ಕುಂದಾಪುರ : ದಾನಗಳಲ್ಲಿ ಅತೀ ಶ್ರೇಷ್ಠದಾನ ರಕ್ತದಾನ. ಒಬ್ಬನ ಜೀವ ಉಳಿಸುವಲ್ಲಿ ಸಹಾಯವಾಗುವ ಈ ದಾನ ದೇವರಿಗೂ ಪ್ರಿಯ. ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್ ಹೇಳಿದರು. ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಕುಂದಾಪುರ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿg ಉದ್ಘಾಟಿಸಿ ಅವರು ಮಾತನಾಡಿದರು. ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಚೇಯರ್‌ಮನ್ ಎಸ್. ಜಯಕರ್ ಶೆಟ್ಟಿ, ಮುತ್ತಯ್ಯ ಶೆಟ್ಟಿ, ರವಿರಾಮ್ ಶೆಟ್ಟಿ, ವೈದ್ಯಾಧಿಕಾರಿ ಡಾ. ಸುಭೋದ್ ಮಲ್ಲಿ, ನಾಗರಾಜ್ ಶೇಟ್, ರಾಜೀವ ಮಾಸ್ತರ್, ಸ್ಥಳದಾನಿ ಗಣಪಯ್ಯ ಶೆಟ್ಟಿ, ಹಕ್ಲಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ ಶೆಟ್ಟಿ ಹೊಳ್ಮಗೆ, ಶಾಲೆಯ ಮುಖ್ಯೋಪಾಧ್ಯಾಂi ಡಾ. ಕಿಶೋರ್‌ಕುಮಾರ್ ಶೆಟ್ಟಿ, ಲಯನ್ ಕಾರ್ಯದರ್ಶಿ ಕಿರಣ್‌ಕುಮಾರ್ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪುರ: ಕಾರ್ಟೂನು ಕೇವಲ ಒಂದು ಕಲೆಯಾಗಿ ಮಾತ್ರ ಉಳಿಯದೇ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಮಾಧ್ಯಮವಾಗಿ ಬೆಳೆದುನಿಂತಿದೆ. ವ್ಯಂಗ್ಯಚಿತ್ರಕಾರರು ಚಿತ್ರ ಕಲಾವಿದರಾಗಿ ಮಾತ್ರವೇ ಉಳಿಯದೇ ಸಮಾಜವನ್ನು ಭಿನ್ನ ದೃಷ್ಠಿಯಿಂದ ಗಮನಿಸುವ ಕಲಾಕಾರರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ರೋಟರಿ ಇಂಟರ್‌ನ್ಯಾಷನಲ್ 2018-19ರ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದರು. ಭಾನುವಾರು ಇಲ್ಲಿನ ಕಲಾಮಂದಿರದಲ್ಲಿ ಕಾರ್ಟೂನು ಕುಂದಾಪುರ ಆಯೋಜಿಸಿದ ’ಕಾರ್ಟೂನು ಹಬ್ಬ’ ಸಮಾರೋಪದಲ್ಲಿ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಚಿನ್ಮಯ ಆಸ್ವತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ಶಾಲೆ ಪ್ರಾಂಶುಪಾಲ ಶರಣ್‌ಕುಮಾರ್, ಹೋಟೆಲ್ ಪಾರಿಜಾತದ ಆಡಳಿತ ನಿರ್ದೇಶಕ ಗಣೇಶ್ ಭಟ್, ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ರೋಟರಿ ಕುಂದಾಪುರ ಮಾಜಿ ಅಧ್ಯಕ್ಷ ಮನೋಜ್ ನಾಯರ್ ಉಪಸ್ಥಿತರಿದ್ದರು. ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಸ್ವಾಗತಿಸಿದರು. ಶಿಕ್ಷಕಿ ಜಯಶೀಲ ಪೈ ನಿರೂಪಿಸಿದರು. ಕೇಶವ ಸಸಿಹಿತ್ಲು, ರವಿಕುಮಾರ್ ಗಂಗೊಳ್ಳಿ ಸಹಕರಿಸಿದರು.
