Author: ನ್ಯೂಸ್ ಬ್ಯೂರೋ

ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸವನ್ನಾಚರಿಸುತ್ತಿರುವ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವದ ಪುರಮೆರವಣಿಗೆ ಸಂಜೆ ದೇವಳದಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಆರಂಭಗೊಂಡಿತು. ವಿಶೇಷವಾಗಿ ಪುಷ್ಪಲಂಕಾರಗೊಂಡ ವಾಹನದಲ್ಲಿ ಶ್ರೀಗಳು ವಿರಾಜಮಾನರಾದರು. ವೇದ ಘೋಷಗಳಿಂದ ಆರಂಭವಾದ ಪುರ ಮೆರವಣಿಯಲ್ಲಿ ವೆಂಕಟರಮಣ, ಆಂಜನೇಯ, ನರಸಿಂಹ ಅವತಾರ, ಕಂಸ ವಧೆ, ವೇದವ್ಯಾಸ ದೇವರು, ತಾರಕಾಸುರ ವಧೆ, ಸಂಜೀವಿನಿ ಪರ್ವತ ಹೊತ್ತ ಹನುಮಂತ, ದುರ್ಗೆ, ಮಕ್ಕಳ ಶ್ರೀ ರಾಮ ಸೀತಾ ಲಕ್ಷ್ಮಣ ಹನುಮಂತ, ವೆಂಕಟರಮಣ ದೇವರು, ಇದಲ್ಲದೆ ಕೀಲು ಕುದುರೆ, ನಾಸಿಕ್ ಬ್ಯಾಂಡ್, ಮಹಿಳಾ ಚಂಡೆ, ಹುಲಿವೇಷ ಅಲ್ಲದೇ ಇನ್ನಿತರ ಟ್ಯಾಬ್ಲೋಗಳು ಜನರ ಮನಸೂರೆಗೊಂಡಿತು. ಸುಮಾರು 10000ಕ್ಕೂ ಹೆಚ್ಚಿನ ಜಿ.ಎಸ್.ಬಿ ಸಮಾಜ ಭಾಂದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಪುಳಕಿತರಾದರು. ಊರ ಹಾಗೂ ಪರವೂರಿನ ಭಕ್ತಾದಿಗಳು ಸ್ವಾಮೀಜಿಯಿಂದ ಫಲ ಮಂತ್ರಾಕ್ಷತೆಯನ್ನು ಪಡೆದರು. ಕೋಟೇಶ್ವರ ಪೇಟೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರಗಳಿಂದ ಸಿಂಗರಿಸಲಾಗಿತ್ತು.…

Read More

ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್ ಕುಂದಾಪುರ: ಸತತ ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಒಂದು ಎಲ್.ಇ.ಡಿ ಟಾರ್ಚ್ ನೀಡುವುದರ ಜೊತೆಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು 50,000 ಮೌಲ್ಯದ ಮೊಬೈಲ್ ಗೆಲ್ಲುವ ಸುವರ್ಣವಕಾಶವಿದೆ. ವಿವೋ ವಿ1, ವಿ1ಮಿನಿ, ವಿ1 ಮಾಕ್ಸ್, ಸ್ಯಾಮಸಂಗ್ ಜೆ2, ಜೆ5, ಜೆ7 ಶ್ರೇಣಿಯ ಮೊಬೈಲ್ ಕೊಂಡಲ್ಲಿ 8ಜಿಬಿ ಮೆಮೊರಿ ಕಾರ್ಡ್, ಸೆಲ್ಪಿ ಸ್ಟಿಕ್, ವಿಶೇಷ ಗಿಫ್ಟ್ ನೀಡಿದರೇ, ಲೆನೊವಾ 6000, 7000, ಕೆ3 ಮ್ಯೂಸಿಕ್ ಶ್ರೇಣಿಯ ಮೊಬೈಲ್ ಕೊಂಡಲ್ಲಿ…

