Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ನ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಇತ್ತೀಚಿಗೆ ಕುಂದಾಪುರದ ಜೆ.ಸಿ ಭವನದ ಸಭಾಂಗಣದಲ್ಲಿ ನಡೆಯಿತು. ಪ್ರಾಂತೀಯ ಅಧ್ಯಕ್ಷ ರಜತ್ ಕುಮಾರ್ ಹೆಗ್ಡೆ ಮಾತನಾಡಿ 2019 ರಲ್ಲಿ ಸ್ಥಾಪಿತಗೊಂಡ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ 317c ಜಿಲ್ಲೆಯಲ್ಲೇ  ಅತ್ಯದ್ಭುತ ಕ್ಲಬ್ ಆಗಿ ಮೂಡಿ ಬಂದಿದೆ. ಇಲ್ಲಿಯ ತನಕ ಸಾರಥ್ಯ ವಹಿಸಿದ ಕ್ಲಬ್ ನ ಎಲ್ಲಾ ಅಧ್ಯಕ್ಷರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲೆಯ ಮಾಜಿ ಜಿಲ್ಲಾ ಗವರ್ನರ್ ಲಯನ್ ವಿ.ಜಿ. ಶೆಟ್ಟಿ ಅವರು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಕಾರ್ಯವೈಕರಿಯನ್ನು ಪ್ರಶಂಶಿಸಿದರು.  ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್  ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಭುಜಂಗ ಶೆಟ್ಟಿ ವರದಿ ವಾಚಿಸಿದರು. ಪ್ರಾಂತೀಯ ಕಾರ್ಯದರ್ಶಿ ಏಕನಾಥ ಬೋಳಾರ್, ವಲಯಾಧ್ಯಕ್ಷರಾದ ವಸಂತರಾಜ್ ಶೆಟ್ಟಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಜೀವನದಲ್ಲಿ ಶಾಶ್ವತವಲ್ಲ, ಮುಂದಿನ ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ಸೋಲು ಅನಿವಾರ್ಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ ಹೇಳಿದರು.  ಅವರು ಗುರುವಾರದಂದು ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಬರಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆರೋಗ್ಯವೇ ಭಾಗ್ಯವಾಗಿರುವುದರಿಂದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿಸುವುದರ ಮೂಲಕ ಸದೃಢ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು. ಕ್ರೀಡಾ ಕಾರ್ಯದರ್ಶಿ ಧೀಮಂತ್ ಶೆಟ್ಟಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಯ ಸಮಾರೋಪ ಸಮಾರಂಭವು ಇತ್ತೀಚಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾಧ ಸಂಧ್ಯಾ ಅವರು ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಬಹಳ ಬೇಡಿಕೆ ಇರುವ ತರಬೇತಿಯನ್ನು  ಆಯ್ಕೆ ಮಾಡಿಕೊಂಡಿದ್ದೀರಿ. ಅದೇ ರೀತಿ ಸಂಸ್ಥೆ ಬಹಳ ಉನ್ನತ ಮಟ್ಟದ ಸಂಸ್ಥೆಯಾಗಿದೆ. ಮೊದಲನೇ ಹಂತ ತಳಮಟ್ಟ ತರಬೇತಿಯಲ್ಲಿ ತಮ್ಮನ್ನು ತಾವೂ ಯಶಸ್ವಿಗೊಳಿಸಿದ್ದೀರಿ. ರುಡ್ಸೆಟ್ ಸಂಸ್ಥೆಯು ತಮ್ಮನ್ನು ಸ್ವ ಉದ್ಯೋಗವನ್ನು ಕೈಗೊಳ್ಳಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ತರಬೇತಿಯ ಅವಧಿಯಲ್ಲಿ ಒದಗಿಸಿದೆ.  