ಕುಂದಾಪುರ: ಕಾರ್ಟೂನಿನಲ್ಲಿ ಸಮಾಜಕ್ಕೊಂದು ಮಸೇಜ್ ಇರಬೇಕು. ಮಹಿಳೆಯರಿಗೆ ಕಾರ್ಟೂನ್ ರಂಗದಲ್ಲಿ ಪ್ರೋತ್ಸಾಹ ನೀಡಿದರೆ ಮಾಯಾ ಕಾಮತ್ ಅವರಂತಾ ಪ್ರಸಿದ್ಧ ವ್ಯಂಗ್ಯಚಿತ್ರಗಾರರ ಬರಲು ಸಾಧ್ಯ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಹೇಳಿದ್ದಾರೆ. ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಮಾಯಾ ಕಾಮತ್ ಕುಟುಂಬ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್‌ನಲ್ಲಿ ನಡೆದ ಮಾಯಾ ಕಾಮತ್ ಕಾರ್ಟೂನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ, ಸ್ಪರ್ಧಾಳುಗಳು ಕಡಿಮೆಯಿದ್ದರೂ, ಹನಿ ಹನಿ ಸೇರಿ ಹಳ್ಳವಾಗುವ ಹಾಗೆ ಮುಂದೊಂದು ದಿನ ಮಹಿಳಾ ಕಾರ್ಟೂನಿಷ್ಟ್‌ಗಳು ರಂಗ ಪ್ರವೇಶ ಮಾಡಲಿದ್ದಾರೆ ಎಂದ ಅವರು, ಕಾರ್ಟೂನ್‌ಗಳು ನೋಡಿ ಅರ್ಥ ಮಾಡಿಕೊಳ್ಳುವ ಹಾಗಿರಬೇಕು ಎಂದರು. ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಆಡಳಿತ ನಿರ್ದೇಶಕ ಅನುಪಮಾ ಬಾಂಡ್ಯಾ ಮಾತನಾಡಿ, ಕಾರ್ಟೂನಿಗೆ ನೋವು ದುಃಖ್ಖ ಮರೆಸುವ ಶಕ್ತಿಯಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರ್ಟೂನ್ ಪೂರಕ. ನರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಚೈತನ್ಯ ವಿಶೇಷ ಮಕ್ಕಳ ಶಾಲೆ ಕಾರ‍್ಯದರ್ಶಿ…
ಕುಂದಾಪುರ: ನಮ್ಮ ಪೂರ್ವಿಕರು ಈ ನೆಲದಲ್ಲಿ ಬಾಳಿ ಬದುಕಿದರು. ನಾವು ಇಲ್ಲಿ ಜೀವನ ಕಟ್ಟಿಕೊಂಡಿದ್ದೇವೆ. ನಮ್ಮ ಮುಂದಿನ ಪೀಳಿಗೆ ಊರು ಬಿಡಬೇಕಾ. ಗ್ರಾಮಸ್ಥರ ಗಮನಕ್ಕೂ ತಾರದೆ, ಗ್ರಾಪಂ ಸದಸ್ಯರ ಮಾಹಿತಿ ಮುಚ್ಚಿಟ್ಟು ಮೀನು ಸಂಸ್ಕರಣಾ ಘಟಕಕ್ಕೆ ಪರವಾನಿಕಗೆ ಕೊಟ್ಟು ನಮ್ಮನ್ನು ಒಕ್ಕಲೆಬ್ಬಿಸೋ ಸಂಚಿ ನಡೆತಿದೆ. [quote font_size=”13″ bgcolor=”#ffffff” arrow=”yes” align=”right”]25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಲಾಗುತ್ತಿರುವ ಬೃಹತ್ ಮೀನುಗಾರಿಕಾ ಘಟಕ ಪರವಾನಿಗೆ ಕೊಡುವ ಮೊದಲು ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರವಾನಿಗೆ ನೀಡಿದ್ದ ಅಕ್ಷಮ್ಯ ಅಪರಾಧ. ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆ ಪರವಾನಿಗೆ ನೀಡಿದ್ದು ಅನುಮಾನಕ್ಕೆ ಕಾರಣ. ಅತಕ್ಷಣ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಕ್ರೋಢೀಕರಿ ಮುಂದಿನ ತೀರ್ಮಾನ ತೆಗೆದುಕೊಳ್ಳುವತನಕ ಕಾಮಗಾರಿ ನಿಲ್ಲಿಸಬೇಕು. ರೈತರ ಜಮೀನು ರೈತರಿಗೆ ತೊಂದರೆ ಕೊಟ್ಟರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ. ಜನರ ಹಿತ ಬಲಿ ಕೊಟ್ಟು ಘಟಕ ಸ್ಥಾಪನೆಗೆ ಅವಕಾಶ ನೀಡೋದಿಲ್ಲ. – ದೀಪಕ್ ಕುಮಾರ್…