Read More

ಕುಂದಾಪುರ: ಮೈಸೂರು ಹುಲಿ ಎಂಬ ಬಿರುದಾಂಕಿತ ರಾಜ ಹಜರತ್ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯನ್ನು ಕುಂದಾಪುರದ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಚರಿಸಲಾಯಿತು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಹಿರಿಯಣ್ಣಯ್ಯ ಟಿಪ್ಪುವಿನ ಪೋಟೋಗೆ ಪುಷ್ಪಾರ್ಪನೆಗೈದು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂದಾಪುರ ನಗರ ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಜಾಕೋಜ್ ಡಿಸೋಜ, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ತಹಶೀಲ್ದಾರ್ ಗಾಯತ್ರಿ ನಾಯಕ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್. ನಾರಾಯಣ ಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಿ. ಎಸ್. ಮಾದರ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಮೊದಲಾದವು ಉಪಸ್ಥಿತರಿದ್ದರು. ಬಸ್ರೂರು ಶಾರದಾ ಕಾಲೇಜಿನ ಪ್ರಾಧ್ಯಾಪಕ ಡಾ| ಎಂ. ದಿನೇಶ್ ಹೆಗ್ಡೆ ಟಿಪ್ಪು ಸುಲ್ತಾನರ ಸಾಧನೆಗಳ ಕುರಿತು ಉಪನ್ಯಾಸವನ್ನಿತ್ತರು. (ಕುಂದಾಪ್ರ ಡಾಟ್ ಕಾಂ ಸುದ್ದಿ) [quote font_size=”15″ bgcolor=”#ffffff” bcolor=”#000000″ arrow=”yes”]ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ. ಪ್ರತಿಭಟನಾಕಾರರ ಬಂಧನ ಅತ್ತ ತಾಲೂಕು ಆಡಳಿತ ಟಿಪ್ಪು ಜನ್ಮ ದಿನಾಚರಣೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇನ್ಸುಲೇಟರ್ ಹಾಗೂ ಬೊಲೊರೋ ಪಿಕಪ್ ವಾಹನದ ನಡುವಿನ ಭೀಕರ ಅಪಘಾತದಲ್ಲಿ ಪಿಕಪ್ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ಹೆಮ್ಮಾಡಿಯಲ್ಲಿ ವರದಿಯಾಗಿದೆ. ಮೃತ ಚಾಲಕನನ್ನು ಮುಂಬೈ ನಿವಾಸಿ ದತ್ತಾಸಿಂಗ್ (48) ಎಂದು ಗುರುತಿಸಲಾಗಿದೆ. ಹೆಮ್ಮಾಡಿಯ ಜಾಲಾಡಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು ಕಡೆಯಿಂದ ಶೋರೂಮಿಗೆ ತೆರಳುತ್ತಿದ್ದ ಹೊಸ ಬೊಲೊರೋ ಪಿಕಪ್ ವಾಹನವು ಓವರಟೇಕ್ ಮಾಡುವ ಭರದಲ್ಲಿ ಕುಂದಾಪುರ ಕಡೆಯಿಂದ ನಾವುಂದಕ್ಕೆ ತೆರಳುತ್ತಿದ್ದ ಇನ್ಸುಲೇಟರ್ ವಾಹನ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಪಿಕಪ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನ ತಲೆಯ ಭಾಗ ಮುರಿದು ಅಲ್ಲಿಯೇ ಮೃತಪಟ್ಟಿದ್ದಾನೆ. ಇನ್ಸುಲೇಟರ್ ಗೆ ಡಿಕ್ಕಿ ಹೊಡೆದ ಪಿಕಪ್ ಇನ್ನೊಂದು ಲಾರಿಗೂ ಡಿಕ್ಕಿ ಹೊಡೆದಿರುವುದಲ್ಲದೇ ಇನ್ಸುಲೇಟರ್ ನ ಕೆಳಭಾಗದಲ್ಲಿ ಸಿಲುಕಿಕೊಂಡಿತ್ತು. ಚಾಲಕನ್ನು ದೇಹವನ್ನು ಅದರಿಂದ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ಇನ್ಸುಲೇಟರ್ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು ಅದರ ಚಾಲಕನಿಗೂ ಗಾಯಗಳಾಗಿವೆ.  (ಕುಂದಾಪ್ರ ಡಾಟ್ ಕಾಂ) ಘಟನೆಯಿಂದಾಗಿ ಸುಮಾರು ಒಂದೂವರೇ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ…

