ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದ ಉತ್ತಮ ಫಲಿತಾಂಶವನ್ನು ಪಡೆದ ಸರಕಾರಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಕುಂದಾಪುರ ಸರಕಾರಿ ಪ.ಪೂ.ಕಾಲೇಜು ಪಡೆದಿದ್ದು ಕಾಲೇಜನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಾಗೂ ನಾಡುನುಡಿಯ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡ ನಾಡು ನುಡಿ, ಸಂಸ್ಕೃತಿಯು ಪ್ರತಿಯೊಬ್ಬ ಕನ್ನಡಿಗನ ಬದುಕಿನಲ್ಲಿ ಒಂದು ನಿಶ್ಚಿತ ಪ್ರಜ್ಞೆಯಾಗಿ ಆವರಿಸಿಕೊಳ್ಳಬೇಕು ಎಂದು ಅಂಕಣಕಾರ ಕೋ.ಶಿವಾನಂದ ಕಾರಂತರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸರಕಾರಿ ಪ.ಪೂ.ಕಾಲೇಕು ಕುಂದಾಪುರ ನಾಡು-ನುಡಿ ಚಿಂತನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈಯವರು ಕನ್ನಡ ಸಾಹಿತ್ಯಕ್ಕೆ ಕುಂದಾಪುರದ ಕೊಡುಗೆಗಳೇನು? ಮತ್ತು ಆ ಮೂಲಕ ಹಿರಿಯರು ಕನ್ನಡವನ್ನು ಕಟ್ಟುವ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು. ಕನ್ನಡ ನಾಡು ನುಡಿಯ ಬಗ್ಗೆ ಅತೀವ ಕಾಳಜಿ ಹೊಂದಿದ ಹೆಬ್ರಿಯ ಗಂಗಾಧರ ಅತಿಥಿಗಳಾಗಿ ಆಗಮಿಸಿ ಸ.ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದು ಶೇ 97.76 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಸಾಧನೆ ಪ್ರತಿಭೆಯ ಪ್ರತಿಬಿಂಬವಲ್ಲ. ಗೆಲುವೇ ಸಾಧನೆಯ ಮಾನದಂಡವಲ್ಲ ಎಂಬ ಸೂಕ್ಷ್ಮವನ್ನರಿತು ವಿದ್ಯಾರ್ಥಿಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕೆಂದು ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಮಹಾಬಲೇಶ್ವರ ರಾವ್ ಕರೆ ನೀಡಿದರು. ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮಾತನಾಡಿ ಇಂದು ವಿದ್ಯಾರ್ಥಿಗಳು ಸರ್ವಾಂಗೀಣ ಬೆಳವಣಿಗೆಗೆ ಪ್ರಯತ್ನಿಸುತ್ತಾ ಪ್ರಶ್ನಿಸುವ ಮನೋಭಾವದ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಭಿನ್ನವಾದ ರೀತಿಯಲ್ಲಿ ಯೋಚಿಸುವುದರೊಂದಿಗೆ ಸೃಜನಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರಕ್ಷಕರು ತಮ್ಮ ಮಕ್ಕಳನ್ನು ಬೌದ್ಧಿಕ ಕೂಲಿಗಳನ್ನಾಗಿ ರೂಪಿಸುವ ಚಿಂತನೆಯಿಂದ ಹೊರಬಂದು ಅವರಲ್ಲಿನ ಪ್ರತಿಭೆ ದಕ್ಷತೆ ಮತ್ತು ಬದ್ಧತೆಗಳ ಬೆಳಸಿಗೆ ಸಾರ, ನೀರೆರೆದು ಪೋಷಿಸಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಕಾಮತ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಲ್ಪಿಸಲಾದ ಮೂಲಭೂತ ಸೌಕರ್ಯಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶನದ ತರಬೇತಿಯನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯುವಂತಾಗಬೇಕೆಂದು ಆಶಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ…
ಕುಂದಾಪುರ: ಇಲ್ಲಿನ ಟಿ.ಟಿ. ರೋಡ್ ನಿವಾಸಿ ವಿ. ನಾಗಪ್ಪಯ್ಯ ಆಚಾರ್ಯ(63) ಅಲ್ಪಕಾಲದ ಅಸೌಖ್ಯದಿಂದ ಡಿ.09ರಂದು ನಿಧನರಾದರು. ಕುಂದಾಪುರದಲ್ಲಿ ಸುಮಾರು ೩೦ ವರ್ಷಗಳಿಗೂ ಅಧಿಕ ಕಾಲ ರಕ್ತ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದು ಪರಿಸರದಲ್ಲಿ ಡಾ. ನಾಗಪ್ಪ ಎಂದೇ ಹೆಸರುಗಳಿಸಿದ್ದರು. ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.