ಬೈಂದೂರು: ಇಲ್ಲಿನ ರೋಟರಿ ಸಭಾಭವದಲ್ಲಿ ಯಡ್ತರೆ, ಬೈಂದೂರು, ಪಡುವರಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ ಜರುಗಿತು. ವಿಧಾನ ಪರಿಷತ್ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ ಬೇರೆಯವರಿಗೂ ಅವಕಾಶ ನೀಡಬೇಕೆಂಬ ಉದ್ದೇಶದಿಂದ ತಾನು ಸ್ವರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಪಕ್ಷದ ಕಾರ್ಯಕರ್ತರು, ವರಿಷ್ಠರು ಮತ್ತೆ ಸ್ವರ್ಧಿಸಬೇಕೆಂಬ ತೀರ್ಮಾನ ಕೈಗೊಂಡಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದ ಅವರು ಜಯಪ್ರಕಾಶ್ ಹೆಗ್ಡೆಯವರಿಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಎರಡು ಭಾರಿ ಸೋತವರಿಗೆ ಮತ್ತೆ ಅವಕಾಶ ಮಾಡಿಕೊಡಬಾರದೆಂಬ ನಿಯಮವನ್ನೂ ಮೀರಿ ಸ್ವರ್ಧಿಸಲು ಅನುವು ಮಾಡಿಕೊಟ್ಟಿತ್ತು. ಇನ್ನೂ ಅವರಿಗೇ ಮಾನ್ಯತೆ ನೀಡಬೇಕು ಎನ್ನುವುದಲ್ಲಿ ಅರ್ಥವಿಲ್ಲ. ಜಯಪ್ರಕಾಶ್ ಹೆಗ್ಡೆಯವರದ್ದು ಬಂಡಾಯವಲ್ಲ. ಅಧಿಕಾರ ದಾಹದ ನಡೆಯಷ್ಟೇ. ಇವರು ಯಾವ ಪಕ್ಷದಲ್ಲೂ ಶಾಶ್ವತವಾಗಿ ಇರಲಾರರು. ನಾವು ಜಯಪ್ರಕಾಶ್ ಹೆಗ್ಡೆಯವರನ್ನು ಟೀಕಿಸುತ್ತಿಲ್ಲ. ಬದಲಿಗೆ ಅವರ ನಡೆಯನ್ನು ಖಂಡಿಸುತ್ತಿದ್ದೇವೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಶಾಸಕ ಗೋಪಾಲ ಪೂಜಾರಿ ಮಾತನಾಡಿ ಕಾಂಗ್ರೆಸ್ ಪ್ರತಾಪ್‌ಚಂದ್ರ ಶೆಟ್ಟಿ ಪಕ್ಷದ ಇತರ…
ಕುಂದಾಪುರ: ನಮ್ಮ ಸುತ್ತಮುತ್ತಲಿನ ಅಂಕುಡೊಂಕು ಜನಸಾಮಾನ್ಯರಿಗೆ ಮುಟ್ಟಿಸುವ ಮತ್ತು ಸಮಾಜವನ್ನು ಸದಾ ಎಚ್ಚರದಲ್ಲಿರಿಸುವ ಶಕ್ತಿ ಕಾರ್ಟೂನಿಗಿದೆ ಎಂದು ಉಡುಪಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಐಎಂಎ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್ ಕಲಾ ಮಂದಿರದಲ್ಲಿ ನಡೆದ ಕಾರ್ಟೂನ್ ಹಬ್ಬದಲ್ಲಿ ಡೂಡ್ಲಿಂಗ್ ವಿದ್ ಡಾಕ್ಟರ್’ ವಿಶಿಷ್ಟ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಸಾಮಾನ್ಯರಿಗಿಂತ ಹೆಚ್ಚು ಒತ್ತಡದಲ್ಲಿ ವೈದ್ಯರು ಕೆಲಸ ಮಾಡಬೇಕಿದ್ದು, ಅವರ ಒತ್ತಡ ನಿವಾರಕ ಶಕ್ತಿ ಕಾರ್ಟೂನಿಗಿದೆ. ನಿತ್ಯದ ಬದುಕು, ಹತ್ತಾರು ಸಮಸ್ಯೆಗಳ, ಸಮಾಜದ ಅಪಸೌವ್ಯಗಳ ಬಗ್ಗೆ ಬೆಳಕು ಚೆಲ್ಲುವ ನಿಷ್ಪಕ್ಷಪಾತ ಮಾಧ್ಯಮವಾಗಿ ಕಾರ್ಟೂನ್ ನಿಂತಿದೆ ಎಂದು ಹೇಳಿದರು. ಯಾವುದೋ ಒಂದು ಸಂದರ್ಭದಲ್ಲಿ ಕಾರ್ಟೂನ್ ಲೋಕಕ್ಕೆ ಕಾಲಿಟ್ಟ ಸತೀಶ್ ಆಚಾರ‍್ಯ ಕಾರ್ಟೂನ್ ಲೋಕದ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ ಅವರು, ಕಾರ್ಟೂನ್‌ನಲ್ಲಿ ಪಕ್ಷಬೇಧ ಕಂಡುಬಾರದೆ ನಿಷ್ಪಕ್ಷಪಾತ ರಚನೆಯಲ್ಲಿ ಸತೀಶ್ ಸಿದ್ಧ ಹಸ್ತರು ಎಂದು ಬಣ್ಣಿಸಿದರು. ಕುಂದಾಪುರ ಐಎಂಎ ಅಧ್ಯಕ್ಷ ಶ್ರೀ ದೇವಿ ನರ್ಸಿಂಗ್ ಹೋಮ್ ವೈದ್ಯಕೀಯ ನಿರ್ದೇಶಕಿ…
