ಕುಂದಾಪುರ: ಉಡುಪಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಕರಾಟೆ ಟೀಚರ್ಸ್ ಅಸೋಶಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಆಯ್ಕೆ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಉಪ್ಪುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಲಕ್ಷ್ಮೀಕಾಂತ್ ಎನ್.ಆರ್. (45-50) ಬ್ರೌನ್‌ಬೆಲ್ಟ್‌ನಲ್ಲಿ ವೈಯಕ್ತಿಕವಾಗಿ ಪ್ರಥಮ ಸ್ಥಾನ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಅಲ್ಲದೇ ನಾಗೂರು ಸಂದೀಪನ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಹನೀಶ್ ಎನ್.ಆರ್.(26-30ಕೆ.ಜಿ) ಪ್ರಥಮ ಹಾಗೂ ಶ್ರೇಯಸ್ ಎನ್.ಆರ್. (30-35ಕೆಜಿ) ಬ್ರೌನ್‌ಬೆಲ್ಟ್‌ನಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಕಿರಣ್‌ಕುಮಾರ್ ಅವರಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.
Author: ನ್ಯೂಸ್ ಬ್ಯೂರೋ
ಗಂಗೊಳ್ಳಿ: ಉತ್ತಮ ಸಾಹಿತ್ಯಗಳು ನಮಗೆ ನಿಜವಾದ ಜ್ಞಾನ ವಿವೇಕವನ್ನು ನೀಡುತ್ತದೆ. ಮಾನವೀಯ ಸಂಬಂಧಗಳು ಬೆಳೆಯುತ್ತದೆ. ನಮ್ಮಲ್ಲಿ ನೈತಿಕ ಸ್ಥೈರ್ಯವನ್ನು ನೀಡುತ್ತದೆ. ಆದರೆ ಪರಿಸರವನ್ನು ಮತ್ತು ಸಂಕುಚಿತ ಆವರಣವನ್ನು ಮೀರಿ ಬೆಳೆಯಲು ಸಾಹಿತ್ಯ, ಕಲೆ ಮೊದಲಾದವುಗಳು ಸಹಕಾರಿಯಾಗಲಿದೆ. ಸಾಹಿತ್ಯ ಎನ್ನುವುದು ವಿಕಾಸದ ರಿಲೇ ಓಟ ಇದ್ದಂತೆ. ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಸಾಧನೆ ಮಾಡಿದ ಅನೇಕ ಸಾಧಕರಿದ್ದು, ಅವರ ಈ ಸಾಹಿತ್ಯದ ಓಟವನ್ನು ಇಂದಿನ ಯುವ ಜನಾಂಗ ಮುಂದುವರಿಸಬೇಕು. ಓದುವುದು ನಮ್ಮ ಬದುಕಿಗೆ ಬೇಕಾಗಿದ್ದು, ಬದುಕಿನಲ್ಲಿ ಎದುರಾಗುವ ಪರೀಕ್ಷೆಗಳಿಗೆ ಸಾಹಿತ್ಯವೇ ಪಠ್ಯಪುಸ್ತಕ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಕುಂದಪ್ರಭ ಕುಂದಾಪುರ, ಸಾಹಿತ್ಯ ವೇದಿಕೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗರಿ ಶೆಣೈ ಸ್ಮರಣಾರ್ಥ ಆಯೋಜಿಸಿದ್ದ ಸವಿ-ನುಡಿ ಹಬ್ಬ 2015 ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವುದು ಬಹಳಷ್ಟು ಕಡಿಮೆಯಾಗುತ್ತಿದೆ. ಚೆಕ್ ಪುಸ್ತಕ, ಪಾಸ್ ಪುಸ್ತಕ ಹಾಗೂ…
ಹಿಂದೂಗಳ ಭಾವನೆಗೆ ವಿನಾಕಾರಣ ಧಕ್ಕೆಯನ್ನುಂಟು ಮಾಡಿದರೇ ಉಗ್ರ ಹೋರಾಟ: ಹಿಂದೂ ಸಂಘಟನೆಗಳ ಎಚ್ಚರಿಕೆ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಲ್ಲೂರು ರಾಷ್ಟ್ರೀಯ ಹೆದ್ದಾರಿ ಬಳಿಯ ವೃತ್ತದಲ್ಲಿ ಹಾಕಲಾಗಿದ್ದ ಭವಗದ್ವಜವನ್ನು ಕೋಮು ಸಂಘ ಸಂಘರ್ಷದ ಕಾರಣವೊಡ್ಡಿ ತೆರವುಗೊಳಿಸಿ ತಲ್ಲೂರು ಗ್ರಾಮ ಪಂಚಾಯತ್ ನಿರ್ಧಾರವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಇಂದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಲ್ಲೂರು ವೃತ್ತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಭಗವದ್ವಜ ಹಾರಾಡುತ್ತಿದೆ. ಇಂದು ಎಂದಿಗೂ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿಲ್ಲ. ಊರಿನ ಶಾಂತಿ ಸೌಹಾರ್ದತೆ ಸಂಕೇತವಾಗಿ ಮುಂದುವರಿದಿದೆ. ದ್ವಜ ಹಾರಿಸುವುದರಿಂದಲೇ ತಲ್ಲೂರಿನಲ್ಲಿ ಕೋಮ ಸಂಘರ್ಷ ನಡೆಯುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾರದ್ದೋ ಹಿತಾಸಕ್ತಿಗಾಗಿ ಧ್ವಜ ತೆರವುಗೊಳಿಸಿ ಹಿಂದೂಗಳ ಭಾವನೆ ಘಾಸಿಯನ್ನುಂಟು ಮಾಡಲಾಗಿದೆ ಎಂದು ಸಂಘ ಪರಿವಾರ ಆರೋಪಿಸಿವೆ. ಕರ್ನಾಟಕ ರಾಜ್ಯದ ಹೆಚ್ಚಿನ ಸರ್ಕಲ್‌ಗಳಲ್ಲಿ ಕೇಸರಿ ಧ್ವಜ ಹಾರಾಡುತ್ತಿದೆ. ಅಲ್ಲೆಲ್ಲಿಯೂ ಮೂಡದ ಕೋಮು ಸಂಘರ್ಷ ತಲ್ಲೂರಿನಲ್ಲಿ ಹೇಗೆ ಉದ್ಬವಿಸುತ್ತದೆ ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತರು, ತಲ್ಲೂರಿನ ಧ್ವಜ…
ಕುಂದಾಪುರ: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೊಳಿಸ ಹೊರಟಿರುವ ಕಸ್ತೂರಿರಂಗನ್ ವರದಿಯ ಕರಿಛಾಯೆ ಮತ್ತೆ ಕುಂದಾಪುರ ತಾಲೂಕಿನ ಗ್ರಾಮಗಳ ಮೇಲೆ ಬಿದ್ದಿದೆ. ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮರು ನೋಟಿಸು ಜಾರಿಯಾಗಿರುವುದಲ್ಲದೇ ನಾಲ್ಕು ಹೊಸ ಗ್ರಾಮಗಳನ್ನು ಹೊಸದಾಗಿ ಸೇರಿಸಿಕೊಂಡು ವಿವರಣೆ ಕೇಳಿರುವುದು ಜನರನ್ನು ಮತ್ತೆ ಗೊಂದಲಕ್ಕೀಡು ಮಾಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕುಂದಾಪುರ ತಾಲೂಕಿನ ಶಂಕರನಾರಾಯಣ ವಲಯ ಅರಣ್ಯ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ ಗ್ರಾಮ ಪಂಚಾಯತಿಗಳಿಗೆ ಅ.28ರದು ಮರು ನೋಟಿಸು ಜಾರಿಗೊಳಿಸಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಜನವಾಸ್ತವ್ಯ ಹಾಗೂ ಕೃಷಿ ಭೂಮಿ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಭಾರಿ ಜನಾಂದೋಲನವೇ ನಡೆದಿತ್ತು. ಇದಕ್ಕೆ ಸ್ಪಂದಿಸಿದ್ದ ರಾಜ್ಯ ಸರಕಾರವು ಮಂತ್ರಿಮಂಡಲದ ಉಪಸಮಿತಿಯನ್ನು ರಚಿಸಿ ಅರಣ್ಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಉಸ್ತುವಾರಿ ಮಂತ್ರಿಗಳ ಸಹಯೋಗದೊಂದಿಗೆ ವರದಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ…
ಕುಂದಾಪುರ: ಅಧಿಕಾರಿಗಳ ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನಂತೆ ಕೆಲಸ ಮಾಡಿದರೆ ಜನ ನಮ್ಮ ಕೆಲಸವನ್ನು ಮೆಚ್ಚಿ ವಿಶ್ವಾಸ ಇಡುತ್ತಾರೆ. ಕಳೆದ ಎರಡು ವರ್ಷ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಜಿಪಂ ಸಿಇಓ ಕನಗವಲ್ಲಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯಿತಿ ಮತ್ತು ವಿವಿಧ ಇಲಾಖೆ ಆಶ್ರಯದಲ್ಲಿ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಗ್ರಾಪಂ.ನಲ್ಲಿರುವ ಪಿಡಿಓ ಕೊರೆತೆ ನೀಗಿಸಿ, ಜನರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಜನೋಪಯೋಗಿ ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನೋದಕ್ಕೆ ನೀವು ನೀಡುತ್ತಿರುವ ಅಭಿನಂದನೆ ಸಾಕ್ಷಿ ಎಂದ ಅವರು, ಬೀದರ್ ಜಿಲ್ಲೆಯಲ್ಲಿದ್ದಾಗಲೂ ಗುಣಮಟ್ಟದ ಸೇವೆ ಮೂಲಕ ಇಂದಿಗೂ ನನ್ನನ್ನು ಅವರು ನೆನಪಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು. ಕುಂದಾಪುರ ತಾಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಶಿಕ್ಷಣ ಸ್ಥಾಯಿನ…
