Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವ ಹಕ್ಕುಗಳ ಪ್ರತಿಪಾದನೆ ಮತ್ತು ಸಂಶೋಧನಾ ಪ್ರತಿಷ್ಠಾನವು ನವದೆಹಲಿಯ ಕಾನ್ಸ್ಟಿಟ್ಯೂಶನಲ್ ಕ್ಲಬ್‌ನಲ್ಲಿ ಈಚೆಗೆ ನಡೆಸಿದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ದೇಶದ ಸ್ಥಳೀಯಾಡಳಿತಗಳ ಬಲವರ್ಧನೆಗಾಗಿ ಸಂವಿಧಾನ ತಿದ್ದುಪಡಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಗಳ ಮೇಲೆ ಒತ್ತಾಸೆ ತರುವ ನಿರ್ಧಾರ ಕೈಗೊಂಡಿತು. ಈ ಉದ್ದೇಶ ಸಾಧನೆಗಾಗಿ ಇದೇ ಗುರಿಹೊಂದಿರುವ ಸಂಸ್ಥೆಗಳ ಮತ್ತು ಸಮಾನ ಮನಸ್ಕ ವ್ಯಕ್ತಿಗಳ ಸಹಯೋಗ ಪಡೆದುಕೊಳ್ಳಲು ತೀರ್ಮಾನಿಸಿತು. ಪಂಚಾಯತ್ ರಾಜ್ ಮತ್ತು ಪೌರಾಡಳಿತ ಸಂಸ್ಥೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳು ರಾಜ್ಯಗಳಿಗೆ ನೀಡಿದ ವಿವೇಚನಾಧಿಕಾರಗಳಲ್ಲಿ ಹಲವನ್ನು ಬಂಧನೀಯಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಮತ್ತು ಆ ದಿಸೆಯ ಕಾರ್ಯವಿಧಾನಗಳ ಕುರಿತು ವಿಸ್ತೃತ ಚರ್ಚೆ ನಡೆಸಿತು. ಅದಕ್ಕಾಗಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯವಾರು ಕಾರ್ಯಪಡೆಗಳನ್ನು, ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯ ಕರಡು ಸಿದ್ಧಪಡಿಸಲು ಪರಿಣತರ ಸಮಿತಿಯನ್ನು ರೂಪಿಸಲು ನಿರ್ಣಯಿಸಿತು. ಬದಲಾವಣೆಯ ಸಂದರ್ಭದಲ್ಲಿ ತೃಣಮೂಲ ಮತ್ತು ಜನಸಹಭಾಗಿತ್ವ ಪ್ರಜಾತಂತ್ರ ವ್ಯವಸ್ಥೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಾರ್ಯವನ್ನು ಸ್ಮರಿಸುವುದರ ಜೊತೆಗೆ ಇನ್ನಷ್ಟು ಪ್ರೇರೆಣೆ ನೀಡಿದಂತಾಗುತ್ತದೆ. ಸಾಧನೆಯೆಂಬುದು ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದರೆ ತಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿದೆ. ನಾನು ಎಂಬುದು ಹೋಗಿ ನಾವು ಎಂಬ ಭಾವನೆ ಮೂಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು. ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವೇದನಾ ಟ್ರಸ್ಟ್ (ರಿ.) ನಾಯ್ಕನಕಟ್ಟೆಯವರ ಏಳನೇ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಅಭಿಮಾನವಿರಬೇಕು. ಎಷ್ಟೇ ಎತ್ತರಕ್ಕೆ ಏರಿದರೂ ತಾಯ್ನೆಲದ ಋಣವನ್ನು ಮರೆಯಬಾರದು. ಸತ್‌ಚಿಂತನೆ ಹಾಗೂ ದೂರದೃಷ್ಟಿಯುಕ್ತ ಚಿಂತನೆಗಳಿಂದ ಕಂಡ ಕನಸನ್ನು ಸಾಕಾರಗೊಳಿಸಬಹುದು. ಅದಕ್ಕೆ ಹಿರಿಯರ ಸೂಕ್ತ ಮಾರ್ಗದರ್ಶನ ಹಾಗೂ ಸಹೃದಯರ ಸಂಪೂರ್ಣ ಸಹಕಾರ ಅಗತ್ಯ ಎಂದರು. ಸಂವೇದನಾ ಟ್ರಸ್ಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಗ್ರಾಹಕರ ಅಭಿವೃದ್ಧಿಯೇ ನಮ್ಮ ಧ್ಯೇಯ. ಸೇವೆಯೇ ನಮ್ಮ ಮುಖ್ಯ ಧರ್ಮ. ನಾವು ನಿಮಗೆ- ನೀವು ನಮಗೆ ಇದು ಸಹಕಾರಿಯ ಘೋಷವಾಕ್ಯ. ಸಹಕಾರಿ ರಂಗದಲ್ಲಿ ಸಂಘದ ಸದಸ್ಯರೇ ಮಾಲಕರಾಗಿದ್ದು, ಹಲವಾರು ವರ್ಷಗಳಿಂದ ತನ್ನ ಸದಸ್ಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸಮಾಡುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಭವನದಲ್ಲಿ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಹಾಗೂ ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ (ಡಿ.೧೪) ಸಮಾರಂಭದ ಅಂಗವಾಗಿ ನವೋದಯ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರವರ್ಧಮಾನದಲ್ಲಿದ್ದು, ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹಿಡಿದಿಟ್ಟು ಅದನ್ನು ಸಮಾಜಕ್ಕೆ ತೋರಿಸಿದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬೈಂದೂರು ಗಾಂಧಿಮೈದಾನದಲ್ಲಿ ನಡೆದ ಸರಕಾರಿ ಪದವಿಪೂರ್ವ ಕಾಲೇಜಿನ ೨೦೧೭-೧೮ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲದು. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಕ್ರೀಡಾಸ್ಪೂರ್ತಿಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ. ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ…