ಮೊಬೈಲ್ ರಿಪೇರಿ ಮತ್ತು ಸೇವೆ ಉದ್ಯಮವು ದಿನದಿಂದ ದಿನಕ್ಕೆ ಬೇಡಿಕೆಯನ್ನು ಹಾಗೂ ಕುತೂಹಲವನ್ನು ಮೂಡಿಸುವ ಉದ್ಯಮವಾಗಿದೆ. ಹಾಗಾಗಿ ಉದ್ಯಮವನ್ನು ನಡೆಸಲು ಬೇಕಾಗುವ ಸಾಲಸೌಲಭ್ಯವನ್ನು ಸಂಸ್ಥೆಯ ಮುಖಾಂತರ ಒದಗಿಸುತ್ತೇವೆ. ಆದ್ದರಿಂದ ಆತ್ಮವಿಶ್ವಾಸದಿಂದ ಉದ್ಯಮವನ್ನು ಪ್ರಾರಂಭಿಸಿ, ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರ ರಕ್ತ ನಿಧಿಗೆ ಅಧ್ಯಯನ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಸಂಗ್ರಹಣೆ, ರಕ್ತದ ಸಂರಕ್ಷಣೆ, ಅದರ ಪರೀಕ್ಷಾ ವಿಧಾನ ಹಾಗೂ ರಕ್ತ ಘಟಕಗಳ ಪ್ರಕ್ರಿಯೆಗಳ ಕುರಿತು ಸಿಬ್ಬಂದಿಯಾದ ವೀರೇಂದ್ರ ಅವರು ವಿವರವಾದ ಮಾಹಿತಿ ನೀಡಿ, ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳನ್ನು ವೀಕ್ಷಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ಸಂಯೋಜಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಭಾಪತಿಗಳಾದ ಜಯಕರ್ ಶೆಟ್ಟಿ, ಖಜಾಂಚಿಗಳಾದ ಶಿವರಾಮ್ ಶೆಟ್ಟಿ ಹಾಗೂ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾದ ಯೋಗೀಶ್ ಶ್ಯಾನುಭೋಗ್ ಉಪಸ್ಥಿತರಿದ್ದರು.  

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕೊಣಾಜೆಯ ಮಂಗಳಗಂಗೋತ್ರಿಯ ಆವರಣದಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಸಾಂಸ್ಕೃತಿಕ ಸ್ಫರ್ಧೆ ‘ವೇವ್ಸ್ 2025ರಲ್ಲಿ ಸಂಗೀತ, ರಂಗಕಲೆ, ನೃತ್ಯ, ಹಾಗೂ ಸಾಹಿತ್ಯ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು, ಎಲ್ಲಾ ಐದು ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ಮೆರೆದು ಸತತ 24 ವರ್ಷ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಒಟ್ಟು ನಡೆದ 27 ಸ್ಪರ್ಧೆಗಳಲ್ಲಿ 16 ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನದೊಂದಿಗೆ ಒಟ್ಟು 22 ಸ್ಥಾನಗಳಲ್ಲಿ ಪ್ರಶಸ್ತಿಯನ್ನು ಗಳಿಸಿ ಈ ಸಾಧನೆ ಮೆರೆದಿದೆ. ಪ್ರಥಮ ಸ್ಥಾನ:ಹಿಂದಿ ಭಾಷಣ-ವಿನಿಟ್ ವಾಝ್ (ಪ್ರಥಮ), ಇಂಗ್ಲೀಷ್ ಚರ್ಚೆ- ವೈಭವ್ ಯು ಹಾಗೂ ಸಾತ್ವಿಕ್ ಸುವರ್ಣ ( ಪ್ರಥಮ), ಹಿಂದಿ ಚರ್ಚೆ- ವೈಭವ್ ಯು ಹಾಗೂ ವಿನಿಟ್ ವಾಝ್ (ಪ್ರಥಮ), ಏಕಾಂಕ ನಾಟಕ (ಪ್ರಥಮ), ಕಿರು ಪ್ರಹಸನ (ಪ್ರಥಮ), ಕ್ಲೇ ಮಾಡೆಲಿಂಗ್- ಶ್ರೀಧರ್ (ಪ್ರಥಮ), ಶಾಸ್ತ್ರೀಯ ಸಂಗೀತ ವೈಯಕ್ತಿಕ- ಆಶ್ವೀಜಾ ಉಡುಪ(ಪ್ರಥಮ), ನಾನ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ರಿ. ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ವತಿಯಿಂದ ನಡೆಸಲಾದ ಜ್ಞಾನ ರಥ ಎನ್ನುವ ನೈತಿಕ ಮೌಲ್ಯಾಧಾರಿತ ಪುಸ್ತಕದ ಚಿತ್ರಕಲಾ ಸ್ಪರ್ಧೆಯಲ್ಲಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾರ್ವಿಕೇರಿ ಗಂಗೊಳ್ಳಿಯ 7ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಗಂಗೊಳ್ಳಿಯ ಚಿತ್ರ ಕಲಾವಿದ ಮಾಧವ ದೇವಾಡಿಗ ಹಾಗೂ ಉಪನ್ಯಾಸಕಿ ಸಾವಿತ್ರಿ ಎಸ್. ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕ ವಿದ್ಯಾಸಂಸ್ಥೆಯ ಹೆಮ್ಮೆ ವಿದ್ಯಾದೇಗುಲ ಇಲ್ಲಿನ ಶಿಕ್ಷಣ ಗುಣಮಟ್ಟ ಅದ್ಭುತವಾದದ್ದು ಎಂದು ಕನ್ನಡದ ಚಿತ್ರನಟಿ ಶೀತಲ್ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕೋಟ ವಿದ್ಯಾಸಂಘ, ಕೋಟ ವಿವೇಕ ವಿದ್ಯಾಸಂಸ್ಥೆಗಳು, ಕೋಟ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣದಲ್ಲಿ ವಿವಿಧ ಸ್ತರಗಳ ಬಗ್ಗೆ ಚಿಂತಿಸುತ್ತೇವೆ ಆದರೆ ಮುಂದೆ ಹೋದಾಗ ನಮ್ಮಲ್ಲಿರುವ ಕೌಶಲ್ಯ ಕೆಲಸ ಮಾಡುತ್ತದೆ ಅದೇ ಮುಂದೆ ನಮ್ಮ ದಾರಿಯನ್ನು ಸುಲಲಿತಗೊಳಿಸುತ್ತದೆ, ಆಯ್ಕೆ ಮಾಡಿಕೊಂಡ ವಿದ್ಯಾಕ್ಷೇತ್ರ ಹೊರತುಪಡಿಸಿ ನಮ್ಮ ಜೀವನ ಆಯ್ಕೆ ಬೇರೆಯದ್ದೆ ಆಗಿರುತ್ತದೆ. ನಿಮ್ಮಲ್ಲಿರುವ ಸ್ಕೀಲ್ ಇದ್ದರೆ ನಿಮ್ಮನ್ನು ಬಹು ಎತ್ತರಕ್ಕೆ ಕೊಂಡ್ಯೋಯುತ್ತದೆ. ನಮ್ಮ ಆಯ್ಕೆ ನಮ್ಮ ಜೀವನದ ತಳಹದಿಯನ್ನು ಗಟ್ಟಿಗೊಳಿಸುವ ಹಾಗೇ ಮುನ್ನಡೆಯಬೇಕು. ನಿಮ್ಮಲ್ಲಿರು ಅಗಾಧವಾದ ಪ್ರತಿಭೆಗಳನ್ನು ಹೊರ ಚುಮ್ಮಿಸಲು ಪ್ರಯತ್ನಿಸಿ ಆಗ ನಿಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಇದದ್ದೆ ಸೋತ್ತಿದ್ದೇನೆ ಎಂಬ ಭ್ರಮೆಯಿಂದ ಹೊರಬನ್ನಿ. ಭವಿಷ್ಯದ ಭದ್ರ ಬುನಾದಿಗೆ ಪ್ರೇರಕ ಶಕ್ತಿಯಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ನೆನಪು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ‘ಆವಿಷ್ಕಾರ ಅಂಗಳ – 2K25’ ಇದರಲ್ಲಿ ಭಾಗವಹಿಸಿದ ಕಿರಿಮಂಜೇಶ್ವರ ಜನತಾ ಇಂಗ್ಲಿಷ್ ಮೀಡಿಯಂ ಶಾಲೆ ವಿಜ್ಞಾನ ಮಾದರಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ತಾಲೂಕು ಮಟ್ಟದ ಪ್ರಶಸ್ತಿಯನ್ನು