ಬೈಂದೂರು: ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಇದೆ. ಅದನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಹಾಗೂ ಶಿಕ್ಷಕರಿಂದ ನಿರಂತರವಾಗಿ ಆಗಬೇಕಿದೆ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿನಾಗಲಿದೆ ಎಂದು ಉಡುಪಿ ಜಿ.ಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಹೇಳಿದರು. ಅವರು ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿ ರಾಜ್ಯದಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆಯ ಮಕ್ಕಳು ಶಿಕ್ಷಣ ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿಯೂ ಸಾಧನೆಗೈದಿದ್ದಾರೆ. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಆಯೋಜನೆಗೆ ಪ್ರತಿಯೊಬ್ಬರ ಶ್ರಮ, ಪಾಲುದಾರಿಕೆ ಇದ್ದರೇ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ ಎಂದರು. ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷೆ ಲಲಿತಾ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಾಗೂರು ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಪುರಮೆರವಣಿಗೆಗೆ ಜಿ.ಪಂ ಸದಸ್ಯ ಬಾಬು ಶೆಟ್ಟಿ ಚಾಲನೆ ನೀಡಿದರು. ಜಿ.ಪಂ ಆರೋಗ್ಯ ಮತ್ತು…
ಕುಂದಾಪುರ: ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಬಂದ್ ಮಾಡಿ ಸ್ವಾಗತ ಗೋಪುರದ ಬಳಿ ನಿರ್ಮಿಸಿರುವುದನ್ನು ವಿರೋಧಿಸಿ, ಕೊರವಡಿ, ಕುಂಭಾಶಿ, ಗೋಪಾಡಿ, ಬೀಜಾಡಿ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಲಾಭಿ ಮತ್ತು ಒತ್ತಡಕ್ಕೆ ಮಣಿದು ಕುಂಭಾಶಿ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಕಟ್ ಮಾಡಿದ್ದರಿಂದ ಕರಾವಳಿ ಭಾಗದ ಜನರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಆಕ್ರೋಶಿತಗೊಂಡಿರುವ ಗ್ರಾಮಸ್ಥರು ಕುಂಭಾಶಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಸರ್ವಿಸ್ ರಸ್ತೆ ಕೂಡಾ ಮಾಡದೆ ಏಕಾಏಕಿ ಹೆದ್ದಾರಿ ಅಧಿಕಾರಿಗಳು ಡಿವೈಡರ್ ಕಟ್ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಸ್ವಾಗತ ಗೋಪುರ ಬಳಿ ಡಿವೈಡರ್ ನಿರ್ಮಿಸಿದ್ದು ಇದರಿಂದ ಅಪಘಾತಗಳು ಹೆಚ್ಚಿ, ಇದೂವರಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಐದು ಜನ ಗಂಭಿರ ಗಾಯಗೊಂಡಿದ್ದಾರೆ. ಕರ್ನಾಟಕ ಬ್ಯಾಂಕ್ ಸಮೀಪಿ ಪ್ರದೇಶ ಸರಕ್ಷಿತವಾಗಿದ್ದು ಅಲ್ಲಿ ಡಿವೈಡರ್ ನಿರ್ಮಿಸಬೇಕು. ಜನರ ಭಾವನೆಗೆ ಬೆಲೆಕೊಟ್ಟು ಕರ್ನಾಟಕ ಬ್ಯಾಂಕ್ ಬಳಿ ಡಿವೈಡರ್ ನಿರ್ಮಿಸದಿದ್ದರೆ ಶಾಂತವಾಗಿ…