Read More

ಉದ್ಯಮದೊಂದಿಗೆ ಸಾಮಾಜಿಕ ಕಳಕಳಿ ಇದ್ದರೆ ಯಶಸ್ಸು ಸಾಧ್ಯ: ಪೇಜಾವರ ಶ್ರೀ ಕುಂದಾಪುರ: ನಾವು ಪ್ರಾಮಾಣಿಕವಾಗಿ ಮಾಡುವ ಸ್ವಾರ್ಥರಹಿತ ಕೆಲಸದಿಂದ ಲೋಕ ಕಲ್ಯಾಣವಾಗುವುದು. ನಮ್ಮ ಪ್ರತಿ ಉದ್ಯಮವೂ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆದಾಗ ಅದರಲ್ಲಿ ಯಶಸ್ಸು ಸಾಧ್ಯ. ದೇವರು ಮತ್ತು ಸಮಾಜದ ಹಿತ ಕಾಪಾಡಿದರೇ ಉತ್ತಮ ಸಮಾಜದ ಸಾಕಾರಗೊಳ್ಳಲಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಸಹನಾ ಗ್ರೂಫ್ ಅವರ ಸಹನಾ ಕನ್ವೆನ್ಷನ್ ಸೆಂಟರ್ ಹಾಗೂ ಸಹನಾ ಆರ್ಕಿಡ್ ಹೋಟೆಲ್ ಲೋಕಾರ್ಪಣೆಗೊಳಿಸಿ ಅವರು ಆಶಿರ್ವಚನವಿತ್ತರು. ಬದುಕಿನಲ್ಲಿ ಹಣ ಬೇಕು. ಹಣ ಇದ್ದರೇ ಸಾಲದು ಅದು ಹರಿವ ನೀರಾದಾಗ ಮಾತ್ರ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ ಎಂದವರು ಹೇಳಿದರು. ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಮಾಜೀ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರತಿಯೊಬ್ಬರೂ ಒಂದೊಂದು ಗುರಿ ಇಟ್ಟು ಮುನ್ನಡೆದಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ಪ್ರತಿ ಸಾಧನೆಯ ಮುಂದೆ ಸವಾಲುಗಳಿವೆ. ಆದರೆ ಸವಾಲುಗಳನ್ನು ಮೀರಿ ಮುನ್ನಡೆಯುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು.…

Read More

ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾದೇಗುಲ ಹಕ್ಲಾಡಿ ಸೂರಪ್ಪ ಶೆಟ್ಟಿ ಪ್ರೌಢಶಾಲೆ ಸುವರ್ಣ ಮಹೋತ್ಸವ ತಯಾರಿ ಭರದಿಂದ ಸಾಗುತ್ತಿದ್ದು, ಅದಕ್ಕಾಗಿ 21 ವಿವಿಧ ಸಮಿತಿಗಳ ರಚನೆ ಮಾಡಲಾಗಿದೆ. ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಮಾಡಲಾಗಿದೆ. ಸಮಿತಿ ಮೇಲುಸ್ತ್ತುವಾರಿಯಲ್ಲಿ ಎಲ್ಲಾ ಕಾರ‍್ಯಕ್ರಮಗಳ ಸಿದ್ಧತೆ ಭರದಿಂದ ಸಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ‍್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ ಹೇಳಿದ್ದಾರೆ. ಹಕ್ಲಾಡಿ ಸೂರಪ್ಪ ಶೆಟ್ಟಿ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ, ಎರಡು ದಿನ ನಡೆಯುವ ಕಾರ‍್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಊಟೋಪಚಾರ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಲು ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಹಕ್ಲಾಡಿ ಪ್ರೌಢಶಾಲೆ ಶಿಕ್ಷಣ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ. ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ಶಾಲೆ ಅಡಿಗಲ್ಲು ಹಾಕಿದೆ. ಹಳೆ ವಿದ್ಯಾರ್ಥಿಗಳು ಮತ್ತು ಊರವರ ಸಹಕಾರದಲ್ಲಿ ದಾನಿಗಳ ನೆರವಿನಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತದೆ ಎಂದು ಹೇಳಿದರು. ಹಕ್ಲಾಡಿ ಗ್ರಾಪಂ.…

