ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟ ವಿವೇಕ ವಿದ್ಯಾ ಸಂಸ್ಥೆಯ 2026ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗದ ಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ 145 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಹೊಳ್ಳ ಮಿತ್ರನ್ ಕೋ ಲಿಮಿಟೆಡ್ ಫೌಂಡರ್ ಸಿ.ಎ ಅಮರೀಶ ಹೊಳ್ಳ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿಖರ ಗುರಿ ಹೊಂದಿರಬೇಕು. ಏಕಾಗ್ರತೆ, ಸ್ವ ಅಧ್ಯಯನ, ನಿರಂತರ ಪರಿಶ್ರಮ ದಿಂದ ಗುರಿಯನ್ನು ತಲುಪಲು ಸಾಧ್ಯ. ನಮಗೆ ಎದುರಾಗುವ ಸಮಸ್ಯೆ ಗಳನ್ನು ಬಗೆಹರಿಸುವ ಕೌಶಲ ಹೊಂದಿರಬೇಕೆಂದು ತಿಳಿಸಿದರು.

ಕಾರ್ಯ ಕ್ರಮ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷ ಪಿ. ಭಾಸ್ಕರ ಹಂದೆ ವಹಿಸಿದ್ದರು. ಆಡಳಿತ ಮಮಡಳಿಯ ಸದಸ್ಯರಾದ ಶ್ರೀಪತಿ ಹೇರ್ಳೆ ಶುಭಾಶಂಸನೆ ಗೈದರು. ವೇದಿಕೆ ಮೇಲೆ ಜೊತೆ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ, ವಸಂತ ಶೆಟ್ಟಿ, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೆಂಪಿ ರಮಾನಂದ ಭಟ್ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ರಾಜ್ಯಮಟ್ಟದಲ್ಲಿ 5,6,7,9ನೇ ಸ್ಥಾನ ಪಡೆದ ಸಾತ್ವಿಕಾ ಶ್ರೀಯಾನ್, ಅಪೇಕ್ಷಾ ಪೂಜಾರಿ, ಭೂಮಿಕಾ ಟಿ.,ಡಿ., ಶರಣ್ಯಾ ವಾರಂಬಳ್ಳಿ, ಚೈತ್ರಾ ವಿ. ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.
ಪ್ರಾಂಶುಪಾಲ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪ, ಪ್ರೀತಿ ರೇಖಾ, ಪ್ರೇಮಾನಂದ ಹಾಜರಿದ್ದರು. ಅಮಿತ್ ನಿರೂಪಿಸಿ, ಉಪನ್ಯಾಸಕಿರಾದ ಶೋಭಾ ವಂದಿಸಿದರು.
















