Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿ ದೆಸೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನ ನಾಯಕತ್ವ ಗುಣ ಸಹಕಾರ ಭ್ರಾತೃತ್ವ ಮೈಗೂಡಿಸಿಕೊಂಡರೆ ಮುಂದಿನ ಬದುಕು ಸುಮಧುರವಾಗುವುದು ಎಂದು ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ನಾಗರಾಜ್ ಶೆಟ್ಟಿ ಹೇಳಿದರು. ಅವರು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಪದವಿ ಪೂರ್ವ ವಿಭಾಗ, ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಬೈಂದೂರು ವಲಯದ ಅರಣ್ಯ ಉಪ ವಿಭಾಗಾಧಿಕಾರಿ ಕೆ. ಸದಾಶಿವ ಅವರು, ಪರಿಸರದ ಕಾಳಜಿಯನ್ನು ಬೆಳೆಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಿರುವುದು. ಪರಿಸರದ ನಾಶವನ್ನು ಮಾಡಿದರೆ ಮನಕುಲದ ನಾಶ ಕಂಡಿತ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಶುಭಾಶಂಸನೆಗೈದರು. ಕಾಲೇಜಿನ ಸಂಚಾಲಕ ಎನ್. ಸದಾಶಿವ ನಾಯಕ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಾರ್ಥನಾ ಪೈ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕತಾರ್: ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಭಾರತದ ಭವ್ಯ ಪರಂಪರೆಯನ್ನು ಇಲ್ಲಿನ ನೆಲದಲ್ಲಿ ವಿಸ್ತಾರವಾಗಿ ಪಸರಿಸುವ ನಿಟ್ಟಿನಲ್ಲಿ, ಕರ್ನಾಟಕ ಸಂಘ ಕತಾರ್ (ಕೆ ಎಸ್ ಕ್ಯೂ) ನೂತನ ವ್ಯವಸ್ಥಾಪನಾ ಸಮಿತಿಯು ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿಗಳಾದ (ಡೆಪ್ಯುಟಿ ಚೀಫ್ ಆಫ್ ಮಿಷನ್) ಮಾನ್ಯ ಸಂದೀಪ್ ಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿತು. ಸಂಘದ ಅಧ್ಯಕ್ಷರಾದ ಮಾನ್ಯ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, 2026-28ನೇ ಸಾಲಿನ ನೂತನ ಸಮಿತಿಯು ತನ್ನ ಪದಾಧಿಕಾರಿಗಳನ್ನು ಪರಿಚಯಿಸಿತಲ್ಲದೆ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳ ಪ್ರಗತಿಪರ ರೂಪುರೇಷೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಿತು. ಸಭೆಯಲ್ಲಿ ಕತಾರ್‌ನಲ್ಲಿರುವ ವಿಶಾಲ ಭಾರತೀಯ ಸಮುದಾಯದ ಕ್ರಿಯಾಶೀಲತೆ ಮತ್ತು ಬೆಳವಣಿಗೆಯನ್ನು ಶ್ಲಾಘಿಸಿದ ಉಪ ರಾಯಭಾರಿ ಮಾನ್ಯ ಶ್ರೀ ಸಂದೀಪ್ ಕುಮಾರ್ ಅವರು, ಸಮುದಾಯದ ಒಟ್ಟಾರೆ ಏಳಿಗೆಗಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮೇ.2026 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಂಟ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಸೃಜನ್ ಜೆ.ಪಿ. 276 ಅಂಕಗಳನ್ನು ಹಾಗೂ ಸಿಂಚನಾ ಸಿ. ಪೂಜಾರಿ 229 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್  ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ ಪಿ.ಜಿ.ಆರ್. ಸಿಂಧಿಯಾ ರವರ ಶಿಫಾರಸಿನ ಮೇರೆಗೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಕೆ. ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಕಛೇರಿಯನ್ನು ಕೋಟ ಶಿವರಾಮ ಕಾರಂತ ಹುಟ್ಟಿದ ಮನೆಯ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಗೊಂಡಿತು. ಕಛೇರಿಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ್ ಉದ್ಘಾಟಿಸಿದರು. ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ದೀಪ ಬೆಳಗಿಸಿ ಶುಭಹಾರೈಸಿದರು. ಸಾಲಿಗ್ರಾಮ ದೇಗುಲದ ಟ್ರಸ್ಟಿ ಕೆ. ತಾರಾನಾಥ ಹೊಳ್ಳ, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಸಕಡ್ ಫೌಂಡೇಶನ್ ಪ್ರವರ್ತಕ ಶ್ರೀಕಾಂತ್ ಶೆಣೈ, ಕೋಟ ಜಾಮೀಯಾ ಮಸೀದಿಯ ಅಧ್ಯಕ್ಷ ಬಷೀರ್ ಸಾಹೇಬ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಾಜಿ ಅಧ್ಯಕ್ಷ ಗಿರೀಶ್ ಆಚಾರ್, ಅಜಿತ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ಎಲ್ಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅರ್ಹ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ಎಸ್.ಎಸ್.ಪಿ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ದಾಖಲೆಗಳೊಂದಿಗೆ ನೇರವಾಗಿ ಪರಿಶಿಷ್ಟ ಜಾತಿಯವರು ಇಲಾಖಾ ವೆಬ್‌ಸೈಟ್ SW.KAR.NIC.IN, ಪರಿಶಿಷ್ಟ ಪಂಗಡದವರು ವೆಬ್‌ಸೈಟ್ TW.KAR.NIC.INಅಥವಾ http://ssp.postmatric.karnataka.gov.in ಲಿಂಕ್‌ಗೆ ಲಾಗಿನ್ ಆಗಿ ಸಂಪೂರ್ಣ ಮಾಹಿತಿಯನ್ನು ನೀಡಿ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಪ್ರತಿ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳು ಎನ್.ಎಸ್.ಪಿ ಓ.ಟಿ.ಆರ್ ರಿಜಿಸ್ಟರ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಎಸ್.ಎಸ್.ಪಿ ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಕೆ ಸಂಪೂರ್ಣವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊ.ನಂ:9480843209 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠ, ಯಡಮೊಗೆ ಇದರ ಆಶ್ರಯದಲ್ಲಿ ನಮ್ಮ ಮಠ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಶ್ರೀ ಗುರುವಂದನೆ ಮತ್ತು ಶ್ರೀ ಗುರುಪಾದ ಪೂಜಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಹಲವರಿ ಮಠದ ಪೂಜ್ಯ ಪೀಠಾಧಿಪತಿಗಳಾದ, ನಾಥಪಂಥದ ಪೀರ್ ಯೋಗಿ ಜಗದೀಶ್‌ನಾಥ್ ಜೀಯವರು ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಆಗಮಿಸ ಧಾರ್ಮಿಕ ಪ್ರವಚನ ನೀಡಿದರು. ದೇಗುಲಕ್ಕೆ ವಿಶೇಷ ಶ್ರೀಗಳ ಮೂಲಕ ನೆರವೆರಿಸಲಾಯಿತು.ಪಾದಪೂಜೆಯನ್ನು ಅರ್ಚಕ ವೃಂದದ ಪ್ರಮುಖರಾದ ಪ್ರಕಾಶ್ ಜೋಗಿ ನೆರವೆರಿಸಿದರು. ಈ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಆನಂದ್ ಸಿ. ಕುಂದರ್, ಮಠದ ಪ್ರದಾನಕಾರ್ಯದರ್ಶಿ ಕೇಶವ ಜೋಗಿ, ಪ್ರದಾನ ಅರ್ಚಕ ಸುಬ್ರಾಯ ಜೋಗಿ, ದೇಗುಲದ ಪಾತ್ರಿಗಳಾ ಸುರೇಶ್ ಜೋಗಿ ಕೋರ್ಗಿ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಸಮುದಾಯ ಪ್ರಮುಖರಾದ ರವೀಂದ್ರ ಜೋಗಿ, ಪ್ರಶಾಂತ್ ಜೋಗಿ, ಅಮೃತ್ ಜೋಗಿ, ಮಹಾಬಲ ಜೋಗಿ, ರೂಪೇಶ್ ಜೋಗಿ, ಅರವಿಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಮದ್ಯವ್ಯಸನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಾಗೂ ಅವರಿಗೆ ಗೌರವಯುತ, ಆರೋಗ್ಯಕರ ಮತ್ತು ಸ್ವಾವಲಂಬಿ ಬದುಕನ್ನು ಮರಳಿ ಕಲ್ಪಿಸುವ ಉದ್ದೇಶದಿಂದ ಆಳ್ವಾಸ್ ಪುನರ್ಜನ್ಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ., ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸಂಸ್ಥಾಪಕಿ ಡಾ. ಹಿಲ್ಡಾ ರಾಯಪ್ಪನ್ “ಮದ್ಯವ್ಯಸನಕ್ಕೆ ಒಳಗಾದವರನ್ನು ಅಪರಾಧಿಗಳಂತೆ ಅಥವಾ ಕಳಂಕದ ಪ್ರತೀಕವಾಗಿ ಕಾಣುವುದು ತಪ್ಪು. ಅದು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆ. ಅವರನ್ನು ದೂರ ತಳ್ಳುವುದಕ್ಕಿಂತ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರಿಗಾಗಿ ಪ್ರತ್ಯೇಕ ಮಧ್ಯವರ್ಜನ ಶಿಬಿರವನ್ನು ಆಯೋಜಿಸಿರುವ ಆಳ್ವಾಸ್ ಪುನರ್ಜನ್ಮದ ಕಾರ್ಯವನ್ನು ಶ್ಲಾಘಿಸಿದ ಅವರು, “ಇದು ಹಣ ಸಂಪಾದನೆಗಾಗಿ ನಡೆಸುವ ಕಾರ್ಯಕ್ರಮವಲ್ಲ; ಸಮಾಜದ ಒಳಿತಿಗಾಗಿ ಮಾಡುವ ನಿಸ್ವಾರ್ಥ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಂಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 9 ವರ್ಷಗಳಿಂದ ಮುಖ್ಯೋಪಾಧ್ಯಾಯನಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಸ್. ನಿರ್ಮಲಾ ಅವರು ವಯೋ ನಿವೃತ್ತಿ ಹೊಂದಿದ್ದು, ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಹಾಗೂ ಕಳೆದ 9 ವರ್ಷಗಳಿಂದ ಸದ್ವಿ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯನಿಯಾಗಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಶಾಲೆಯ ಅಭಿವೃದ್ಧಿ ಸಮಿತಿ ಮತ್ತು ಊರವರು ಹಾಗೂ ವಿದ್ಯಾರ್ಥಿ ವೃಂದ, ಸಹ ಶಿಕ್ಷಕ ವೃಂದದವರು ನಿರ್ಮಲಾ ಅವರಿಗೆ  ಬಾಗಿನ ನೀಡಿ, ಮೈಸೂರು ಪೇಟ ತೊಡಿಸಿ, ಚಿನ್ನಉಂಗುರ ನೀಡಿ ಅಭಿನಂದಿಸಿದರು. ಅಭಿನಂದನಾ ಸಮಾರಂಭದ ಸಭಾಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಣಿಯಮ್ಮ ಪೂಜಾರಿ ವಹಿಸಿದ್ದರು. ಅತಿಥಿಗಳಾಗಿ ಸ್ಥಳೀಯ ಪಟ್ಟಣ ಪಂಚಾಯತ್ ನ ಸರಕಾರದ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ., ಸ್ಥಳೀಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಬಟವಾಡಿ, ನಿವೃತ್ತ ಮುಖ್ಯ ಶಿಕ್ಷಕರಾದ ಸುರೇಶ್ ಬಂಕೇಶ್ವರ ಶಾಲಾ ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರುಗಳಾದ ಸಂಜೀವ ಮೊಗವೀರ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ (MCN) ನ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು 2025–26ನೇ ಸಾಲಿನ ಉದ್ಯೋಗ ನಿಯೋಜನೆ ಅಭಿಯಾನವನ್ನು ಆಯೋಜಿಸಿತು. ಭಾರತದ ಪ್ರಮುಖ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಹೈದರಾಬಾದ್‌ನ ಹೈಟೆಕ್ ಸಿಟಿಯ ಯಶೋದಾ ಆಸ್ಪತ್ರೆಗಳ ಸಹಯೋಗದೊಂದಿಗೆ ನೇಮಕಾತಿ ಅಭಿಯಾನವನ್ನು ನಡೆಸಲಾಯಿತು. ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನೇಮಕಾತಿ ತಂಡಕ್ಕೆ ಆತ್ಮೀಯ ಸ್ವಾಗತ ಕೋರುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಣ್ಯ ನರ್ಸಿಂಗ್ ನಾಯಕರ ಉಪಸ್ಥಿತಿಯು ಕಾರ್ಯಕ್ರಮವನ್ನು ಹೆಚ್ಚು ಮಾಹಿತಿಯುಕ್ತ ಮತ್ತು ಸ್ಪೂರ್ತಿದಾಯಕವಾಗಿಸಿತು. ನೇಮಕಾತಿ ತಂಡವು ಈ ಕೆಳಗಿನವುಗಳನ್ನು ಒಳಗೊಂಡಿತ್ತು:ಸ್ವಾತಿ ಮೇದಾ, ಜನರಲ್ ಮ್ಯಾನೇಜರ್ – ನರ್ಸಿಂಗ್, ಯಶೋದಾ ಆಸ್ಪತ್ರೆಗಳು, ಹೈಟೆಕ್ ಸಿಟಿ, ಹೈದರಾಬಾದ್. ಪ್ರತ್ಯುಷಾ ಚೌಧರಿ, ಮುಖ್ಯಸ್ಥೆ – ನರ್ಸಿಂಗ್ ಶಿಕ್ಷಣ ಮತ್ತು ತರಬೇತಿ ಮತ್ತು ನರ್ಸಿಂಗ್ ನೇಮಕಾತಿಗಳು, ಯಶೋದಾ ಆಸ್ಪತ್ರೆಗಳು. ಈ ಅಧಿವೇಶನದಲ್ಲಿ, ನೇಮಕಾತಿದಾರರು ಯಶೋದಾ ಆಸ್ಪತ್ರೆಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸಿದರು, ಅದರ ಮುಂದುವರಿದ ಆರೋಗ್ಯ ಸೇವೆಗಳು, ನರ್ಸಿಂಗ್ ಶ್ರೇಷ್ಠತೆ, ವೃತ್ತಿ ಬೆಳವಣಿಗೆಯ…

Read More