ಗಂಗೊಳ್ಳಿ: ಜೀವನದಲ್ಲಿ ಎನ್ನೆಸ್ಸೆಸ್‌ನಲ್ಲಿ ಕಲಿತ ಉತ್ತಮ ವಿಚಾರಗಳನ್ನು ಆಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಹಾಗಾದಾಗ ಒಂದು ಸಂಘಟನೆಯಲ್ಲಿ ನಾವು ಭಾಗವಹಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಉಳಿದವರಿಗೆ ಅದು ಸ್ಫೂರ್ತಿಯಾಗುತ್ತದೆ ಎಂದು ವಂಡ್ಸೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯಕ್ ಹೇಳಿದರು ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಸುಪಾಲ ಆರ್ ಎನ್ ರೇವಣ್‌ಕರ್ ಮಾತನಾಡಿ ಜೀವನದಲ್ಲಿ ಒಳ್ಳೆಯತನ ಮುಖ್ಯ. ನಮ್ಮಿಂದ ಬೇರೆಯವರಿಗೆ ಉಪಕಾರ ಮಾಡಲಾಗದಿದ್ದರೆ ಅಪಕಾರವನ್ನಂತೂ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಅನುಷಾ ಸ್ವಾಗತಿಸಿದರು.ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ಸಂಪ್ರೀತಾ, ಸುಪ್ರೀತಾ ,ಸುಶ್ಮಿತಾ ಪ್ರಾರ್ಥಿಸಿದರು.ಸಂಜಯ್ ಖಾರ್ವಿ ಎನ್ನೆಸ್ಸೆಸ್ ಒಡನಾಟದ ಅಭಿಪ್ರಾಯ ಹಂಚಿಕೊಂಡರು.ನಿಖಿಲ್ ಖಾರ್ವಿ ಕಾರ‍್ಯಕ್ರಮ ನಿರೂಪಿಸಿದರು. ರಮೇಶ್ ಧನ್ಯವಾದ ಅರ್ಪಿಸಿದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ.
Author: ನ್ಯೂಸ್ ಬ್ಯೂರೋ
ಬೈಂದೂರು: ಶಿರೂರು ಜಿಲ್ಲಾ ಹಾಗೂ ಉಪ್ಪುಂದ ತಾಲೂಕು ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಜಿಪಂ ಅಭ್ಯರ್ಥಿ ಮದನ್ ಕುಮಾರ್, ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರ ತಂಡದವರೊಂದಿಗೆ ತಾರಾಪತಿ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು. ಉಪ್ಪುಂದ ತಾಪಂ ಅಭ್ಯರ್ಥಿ ಪ್ರಮಿಳಾ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮೋಹನ್ ಪೂಜಾರಿ, ಗ್ರಾಪಂ ಸದಸ್ಯರಾದ ವಾಸುದೇವ ಪೂಜಾರಿ, ಶಾರದಾ, ಲಲಿತಾ, ರಾಮಚಂದ್ರ ಖಾರ್ವಿ, ಹರೀಶ್ಚಂದ್ರ ಖಾರ್ವಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಖಾರ್ವಿ, ಬೂತ್ ಅಧ್ಯಕ್ಷರಾದ ಗೋವಿಂದ ಖಾರ್ವಿ, ವಾಸು