ಸತ್ತು ಸಂಸ್ಕಾರ ಮಾಡಿದ ಮೇಲೆ ಮತ್ತೆ ಬದುಕಿ ಬಂದ ಅಸಾಮಿ!

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ

Call us

Click Here

ಕುಂದಾಫುರ: ಸುರತ್ಕಲ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವ್ಯಕ್ತಿಯ ಶವವನ್ನು ಬಾರ್ಕೂರು ಬೆಣೆಕುದ್ರುವಿಗೆ ತಂದು ಸಂಸ್ಕಾರ ಮಾಡಿ ದಿನಗಳೇ ಕಳೆದಿತ್ತು. ಆದರೆ ಮೃತಪಟ್ಟು ಸಂಸ್ಕಾರ ಮಾಡಿದ ವ್ಯಕ್ತಿ ಮತ್ತೆ ಪ್ರತ್ಯಕ್ಷವಾಗಿ ಆಶ್ಚರ್ಯ, ಭಯ ಎರಡನ್ನೂ ಹುಟ್ಟಿಸಿದ್ದಾನೆ! ಅಂದಹಾಗೆ ಬಾರ್ಕೂರು ಬೆಣ್ಣೆಕುದ್ರು ಮೂಲದ ಶಂಕರ(48) ಸತ್ತು ಬದುಕಿ ಬಂದ ಅಸಾಮಿ

ಕಳೆದ ವಾರ ಮಂಗಳೂರು ಸುರತ್ಕಲ್‌ನ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಶವದ ಗುರುತಿಗಾಗಿ ಹಾಗೇಯೇ ಇರಿಸಲಾಗಿತ್ತು. ಈ ವಿಚಾರ ಶಂಕರನ ಸಂಬಂಧಿಗಳು ಅದು ಆತನದೇ  ಶವವಾಗಿರಬಹುದೆಂಬ ಅನುಮಾನದಿಂದ ಶವ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ವ್ಯಕ್ತಿಯ ಕೈಯಲ್ಲಿನ ಗುರುತು ಮತ್ತು ಕೆಲವೊಂದು ನಿರ್ದಿಷ್ಟ ಹೋಲಿಕೆಗಳಿಂದ ಅದು ಶಂಕರನ ಶವ ಎಂದು ತಿರ್ಮಾನಕ್ಕೆ ಬಂದು ಪೊಲೀಸ್ ಇಲಾಖೆಗೆ ತಿಳಿಸಿ ಶವವನ್ನು ಶಂಕರನ ಹುಟ್ಟೂರಾದ ಬಾರ್ಕೂರಿನ ಬೆಣ್ಣೆಕುದ್ರುಗೆ ತಂದು ಸಂಸ್ಕಾರ ಮಾಡಲಾಗಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

ಇದಾದ ಕೆಲವೇ ದಿನಗಳಲ್ಲಿ ಶಂಕರನ ಬಂಧುವಿಗೊಂದು ಅಚ್ಚರಿ ಕಾದಿತ್ತು. ಸಾಸ್ತಾನದ ಬಾರ್‌ಗೆ ತೆರಳಿದ್ದ ಶಂಕರನ ಆತ ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ ಅಲ್ಲಿಯೇ ಇದ್ದ ಆಶ್ಚರ್ಯಗೊಂಡು ತಾನೇ ಆತನಿಗೆ ಜೀವಂತವಾಗಿಯೇ ಇದ್ದಾನೆ. ತಾನೇ ಗುಲ್ಬರ್ಗಾದ ಹೋಟೆಲ್ ಒಂದರಲ್ಲಿ ಕೆಲಸ ಆತನಿಗೆ ಕೆಲಸ ಕೊಡಿಸಿದ್ದೇನೆ ಎಂದಿದ್ದಾರೆ. ಇದನ್ನು ದೃಢಪಡಿಸಲು ಆತನಿಗೆ  ಕರೆ ಮಾಡಿದ್ದಾರೆ. ವಿಚಾರ ತಿಳಿದ ಶಂಕರನಿಗೂ ಆಶ್ಚರ್ಯ. ಯಾರು ಸತ್ತಿದ್ದು? ಸಂಸ್ಕಾರ ಮಾಡಿದ್ದು ಯಾರದ್ದು! ಶಂಕರ ಕೂಡಲೇ ಊರಿಗೆ ಮರಳಿದಾಗ ಆತ ಜೀವಂತವಾಗಿರುವುದನ್ನು ಕಂಡ ಸಂಬಂಧಿ, ಸ್ನೇಹಿತರು ಸಂಭ್ರಮ ಪಟ್ಟಿದ್ದಾರೆ. ಆದರೆ ತರಾತುರಿಯಲ್ಲಿ ತಂದು ಸಂಸ್ಕಾರ ಮಾಡಲಾದ ಶವ ಯಾರದ್ದು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಬಾರ್ಕೂರು ಬೆಣ್ಣೆಕುದ್ರು ಮೂಲದವನಾದ ಶಂಕರ(48) ಗುಂಡ್ಮಿ ಮಾಣಿಕಟ್ಟು ಸಮೀಪದ ಗೌರಿ ಎನ್ನುವವರೊಂದಿಗೆ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದ. ವಿಪರೀತವಾಗಿ ಕುಡಿಯುವ ಚಟಕ್ಕೆ ಬಲಿಯಾಗಿದ್ದ ಆತ ತನ್ನ ಹೆಂಡತಿ ಮನೆ ಗುಂಡ್ಮಿ ಮಾಣಿಕಟ್ಟಿನಲ್ಲಿಯೇ ಇರುತ್ತಿದ್ದ. 2 ಗಂಡು ಮತ್ತು ಒಂದು ಮಗಳಿದ್ದರೂ ಕೂಡ ಕುಡಿತಕ್ಕೆ ದಾಸನಾಗಿದ್ದ ಶಂಕರ ಯಾವುದೇ ವಿಷಯಕ್ಕೆ ಬೇಸರ ಮಾಡಿಕೊಂಡು ಕೆಲವು ಸಮಯಗಳಿಂದ ಮನೆಬಿಟ್ಟು ತೆರಳಿದ್ದ. (ಕುಂದಾಪ್ರ ಡಾಟ್ ಕಾಂ ವರದಿ)

Click here

Click here

Click here

Click Here

Call us

Call us

One thought on “ಸತ್ತು ಸಂಸ್ಕಾರ ಮಾಡಿದ ಮೇಲೆ ಮತ್ತೆ ಬದುಕಿ ಬಂದ ಅಸಾಮಿ!

Leave a Reply