ಶಂಕರನಾರಾಯಣ: ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ ಎಂಬಲ್ಲಿ ಆಳವಾದ ಕಂದಕದ ಒಳಗೆ ಜಿಂಕೆಯೊಂದು ಸತ್ತು ಬಿದ್ದಿರುವುದು ಅರಣ್ಯ ರಕ್ಷಕ ಆನಂದ ಬಳೆಗಾರ್ ಎಂಬುವವರಿಗೆ ಪತ್ತೆಯಾಗಿತ್ತು. ಪ್ರಾಣಭಯದಿಂದ ಓಡಿಬಂದ ಜಿಂಕೆ ಕಂದಕದಲ್ಲಿ ಬಿದ್ದು ಸತ್ತಿರಬಹುದು ಎಂದು ಶಂಕಿಸಲಾಗಿದ್ದು, ಸ್ಥಳೀಯ ಪಶುವೈದ್ಯಾಧಿಕಾರಿಗಲ ಸಮ್ಮುಖದಲ್ಲಿ ಜಿಂಕೆಯ ಮೃತದೇಹವನ್ನು ದಹನ ಮಾಡಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪುರ: ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರು ಸಲ್ಲಿಸಿದ ಒಟ್ಟು 336 ಅರ್ಜಿಗಳನ್ನು ಪರಿಶೀಲಿಸಿ, ಅಂತಿಮ ನಿವೇಶನ ರಹಿತರ ಪಟ್ಟಿ ಸಿದ್ಧ ಪಡಿಸಲಾಗಿದ್ದರೂ ಕುಂದಾಪುರ ತಹಶೀಲ್ದಾರ್ ಕಛೇರಿಯಿಂದ ಕಂದಾಯ ಸರಕಾರಿ ಭೂಮಿಯನ್ನು ಗುರುತಿಸಿ – ಹಕ್ಕು ಪತ್ರ ವಿತರಣೆ ಮಾಡುವುದಕ್ಕೆ ಕ್ರಮ ವಹಿಸಿದ ಸರಕಾರದ ಬಡವರ ವಿರೋಧಿ ಧೋರಣೆ ಖಂಡಿಸಿ ಪೆಬ್ರವರಿ ತಿಂಗಳಲ್ಲಿ ತಹಶೀಲ್ದಾರ್ ಕಛೇರಿ ಎದುರು ಜರಗುವ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ ಹೇಳಿದರು. ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ತಾಲೂಕಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಪಡುಕೋಣೆ, ಯು. ದಾಸಭಂಡಾರಿ, ಎಚ್. ನರಸಿಂಹ, ಸುರೇಶ ಕಲ್ಲಾಗರ, ಕುಶಲಿ, ಪದ್ಮಾವತಿ ಶೆಟ್ಟಿ, ನಾಗರತ್ನ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ತಾಲೂಕು ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ…
ಗಂಗೊಳ್ಳಿ: ಗುಜ್ಜಾಡಿ ಮಂಕಿಯಲ್ಲಿನ ಸ್ಪಂದನ ಯುವ ಸಂಘದ ವಾರ್ಷಿಕೋತ್ಸವ ಸಮಾರಂಭ ಇತ್ತೀಚಿಗೆ ಮಂಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಸದಸ್ಯ ತಮ್ಮಯ್ಯ ದೇವಾಡಿಗ ಶುಭಾಶಂಸನೆಗೈದರು. ಇದೇ ಸಂದರ್ಭ ಮಂಕಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಆಶಾಭಾನು ಅವರನ್ನು ಸನ್ಮಾನಿಸಲಾಯಿತು. ಮಂಕಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶ್ರೀಯಾನ್, ಉಪ್ಪಿನಕುದ್ರು ಶಾಲೆಯ ಮುಖ್ಯೋಪಾಧ್ಯಾಯ ಭಾಸ್ಕರ ಮಯ್ಯ, ಮತ್ಸ್ಯೋದ್ಯಮಿ ಮೋಹನ ಖಾರ್ವಿ ಗಂಗೊಳ್ಳಿ, ಮಂಕಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ ಬಿಲ್ಲವ, ಗುಜ್ಜಾಡಿ ಗ್ರಾಪಂ ಸದಸ್ಯೆ ನಿರ್ಮಲಾ ಶೆಡ್ತಿ, ಸ್ಪಂದನ ಯುವ ಸಂಘದ ಮಾರ್ಗದರ್ಶಕರಾದ ಪುಂಡಲೀಕ ಮಂಕಿ ಮತ್ತು ಪರಮೇಶ್ವರ ಶ್ರೀಯಾನ್ ಹಾಗೂ ಸಂಘದ ಅಧ್ಯಕ್ಷ ರಾಘವೇಂದ್ರ ಉಪಸ್ಥಿತರಿದ್ದರು. ಸಚಿನ್ ಆರ್. ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಾಪ ವರದಿ ವಾಚಿಸಿದರು. ರೇಷ್ಮಾ ಕುಂದರ್ ವಂದಿಸಿದರು.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ಹಾಗೂ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ ನಿವೇಶನ ರಹಿತರಿಂದ ಮನೆ, ನಿವೇಶನ ಕೋರಿಕೆಗೆ ಸ್ವೀಕರಿಸಿದ 282 ಅರ್ಜಿಗಳನ್ನು ಅಂತಿಮ ಪಟ್ಟಿ ಸಿದ್ಧ ಪಡಿಸಿ ವರ್ಷ ಒಂದು ಕಳೆದರೂ ಸರಕಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕು ಪತ್ರ ಕೊಡಲು ಮುಂದಾಗದ ಜಿಲ್ಲಾಡಳಿತ ವಿರುದ್ಧ ಜನವರಿ ತಿಂಗಳಲ್ಲಿ ಬೃಹತ್ ಪ್ರತಿಭಟನಾ ಮುಷ್ಕರ ನಡೆಸುವುದಕ್ಕೆ ಪೂರ್ವಭಾವಿ ತಯಾರಿಗಾಗಿ ನಿವೇಶನ ರಹಿತರ ಸಮಾವೇಶ ಕುಂಭಾಶಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜರಗಿತು. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ನಿವೇಶನ ರಹಿತರ ಸಭೆಯನ್ನುದ್ದೇಶಿಸಿ, ಮಾತನಾಡುತ್ತಾ ಕುಂಭಾಶಿ ಗ್ರಾಮದ ನಾಗರಿಕರಿಗೆ ಮೂಲಭೂತ ಸೌಕರ್ಯ ಕೊಡದ ಸ್ಥಳಿಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ, ಕಾಂಚನಮಾಲ, ಎಚ್. ನರಸಿಂಹ, ನಾಗರತ್ನ ನಾಡ, ಪದ್ಮಾವತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯದಲ್ಲಿ ಮಳೆ ಕಡಿಮೆ ಇರುವುದರಿಂದ ಮುಂದೆ ತಲೆದೂರಬಹುದಾದ ವಿದ್ಯುತ್ ಸಮಸ್ಯೆ ನಿವಾರಣೆಗೆ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದು ಡಿಸೆಂಬರ್ 15ರ ಬಳಿಕ ಈ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ರಾಜ್ಯ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಚಂಡಿಕಾ ಯಾಗ ನೆರವೇರಿಸಿ, ದೇವಿ ಮೂಕಾಂಬಿಕೆಗೆ ಪೂಜೆ ಸಲ್ಲಿಸಿದ ಬಳಿಕ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈಗಿನಂತೆಯೇ ಮಾಮೂಲಿಯಾಗಿ ವಿದ್ಯುತ್ ನೀಡಲಾಗುವುದು. ಪವರ್‌ಕಟ್ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮವಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಶೇಖರಿಸಿಡಲಾಗಿದೆ ಎಂದ ಅವರು ಉಡುಪಿ ಜಿಲ್ಲೆಗೆ ವಿದ್ಯುತ್ ಕೊರತೆ ಸರಿದೂಗಿಸಲು ವಿಶೇಷ ಗಮನ ಹರಿಸಿದ್ದು ಈ ಭಾಗದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಶಾಸಕ ಪ್ರಮೋದ್ ಮಧ್ವರಾಜ್ ಅವರ ಕೋರಿಕೆಯ ಮೇರೆಗೆ ದಿನದ 24ಗಂಟೆಯೂ ವಿದ್ಯುತ್ ನೀಡುವ ಆದೇಶ ಹೊರಡಿಸಲಾಗಿದೆ ಎಂದರು. ಹೊಸ ಬೆಳಕು ಎಂಬ ಯೋಜನೆಯಡಿಯಲ್ಲಿ ವಿದ್ಯುತ್ ಮಿತ ಬಳಕೆಗಾಗಿ…