Read More

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು ಭಾಗದ, ನೂರಾರು ವರ್ಷಗಳು ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ಕಾರ್ಯದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯುತ್ತದೆ. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು. ಕಂಬಳ ಗದ್ದೆಯಲ್ಲಿ ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗುತ್ತದೆ. ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಜೊತೆ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಕೆಲವರು ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಂಡವು. ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ…

Read More

ಡಿ.9ರಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಇಂಟೆಕ್ ಸಮಾವೇಶ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾಸಭಾ ಕ್ಷೇತ್ರ ಕಾರ್ಮಿಕರ ಒಗ್ಗೂಡಿಸುವಿಕೆ ಮತ್ತು ಕಾರ್ಮಿಕರಿಗೆ ಸರಕಾರದಿಂದ ನೀಡಲಾಗುತ್ತಿರುವ ಸಲವತ್ತುಗಳ ಬಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಡಿ.9ರಂದು ಇಲ್ಲಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ವಿಧಾಸಭಾ ಕ್ಷೇತ್ರದ ಇಂಟೆಕ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಇಂಟೆಕ್ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಇಂಟೆಕ್ಸಂಘಟನೆಯ ಮೂಲಕ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರದಿಂದ ದೊರಕಿಸಿ ಕೊಡಬೇಕಾದ ಸವಲತ್ತುಗಳನ್ನು ನೇರವಾಗಿ ದೊರೆಯುವಲ್ಲಿ ಶ್ರಮಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರವೂ ದುಡಿಯುವ ವರ್ಗದ ಶ್ರೇಯೋಭಿವೃದ್ಧಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸಮಾವೇಶದ ಮೂಲಕ ಕಾರ್ಮಿಕರಿಗೆ ದೊರೆಯುತ್ತಿರುವ ಸವಲತ್ತುಗಳ ಬಗೆಗೆ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದರು. ಸಮಾವೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಮರವಂತೆ ಮಾರಿಕಾಂಬಾ ದೇವಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಪ್ರಸಂಗ ಕರ್ತ ಬಸವರಾಜ ಶೆಟ್ಟಿಗಾರ್ ಅವರು ಬರೆದ ’ಮರವಂತೆ ಮಾರಿಕಾಂಬಾ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗದ ಬಿಡುಗಡೆ ನಡೆಯಿತು. ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಧಾರ್ಮಿಕ ಕೇಂದ್ರದ ಇತಿಹಾಸ ಮತ್ತು ಸ್ಥಳಪುರಾಣವನ್ನು ಆಧಾರವಾಗಿಟ್ಟುಕೊಂಡು ಯಕ್ಷಗಾನ ಪ್ರಸಂಗ ರಚಿಸಿದರೆ ಅದಕ್ಕೆ ಭಾರಿ ಜನಪ್ರಿಯತೆ ಲಭಿಸಿದ ಉದಾಹರಣೆಗಳಿವೆ. ಕ್ಷೇತ್ರದ ಪ್ರಚಾರ ಮತ್ತು ಧಾರ್ಮಿಕ ಶ್ರದ್ದೆಯ ಉದ್ದೀಪನವೂ ಅದರಿಂದ ನಡೆಯುತ್ತದೆ ಎಂದರು. ಶೆಟ್ಟಿಗಾರರ ೫೦ನೆ ಪ್ರಸಂಗವಾಗಿ ಮೂಡಿಬಂದ ಪ್ರಸ್ತುತ ಪ್ರಸಂಗವು ಯಶಸ್ವಿಯಾಗಲಿ ಎಂದು ಹಾರೈಸಿದರು. ದೇವಳ ಸಮಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟಟಿ ಅಭಿನಂದನ ಭಾಷಣ…

