ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಪೂರ್ಣಿಮಾ ಜೋಗಿ ಅವರು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಇತ್ತೀಚಿಗೆ ನಡೆದ ಮಿಸಸ್ ಕ್ಲಾಸಿಕ ಯುನಿವರ್ಸ್ ಪ್ರತಿಭಾ ಪ್ರದರ್ಶನ ಸ್ಪರ್ಧೆಯ ಅಂತಿಮ 10ರಲ್ಲಿ ಸ್ಥಾನ ಪಡೆಯುವ ಮೂಲಕ ʼಕ್ಲಾಸಿಕ್ ಗ್ಲೋಬ್ʼ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಿಸಸ್ ಇಂಡಿಯಾ ಕ್ಲೀನ್ ಆಫ್ ಸಬ್‌ಸ್ಟಾನ್ಸ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದ ಅವರು ನವದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ’ಮಿಸಸ್ ಹಾನೆಸ್ಟಿ’ ಎನಿಸಿಕೊಂಡಿದ್ದರು. ಕ್ವಾಲಾಲಂಪುರದಲ್ಲಿ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ 20 ಮಂದಿ ಸ್ಪರ್ಧಿಸಿದ್ದರು.
ಅವರು ಕೋಟದ ಅಮೃತೇಶ್ವರಿ ದೇಗುಲದ ಪ್ರಧಾನ ಅರ್ಚಕ ಲಲಿತಾ ನಾರಾಯಣ ಜೋಗಿಯವರ ಪುತ್ರಿಯಾಗಿದ್ದಾರೆ.