ಬೈಂದೂರು: ಹಿಂದೆ ಗ್ರಾಮೀಣ ಭಾಗಗಳಲ್ಲಿ ಅಪರಾಧಗಳು ನಡೆಯುತ್ತಿರುವುದು ಕಡಿಮೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಧ ವಿಧವಾದ ಆಸೆ-ಆಮಿಷಗಳಿಂದ ಹಳ್ಳಿಯ ಮುಗ್ದ ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಸಮಾಜ ಘಾತುಕರು, ವಿಕೃತ ಮನಸ್ಸಿನವರು ಅಮಾನವೀಯ ಕೃತ್ಯಗಳನ್ನು ಮಢುತ್ತಿದ್ದಾರೆ. ಇದರಿಂದ ಅಮಾಯಕ ಮಹಿಳೆಯರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದು ಬೈಂದೂರು ವೃತ್ತನಿರೀಕ್ಷಕ ಸುದರ್ಶನ್ ಎಂ ಹೇಳಿದರು. ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಅತೀ ಹಿಂದುಳಿದ ಪೈನಾಡಿ ಎಂಬ ಕುಗ್ರಾಮದ ಸಕಿಪ್ರಾ ಶಾಲೆಯಲ್ಲಿ ಭಾನುವಾರ ಸಂಜೆ ಬೈಂದೂರು ಆರಕ್ಷಕ ಠಾಣೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಜನವರಿ 2015ರಿಂದ ಡಿಸೆಂಬರ್‌ವರೆಗೆ 25 ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳ ದೂರು ದಾಖಲಾಗಿದ್ದು, ಅದರಲ್ಲಿ ಎಂಟು ಮಹಿಳೆಯರು ತಾಯಾಗಿದ್ದಾರೆ. ಅಲ್ಲದೇ ಏಳು ಮಹಿಳೆಯರ ಕೊಲೆಗಳು ನಡೆದಿದ್ದು, ಅವೆಲ್ಲವೂ ಗ್ರಾಮೀಣ ಭಾಗದಲ್ಲಿ ಸಂಭವಿಸಿದೆ ಎಂದು ಅಂಕಿ-ಅಂಶ ನೀಡಿದ ಅವರು, ಪೋಲಿಸರು ಸಮಾಜ ಕಾಯುವ…
ಬೈಂದೂರು: ಕುಂದಾಪುರದ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೀಜಿನ 2015-16ನೇ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಗೋಳಿಹೊಳೆ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆಯಿತು. ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಶಿಬಿರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ. ಎಲ್ಲಾ ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಶುಭಹಾರೈಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯ ಸಾಯಿಕುಮಾರ್, ತಾಪಂ ಮಾಜಿ ಸದಸ್ಯರಾದ ರಾಮ್‌ಕಿಶನ್ ಶೆಟ್ಟಿ, ರಾಜೀವ ಶೆಟ್ಟಿ, ಬೈಂದೂರು ಗ್ರಾಪಂ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೇಸರ ಶಿವರಾಜ್ ಪೂಜಾರಿ, ಮಂಜು ಪೂಜಾರಿ ಸಸಿಹಿತ್ಲು, ನಿವೃತ್ತ ಮುಖ್ಯಶಿಕ್ಷಕ ಜನ್ಮನೆ ಗೋಪಾಲ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸನತ್ ಅಡಿಗ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸೀಮಾ ಪಿ. ಶೆಟ್ಟಿ ಪ್ರಾಸ್ತಾವಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ರಕ್ಷಿತ ರಾವ್…
