Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕಾದರೇ ಶಿಕ್ಷಣ ಅತ್ಯಗತ್ಯ. ಶಾಲಾ ಕಾಲೇಜಿನಲ್ಲಿ ಕಲಿತ ಬಳಿಕ ಅಲ್ಲಿನ ಋಣವನ್ನು ಮರೆಯದೇ ಶಾಲೆಯ ಅಭಿವೃದ್ಧಿಗಾಗಿ ಚಿಂತಿಸುವ ನೆಲೆಯಲ್ಲಿ ಪುನರ್‌ಮಿಲನಗೊಂಡ ಹಳೆ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದು ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನಾ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ. ಜಿ. ಶಂಕರ ಹೇಳಿದರು. ಅವರು ಕೋಟ-ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸದ ಪುನರ್‌ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರನಟ ವಿಜಯ ರಾಘವೇಂದ್ರ ಮಾತನಾಡಿ ಹಳೆಯ ದಿನಗಳನ್ನು ಹೊಸತಾಗಿ ನೆನಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿ ನೀಡಿದೆ ಎಂದು ಕೊನೆಯಲ್ಲಿ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದಾಗ ವಿದ್ಯಾರ್ಥಿಗಳು ಚಪ್ಪಾಳೆಯ ಸ್ಪಂದನ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಬದುಕಿನಲ್ಲಿ ಪ್ರಯತ್ನವಿಲ್ಲದೇ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಪ್ರಯತ್ನ ಪಡುವಿದರಲ್ಲಿಯೇ ಸೋತರೆ ಯಶಸ್ಸು…

Read More

ಗಂಗೊಳ್ಳಿ: ಯುವಶಕ್ತಿ ಯಾವುದೇ ಊರಿನ ಅತ್ಯಮೂಲ್ಯ ಆಸ್ತಿ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಯುವಕರು ಮಾಡಬೇಕಿದೆ.ಹಾಗಾದಾಗ ಊರು ಸಮಾಜ ದೇಶ ಎಲ್ಲವೂ ಅಭಿವೃದ್ಧಿಯಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ೩೨ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ಎಲ್ಲರೂ ನೀಡಬೇಕು.ಅದು ಈ ದಿನದ ಅಗತ್ಯತೆ ಎಂದು ಅವರು ಹೇಳಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ನ ಅಧ್ಯಕ್ಷರಾದ ದಿನಕರ್ ಪಟೇಲ್,ಅಖಿಲ ಭಾರತ ಕೊಂಕಣಿಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ತಿಮ್ಮಪ್ಪ ಎಮ್ ಖಾರ್ವಿ ಭಟ್ಕಳ ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯರಾದ ನಾಗರಾಜ ಕೊಡಂಚರನ್ನು ಸನ್ಮಾನಿಸಲಾಯಿತು. ಮಾನವೀಯತೆಯ ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹತ್ತು ಫಲಾನುಭವಿಗಳಿಗೆ ಧನಸಹಾಯವನ್ನು ವಿತರಿಸಲಾಯಿತು ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ. ರಾಘವೇಂದ್ರ ಖಾರ್ವಿ ಪ್ರಾಸ್ತಾವಿಕ…

Read More

ಬೈಂದೂರು: ಇಲ್ಲಿನ ರೋಶನ್ ಹೋಮಿಯೊಪಥಿಕ್ ಸಹಯೋಗದಲ್ಲಿ ಮಂಗಳೂರು ದೇರಳಕಟ್ಟೆ  ಫಾದರ್ ಮುಲ್ಲರ್ ಹೋಮಿಯೊಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ತಜ್ಞವೈದ್ಯರಿಂದ ಉಚಿತ ವೈದ್ಯಕೀಯ ಮಾಹಿತಿ ಮತ್ತು ಚಿಕಿತ್ಸಾ ಶಿಬಿರ ರೋಟರಿ ಸಮುದಾಯ ಭವನದಲ್ಲಿ ನಡೆಯಿತು. ಫಾದರ್ ಮುಲ್ಲರ್ ಹೋಮಿಯೊಪಥಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ವೈದ್ಯಕೀಯ ಶಿಬಿರದ ಸಂಪೂರ್ಣ ಮಾಹಿತಿ ನೀಡಿದರು. ಡಾ. ರೋಶನ್ ಪಾಯಸ್ ಬೈಂದೂರು ಮುಂತಾದವರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಶಿಬಿರದ ಪ್ರಯೋಜನ ಪಡೆದರು.

Read More

ಕುಂದಾಪುರ: ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡವನ್ನು ನವೀಕರಣಗೊಳಿಸಿ ಸುಸಜ್ಜಿತವಾಗಿ ನಿರ್ಮಿಸಲು ದುಬೈನ ಉದ್ಯಮಿ ಕೊಂಚಾಡಿ ಗಣಪತಿ ಶೆಣೈ ಅವರು ನೀಡಿದ ದೇಣಿಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ಕಟ್ಟಡವನ್ನು ಶಾಲೆಯ ಮಕ್ಕಳ ಉಪಯೋಗಕ್ಕೆ ಬಿಟ್ಟುಕೊಡುವಂತಾಗಲು ಹಾಗೂ ಈ ನವೀಕರಣ ಕಾರ್ಯ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಹೇಳಿದರು. ಅವರು ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನವೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಜಿಪಂ ಸದಸ್ಯೆ ಶೋಭಾ ಪುತ್ರನ್, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗುಜ್ಜಾಡಿಯ ಉದ್ಯಮಿ ಉಮೇಶ ಮೇಸ್ತ, ಶಾಲೆಯ ಮುಖ್ಯೋಪಾಧ್ಯಾಯ ಹನುಮಂತ ಬಿಲ್ಲವ ಶುಭ ಹಾರೈಸಿದರು. ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ, ಶೇಖರ ಪೂಜಾರಿ, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಶಾಲೆಯ ಸಹಶಿಕ್ಷಕರು, ಪೋಷಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಏಳೇಳು ಜನ್ಮ ಅನ್ನೊದು ಇದ್ರೆ ಯೋಧನ ಪತ್ನಿಯಾಗಿ ಹುಟ್ಟೋಕೆ ಇಷ್ಟ ಪಡ್ತೆನೆ. ಯೋಧನ ಮಡದಿಯಾಗಿ ಹುಟ್ಟಬೇಕಾದ್ರೆ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಹೀಗೆಂದು ಹೇಳಿದವರು ಆರು ದಿನಗಳ ಕಾಲ ಸಿಯಾಚಿನ್‌ನಲ್ಲಿ ಹಿಮದಡಿ ಸಿಲುಕಿ ಜೀವವನ್ನು ಹಿಡಿದಿಟ್ಟುಕೊಂಡು ಬಳಿಕ ಹುತಾತ್ಮರಾದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಮಡದಿ ಮಾದೇವಿ ಕೊಪ್ಪದ. ಅರಮಣಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಉಪ್ಪುಂದೋತ್ಸವದ ಅಂಗವಾಗಿ ಆಯೋಜಿಸಿದ್ದ ಯೋಧರಿಗೊಂದು ಸಲಾಂ ಕಾರ್ಯಕ್ರದಲ್ಲಿ ಕುಟುಂಬದೊಂದಿಗೆ ಸಮಿತಿಯ ಗೌರವ ಸ್ವೀಕರಿಸಿ ಮಾತನಾಡಿದರು. ಅರಮಣಕೋಡಿ ಶ್ರೀ ಈಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ ಒಂದು ದೇಶವನ್ನು ದೇವರೆಂದು ಪೂಜಿಸುವ ಜಗತ್ತಿನ ಏಕೈಕ ರಾಷ್ಟ್ರವಿದ್ದರೇ ಅದು ಭಾರತ ಮಾತ್ರ. ತನ್ನೆಲ್ಲಾ ಒಳ್ಳೆಯದನ್ನು ಜಗತ್ತಿಗೆ ನೀಡಿದ ಹಿರಿಮೆ ನಮ್ಮ ದೇಶದ್ದು. ಭಾರತ ಮಾತೆಯ ರಕ್ಷಣೆಗಾಗಿ ಪ್ರತಿ ಯೋಧನೂ ನಮಗಾಗಿ ಕರ್ತವ್ಯನಿರತನಾಗಿರುತ್ತಾನೆ. ಆತನ ಸ್ಮರಣೆ ದಿತ್ಯವೂ ಆಗಬೇಕಿದೆ. ಪ್ರತಿ ಕುಟುಂಬದಲ್ಲೊಂದು ಯೋಧನಾಗುವ ಕನಸು ಚಿಗುರಬೇಕಿದೆ ಎಂದರು. ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ವೀಡಿಯೋ ಏಳೇಳು ಜನ್ಮನೂ ಹುಟ್ಟಿ ಬರೋ ಹಾಗಿದ್ರೆ ಯೋಧನ ಹೆಂಡತಿಯಾಗಿ ಹುಟ್ಟಿ ಬರಲು ಇಷ್ಟ ಪಡ್ತೆನೆ. ಹೀಗೆ ಆತ್ಮಸ್ಥೈರ್ಯದಿಂದ ಹೇಳಿದವರು ಭಾರತದ ಹುತಾತ್ಮ ಯೋಧ ಲ್ಯಾನ್ಸ್ ಹನುಮಂತಪ್ಪ ಕೊಪ್ಪದ ಅವರ ಮಡದಿ ಮಾದೇವಿ ಕೊಪ್ಪದ. ತಮ್ಮ ಮಗಳನ್ನು ಸೈನ್ಯಕ್ಕೆ ಸೇರಿಸುವುದೇ ನನ್ನ ಗುರಿ ಎಂದಿದ್ದ ಈ ದಿಟ್ಟ ಮಹಿಳೆ ಬೈಂದೂರಿನ ಉಪ್ಪುಂದದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತುಗಳಿವು. ಕೆಳಗಿನ ವೀಡಿಯೋ ನೋಡಿ. ಕುಂದಾಪ್ರ ಡಾಟ್ ಕಾಂ ವೀಡಿಯೋ