Read More

ಕುಂದಾಪುರ: ಹುಲ್ಲು ತುಂಬಿಸಿಕೊಂಡು ಸಂಚರಿಸುತ್ತಿದ್ದ ಮಿನಿ ಲಾರಿಯೊಂದಕ್ಕೆ ಪ್ರಯಾಣಿಸುತ್ತಿರುವಾಗಲೇ ಬೆಂಕಿ ತಗುಲಿಕೊಂಡ ಘಟನೆಯಲ್ಲಿ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿ ಹೋದ ಘಟನೆ ಸಂಜೆ ತೆಕ್ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. 407 ಲಾರಿಯೊಂದು ಬೈಹುಲ್ಲು ತುಂಬಿಸಿಕೊಂಡು ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಸಂಚರಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿ ತೆಕ್ಕಟ್ಟೆ ಸಮೀಪಿಸುತ್ತಿರುವಂತೆ ಲಾರಿಯ ಹಿಂಭಾಗದಲ್ಲಿದ್ದ ಬೈಹುಲ್ಲಿನಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಚಾಲಕನ ಗಮನಕ್ಕೆ ತಂದಿದ್ದಾರೆ. ಚಾಲಕನೂ ಎದೆಗುಂದದೇ ಲಾರಿಯ ಹಿಂಬದಿಯ ಟ್ರೈಲರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ಗಟ್ಟಿಯಾಗಿ ಕಟ್ಟಿಕೊಂಡಿದ್ದ ಬೈಹುಲ್ಲು ರಾಶಿ ಅಷ್ಟು ಸುಲಭಕ್ಕೆ ಕೆಳಗೆ ಬೀಳಲು ಒಪ್ಪಲಿಲ್ಲ. ಅದಾಗಲೇ ಬಂದು ಸೇರಿದ ಜನ ಒಬ್ಬೊಬ್ಬರು ಒಂದೊಂದು ಐಡಿಯಾ ಕೊಡಲಾರಂಭಿಸಿದರು. ಕೊನೆಗೂ ಕೆಲವರು ಲಾರಿಯ ಹಿಂಬದಿಗೆ ಹೋಗಿ ಟ್ರೈಲರ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಆದರೆ ಅದಾಗಲೇ ಬೈಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಟ್ರೈಲರ್ ಮೇಲೆತ್ತುವ ಸೌಲಭ್ಯ ಇದ್ದುದರಿಂದ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮತ್ತು ಚಾಲಕನ ಧೈರ್ಯದಿಂದಾಗಿ…

Read More

ಅಂಗಡಿ ಮುಂಗಟ್ಟು ಬಂದ್ ಮಾಡಿದ ಪ್ರತಿಭಟನಾಕಾರರು : ಕ್ಷೇತ್ರಕ್ಕೆ ಬಂದ ಯಾತ್ರಾರ್ಥಿಗಳ ಪರದಾಟ.ಆರೋಪದಲ್ಲಿ ಹುರುಳಿಲ್ಲ ಎಂದ ದೇವಳದ ಆಡಳಿತ ಮಂಡಳಿ. ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ದೇವಳದ ವಸತಿಗೃಹ ಖಾಸಗೀಕರಣಗೊಳಿಸಿ ಭಕ್ತರಿಂದ ಹೆಚ್ಚಿಗೆ ಹಣ ಸುಲಿಗೆ ಮಾಡುವ ಹುನ್ನಾರ ನಡೆಯುತ್ತಿದೆ. ಪವಿತ್ರ ದೇವಸ್ಥಾನ ಧಾರ್ಮಿಕ ಕ್ಷೇತ್ರವನ್ನಾಗಿ ಉಳಿಸದೇ ಇಲ್ಲಿಯೂ ಲಾಭ-ನಷ್ಟದ ಲೆಕ್ಕ ಹಾಕುತ್ತಿರುವುದು ಸರಿಯಲ್ಲ ಎಂದು ಕೊಲ್ಲೂರು ರಕ್ಷಣಾ ವೇದಿಕೆ ಅಧ್ಯಕ್ಷ ಸಂದೀಪ್ ಹೇಳಿದರು ಅವರು ಕೊಲ್ಲೂರು ಹಿತರಕ್ಷಣ ವೇದಿಕೆ ಆಶ್ರಯದಲ್ಲಿ ಕೊಲ್ಲೂರು ದೇವಸ್ಥಾನ ಆಡಳಿತ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಶ್ರೀ ದೇವಿಯ ಪವಿತ್ರ ತೇಪೋತ್ಸವವು ಕೊಳಚೆ ನೀರಿನಲ್ಲಿ ನಡೆಯುತ್ತಿದೆ. ಒಳಚರಂಡಿ ವ್ಯವಸ್ಥೆಗೆ ಕೇವಲ ಘೋಷಣೆಯಾಗಷ್ಟೇ ಉಳಿದಿದೆ. ಕೊಲ್ಲೂರಿನ ಜನರ ಹಿತ ಕಡೆಗಣಿಸಿ ಕ್ಷೇತ್ರ ವ್ಯಾವಹಾರಿಕರಣಗೊಳಿಸುತ್ತಿರುವುದು ಸರಿಯಲ್ಲ. ದೇವಳದ ಆಡಳಿತ ಮಂಡಳಿ ಹಾಗೂ ಇತರೆ ದೇವಳದ ಹುದ್ದೆಗಳಲ್ಲಿ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ದೇವಳದಲ್ಲಿ ದುಡಿಯುವ ನೌಕರರ ಹಿತಾಸಕ್ತಿಯನ್ನು ಅವಗಣಿಸಲಾಗಿದೆ. ಇಲ್ಲಿ ದುಡಿಯುವವರಿಗೆ ಯಾವುದೇ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಫುರ: ಸುರತ್ಕಲ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವ್ಯಕ್ತಿಯ ಶವವನ್ನು ಬಾರ್ಕೂರು ಬೆಣೆಕುದ್ರುವಿಗೆ ತಂದು ಸಂಸ್ಕಾರ ಮಾಡಿ ದಿನಗಳೇ ಕಳೆದಿತ್ತು. ಆದರೆ ಮೃತಪಟ್ಟು ಸಂಸ್ಕಾರ ಮಾಡಿದ ವ್ಯಕ್ತಿ ಮತ್ತೆ ಪ್ರತ್ಯಕ್ಷವಾಗಿ ಆಶ್ಚರ್ಯ, ಭಯ ಎರಡನ್ನೂ ಹುಟ್ಟಿಸಿದ್ದಾನೆ! ಅಂದಹಾಗೆ ಬಾರ್ಕೂರು ಬೆಣ್ಣೆಕುದ್ರು ಮೂಲದ ಶಂಕರ(48) ಸತ್ತು ಬದುಕಿ ಬಂದ ಅಸಾಮಿ ಕಳೆದ ವಾರ ಮಂಗಳೂರು ಸುರತ್ಕಲ್‌ನ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಶವದ ಗುರುತಿಗಾಗಿ ಹಾಗೇಯೇ ಇರಿಸಲಾಗಿತ್ತು. ಈ ವಿಚಾರ ಶಂಕರನ ಸಂಬಂಧಿಗಳು ಅದು ಆತನದೇ  ಶವವಾಗಿರಬಹುದೆಂಬ ಅನುಮಾನದಿಂದ ಶವ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ವ್ಯಕ್ತಿಯ ಕೈಯಲ್ಲಿನ ಗುರುತು ಮತ್ತು ಕೆಲವೊಂದು ನಿರ್ದಿಷ್ಟ ಹೋಲಿಕೆಗಳಿಂದ ಅದು ಶಂಕರನ ಶವ ಎಂದು ತಿರ್ಮಾನಕ್ಕೆ ಬಂದು ಪೊಲೀಸ್ ಇಲಾಖೆಗೆ ತಿಳಿಸಿ ಶವವನ್ನು ಶಂಕರನ ಹುಟ್ಟೂರಾದ ಬಾರ್ಕೂರಿನ ಬೆಣ್ಣೆಕುದ್ರುಗೆ ತಂದು ಸಂಸ್ಕಾರ ಮಾಡಲಾಗಿತ್ತು. (ಕುಂದಾಪ್ರ ಡಾಟ್ ಕಾಂ ವರದಿ) ಇದಾದ ಕೆಲವೇ ದಿನಗಳಲ್ಲಿ ಶಂಕರನ ಬಂಧುವಿಗೊಂದು ಅಚ್ಚರಿ ಕಾದಿತ್ತು. ಸಾಸ್ತಾನದ ಬಾರ್‌ಗೆ ತೆರಳಿದ್ದ ಶಂಕರನ ಆತ ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ…

Read More

ಕುಂದಾಪುರ: ತಾಲೂಕಿನ ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ಪ್ರತಿಷ್ಠಿತ ಸಹನಾ ಗ್ರೂಫ್ ಅವರ ನೂತನ ಸಹನಾ ಸಭಾಭವನ ಹಾಗೂ ಸಹನಾ ಆರ್ಕಿಟ್ ಹೋಟೇಲ್ ಕಟ್ಟಡ ನ.9ರ ಸಂಜೆ 5ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸಭಾಭವನವನ್ನು ಉದ್ಘಾಟನೆಗೊಳಿಸಿದರೇ, ರಾಜ್ಯ ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಹೋಟೆಲ್ ಲೋಕಾರ್ಪಣೆಗೊಳಿಸುವರು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರೇ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.…

Read More