ಬೈಂದೂರು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಾರ್ಷಿಕ ಜಾತ್ರೆಯು ಡಿಸೆಂಬರ್ ೨೬ರಂದು ನಡೆಯಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ ದೇವಳದ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರುವುದರೊಂದಿಗೆ, ಜಾತ್ರೆಯು ಶಿಸ್ತುಬದ್ದವಾಗಿ ನಡೆಸಲು ಸ್ವಯಂ ಸೇವಕರನ್ನು ಬಳಸಿಕೊಳ್ಳಬೇಕು ಅದಕ್ಕಾಗಿ ಸ್ಥಳಿಯ ಮಿನೂಗಾರ ಸಂಘಟನೆ, ಸ್ವಸಹಾಯ ಗುಂಪುಗಳು ಹಾಗೂ ಯುವಕಮಂಡಳಿಗಳ ಸದಸ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು. ಮುಖ್ಯವಾಗಿ ಕುಡಿಯುವ ನೀರು, ಸ್ವಚ್ಚತೆ ಹಾಗೂ ಸುವ್ಯವಸ್ಥೆಗೆ ಹೆಚ್ಚು ಪಾಮುಖ್ಯತೆ ನೀಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು, ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಹಾಗೂ ದೇವಳದ ಕೆರೆಯ ಪುನರನಿರ್ಮಾಣ ಹಾಗೂ ರಥಬೀದಿ ಕಾಂಕ್ರೇಟ್ ರಸ್ತೆ ನಿರ್ಮಿಸಿ ಕೊಡುವ ಸಂಪೂರ್ಣ ಭರವಸೆಯನ್ನು ಸಹ ಶಾಸಕರು ನೀಡಿದರು. ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ, ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ದೇವಳದ ಪ್ರದಾನ ಅರ್ಚಕ ಪ್ರಕಾಶ ಉಡುಪ, ವ್ಯವಸ್ಥಾಪನಾ ಸಮಿತಿ…
ಕುಂದಾಪುರ: ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿಯ ಆತಿಥ್ಯದಲ್ಲಿ ನಡೆದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ ರಂಗತರಂಗದಲ್ಲಿ ಗಾಯನ ಸ್ಪರ್ಧೆಯಲ್ಲಿ ಉದ್ಯಮಿ ರವಿರಾಜ್ ಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಟರಿ ಕ್ಲಬ್ ಕುಂದಾಪುರದ ಪೂರ್ವಾದ್ಯಕ್ಷರಾಗಿ, ಪ್ರಸಕ್ತ ಸಾಲಿನಲ್ಲಿ ರೋಟರಿ ವಲಯ 1ರ ಕ್ರೀಡಾ ಸಂಯೋಜಕರಾಗಿ, ಹಂಗಳೂರಿನ ಗೆಳೆಯರ ಬಳಗದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಕುಂದಾಪುರ: ದೃಶ್ಯ ಮಾಧ್ಯಮಗಳು ನಮ್ಮನ್ನು ಮಾನಸಿಕವಾಗಿ ಬಡವರನ್ನಾಗಿಸುತ್ತಿವೆ. ಇಂದಿನ ಯುವಕರು ಟಿ.ವಿ ಮೊಬೈಲಿನಲ್ಲಿಯೇ ಕಳೆದುಹೋಗುತ್ತಿದ್ದಾರೆ. ಏನನ್ನಾದರೂ ಮಾಡಿ ಪ್ರಸಿದ್ಧಿ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ ಪುಸ್ತಕದ ಓದು, ಸಾಹಿತ್ಯ ನಮ್ಮನ್ನು ಶ್ರೀಮಂತಗೊಳಿಸುವುದಲ್ಲದೇ, ಮಾನಸಿಕವಾಗಿಯೂ ಸದೃಡರನ್ನಾಗಿಸುತ್ತದೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆರ್ಥಿಕ ನಿಯಂತ್ರಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು. ಅವರು ಕಂದಾವರ ರಘುರಾಮ ಶೆಟ್ಟಿ ಅಭಿನಂದನಾ ಸಮಾರಂಭ ’ಕಂದಾವರ-೮೦’ರಲ್ಲಿ ಅಭಿನಂದನಾ ಗ್ರಂಥ ಕೆಂದಾವರೆ ಬಿಡುಗಡೆಗೊಳಿಸಿ ಮಾತನಾಡಿದರು. ಯಕ್ಷಗಾನ ಕಲಾವಿದರು, ವೇಷಭೂಷಣ ಸೇರಿದಂತೆ ಎಲ್ಲಾ ಪ್ರಕಾರಗಳ ದಾಲೀಕಣವಾದಾಗ ಅದು ಮುಂದಿನ ಜನಾಂಗ ತಲುಪಿ ತನ್ನ ನಿರಂತರತೆ ಕಾಯ್ದುಕೊಳ್ಳುತ್ತದೆ. ಕಂದಾವರ ರಘುರಾಮ ಶೆಟ್ಟಿಯವರಂತಹ ಪ್ರಸಂಗಕರ್ತರ ಉತ್ಕೃಷ್ಟವಾದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಬೆಳಕಾಗಬೇಕಿದೆ ಎಂದರು. ಬಸ್ರುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೆಶ್ವರ ದೇವಸ್ಥಾನ ಧರ್ಮದರ್ಶಿ ಸೀತಾರಾಮ ಶೆಟ್ಟಿ, ಪೋಲ್ಯ ಉಮೇಶ್ ಶೆಟ್ಟಿ, ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ್ ಶೆಟ್ಟಿ, ಬಸ್ರೂರು…