ಗಂಗೊಳ್ಳಿ : ಗಂಗೊಳ್ಳಿ ವಲಯ ಸವಿತಾ ಸಮಾಜದ ಅಧ್ಯಕ್ಷರಾಗಿ ಎಂ.ಶೇಖರ ಸುವರ್ಣ ಹಕ್ಲಾಡಿ (ಹೊಳ್ಮಗೆ) ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಜರಗಿದ ಸಂಘದ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುಭಾಷ್ ಭಂಡಾರಿ ಗುಜ್ಜಾಡಿ, ಕಾರ್ಯದರ್ಶಿ ಸುಜಯ್ ಸುವರ್ಣ ವಕ್ವಾಡಿ ಮತ್ತು ಗಂಗೊಳ್ಳಿ ವಲಯದ ಹಿರಿಯ ವೃತ್ತಿಗಾರ ಮಹಾಬಲ ಭಂಡಾರಿ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ಸಾಲಿಯಾನ್ ತ್ರಾಸಿ (ಗೌರವಾಧ್ಯಕ್ಷ), ಶ್ರೀಧರ ಭಂಡಾರಿ ಗುಡ್ಡೆಯಂಗಡಿ (ಉಪಾಧ್ಯಕ್ಷ), ರಾಜೇಶ ಸುವರ್ಣ ಅರಾಟೆ (ಕಾರ್ಯದರ್ಶಿ), ರವೀಶ ಹೆಮ್ಮಾಡಿ (ಜತೆ ಕಾರ್ಯದರ್ಶಿ), ರಕ್ಷತ್ ಸುವರ್ಣ ವಂಡ್ಸೆ (ಕೋಶಾಧಿಕಾರಿ), ಲಕ್ಷ್ಮಣ ಸುವರ್ಣ ಮರವಂತೆ (ಕ್ರೀಡಾ ಕಾರ್ಯದರ್ಶಿ), ನಾಗರಾಜ ಭಂಡಾರಿ ತಲ್ಲೂರು, ರತ್ನಾಕರ ಭಂಡಾರಿ ಹೆಮ್ಮಾಡಿ, ಪ್ರಶಾಂತ ಭಂಡಾರಿ ಹೆಮ್ಮಾಡಿ, ಅಶೋಕ ಭಂಡಾರಿ ತ್ರಾಸಿ, ಶಂಕರ ಸುವರ್ಣ ಕಂಚುಗೋಡು, ಸುಧಾಕರ ಬಂಗೇರ ಗಂಗೊಳ್ಳಿ, ಸಂದೀಪ ಮರವಂತೆ (ಸಂಘಟನಾ ಸಮಿತಿ ಸದಸ್ಯರು), ದಿನೇಶ ಭಂಡಾರಿ ಗುಜ್ಜಾಡಿ, ಸುರೇಶ ಭಂಡಾರಿ ಬೆಣ್ಗೆರೆ, ಶೇಖರ ಸಾಲಿಯಾನ್ ಗಂಗೊಳ್ಳಿ, ಬಾಬು ಭಂಡಾರಿ ಗಂಗೊಳ್ಳಿ…
ಕುಂದಾಪುರ: ಡಾ. ಸುಬ್ರಹ್ಮಣ್ಯ.ಬಿ ಇವರು ಪ್ರೊ.ಡಿ.ಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ‘ ಸಿಂಥೆಸಿಸ್ ಆಫ್ ಗ್ರಾಫೇನ್ ಎಂಡ್ ಇಟ್ಸ್ ಕಾಂಪೊಸಿಟ್ಸ್ ಫಾರ್ ಎನರ್ಜಿ ಎಪ್ಲಿಕೇಶನ್ಸ್’ ಎನ್ನುವ ಮಹಾ ಪ್ರಬಂಧಕ್ಕೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಬೈಂದೂರಿನ ಭದ್ರಯ್ಯನ ಮಂಜುನಾಥ ಶೇರುಗಾರ್ ಮತ್ತು ಪಾರ್ವತಿ ಶೇರುಗಾರ್ ದಂಪತಿಯ ಪುತ್ರನಾಗಿದ್ದು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಮತ್ತು ಬೈಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುತ್ತಾರೆ. ಪ್ರಸ್ತುತ ಇವರು ಮಂಬಯಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಾಕ್ಟರಲ್ ಫೆಲೊ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೈಂದೂರು: ಶ್ರೀರಾಮ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ನಿಯಮಿತ ಬೈಂದೂರು ಇದರ ನೂತನ ನಾಗೂರು ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಹಕಾರಿ ಧುರೀಣ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ದಿ. ಜಿ.ಎಸ್.ಆಚಾರ್ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು. ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆನಾಂಡೀಸ್ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ಮುನ್ನೆಡೆಯಲು ಭದ್ರ ಬುನಾದಿ ಹಾಕಿದ ಜಿ.