ತನ್ನ ತೆಕ್ಕೆಗೇರಿಸಿಕೊಂಡಿದೆ. ಯುವ ವಿಜ್ಞಾನಿಗಳಾದ ಮೊಹಮ್ಮದ್ ಅಶ್ರಫ್ ಒಂಬತ್ತನೇ ತರಗತಿ ಹಾಗೂ ಶ್ರೀಶಾಂತ್ ಒಂಬತ್ತನೇ ತರಗತಿ ಅವರು ತಯಾರಿಸಿದ ಸ್ಮಾರ್ಟ್ ಸಿಟಿ ಎಂಬ ಮಾದರಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ರಕ್ಷ ಅವರು ಮಾರ್ಗದರ್ಶನವನ್ನು ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಗಣೇಶ ಮೊಗವೀರ ಹಾಗೂ ಶಾಲಾ ಮುಖ್ಯ ಶಿಕ್ಷಕಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಪೂರ್ಣಿಮಾ ಜೋಗಿ ಅವರು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಇತ್ತೀಚಿಗೆ ನಡೆದ ಮಿಸಸ್ ಕ್ಲಾಸಿಕ ಯುನಿವರ್ಸ್ ಪ್ರತಿಭಾ ಪ್ರದರ್ಶನ ಸ್ಪರ್ಧೆಯ ಅಂತಿಮ 10ರಲ್ಲಿ ಸ್ಥಾನ ಪಡೆಯುವ ಮೂಲಕ ʼಕ್ಲಾಸಿಕ್ ಗ್ಲೋಬ್ʼ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮಿಸಸ್ ಇಂಡಿಯಾ ಕ್ಲೀನ್ ಆಫ್ ಸಬ್‌ಸ್ಟಾನ್ಸ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದ ಅವರು ನವದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ’ಮಿಸಸ್ ಹಾನೆಸ್ಟಿ’ ಎನಿಸಿಕೊಂಡಿದ್ದರು. ಕ್ವಾಲಾಲಂಪುರದಲ್ಲಿ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ 20 ಮಂದಿ ಸ್ಪರ್ಧಿಸಿದ್ದರು. ಅವರು ಕೋಟದ ಅಮೃತೇಶ್ವರಿ ದೇಗುಲದ ಪ್ರಧಾನ ಅರ್ಚಕ ಲಲಿತಾ ನಾರಾಯಣ ಜೋಗಿಯವರ ಪುತ್ರಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕ್ರೀಡೆಯಲ್ಲಿ ಭಾಗವಹಿಸಲು ನಿರಂತರವಾದ ಅಭ್ಯಾಸ, ತರಬೇತಿ ಅವಶಕ್ಯ. ಇತ್ತೀಚಿನ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು. ಶಿಕ್ಷಕರನ್ನು ಹಾಗೂ ಹೆತ್ತವರನ್ನು ಗೌರವಿಸಿ ಪ್ರೀತಿಸಿದರೆ ಉತ್ತಮ ವಿದ್ಯಾರ್ಥಿಗಳಾಗಿ ಬೆಳೆದು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕುಂದಾಪುರ ಶ್ರೀ ಸೀತಾರಾಮ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಂದ್ರ ಕೊಠಾರಿ ಹೇಳಿದರು. ಅವರು ಎಸ್.ವಿ.ಎಸ್. ಅಸೋಸಿಯೇಶನ್ ಗಂಗೊಳ್ಳಿ ಪ್ರವರ್ತಿತ ಎಸ್.ವಿ. ಪದವಿಪೂರ್ವ ಕಾಲೇಜು, ಎಸ್.ವಿ. ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಎಸ್.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್ ಶುಭ ಹಾರೈಸಿದರು. ಎಸ್.ವಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಾರ್ಥನಾ…

Read More