Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿಗೆ ಸಮೀಪದ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಹಡೋಲು ಬಿದ್ದಿದ್ದ ಏಳು ಎಕರೆ ಕೃಷಿ ಭೂಮಿಗೆ ಬೆಂಕಿ ಬಿದ್ದಿದ್ದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡೆಬೇಕಾಯಿತು. ಸಂಜೆ 5 ಗಂಟೆರ ಸುಮಾರು ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಗಾಳಿಗೆ ಮೆಲ್ಲನೆ ಹಬ್ಬಿ, ಯಡಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯವರೆಗೆ ಸುಮಾರು 7 ಎಕರೆ ಜಾಗದವರೆಗೆ ಆಕ್ರಮಿಸಿತ್ತು. ಅಷ್ಟು ಜಾಗದಲ್ಲಿದ್ದ ಒಣಗಿದ ಹುಲ್ಲು ಕಡ್ಡಿಗಳು ಇದ್ದುದರಿಂದ ಬೆಂಕಿಯ ತೀವ್ರತೆ ಹೆಚ್ಚುತ್ತಿರುವುದನ್ನು ಗಮನಿಸಿ ಸ್ಥಳೀಯರು ಹಸಿ ಮರದ ಕೊಂಬೆಗಳ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಕೂಡ, ಬೆಂಕಿ ನಿಧಾನವಾಗಿ ಮುಂದುವರಿಯುತ್ತಾ ಸಾಗಿತ್ತು. ಬಳಿಕ ಕುಂದಾಪುರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಲಾಯಿತು. ಸುಮಾರು ಒಂದು ಗಂಟೆಗಳ ಹರಸಾಹಸದ ಬಳಿಕ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಆಗ್ನಿಶಾಮಕ ಇಲಾಖೆ ಸಫಲವಾಯಿತು. ಘಟನಾಸ್ಥಳಕ್ಕೆ ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷ ಗೋವಿಂದ ಉಪಸ್ಥಿತರಿದ್ದ, ಸ್ವತಃ ಬೆಂಕಿ ನಂದಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ 201-16ರಲ್ಲಿ ಸಲ್ಲಿಸಿದ ಅನುಪಮ ಸೇವೆಯ ಹಿನ್ನಲೆಯಲ್ಲಿ 12 ಪ್ರಶಸ್ತಿಗಳನ್ನು ಪಡೆದು ಎಂಟು ಕಂದಾಯ ಜಿಲ್ಲೆಯನ್ನೊಳಗೊಂಡ 3180ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಜರಾತಿಯಲ್ಲಿ ಪ್ರಥಮ, ರೋಟರಿ ಮಾಹಿತಿಯಲ್ಲಿ ಪ್ರಥಮ, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿತದೃಷ್ಠಿಯಿಂದ ಕೊಡಮಾಡಿದ ಇ-ಲರ್ನಿಂಗ್ ಕಿಟ್ ವಿತರಣೆ ವಿಭಾಗದಲ್ಲಿ ಸೇವೆಯನ್ನು ಪರಿಗಣಿಸಿ ರೋಟರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಪಡೆದುಕೊಂಡರು. ಅಲ್ಲದೇ ರೋಟರಿ ಜಿಲ್ಲೆಯ ಮದ್ಯಮ ವಿಭಾಗದ ಕ್ಲಬ್ ಮಟ್ಟದಲ್ಲಿ ಕ್ಲಬ್ ಸರ್ವಿಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಫೆಲೋಶಿಪ್‌ನಲ್ಲಿ ದ್ವಿತೀಯ, ಟೀಚರ್ ಸಪೋರ್ಟ್‌ನಲ್ಲಿ ದ್ವಿತೀಯ, ಪಬ್ಲಿಕ್ ರಿಲೇಶನ್ ಮತ್ತು ಪಬ್ಲಿಕ್ ಇಮೇಜ್, ಮ್ಯಾನೇಜ್‌ಮೆಂಟ್ ಆಫ್ ಕ್ಲಬ್ ಫೈನಾನ್ಸ್, ಕೇರಿಯರ್ ಗೈಡೆನ್ಸ್, ಅಂತರಾಷ್ಟ್ರೀಯ ರೋಟರಿ ಸಮ್ಮೇಳದಲ್ಲಿ ಭಾಗವಹಿಸುವಿಕೆ, ಡಿಸ್ಟ್ರಿಕ್ಟ್ ಗ್ರ್ಯಾಂಟ್ಸ್, ಇಂಟರ್‌ನ್ಯಾಶನಲ್ ಅಂಡರ್‌ಸ್ಟ್ಯಾಂಡಿಂಗ್‌ನಲ್ಲಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕರೋಟರಿ ಜಿಲ್ಲೆ 3180 ಇದರ ಕೊನೆಯ ಅವಾರ್ಡ್ ನೈಟ್‌ನಲ್ಲಿ 12 ಪ್ರಶಸ್ತಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲೆಯಾದ್ಯಂತ ಉದ್ಭವವಾಗಿರುವ ಮರಳು ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, 9/11ರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆಯಲ್ಲಿನ ಗೊಂದಲ ಮುಂತಾದ ಸಾರ್ವಜನಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟ ನೀಡಲು ಜನಪರ ಪ್ರಗತಿಪರ ವೇದಿಕೆ ಸದಾ ಸಕ್ರಿಯವಾಗಿರಬೇಕು. ಈ ಕುರಿತು ಸ್ಪಂದನೆಗೆ ತಾನು ಸದಾ ಸಿದ್ಧನಿರುವುದಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಕೋಟ ಬ್ಲಾಕ್ ವ್ಯಾಪ್ತಿಯ ಬೆಂಬಲಿಗರ, ಹಿತೈಷಿಗಳ ಹಾಗೂ ಸಮಾನ ಮನಸ್ಕರ ಸಭೆಯು ಇಂದು ಕೋಟದ ಮಾಂಗಲ್ಯ ಸಭಾಮಂದಿರದಲ್ಲಿ ನಡೆಯಿತು. ಕಳೆದ ಮಾರ್ಚ್ ತಿಂಗಳಲ್ಲಿ ಹೆಗ್ಡೆ ಬೆಂಬಲಿಗರಿಂದ ಮೌಲಿಕ ರಾಜಕಾರಣವನ್ನು ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕುಂದಾಪುರದಲ್ಲಿ ಸ್ಥಾಪನೆಗೊಂಡ ಜನಪರ ಪ್ರಗತಿಪರ ವೇದಿಕೆಯ ಘಟಕವನ್ನು ಕೋಟದ ಖ್ಯಾತ ಸಮಾಜಸೇವಕ ಗೋಪಾಲ ಬಂಗೇರರವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ತರುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಯಿತು. ಕುಂದಾಪುರ ಜನಪರ ಪ್ರಗತಿಪರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಂಡ್ಸೆ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ಒಕ್ಕೂಟದ ಪದಗ್ರಹಣ ಸಮಾರಂಭವು ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅದ್ಯಕ್ಷ ಶಶಿಧರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಜಿ. ಶ್ರೀಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಾಜಿ ಅದ್ಯಕ್ಷೆ ಜಯಂತಿ ಪಿ. ಶೆಟ್ಟಿ, ಮಾಜಿ ಉಪಾದ್ಯಕ್ಷರಾದ ದಯನಂದ ಆಚಾರಿ, ಮತ್ತು ಪದಾಧಿಕಾರಿಗಳು. ಶಾಲಾಭಿವ್ರದ್ದಿ ಸಮಿತಿಯ ಅದ್ಯಕ್ಷ ಚಂದ್ರ ನಾಯಕ ರಾಯಪ್ನಾಡಿ, ತ್ರಾಸಿ ಮರವಂತೆಯ ವಲಯದ ಮೇಲ್ವಿಚಾರಕರಾದ ಚಂದ್ರ, ಶಿಕ್ಷಕ ಪ್ರಭಾಕರ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ತಾಂಪಣ್ಣ ಶೆಟ್ಟಿ ಉಪಸ್ಥಿತರಿದ್ದರು. ವಂಡ್ಸೆ ಒಕ್ಕೂಟದ ನೂತನ ಅದ್ಯಕ್ಷರಾಗಿ ಸಂಜೀವಿ, ಉಪಾದ್ಯಕ್ಷರಾಗಿ ಸದಾನಂದ ಆಚಾರಿ ಮತ್ತು ನೂತನ ಪದಾಧಿಕಾರಿಗಳು ಪ್ರದಪ್ರದಾನ ಸ್ವೀಕರಿಸಿದರು. ಒಕ್ಕೂಟದ ಮಾಜಿ ಅದ್ಯಕ್ಷ ಗಿರೀಶ ನಾಯ್ಕ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ವಂಡ್ಸೆ ಒಕ್ಕೂಟದ ಸೇವಾಪ್ರತಿನಿಧಿ ಲಾಲಿ ಸೋಜನ ವರದಿ ವಾಚಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ಪೌರೋಹಿತ್ಯದಲ್ಲಿ ಕಲ್ಯಾಣೋತ್ಸವ ಸಂಪನ್ನಗೊಂಡಿತು. ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕ್ರಿಯಾಚರಣೆ ಅಂಗವಾಗಿ ಬೆಳಿಗ್ಗೆ ೭ಕ್ಕೆ ವಧುವಿನ ಕಡೆಯವರಾಗಿ ಡಾ. ಎಸ್. ಎನ್. ಪಡಿಯಾರ ಕುಟುಂಬಿಕರು ಶ್ರೀ ಪದ್ಮಾವತಿ (ವಧು) ಹಾಗೂ ವರನ ಕಡೆಯವರಾಗಿ ಯು. ಸದಾನಂದ ಪ್ರಭು ಕುಟುಂಬಿಕರು ಶ್ರೀ ಶ್ರೀನಿವಾಸ (ವರ) ದೇವರರನ್ನು ಸರ್ವಾಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಆಕರ್ಷಕ ಹಾಗೂ ವೈಭವದ ನಗರೋತ್ಸವದ ಮೂಲಕ ದೇವಳ ಸ್ವಯಂವರ ಮಂಟಪಕ್ಕೆ ಕರೆತಂದರು. ನಂತರ ಸೀಮಂತ ಪೂಜೆ, ವಧೂ ನಿರೀಕ್ಷಣೆ, ಸ್ವಯಂವರ ಕಾರ್ಯದ ಬಳಿಕ ಮುತ್ತೈದೆಯರು ಅರಶಿನ-ಕುಂಕುಮ ಸಮರ್ಪಿಸಿದರು. ಸಾಯಂಕಾಲ ೬.೪೬ರ ಗೋಧೋಳಿ ಮುಹೂರ್ತದಲ್ಲಿ ಶ್ರೀನಿವಾಸ ದೇವರಿಗೆ ಮಧುಪರ್ಕ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಧಾರೆಮಣಿ ಕಟ್ಟುವಿಕೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ-ಕಾಣಿಕೆಗಳ ಸಮರ್ಪಣೆ, ಅಗ್ನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ್ದ ಕಳ್ಳರು ಮಾಲಕನಿಗೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆಗೈದ ಘಟನೆ ಕೋಟ ಬಸ್ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾ ಜುವೆಲ್ಲರ್ಸ್’ನಲ್ಲಿ ನಡೆದಿದೆ. ಪಕ್ಕದ ಅಂಗಡಿಯವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿಹೋಗಿದ್ದು, ಕಳ್ಳರು ಮಾತ್ರ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಚಿನ್ನದಂಗಡಿಯ ಮಾಲಕ ರವೀಂದ್ರ ಆಚಾರ‍್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ವಿವರ: ಶನಿವಾರ ಸಂಜೆ ವೇಳೆಗೆ ಗ್ರಾಹಕರಂತೆ ಚಿನ್ನದಂಗಡಿಗೆ ತೆರಳಿದ ಅಪರಿಚಿತರು, ಆಭರಣಗಳನ್ನು ತೋರಿಸುವಂತೆ ಮಾಲಿಕ ರವೀಂದ್ರ ಆಚಾರ‍್ಯ ಅವರಲ್ಲಿ ಕೇಳಿಕೊಂಡಿದ್ದಾರೆ. ಮಾಲಕರೂ ಚಿನ್ನದ ಆಭರಣಗಳನ್ನು ತೋರಿಸಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡ ಗ್ರಾಹಕರು ರವೀಂದ್ರ ಅವರಿಗೆ ತಲೆಗೆ ಹೊಡೆದು ಕೆಳಗೆ ಬೀಳಿಸಿ, ಒಳಗಿನಿಂದಲೇ ಅಂಗಡಿಯ ಶಟರ್ ಹಾಕಿ ಆಭರಣಗಳನ್ನು ಗಂಟುಕಟ್ಟಿದ್ದಾರೆ. ಈ ಘಟನೆ ನಡೆಯುತ್ತಿರುವಾಗ ಪಕ್ಕದ ಅಂಗಡಿಯವರಿಗೆ ಅನುಮಾನ ಬಂದು ಜುವೆಲ್ಲರಿಯ ಮುಚ್ಚಿದ್ದ ಶಟರ್ ಎಳೆದಾಗ ಅಂಗಡಿಯಲ್ಲಿದ್ದ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ. ಓರ್ವರನ್ನು ಪಕ್ಕದ ಅಂಗಡಿಯ ಪ್ರಭಾಕರ ಕಾಮತ್ ಹಿಡಿದುಕೊಂಡಿದ್ದರಾದರೂ, ಅಷ್ಟರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು.ಮೇ21: ದೇವಾಡಿಗರು ಸಂಘಟಿತರಾದರೆ ಮಾತ್ರ ಈ ಸಮಾಜದ ಶಕ್ತಿ, ಸಾಮರ್ಥ್ಯದ ಬಗೆಗೆ ಭರವಸೆ ಮೂಡಲು ಸಾಧ್ಯ. ಸಂಘಟಿತರಾಗುವುದರೊಂದಿಗೆ ಸಮಾಜದ ಬಡವರು, ಪ್ರತಿಭಾನ್ವಿತರನ್ನು ಗುರುತಿಸಿ ಮೇಲೆತ್ತುವ ಕಾರ್ಯವಾಗಬೇಕು. ನಮ್ಮ ಒಗ್ಗಟ್ಟು ಜನಪ್ರತಿನಿಧಿಗಳು ಹಾಗೂ ಸರಕಾರದ ಕಣ್ಣು ತೆರೆಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಹಾಮಂಡಲದ ಅಧ್ಯಕ್ಷ ರಘುರಾಮ್ ದೇವಾಡಿಗ ಹೇಳಿದರು. ಅವರು ಶನಿವಾರ ದೇವಾಡಿಗ ವೈಭವ ಕಲ್ಚರಲ್ ಕ್ಲಬ್ ರಿ ಸಾರಥ್ಯದಲ್ಲಿ ದೇವಾಡಿಗರ ಒಕ್ಕೂಟ ರಿ. ಬೈಂದೂರು ಹಾಗೂ ಮುಂಬೈ ದೇವಾಡಿಗ ವೆಲ್‌ಫೇರ್ ಅಸೋಸಿಯೇಶನ್ ರಿ. ಸಹಯೋಗದೊಂದಿಗೆ ಇಲ್ಲಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ಆಯೋಜಿಸಲಾದ ದೇವಾಡಿಗ ವೈಭವ 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಡಿಗ ಸಮಾಜದಲ್ಲಿ ಈಡೇರಬೇಕಾದ ಹತ್ತಾರು ಬೇಡಿಕೆಗಳಿದ್ದು ಸಂಘಟಿತರಾಗಿ ಬೇಡಿಕೆಯಿಟ್ಟಾಗ ಮಾತ್ರ ಅವುಗಳಿಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಯಾವುದೇ ಸಮುದಾಯ ಮುಂಚೂಣಿಗೆ ಬರಬೇಕಾದರೇ ಆ ಸಮುದಾಯದವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಿಬೇಕು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಭಾರತದಲ್ಲಿ ಶಾಂತಿ ನೆಲೆಸಬೇಕು. ಭಾರತದಲ್ಲಿ ಶಾಂತಿ ನೆಲೆಸಬೇಕಾದರೆ ನಮ್ಮ ದೇಶದಲ್ಲಿ ಹಿಂದು ಧರ್ಮ ಗಟ್ಟಿಯಾಗಿ ನೆಲೆ ನಿಲ್ಲಬೇಕಿದೆ. ಹೀಗಾಗಿ ವಿಶ್ವಗುರು ಎನಿಸಿಕೊಂಡಿರುವ ಭಾರತದಲ್ಲಿ ಹಿಂದು ಧರ್ಮವನ್ನು ಅತ್ಯಂತ ಗಟ್ಟಿಯಾಗಿ ನೆಲೆಗೊಳಿಸಬೇಕಾಗಿದೆ. ಯುವ ಜನರಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸುವ ಮೂಲಕ ಭಾರತವು ಹಿಂದು ರಾಷ್ಟ್ರ ಎಂಬುದನ್ನು ಜಗತ್ತಿಗೆ ಸಾರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಾಲ ವಾಗ್ಮಿ ಅಕ್ಷಯ್ ಕುಮಾರ್ ಶಿರಸಿ ಹೇಳಿದರು. ಅವರು ಗಂಗೊಳ್ಳಿ ಮ್ಯಾಂಗನೀಸ್ ರೋಡ್‌ನ ಭಗತ್ ಸಿಂಗ್ ಅಭಿಮಾನಿ ಬಳಗದ ಆಶ್ರಯದಲ್ಲಿ ಗಂಗೊಳ್ಳಿಯ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಾತಂತ್ರ್ಯವೀರ ಸುಖದೇವ ಅವರ 109ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಇತ್ತೀಚಿನ ದಿನಗಳಲ್ಲಿ ಐಶರಾಮಿ ಜೀವನವನ್ನು ಕೇಂದ್ರೀಕರಿಸಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದಲ್ಲಿ ನೈತಿಕತೆಯನ್ನು ಹಾಗೂ ಸಾಮಾಜಿಕತೆಯನ್ನು ಬೆಳೆಸುವ ಶಿಕ್ಷಣದ ಅವಶ್ಯಕತೆ ಇದೆ. ಕೃಷಿಯಲ್ಲಿ ಆಧುನಿಕತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೆಂಗಳೂರು: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ‘೪೧ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಂದಾಪುರದ ಮೂಲದ ಆರು ಮಂದಿ ಸಾಧಕರಿಗೆ ಸೇರಿದಂತೆ 63 ಗಣ್ಯರಿಗೆ ನ್ಯಾ. ಎನ್. ಕುಮಾರ್, ದೂರದರ್ಶನ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ದಿನೇಶ್ ವೈದ್ಯ ಅಂಪಾರು ಅವರಿಗೆ ಸಮಾಜ ಸೇವೆಗಾಗಿ, ಉಡುಪಿಯಲ್ಲಿ ನೆಲೆಸಿರುವ ರೋಟರಿ ಜಿಲ್ಲೆ 3180 ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ಅವರಿಗೆ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ, ಉದ್ಯಮಿ ಎ. ಎಸ್. ರಮೇಶ್ ಆಚಾರ್ಯ ಅವರಿಗೆ ಸಮಾಜ ಸೇವೆಗಾಗಿ, ಕತಾರ್‌ನಲ್ಲಿ ನೆಲೆಸಿರುವ ಕತಾರ್ ಕರ್ನಾಟಕ ಸಂಘದ ನಿಕಟಪೂರ್ವಾಧ್ಯಕ್ಷ ದೀಪಕ್ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ, ಕುಂದಾಪುರದ ವೈದ್ಯ ಡಾ. ಸತೀಶ್ ಪೂಜಾರಿ ಅವರಿಗೆ ಸಂಘಟನೆ ಹಾಗೂ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜಿಎಸ್‌ಬಿ ಸಮಾಜ ಭಾಂದವರ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಅಲಂಕೃತ ದೇವರು ಚಿತ್ರ : ಸುಮಾ ಡಿಜಿಟಲ್ ಕುಂದಾಪುರ

Read More