ಎಸ್ ಆಚಾರ್ ಅವರನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮರೆಯುವಂತಿಲ್ಲ. ತನ್ನ ಸಹಕಾರಿ ಸಂಸ್ಥೆಯಲ್ಲಿ ಅವರ ನೆನಪು ಚಿರಸ್ಥಾಯಿಯಾಗುವಲ್ಲಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಎಸ್. ರಾಜು ಪೂಜಾರಿ ಅಭಿನಂದನಾರ್ಹರು ಎಂದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಬಿ. ರಘುರಾಮ ಶೆಟ್ಟಿ, ರಾಜ್ಯ ಕಾಂಗ್ರೆಸ್‌ನ ಕಾರ್ಯದರ್ಶಿ ಎಂ.ಎ ಗಫೂರ್, ತಾಪಂ ಮಾಜಿ ಸದಸ್ಯ ಹೆಚ್. ವಿಜಯ ಶೆಟ್ಟಿ, ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ, ಕಿರಿಮಂಜೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ…
ಗಂಗೊಳ್ಳಿ: ವಿಶ್ವಸಾಗರ ಕ್ರಿಕೆಟರ‍್ಸ್ ಮತ್ತು ಸಹರಾ ಕ್ರಿಕೆಟರ‍್ಸ್ ಇವರ ಜಂಟಿ ಆಶ್ರಯದಲ್ಲಿ ಗುಜ್ಜಾಡಿ ಶಾಲಾ ವಠಾರದಲ್ಲಿ ಜರಗಿದ ಜಿಲ್ಲಾ ಮಟ್ಟದ 30ಗಜಗಳ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟದಲ್ಲಿ ನಾಯಕವಾಡಿ ಫ್ರೆಂಡ್ಸ್ ತಂಡವು ನ್ಯೂಸ್ಟಾರ್ ಕುಂದಾಪುರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಯಕವಾಡಿ ಫ್ರೆಂಡ್ಸ್ ತಂಡದ ಪ್ರಸಿದ್ಧ ಉತ್ತಮ ದಾಂಡಿಗ ಮತ್ತು ನ್ಯೂಸ್ಟಾರ್ ಕುಂದಾಪುರ ತಂಡದ ಆದಿತ್ಯ ಖಾರ್ವಿ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ಹಿಂದು ಜಾಗರಣ ವೇದಿಕೆಯ ಸಹಸಂಚಾಲಕ ಶಂಕರ ದೇವಾಡಿಗ, ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ಸಹರಾ ಕ್ರಿಕೆಟರ‍್ಸ್‌ನ ಅಧ್ಯಕ್ಷ ಚೇತನ್ ಆರ್ಕಾಟಿ ಉಪಸ್ಥಿತರಿದ್ದರು. ರೋಹಿತ್ ಆರ್ಕಾಟಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ವಿಶ್ವಸಾಗರ ಕ್ರಿಕೆಟರ‍್ಸ್‌ನ…
ಗಂಗೊಳ್ಳಿ: ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 96ನೇ ವಾರ್ಷಿಕೋತ್ಸವ ಸಮಾರಂಭ ಡಿ.12ರಂದು ಶಾಲೆಯ ಶಿವರಾಜ್ ಸ್ಮಾರಕ ರಂಗಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ ನಡೆಯಲಿರುವ ಧ್ವಜಾರೋಹಣ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ ವಹಿಸಲಿದ್ದು, ಗಿರೀಶ ಕೊಡಂಚ ಗುಜ್ಜಾಡಿ ಮತ್ತು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಬಹುಮಾನ ವಿತರಿಸಲಿದ್ದಾರೆ. ಸಂಜೆ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ವಹಿಸಲಿದ್ದು, ಕುಂದಾಪುರ ಉದ್ಯಮಿ ಶೇಷಯ್ಯ ಕೊತ್ವಾಲ್ ಬಹುಮಾನ ವಿತರಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