ಖಾರ್ವಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗಂಗೊಳ್ಳಿ: ಬೆಳೆದ ಮಕ್ಕಳನ್ನು ಪ್ರೀತಿಸಿ ಆದರೆ ಮುದ್ದುಮಾಡಲು ಹೋಗಬೇಡಿ. ಯಾಕೆಂದರೆ ಮುದ್ದು ಮಕ್ಕಳನ್ನು ಹಾಳುಮಾಡುತ್ತದೆ. ಆದರೆ ಪ್ರೀತಿ ಮಕ್ಕಳನ್ನು ಬೆಳೆಸುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಶಿಕ್ಷಕ ರಕ್ಷಕ ಸಭೆಯ ಪೂರ್ವಭಾವಿಯಾಗಿ ನಡೆದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರ ಜವಾಬ್ದಾರಿ ಎನ್ನುವ ವಿಚಾರದ ಕುರಿತಂತೆ ಮಾತನಾಡಿದರು. ಪ್ರತಿ ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲ. ಅಂಕವೊಂದನ್ನೇ ಮಕ್ಕಳ ಬೆಳವಣಿಗೆಯ ಮಾನದಂಡವಾಗಿಸುವುದು ಸರಿಯಲ್ಲ. ಮಕ್ಕಳಿಗೆ ಒಳ್ಳೆಯತನವನ್ನು ಕಲಿಸಿ. ಅಂತಹ ಮಕ್ಕಳು ಉತ್ತಮ ಅಂಕಗಳನ್ನು ಖಂಡಿತಾ ಗಳಿಸಬಲ್ಲರು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಹೆತ್ತವರು ಸ್ನೇಹಿತರು ಸುತ್ತಲಿನ ಸಮಾಜ ಎಲ್ಲರ ಜವಾಬ್ದಾರಿಯೂ ಪ್ರಮುಖವಾದುದು ಎಂದು ಅವರು ಅಭಿಪ್ರಾಯಪಟ್ಟರು. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಶಾಂತಿ ಕ್ರಾಸ್ತಾ ಸ್ವಾಗತಿಸಿ ವಂದಿಸಿದರು. ಕಾರ‍್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕ ರಕ್ಷಕ ಸಮಿತಿಯ…
ಕುಂದಾಪ್ರ ಡಾಟ್ ಕಾಂ ಲೇಖನ ಬೈಂದೂರು: ಸಾಕಷ್ಟು ಕುತೂಹಲ ಕೆರಳಿಸಿರುವ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು ಸ್ವರ್ಧೆಗಿಳಿದಿದ್ದಾರೆ. ಕಲಿತದ್ದು ಇಂಜಿನಿಯರಿಂಗ್, ವೃತ್ತಿಯಲ್ಲಿ ಉಪನ್ಯಾಸಕಿ, ಸಂಘಟನೆಯಲ್ಲಿ ಪರಿಣತಿ, ಸಮಾಜ ಸೇವೆಯಲ್ಲಿ ಆಸಕ್ತಿ. ಸಂಘ-ಸಂಸ್ಥೆ, ಸಹಕಾರಿಗಳಲ್ಲಿ ಸಕ್ರಿಯೆ. ಇದು ಪ್ರಿಯದರ್ಶಿನಿ ಅವರ ಶಾರ್ಟ್ ಪ್ರೊಪೈಲ್. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡು ಜನಸೇವೆಗೈಯಬೇಕೆಂಬ ತುಡಿತ, (ಕುಂದಾಪ್ರ ಡಾಟ್ ಕಾಂ) ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ತಾಯಿ ಶಾರದಾ ಬಿಜೂರು ಅವರ ಪ್ರೇರಣೆ, ಬೆಸ್ಕೂರು ಕುಟುಂಬದ ಪ್ರೋತ್ಸಾಹ. ಇವೆಲ್ಲದರಿಂದ ಪ್ರಿಯದರ್ಶಿನಿ ಮೊದಲ ಭಾರಿಗೆ ರಾಜಕೀಯ ರಂಗಕ್ಕೆ ಧುಮುಕುತ್ತದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ ಸೌಪರ್ಣಿಕಾ ಮಹಿಳಾ ಸಹಕಾರಿಯ ನಿರ್ದೇಶಕಿಯಾಗಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ತ್ರಾಸಿ ಯುವತಿ ಮಂಡಲದ ಅಧ್ಯಕ್ಷೆಯಾಗಿದ್ದ ಪ್ರೀಯದರ್ಶಿನಿ ಅವರಿಗೆ ರಾಜಕೀಯದ ಹಿನ್ನೆಲೆಯೂ ಇದ್ದ ಕಾರಣ ಬಿಜೆಪಿ ಪಕ್ಷದಿಂದ ಸ್ವರ್ಧಿಸುವ ಅವಕಾಶ ದೊರೆತಿದೆ. ಸೂಕ್ತ ಸಮಯದಲ್ಲಿ ದೊರೆತ ಅವಕಾಶ, ಪಕ್ಷದಿಂದಲೂ ಸಹಕಾರ, ಕುಟುಂಬ ವರ್ಗದ ಪ್ರೋತ್ಸಾಹದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಿಯದರ್ಶಿನಿ…
ಮುಂಬಯಿ: ಜಾಗತಿಕ ಪ್ರೇಮಿಗಳ ದಿನಾಚರಣೆ ಬರೇ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಪಕ್ಷಿಗಳೂ ಇದನ್ನು ಪ್ರೇಮಿಗಳಾಗಿಯೇ ಸಂಭ್ರಮಿಸಿದ ಕ್ಷಣಗಳು ಅಚ್ಚರಿಯನ್ನುಂಟು ಮಾಡಿತು. ನಗರದ ಪತ್ರಕರ್ತ, ಪ್ರಾಣಿ-ಪಕ್ಷಿ ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ನಿರ್ಮಿಸಿರುವ ಹೂದೋಟದಲ್ಲಿ ಪಕ್ಷಿಪ್ರೇಮವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಯಿಡಿದ ಕ್ಷಣಗಳು. ಎಂದಿನಂತೆ ಸುರ್ಯೋದಯದ ಸಮಯಕ್ಕೆ ಇಂದು ಮುಂಜಾನೆ ತಂಗಾಳಿಯ ಚಳಿಯಿಂದ ಹೊರ ಬಂದ ಗುಬ್ಬಚ್ಚಿ, ಗಿಳಿಗಳು ಪಕ್ಷಿಪ್ರಿಯ ಬಂಟ್ವಾಳ್ ಹತ್ತಾರು ಹೂಗಿಡಗಳಿಂದ ಸೃಷ್ಠಿಸಿದ ಪುಷ್ಪಉದ್ಯಾನದಲ್ಲಿ ಸ್ವತಂತ್ರವಾಗಿ ಹಾರಾಡುತ್ತಿರುವ ನೂರಾರು ಪಕ್ಷಿಗಳಿಗೆ ಆಸರೆಯನ್ನೀಡಿದ್ದಾರೆ. ಹತ್ತಾರು ಕಾಗೆಗಳು, ಗುಬ್ಬಚ್ಚಿ, ಗಿಳಿ, ಪಾರಿವಾಳ ಮತ್ತಿತರ ಪಕ್ಷಿಗಳೂ ಈ ಉಪವನದಲ್ಲಿ ಪಕ್ಷಿಧಾಮದಂತೆ ಆಸರೆ ಪಡೆಯುತ್ತಿವೆ. ಪಕ್ಷಿಗಳಿಗಾಗಿಗೇ ತಯಾರಿಸಲ್ಪಟ್ಟ ಆಹಾರ, ಕ್ಯಾಲ್ಸಿಯಂ, ನೀರು ಇನ್ನಿತರ ಆಹಾರವನ್ನು ಸೇವಿಸಿ ಪುಷ್ಪಗಿಡಗಳ ಮಧ್ಯೆ ಇರಿಸಿದ ನೀರಿನ ತೊಟ್ಟಿಗಳಲ್ಲಿ ಸ್ನಾನಗೈಯುತ್ತಾ ಕಾ… ಕಾ.. ಚಿಲಿಪಿಲಿ… ಎಂದು ಮುದ್ದಾಗಿ ಅಡ್ಡಾಡಿ ನರ್ತಿಸುವ ಕ್ಷಣಗಳು ಪರಿಸರ ಪ್ರಿಯರಿಗಂತೂ ಮುದನೀಡುವಂತಿದೆ.