Read More

ಕುಂದಾಪುರ: ಹುಟ್ಟಿದ ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷತೆ ಅಡಗಿರುತ್ತದೆ. ಆಟ ಪಾಠ ಮೊದಲಾದ ಚಟುವಟಿಕೆಗಳಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಬಹುದಾಗಿದೆ. ಅವರ ಆಸಕ್ತಿಯ ಕ್ಷೇತ್ರದಲ್ಲಿ ತೋರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಸಾಧನೆಯ ಹಾದಿಯಲ್ಲಿ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಪ್ರೇರಣೆ ಸಿಕ್ಕಂತಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು ಅವರು ಜಿಲ್ಲಾ ಪಂಚಾಯತ್ ಸಾರ್ವಜಿನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘ ಮತ್ತು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಆರ್. ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಕ್ಲಬ್ ಕುಂದಾಪುರ ಸೌತ್…

Read More

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲೆಯಾಗಿ ಕವಿತಾ ಎಮ್ ಸಿ ಅವರು ಕಳೆದ ಮಂಗಳವಾರ ಅಧಿಕಾರ ವಹಿಸಿಕೊಂಡರು.ಮಾಜಿ ಪ್ರಾಂಶುಪಾಲರಾದ ಆರ್ ಎನ್ ರೇವಣ್‌ಕರ್ ಕವಿತಾರಿಗೆ ಪುಷ್ಪ ಗುಚ್ಛವನ್ನು ನೀಡುವ ಮುಖೇನ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಾಗರಾಜ ಶೆಟ್ಟಿ, ವೆಂಕಟೇಶ ಮೂರ್ತಿ, ಸುಜಯೀಂದ್ರ ಹಂದೆ,ಸುಗುಣ ಆರ್, ಶಾಲೆಟ್ ಲೋಬೊ,ಕೃಷ್ಣ ಗುಜ್ಜಾಡಿ,ನರೇಂದ್ರ ಎಸ್ ಗಂಗೊಳ್ಳಿ, ಕಛೇರಿ ಸಿಬ್ಬಂದಿಗಳಾದ ಭಾಸ್ಕರ ಎಚ್ ಜಿ, ರಾಜೀವ ,ಯಮುನಾ,ನಮಿತಾ ಮತ್ತು ಶ್ರೀಧರ ಗಾಣಿಗ ಉಪಸ್ಥಿತರಿದ್ದರು.ಕಾಲೇಜಿನ ಆಡಳಿತ ಮಂಡಳಿ ನೂತನ ಪ್ರಾಂಶುಪಾಲರನ್ನು ಅಭಿನಂದಿಸಿದೆ. ವರದಿ: ನರೇಂದ್ರ ಎಸ್ ಗಂಗೊಳ್ಳಿ.