ಕುಂದಾಪುರ: ಈ ಚುನಾವಣೆಯಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ವ್ಯವಸ್ಥಿತ ಕಾರ್ಯ ಯೋಜನೆ ರೂಪಿಸಿದೆ. ಕಾಂಗ್ರೆಸ್‌ನಲ್ಲಿರುವ ಆಂತರಿಕ ಬಂಡಾಯದ ಗೊಂದಲ ಒಂದಷ್ಟು ಮತಗಳು ನಮ್ಮತ್ತ ಬರಲು ಪ್ರೇರಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕುಂದಾಪುರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಎರಡು ಅವಧಿಯಲ್ಲಿ ವಿಧಾನ ಪರಿಷತ್‌ನ ಸದಸ್ಯನಾದ ಅನಂತರ ನಮ್ಮದೇ ಸರಕಾರ ಇರುವಾಗ ಕರ್ನಾಟಕ ರಾಜ್ಯದ ಇತಿಹಾಸಧಿದಲ್ಲೇ ಪ್ರಥಮವಾಗಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ನೀಡುವ ಬಗ್ಗೆ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಒಂದಷ್ಟು ಶಕ್ತಿ ನೀಡಬೇಕು, ತಾ.ಪಂ. ನಗರಸಭೆ, ಪುರಸಭೆಗಳಿಗೆ ಅನುದಾನ ಹೆಚ್ಚಿಸಬೇಕು ಮತ್ತು ಸ್ಥಳೀಯಾಡಳಿತದ ಎಲ್ಲ ಸಮಸ್ಯೆಗಳಿಗೆ ಪರಿಹಾರ ತಂದುಕೊಡಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದು ಅವರು ಹೇಳಿದರು. (ಕುಂದಾಪ್ರ ಡಾಟ್ ಕಾಂ) ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯಾಡಳಿತಗಳಿಗೆ ಸ್ವಾಯತ್ತೆ ನೀಡಬೇಕು ಎನ್ನುವ ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಹೇಳಲಾದ ಎಲ್ಲ ಅಂಶಗಳು…
ಕುಂದಾಪುರ: ಕರಾವಳಿಯ ಇತಿಹಾಸ ಪ್ರಸಿದ್ಧ ಗೋಳಿಗರಡಿ ಮೇಳ ಗರಡಿಯ ವತಿಯಿಂದ ಯಕ್ಷಗಾನ ಪ್ರದರ್ಶನ ನೀಡುವ ಏಕೈಕ ಮೇಳ ಇದಾಗಿದೆ. ವಿಠಲ ಪೂಜಾರಿ ಅವರ ಸಮರ್ಥ ನೇತೃತ್ವದಲ್ಲಿ ಮೇಳ ಯಶಸ್ವಿ ತಿರುಗಾಟ ನಡೆಸುವ ಮೂಲಕ ಕಲಾಸೇವೆ ಮಾಡುತ್ತಿದೆ ಎಂದು ಯಕ್ಷಗಾನ ವಿಮರ್ಶಕ, ಉಪನ್ಯಾಸಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಸಾಸ್ತಾನದ ಗೋಳಿಗರಡಿ ದೈವಸ್ಥಾನದಲ್ಲಿ ನ.೨೨ರಂದು ನಡೆದ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ದೇವರ ಸೇವೆ ಮತ್ತು ಸಾಸ್ತಾನ ದಿ|ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು. ಇವತ್ತು ಕಲಾ ಸೇವೆಯಲ್ಲಿ ಪ್ರಶಸ್ತಿ ಪಡೆಯುವ ವ್ಯಕ್ತಿಗೆ ಆರ್ಹ ಮಾನದಂಡವಿರಬೇಕು. ಅದನ್ನು ಪ್ರಶಸ್ತಿ ನೀಡುವ ಆಯೋಜಕರು ಪರಿಗಣಿಸಬೇಕು. ಆರ್ಹರಿಗೆ ಪ್ರಶಸ್ತಿ ಲಭಿಸಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚಳವಾಗುತ್ತದೆ ಎಂದರು. ಬಡಗುತಿಟ್ಟಿನ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಅವರಿಗೆ ಸಾಸ್ತಾನ ದಿ.ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್…