Read More

ಕುಂದಾಪ್ರ ಡಾಟ್ ಕಾಂ ವರದಿ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಕರಾವಳಿಯ ಗಂಡುಕಲೆ ಯಕ್ಷ ಗಾನ ಅಮ್ಮನವರಿಗೆ ಸಲ್ಲಿಸುವ ಪ್ರಸಿದ್ಧ ಸೇವೆ. ಬೆಳಕಿನ ಸೇವೆ ಎಂದೂ ಕರೆಯುತ್ತಾರೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷ ಗಾನ ಮೇಳಕ್ಕೆ ಸುಮಾರು 600 ವರ್ಷಗಳ ಪರಂಪರೆಯಿದೆ. ಇದೇ ಪ್ರಥಮ ಬಾರಿಗೆ ಮಳೆಗಾಲದಲ್ಲಿ ಆಯೋಜಿಸಿದ್ದ ಸೇವೆ ಆಟ ಯಶಸ್ವೀ 95 ದಿನಗಳ ಕಾಲ ನಡೆದು, 2017-18ನೇ ಸಾಲಿನ ಮೇಳಗಳ ತಿರುಗಾಟಕ್ಕೆ ಭಾನುವಾರ ಚಾಲನೆ ದೊರೆಯಲಿದೆ. 2017-18ನೇ ಸಾಲಿನ ಮಂದಾರ್ತಿಯ 5 ಮೇಳಗಳ ತಿರುಗಾಟ ನ.19ರಂದು ಪ್ರಾರಂಭಗೊಂಡಿದೆ. 14 ಸಾವಿರ ಆಟ ಬುಕ್‌: ಈಗಾಗಲೇ 2039-40ನೇ ಸಾಲಿನ ತನಕ ಭಕ್ತರು ಹರಕೆಯಾಟವನ್ನು ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ ಸುಮಾರು 14 ಸಾವಿರದಷ್ಟು ಸೇವೆಯಾಟಗಳು ಮುಂಚಿತವಾಗಿಯೇ ನೋಂದಾಯಿಸ್ಪಟ್ಟಿದೆ. ಮಳೆಗಾಲದ ತಿರುಗಾಟ ಹೊರತುಪಡಿಸಿ 5 ಮೇಳಗಳಿಂದ ವರ್ಷದಲ್ಲಿ 900 ಆಟ ಜರುಗಲಿದೆ. ಪ್ರಥಮ ದೇವರ ಸೇವೆ ಆಟ: ಮಂದಾರ್ತಿ ಸಮೀಪದ ಬಾರಾಳಿ ಶ್ರೀ ಗಣಪತಿ ದೇಗುಲದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವೈದ್ಯಕೀಯ ಸೇವೆ ಜಗತ್ತಿನಲ್ಲಿ ಅತ್ಯುನ್ನತವಾದ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ವೈದ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಸರಕಾರ ತರಲುದ್ದೇಶಿಸಿದ ವಿಧೇಯಕಗಳಲ್ಲಿ ಶುಲ್ಕ ಕಡಿತಗೊಳಿಸುವ ವಿಚಾರಗಳಷ್ಟೆ ಎಂದು ಜನ ಭಾವಿಸಿದ್ದರು ಆದರೆ ವೈದ್ಯ ಸಮೂಹಕ್ಕೆ ಭಾದಕವಾಗುವಂತ ಹಲವಾರು ಸಂಗತಿಗಳು ಅದರಲ್ಲಿ ಅಡಕವಾಗಿರುವುದನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ವೈದ್ಯಕೀಯ ಸಂಘ ಮಾಡಬೇಕಿತ್ತು ಎಂದು ಕೆಎಂಸಿ ಮಣಿಪಾಲದ ಇಎನ್‌ಟಿ ವಿಭಾಗದ ಪ್ರೋಫೆಸರ್ ಡಾ. ಬಾಲಕೃಷ್ಣನ್ ಹೇಳಿದರು. ಅವರು ಸಹನಾ ಕನ್‌ವೆನ್‌ಶನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ನೂತನ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಅವರು ನೂತನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿ, ಪ್ರತಿಷ್ಠಿತ ಐಎಂಎ ಕುಂದಾಪುರದ ಸರ್ವಸದಸ್ಯರ ವಿಶ್ವಾಸಗಳಿಸಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ತಿಳಿಸಿದರು. ಐಎಂಎ ಸೆಂಟ್ರಲ್ ಕೌನ್ಸಿಲ್ ಸದಸ್ಯರಾದ ಡಾ. ಕೆ.ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಬುನಾದಿಯನ್ನೊದಗಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು. ಈ ಕಾಲೇಜಿನ ಸಂಸ್ಥಾಪಕರಾದ ಡಾ.ಟಿ.ಎಂ.ಎ ಪೈ ಹಾಗೂ ಡಾ.ಎ.ಎಸ್. ಭಂಡಾರ್‌ಕಾರ್ ಅವರು ಅಂದು ಶಿಕ್ಷಣಕ್ಕಾಗಿ ಹಾಕಿಕೊಟ್ಟ ಮಾರ್ಗ ಇಂದು ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ಸಂಸ್ಮರಣೆ ೨೦೧೭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಟಿ.ಎಂ.ಎ. ಪೈ ಅವರು ಯಾವ ಕಾಲದಲ್ಲಿಯೂ ರಾಜಕೀಯ ಪ್ರವೇಶಿಸಿದವರಲ್ಲ. ಅವರ ಧ್ಯೇಯ ಕೇವಲ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅವರ ಈ ಉತ್ತಮ ಉದ್ದೇಶದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಲವರ ಪಾಲಿಗೆ ಬೆಳಕಾಗಿ ಮೂಡಿಬಂದಿದೆ. ಅನಕ್ಷರತೆ, ಅನಾರೋಗ್ಯ, ಬಡತನ ಇವುಗಳು ಮನುಷ್ಯರ ಪಾಲಿಗೆ ಯಾವಾಗಲೂ…

Read More