Read More

ಹಳ್ಳಿಹೊಳೆ: ಆಧುನಿಕ ಶಿಕ್ಷಣ ಪದ್ಧತಿಯನ್ನು ಹಳ್ಳಿಹೊಳೆಯಂತಹ ತೀರಾ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಅಳವಡಿಸಿಕೊಂಡು ಪರಿಸರದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಪ್ರಶಂಸನೀಯ. ಉತ್ತಮ ತಂತ್ರಜ್ಞಾನದಿಂದ ಗುಣಮಟ್ಟದ ಶಿಕ್ಷಣ ಉಪಯುಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದ್ದು, ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ ಉತ್ತಮ ಶಿಕ್ಷಣದಿಂದ ಉತ್ತಮ ಭವಿಷ್ಯ ನಮ್ಮದಾಗುತ್ತದೆ ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು  ರೋಟರಿ ಕ್ಲಬ್ ಕುಂದಾಪುರ ವತಿಯಿಂದ ಹಳ್ಳಿಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಇ ಲರ್ನಿಂಗ್ ಕಿಟ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ದಾನಿ ಅಮೇರಿಕಾದ ಸುಧೀರ ಕನ್ನಂತ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡು ಊರು ಹೆಮ್ಮೆ ಪಡುವಂತ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಾನಿ ವೆಂಕಟಾಚಲ…

Read More

ಗಂಗೊಳ್ಳಿ : ನಮ್ಮ ಬಗೆಗೆ ಬೇರೆಯವರ ಅಭಿಪ್ರಾಯಗಳಿಗೆ ಕಿವಿಗೊಡುವ ಮುನ್ನ ನಾವು ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳುವುದರ ಕಡೆಗೆ ಗಮನವನ್ನು ನೀಡಬೇಕು.ನಮ್ಮ ತಂದೆತಾಯಿಗಳ ಅಂತರಾಳವನ್ನು ಅರಿಯುವ ಸಾಮರ್ಥ್ಯ ನಮ್ಮಲ್ಲಿರಬೇಕು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಿತ ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಹದಿನೈದನೇ ವರುಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಸೆಲ್ಫಿ ಕ್ಲಿಕ್ಕಿಸಿ ಲೈಕುಗಳನ್ನು ಲೆಕ್ಕ ಹಾಕುವುದು ಸಾಧನೆಯಲ್ಲ. ಸ್ವಂತ ಸಾಧನೆಗಳಿಂದ ನಾವು ಗುರುತಿಸಿಕೊಳ್ಳುವಂತಾಗಬೇಕು. ಹಿರಿಯರ ಆದರ್ಶಗಳನ್ನು ಅನುಸರಿಸಿ ನಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಶ್ರಮಪಡಬೇಕು.ದೇಶಭಕ್ತಿಯ ಸಂಕೇತಗಳನ್ನು ಧರಿಸಿ ಹಂಚಿಕೊಂಡರಷ್ಟೆ ಸಾಲದು. ದೇಶದ ಬಗೆಗೆ ತಿಳಿದುಕೊಳ್ಳುವ ನೈಜ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು. ಶ್ರೀ ಮಾತಾ ಆಸ್ಪತ್ರೆ ಕುಂದಾಪುರದ ಮನೋವೈದ್ಯರಾದ ಡಾ.ಪ್ರಕಾಶ್ ತೋಳಾರ್ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಕೈರಾಲಿ ಸುಹೃದ್ವೇದಿಯ ಅಧ್ಯಕ್ಷ ಕೆ.ಪಿ.ಶ್ರೀಶನ್, ಗಂಗೊಳ್ಳಿಯ ಉದ್ಯಮಿ…

Read More