ಕೊಲ್ಲೂರು: ಸಮೀಪದ ಹಾಲ್ಕಲ್ ಆಶ್ರಮದ ಬಳಿ ಗುರುವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಮೃತಪಟ್ಟ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ನಾಗೇಶ ದಾಸ್ (58) ಮೃತಪಟ್ಟ ದುರ್ದೈವಿ. ದಾಸ್ ಅವರು ಕೊಲ್ಲೂರು ರಾಜ್ಯ ಹೆದ್ದಾರಿ ಹಾಲ್ಕಲ್‌ನಲ್ಲಿ ಹೋಟೆಲ್ ಹಾಗೂ ದಿನಸಿ ಅಂಗಡಿ ನಡೆಸುತ್ತಿದ್ದು, ಮಧ್ಯಾಹ್ನ ಸುಮಾರು 12:30ರ ವೇಳೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೊಲ್ಲೂರು ಕಡೆಗೆ ಹೋಗುತ್ತಿರುವಾಗ ಆಕಸ್ಮಿಕವಾಗಿ ವಾಹನಕ್ಕೆ ಅಡ್ಡ ಬಂದ ದನವನ್ನು ತಪ್ಪಿಸುವ ಪ್ರಯತ್ನದಲ್ಲಿ ರಸ್ತೆಗೆ ಬಿದ್ದು ಸಾವನಪ್ಪಿದ್ದಾರೆ. ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಐತಿಹಾಸಿಕ ಪ್ರಸಿದ್ಧ ತಗ್ಗರ್ಸೆ ಹೆಗ್ಡೆ ಮನೆಯವರ ವರ್ಷಾವದಿ ಕಂಬಳ ಮಹೋತ್ಸವವು ತಗ್ಗರ್ಸೆ ಕಂಬಳಗದ್ದೆಯಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಮಾಜಿ ಶಾಸಕ ಕೆ. ಲಕ್ಷ್ಮಿ ನಾರಾಯಣ ಕಂಬಳೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಶಾಸಕ ಕೆ. ಗೋಪಾಲ ಪಜಾರಿ ಕಂಬಳದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಜಿಪಂ ಸದಸ್ಯ ಬಾಬು ಶೆಟ್ಟಿ, ತಾಪಂ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ್, ಉಡುಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕ್ಟ ಪಜಾರಿ ಸಸಿಹಿತ್ಲು, ಉಪ್ಪುಂದ ಲಯನ್ಸ್ ಅಧ್ಯಕ್ಷ ಗೋಕುಲ ಜಿ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಧಾನ ತೀರ್ಪುಗಾರರಾದ ಗುಣಪಾಲ ಕಡಂಬ, ಉಡುಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕ್ಟ ಪಜಾರಿಯವರನ್ನು ಸನ್ಮಾನಿಸಲಾಯಿತು. ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ…
ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು “ಮೂರು” ಅಪ್ಪಣೆ ಮಾಡಿದ. ೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು. ೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು. ೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು. ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ. ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು! ೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ. ೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ…
ಕುಂದಾಪುರ: ಸೌಮ್ಯ, ಸಜ್ಜನ, ಪ್ರಾಮಾಣಿಕರೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ಜನ ಬರುಬರುತ್ತಾ ಅಸಹನೆ, ಮೇಲಾಟದ ಪ್ರತೀಕವಾಗುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಭಾಷಾಭಿಮಾನ, ಪ್ರಾಂತ್ಯಾಭಿಮಾನ ಮರೆತುಹೋಗಿ, ಹಣಗಳಿಸುವುದು ಹೇಗೆಂಬ ಯೋಚನೆ ಹೆಚ್ಚಿದೆ ಎಂದು ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ನಾರಾಯಣಿ ದಾಮೋದರ್ ಹೇಳಿದರು. ಅವರು ಕನ್ನಡ ವೇದಿಕೆ ಕುಂದಾಪುರದ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮದ ಕೊನೆಯ ವಾರದ ಕಾರ್ಯಕ್ರಮದಲ್ಲಿ ಕನ್ನಡವೆನೆ ಮನ ಕುಣಿಯುವುದು ಎಂಬ ವಿಷಯವಾಗಿ ಮಾತನಾಡುತ್ತಾ ಈ ಜಗತ್ತಿನಲ್ಲಿ ಕಾಸು ಮಾಡುವ ಕಸರತ್ತು ಬಿಟ್ಟರೆ ಬೇರೇನೂ ಕಾಣಿಸದು. ನಮ್ಮಲ್ಲಿ ಭಾವೈಕ್ಯತೆ ಮರೆಯಾಗಿ ಹೋಗಿದೆ. ಗುಣ ಮೌಲ್ಯಗಳೆನಿಸಿದ ಪ್ರೀತಿ, ಕರುಣೆ, ನಮ್ರತೆ ಇವೆಲ್ಲಾ ಕಾಲಕ್ಕೆ ತಕ್ಕಂತೆ ಬಿಕರಿಯಾಗುವ ವಸ್ತುಗಳಾಗಿಬಿಟ್ಟವೆ. ಕೆಲವರು ಸೇವೆಯನ್ನೇ ಕಸುಬಾಗಿಸಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಂತೆ ಕಾಣಿಸುತ್ತದೆ ಎಂದರು. ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಪ್ರಾಥಮಿಕ ಶಿಕ್ಷಣ ಎನ್ನುವುದು ದಿಕ್ಕು ದೆಸೆ ಇಲ್ಲದೇ ಸೊರಗಿದೆ. ಸರಕಾರ ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಶಿಕ್ಷಕರ ಸಂಖ್ಯೆ ಹೆಚ್ಚಿಸಿದೆ ಎಂದರು ಮಯೂರ ಪ್ರಶಸ್ತಿ…
ಬೈಂದೂರು: ಇಲ್ಲಿಗೆ ಸಮೀಪದ ಬಿಜೂರು ಕೃಷಿ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಅಡಿಯಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಇಂದು ಸಂಜೆ ನಡೆದಿದೆ. ಬಿಜೂರು ಗ್ರಾಮದ ಕಂಚಿಕಾನ್ ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಅವರ ಮಗ ಚೇತನ (9) ನತದೃಷ್ಟ ಬಾಲಕ. ನಾರಂಬಳ್ಳಿಯ ಚಿಕ್ಕಯ್ಯ ಪೂಜಾರಿ ಹಾಗೂ ಕುಸುಮಾ ದಂಪತಿಯ ಪುತ್ರನಾದ ಚೇತನ್ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಭಾನುವಾರ ಶಾಲೆ ರಜೆವಿರುವುದರಿಂದ ಮನೆಯ ಸನಿಹದಲ್ಲೇ ಇರುವ ಕೃಷಿ ಗದ್ದೆಗೆ ತೆರಳಿದ್ದ ಎನ್ನಲಾಗಿದೆ. ಅಲ್ಲಿ ಉಳುವೆ ಮಾಡುತ್ತಿದ್ದ ಬಾಡಿಗೆ ಟ್ರಾಕ್ಟರ್ ಗೆ ಗದ್ದೆಯಲ್ಲಿ ಬಾಲಕ ಆಕಸ್ಮಿಕವಾಗಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂಬೈ ಹೊಟೇಲ್‌ನ ಕಾರ್ಮಿಕನಾಗಿ ದುಡಿಯುತ್ತಿದ್ದ ತಂದೆ ಚಿಕ್ಕಯ್ಯ ಅವರದ್ದು ಬಡ ಕುಟುಂಬ. ಚಿಕ್ಕ ಮಗುವಿನ ಈ ಆಕಸ್ಮಿಕ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