ಬೈಂದೂರು: ಜಾತಿ, ಮತ, ಭೇಧ ಮರೆತು ಎಲ್ಲರೂ ಒಂದಾಗಿ ನಡೆಸಿದ ಲಕ್ಷಮೋದಕ ಗಣಪತಿ ಮಹಾಯಾಗದಿಂದ ದೇವರ ಲಕ್ಷ ಭಕ್ತರ ಕಡೆಗೆ ಬೀರಿದ್ದು, ನಮ್ಮೆಲ್ಲರ ಲಕ್ಷ ಲಕ್ಷ ದೋಷಗಳು, ಪಾಪಕರ್ಮಗಳು ನಿವಾರಣೆಯಾಗಿದೆ. ತ್ಯಾಗದಿಂದ ಯಾಗ ಸಂಪನ್ನವಾಗುತ್ತದೆ ಎಂದು ಕಟಪಾಡಿ ವೇಣುಗಿರಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಹಾಗೂ ನಾಗಮಂಡಲೋತ್ಸವದ ಕೊನೆಯ ದಿನ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀವನದಲ್ಲಿ ಯಾವುದೇ ಘಟನೆಗಳಾಗಲಿ ಭಗವಂತನ ಪ್ರೇರಣೆಯಿಂದ ಸುಂದರವಾದ ಮುಕ್ತಾಯವನ್ನು ಕಾಣುತ್ತದೆ. ಸಂತರ ಆದರ್ಶ ಹಾಗೂ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು. ಅವರ ಮಾರ್ಗದರ್ಶನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಬರುವ ಏರಿಳಿತದ ಘಟನೆಗಳನ್ನು ಎದುರಿಸಲು ನಮ್ಮ ಮನಸ್ಸು ತಯಾರಾಗಿರಬೇಕು. ಜೀವನದಲ್ಲಿ ತೃಪ್ತಿಯಿಂದ ಬದುಕುವುದನ್ನು ರೂಢಿಸಿಕೊಂಡರೆ ಅದು ಸಾರ್ಥಕತೆ ಕಾಣುತ್ತದೆ ಎಂದರು. ಅಧ್ಯಕ್ಷತೆವಹಿಸಿದ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ಹಿಂದೆ ಅನೇಕ…
ಬೈಂದೂರು: ಕಲಿಯುಗದಲ್ಲಿ ಗಣಪತಿಯ ಆರಾಧನೆ ಸರ್ವಶ್ರೇಷ್ಠವಾಗಿದೆ. ಅವನನ್ನು ಭಕ್ತಿ ಹಾಗೂ ಶುದ್ಧ ಮನಸ್ಸಿನಿಂದ ಆರಾಧಿಸಿದರೆ ಕಾರ್ಯಸಿದ್ಧಿಯಾಗುತ್ತದೆ. ದೇವರನ್ನು ನಂಬಿ, ಧಾರ್ಮಿಕ ನಂಬಿಕೆಯಿಲ್ಲದಿದ್ದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಿಲ್ಲ ಎಂದು ಸಿರಸಿ ಸೋಂದಾ ಸ್ವರ್ಣವಲ್ಲಿ ಮಠದ ಪೀಠಾಧಿಪತಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಗಣಪತಿ ದೇವರ ಆಕಾರಕ್ಕೂ ಆಧ್ಯಾತ್ಮಿಕವಾದ ಅರ್ಥವಿದೆ. ಆತನ ದೇಹದ ಅವಯವಗಳು ಒಂದೊಂದು ಸಂದೇಶಗಳನ್ನು ನೀಡುತ್ತದೆ. ವಿಶೇಷ ಯಜ್ಞದಲ್ಲಿ ಅಗ್ನಿಯಲ್ಲಿ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ ನೀಡಿದ ಆಹುತಿ ಸೂರ್ಯನ ಮೂಲಕ ದೇವತೆಗಳಿಗೆ ತಲುಪಿ ಅವರು ಪ್ರಸನ್ನರಾಗಿ ಕಾಲಕಾಲಕ್ಕೆ ಮಳೆ-ಬೆಳೆ ಹಾಗೂ ಅನ್ನ ಸಮೃದ್ದಿಯಾಗುತ್ತದೆ. ವಿಶ್ವವೇ ವಿಘ್ನೇಶ್ವರನನ್ನು ಪೂಜಿಸುತ್ತದೆ. ವಿದೇಶದಲ್ಲಿಯೂ ಕೂಡಾ ಗಣಪತಿಯ ದೇವಾಲಯಗಳ ಪ್ರಾಚೀನ ಕುರುಹು ಪತ್ತೆಯಾಗಿದೆ. ದೇವರು ಧರ್ಮದ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಭಕ್ತಿಮಾರ್ಗದ ಮೂಲಕ ಪರಮಾತ್ಮನನ್ನು ಅತೀ ಸುಲಭವಾಗಿ…
ಬೈಂದೂರು: ಪರಿಶುದ್ಧವಾದ ನಮ್ಮ ಭರತಭೂಮಿಯಲ್ಲಿ ದೇವರು-ದೈವ ಹಾಗೂ ಸನ್ನಿಧಿಯನ್ನು ಗುರುತಿಸುತ್ತೇವೆ. ಧೃಡವಾದ ಭಕ್ತಿ ಮತ್ತು ಶ್ರದ್ದೆಯಿಂದ ಜಾತಿ, ಮತ ಭೇಧವಿಲ್ಲದೇ ಸರ್ವರ ಸಹಕಾರ, ಒಗ್ಗಟ್ಟಿನಿಂದ ನಾವು ಏನನ್ನಾದರೂ ಸಾಧಿಸಬಹುದು. ಧರ್ಮದಿಂದ ಮಾನವನಿಗೆ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ ಎಂದು ಧಾರ್ಮಿಕ ಉಪನ್ಯಾಸಕ ಆನಗಳ್ಳಿ ಗಜಪುರದ ಚೆನ್ನಕೇಶವ ಗಾಯತ್ರಿ ಭಟ್ಟ ಹೇಳಿದರು. ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಹಾಗೂ ನಾಗಮಂಡಲೋತ್ಸವದ ನಾಲ್ಕನೇ ದಿನ ಧಾರ್ಮಿಕ ಉಪನ್ಯಾಸ ನೀಡಿದರು. ದೇವಾಲಯಗಳು ಸಗುಣೋಪಾಸನೆ ಮಾಡುವ ಪವಿತ್ರಸ್ಥಳ. ಇಲ್ಲಿನ ಅರ್ಚಕರು ವೇದ ಮಂತ್ರಗಳಿಂದ ನಿಯಮಾನುಸಾರ ಸಾತ್ವಿಕ ಕಾರ್ಯಗಳನ್ನು ನಡೆಸಬೇಕು. ಉತ್ಸವಾದಿ ಅನ್ನದಾನದಿಂದ ಕ್ಷೇತ್ರದ ಅಭಿವೃದ್ಧಿ ಕಾಣಬಹುದು. ಅಲ್ಲದೇ ಭಕ್ತರ ಪಾಲುದಾರಿಕೆಯೂ ಮುಖ್ಯವಾಗಿರುತ್ತದೆ. ದೇವಾಲಯಗಳಲ್ಲಿ ನಡೆಯುವ ಕರ್ಮಕ್ಕೆ ವಿಶೇಷ ಫಲ ದೊರಕುವುದಲ್ಲದೇ ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ ಎಂದರು. ಧಾರ್ಮಿಕ ಕ್ಷೇತ್ರಗಳಲ್ಲಿರುವುದು ಕೇವಲ ಎರಡು ಪಕ್ಷಗಳು. ಒಂದು ಕೃಷ್ಣಪಕ್ಷ ಅಂದರೆ ಕರ್ಮ,…
ಕುಂದಾಪುರ: ಕೊಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಪ್ರತಿಷ್ಟಾ ವರ್ಧಂತಿ ವಿಜೃಂಬಣೆಯಿಂದ ನಡೆಯಿತು. ಬೆಳಿಗ್ಗೆ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಶತಕಲಶಾಭಿಷೇಕ, ಪವಮಾನ ಕಲಶಾಭಿಷೇಕಗಳೊಂದಿಗೆ ವಿಶೇಷ ಪೂಜೆ ಜರಗಿತು.ಮಧ್ಯಾಹ್ನ ಮಹಾಸಂತರ್ಪಣೆ ನಡೆಯಿತು. ಈ ಸಮಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಕಾಮತ್, ಮೊಕ್ತೇಸರರಾದ ಶಾಂತಾರಾಮ ಪೈ, ವಿಠ್ಠಲದಾಸ ಭಟ್, ರತ್ನಾಕರ ಕಾಮತ್, ಗೋವಿಂದ್ರಾಯ ಸಂಜೀವ ಕಾಮತ್, ಪದ್ಮನಾಭ ಕಾಮತ್, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ ಕಾಮತ್ ಉಪಸ್ಥಿತರಿದ್ದರು. ಸಂಜೆ ಹಗಲೋತ್ಸವ,ರಾತ್ರಿ ಭಜನೆಯೊಂದಿಗೆ ಬೆಳ್ಳಿಯ ಪುಷ್ಪ ರಥ ಸಹಿತ ಉತ್ಸವ ಕೋಟೇಶ್ವರ ಪೇಟೆಯಲ್ಲಿ ಸಾಗಿತು.ನಂತರ ವಿಶೇಷ ವಸಂತ ಪೂಜೆ ಮತ್ತು ಪ್ರಸಾದ ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಊರ ಸಮಾಜ ಭಾಂಧವರು ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕ ಪಾತ್ರರಾದರು
ದಿವ್ಯಾಧರ ಶೆಟ್ಟಿ ಕೆರಾಡಿ. | ಕುಂದಾಪ್ರ ಡಾಟ್ ಕಾಂ | ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು ಎನ್ನುವ ಹುಡುಗ ಮತ್ತು ಹಂಬಲಿಸೊ ನಿನ್ನ ಕಂಗಳಲಿ ಬೇರೇನೂ ಕಾಣದು ಹುಡುಗ ನನ್ನ ದೊರೆಯು ನೀನೆ ಆಸರೆಯು ನೀನೆ ಎನ್ನುವ ಹುಡುಗಿಯ ಎದೆ ಬಗೆದು ನೋಡಿದರೂ ಕಾಣುವುದು ನಿರ್ಮಲವಾದ ಹಚ್ಚ ಹಸಿರಿನ ಸ್ವಚ್ಛ ಪ್ರೀತಿ ಮಾತ್ರ ಇದು ಈ ಜಗದ ನೀತಿ ಪ್ರೀತಿಯ ರೀತಿ. ಹೌದು ‘ಪ್ರೀತಿ’ ಎಂಬ ಎರಡಕ್ಷರ ಪದಗಳಲ್ಲಿ ಹಿಡಿದಿಡಲಾಗದ ಭಾವ ನೌಕೆ.. ಪ್ರಪಂಚದ ಯಾವಜೀವಿಯನ್ನು ಬಿಡದೆ ಕಾಡುವ ಮಾಯಾಜಿಂಕೆ. ಅಲ್ಲೆಲ್ಲೋ ಬಸ್ ಸ್ಟಾಂಡ್ ನಲ್ಲಿ ಕಿರುನಕ್ಕ ಹುಡುಗಿ ನಿದ್ದೆಗಣ್ಣಿನಲ್ಲೂ ಕಾಡಿದಂತೆ, ನೆರೆಮನೆಯಲ್ಲಿ ಮಲ್ಲಿಗೆಯೊಂದು ಅರಳಿದಂತೆ, ಕ್ಯಾಂಪಸ್ ನಲ್ಲಿ ಕಾಲ್ಗೆಜ್ಜೆ ಹೆಜ್ಜೆಗಳ ಹಿಂಬಾಲಿಸಿದಂತೆ, ಪ್ರೀತಿಯ ಹುಡುಕಾಟ ಅದಕ್ಕಾಗಿ ಕಾದಾಟ ಅಂದು ಇಂದು ಮುಂದು ನಿತ್ಯ ನಿರಂತರ.. ಪ್ರೀತಿಯ ಹುಟ್ಟು ಸಾವು ಎರಡು ಜಗತ್ತಿನ ಪರಮ ಅದ್ಭುತವೆ.. ಹುಟ್ಟಿನ ನಲಿವು ಸಾವಿನ ವೇದನೆ ಅನುಭವಿಸಿದವರಷ್ಟೆ ಹೇಳಬಲ್ಲರು.. ಪ್ರೀತಿಯ ಆರಂಭವೆ…