ಗಂಗೊಳ್ಳಿ : 1890ರ ದಶಕದಲ್ಲಿ ಆರಂಭವಾಗಿದ್ದ ಎಸ್.ವಿ. ವಿದ್ಯಾಸಂಸ್ಥೆಗಳು ನಿರಂತರವಾಗಿ ಸುತ್ತಮುತ್ತಲಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಮೂಲಕ ವಿದ್ಯಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದುಕೊಂಡಿದೆ. ಶಾಲೆಯ ಆರಂಭಿಸುವ ಸಮಯದಲ್ಲಿ ನಮ್ಮ ಹಿರಿಯರು ಪಟ್ಟ ಪರಿಶ್ರಮ ಹಾಗೂ ಹಿರಿಯರ ದೂರದೃಷ್ಟಿಯ ಫಲವಾಗಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯ ಸಾಧನೆ ವಿಶಿಷ್ಟ ಹಾಗೂ ಶ್ರೇಷ್ಠವಾದುದು ಎಂದು ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಂಡ್ಯ ಪಾಂಡುರಂಗ ಪೈ ಬೆಂಗಳೂರು ಶುಭಾಶಂಸನೆಗೈದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಉಪಸ್ಥಿತರಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ, ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಭರತ್ ಕುಮಾರ್ ಭಟ್ ಸ್ವಸ್ತಿವಾಚನಗೈದರು. ಈ ಸಂದರ್ಭ ಶಾಲೆಯ ಉತ್ತಮ ಆದರ್ಶ ವಿದ್ಯಾರ್ಥಿನಿ ಸುನೀತಾ ಪೂಜಾರಿ ಅವರಿಗೆ ಬಾಂಡ್ಯ ರಾಮರಾಮ ಪೈ ಸ್ಮಾರಕ…
ಕುಂದಾಪುರ: ಪುತ್ತೂರಿನ ಫಿಲೋಮಿನ ಕ್ರೀಡಾಂಗಣದಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟದ ಫೈನಲ್ ಹಣಾಹಣಿ ನಡೆಯಿತು. ರೋಟರಿ ವಲಯ1ರ ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಶಿಫ್ ಪಡೆದು ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟಕ್ಕೆ ಅರ್ಹತೆಯನ್ನು ಪಡೆದ ಶ್ರೀಪಾದ ಉಪಾಧ್ಯಾಯ ನಾಯಕತ್ವದ ರೋಟರಿ ಕ್ಲಬ್ ಕುಂದಾಪುರ ತಂಡ ಮಂಗಳೂರಿನಲ್ಲಿ ನಡೆದ ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಫೈನಲ್ ಪ್ರವೇಶಿಸಿತ್ತು. ಪುತ್ತೂರಿನಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರೆಲ್ ತಂಡವನ್ನು ಮಣಿಸಿ ರೋಟರಿ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿಯೂ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರ ತಂಡದ ಕಪ್ತಾನ ಶ್ರೀಪಾದ ಉಪಧ್ಯಾಯ, ಸದಸ್ಯರಾದ ಸತೀಶ್ ಕೋಟ್ಯಾನ್, ಪ್ರದೀಪ್ ವಾಜ್, ಮನೋಜ್ ನಾಯರ್, ದಿನೇಶ್ ಮದ್ದುಗುಡ್ಡೆ, ಕೀಶೋರ್ ಕೋಟ್ಯಾನ್, ರಂಜಿತ್ ಶೆಟ್ಟಿ, ಜುಬಿನ್ ತೋಳಾರ್, ಶಾಹಿದ್ ನಾಕುದ, ವಿಜಯ ಎಸ್. ಪೂಜಾರಿ, ರಾಘವೇಂದ್ರಚರಣ ನಾವಡ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಟ್ರೋಫಿ ಹಾಗೂ ಪದಕವನ್ನು ರೋಟರಿ ಜಿಲ್ಲಾ ಗವರ್ನರ್…
