೆ ನಗರಸಭೆ ಜಾಗವಲ್ಲದೆ ವಕ್ಫ ಮಂಡಳಿಗೆ ಸಂಬಂಧಪಟ್ಟ ಜಾಗವಿದ್ದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಮೂರು ಕೈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ೪೦೭ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಪಾದಚಾರಿ ನಾರಾಯಣ ಬಳೆಗಾರ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಗುರುವಾರ ಸಂಜೆ ಉಡುಪಿ ಕಡೆಯಿಂದ ವೇಗವಾಗಿ ಬಂದ ೪೦೭ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ಯೂ ಟರ್ನ್ ದಾಟಿ ಪಲ್ಟಿಯಾಗಿತ್ತು. ಇದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಕೋಟದ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೇಗಾರ್ ಅವರಿಗೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ವಾಹನದ ಚಾಲಕ ಮತ್ತು ನಿರ್ವಾಹಕರೀರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ತುರ್ತಾಗಿ ಸ್ಪಂದಿಸಿದ್ದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗದಲ್ಲಿ ಗಂಭೀರವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಹಂಗಳೂರಿನ ಪ್ರಸನ್ನ ಆಂಜನೇಯ ದೇವಸ್ಧಾನಕ್ಕೆ ಚಿತ್ರದುರ್ಗದ ಸಾಹಸಿ ಜೋತಿರಾಜ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಧಾನದ ಸ್ಧಾಪಕರಾದ ಸುರೇಶ ಡಿ. ಪಡುಕೋಣೆ, ದೆಹಲಿಯಲ್ಲಿ ನೆಡೆದ ರಾಷ್ಟ್ರ ಮಟ್ಟದ ವಾಲ್ ಕ್ಲೈಬಿಂಗ್ ಸ್ಪರ್ಧೆಯ ಚಿನ್ನದ ಪದಕ ವಿಜೇತ ಮಾ. ಅರ್ಜುನ್, ವಿಘೇಶ್ವರ ಯುವಕ ಸಂಘದ ಅದ್ಯಕ್ಷ ಕೃಷ್ಣ ದೇವಾಡಿಗ, ಪತ್ರಕರ್ತ ನಾಗರಾಜ ರಾಯಪ್ಪನಮಠ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಐದು ವರ್ಷಗಳ ಮುನ್ನೋಟದಿಂದ ಕೂಡಿದ ‘ನಮ್ಮ ಗ್ರಾಮ ನಮ್ಮ ಯೋಜನೆ’ ರೂಪಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಸರಕಾರ ನಿರ್ದೇಶನ ನೀಡಿದೆ. ಎಲ್ಲೆಡೆ ಈಗ ಅದರ ಪ್ರಕ್ರಿಯೆ ಆರಂಭವಾಗಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತಾಳಿದೆ. ಕುಂದಾಪುರ ತಾಲೂಕಿನ ಪಡುವರಿ, ಹಳ್ಳಿಹೊಳೆ, ಸಿದ್ದಾಪುರ, ಕುಂಭಾಶಿ, ವಂಡ್ಸೆ, ಕರ್ಕುಂಜೆ ಗ್ರಾಮ ಪಂಚಾಯತ್‌ಗಳು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮತ್ತು ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಬೆಂಬಲದೊಂದಿಗೆ ಮಾದರಿ ಪಂಚ ವಾರ್ಷಿಕ ಯೋಜನೆ ರೂಪಿಸುವ ಕೆಲಸಕ್ಕೆ ಚಾಲನೆ ನೀಡಿದ್ದು ಜಿಲ್ಲಾ ಪಂಚಾಯತ್ ಅದಕ್ಕೆ ಎಲ್ಲ ವಿಧದ ಸಹಕಾರ ನೀಡುತ್ತಿದೆ. ಆರು ಗ್ರಾಮ ಪಂಚಾಯತ್‌ಗಳು ಈಗಾಗಲೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಆರಂಭಿಕ ಪ್ರಕ್ರಿಯೆಗಳಿಗಾಗಿ ಕಾರ್ಯತಂಡಗಳನ್ನು ರಚಿಸಿಕೊಂಡಿವೆ. ಈ ತಂಡಗಳು ಗ್ರಾಮದ ಪ್ರಸಕ್ತ ಸ್ಥಿತಿಗತಿ ಅಧ್ಯಯನ, ಮಾಹಿತಿ ಸಂಗ್ರಹದಲ್ಲಿ ನಿರತವಾಗಿವೆ. ಈ ಯೋಜನೆ ಗರಿಷ್ಠ ಜನಸಹಭಾಗಿತ್ವದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮುದಾಯದ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಧಾರ್ಮಿಕ ಹಾಗೂ ಸಂಘಟನಾ ಮನೋಧರ್ಮ ನಶಿಸದಂತೆ ಮಾಡಲು ಆಗಾಗ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಣ ಸಂಗ್ರಹಿಸಿ ಅದ್ದೂರಿಯ ಸಮಾರಂಭಗಳನ್ನು ಮಾಡುವುದರ ಬದಲಿಗೆ ಜನರನ್ನು ಒಗ್ಗೂಡಿಸುವ, ದುರ್ಬಲರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು. ಉಪ್ಪುಂದ ಸಮೃದ್ಧ್ ಸಭಾಭವನದಲ್ಲಿ ನಡೆದ ಉಪ್ಪುಂದ, ಬಿಜೂರು, ನಂದನವನ ಹಾಗೂ ಕೆರ್ಗಾಲ್ ಗ್ರಾಮ ವ್ಯಾಪ್ತಿಯ ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ತೃತೀಯ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಮುದಾಯದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಯೋಚಿಸಿ, ದೊರೆತ ಅವಕಾಶವನ್ನು ಒಳ್ಳೆಯ ಉದ್ದೇಶಕ್ಕಾಗಿ ಸದುಪಯೋಗ ಪಡಿಸಿಕೊಂಡು ಸತ್ಕಾರ್ಯಗಳನ್ನು ಮಾಡಬೇಕು ಎಂದು ಸಂಘದ ಸದಸ್ಯರಿಗೆ ಸಲಹೆ ನೀಡಿದರು. ಉಪ್ಪುಂದ ಘಟಕದ ಅಧ್ಯಕ್ಷ ಗಣಪಯ್ಯ ಗಾಣಿಗ ಅಧ್ಯಕ್ಷತೆವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರಿಗೆ ಶ್ರೀದೇವರ ಭಕ್ತರೊಬ್ಬರು ಸೇವಾರೂಪದಲ್ಲಿ ಶ್ರೀದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನೂತನ ವಜ್ರದ ಕಿರೀಟವನ್ನು ಶ್ರೀ ದೇವರಿಗೆ ಸಮರ್ಪಿಸಿ ಆಶೀರ್ವದಿಸಿದರು. ತಾನು ಮಾಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಶ್ರೀದೇವರ ಸೇವೆಗೆ ಮೀಸಲಿರಿಸಬೇಕು. ದೇವರ ಸೇವೆಯನ್ನು ನಿತ್ಯ ನಿರಂತರವಾಗಿ ಮಾಡುವುದರಿಂದ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ. ದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದ ಭಕ್ತರ ಜೀವನರ ವಜ್ರದಂತೆ ಬೆಳಗಲಿ ಎಂದು ಶ್ರೀಗಳು ಹರಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಎಂ.ಭಾಸ್ಕರ ಪೈ, ರಾಧಿಕಾ ರಾಮಕೃಷ್ಣ ಪೈ, ವೈದಿಕರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
