Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ  79ನೇ ಸ್ವಾತಂತ್ರ್ಯೋತ್ಸವದಂದು ‘ನಾರಿ ತರಂಗ್’ ಕಾರ್ಯಕ್ರಮದೊಂದಿಗೆ ಕಾಲೇಜಿನ ಮಹಿಳಾ ವೇದಿಕೆಯ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಭಾಗವಾಗಿ, ದೇಶ ಭಕ್ತಿ ಗೀತೆಗಳು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರ ಕುರಿತು ಭಾಷಣ ಹಾಗೂ ಅವರ ತ್ಯಾಗ, ಧೈರ್ಯವನ್ನು ಚಿತ್ರಿಸುವ ಚಿತ್ರಪಟ ತಯಾರಿ ಚಟುವಟಿಕೆಗಳನ್ನು ಒಳಗೊಂಡಿತ್ತು. ಕಾಲೇಜಿನ ಮಹಿಳಾ ವೇದಿಕೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೃಜನಶೀಲತೆ ಮತ್ತು ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಮಾಲತಿ, , ಬಿಸಿಎ ವಿಭಾಗದ ಮುಖ್ಯಸ್ಥರಾದ ಸ್ವರ್ಣ ರಾಣಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅರ್ಚನಾ ಉಪಾಧ್ಯ, ಮಹಿಳಾ ವೇದಿಕೆಯ ಸಂಯೋಜಕರಾದ ಗಣಕಶಾಸ್ತ್ರದ ಉಪನ್ಯಾಸಕರಾದ ನಾಫಿಯಾ ಅಖ್ತಾರಿ ಮತ್ತು ಐಶ್ವರ್ಯ ಕುಲಾಲ್, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿಸಿಎ ವಿದ್ಯಾರ್ಥಿನಿ ದೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾತಂತ್ರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಹೆಸರಾಂತ ರಂಗ ಸಂಸ್ಥೆ ಲಾವಣ್ಯದ ಸ್ಥಾಪಕಾಧ್ಯಕ್ಷರಾದ ಯು. ಶ್ರೀನಿವಾಸ ಪ್ರಭು (73) ಅವರು ಬುಧವಾರ ನಿಧನರಾಗಿದ್ದಾರೆ. ಬ್ಯಾಂಕ್‌ ಉದ್ಯೋಗಿಯಾಗಿದ್ದಾ ಅವರು ಹತ್ತು ಹಲವು ನಾಟಕ ರಚನೆ, ನಿರ್ದೇಶನ, ಸಂಗೀತ ನಿರ್ದೇಶನ ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಕೆಲ ಕಾಲ ಅಸೌಖ್ಯದಿಂದಾಗಿ ರಂಗಭೂಮಿ ಚಟುವಟಿಕೆಯಿಂದ ವಿಶ್ರಾಂತಿ ಪಡೆದಿದ್ದರು. ಉಪ್ಪುಂದದ ಶ್ರೀನಿವಾಸ ಪ್ರಭು ಅವರು ತನ್ನ ಬಾಲ್ಯದಿಂದಲೇ ಹರಿಕಥೆ, ಭಜನೆ, ಯಕ್ಷಗಾನ, ನಾಟಕಗಳ ಕಡೆಗೆ ಆಕರ್ಷಿತರಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾಗ ಊರಿನ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ಕೂಡಿಸಿಕೊಂಡು ಕನ್ನಡ, ಕೊಂಕಣಿ ನಾಟಕಗಳನ್ನು ಆಡುವ ಹವ್ಯಾಸ ಬೆಳೆಸಿಕೊಂಡರು. ಇದರ ಜೊತೆಗೆ ಸಂಗೀತ ಶಾಲೆ ಸೇರಿ ಸಂಗೀತ ಉಪಕರಣಗಳನ್ನು ನುಡಿಸಲು ಕಲಿತರು. ನಾಟಕಗಳಲ್ಲಿ ನಟನೆ, ನಿರ್ದೇಶನ, ಸಂಗೀತ ಸಂಯೋಜನೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ಉಸ್ತಾದ್ ಕೆ. ಎಲ್. ಜಮಾದಾರ್‌ರಿಂದ ತಬಲಾವನ್ನು ಕಲಿತ ಪ್ರಭುಗಳು, ದಿ. ಕೆ.ಎಸ್. ಮಧ್ಯಸ್ಥ ಇವರಲ್ಲಿ ಭರತನಾಟ್ಯವನ್ನು, ಡಾ. ವೈ. ಚಂದ್ರಶೇಖರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್  ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯ ಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಒಕ್ಕೂಟದ ನೂತನ ಅಧ್ಯಕ್ಷ ಜಗದೀಶ್ ವಹಿಸಿದರು. ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿ ಕಾರ್ಯಕ್ರಮದಿಂದ ಯಾವ ತರ ಮಳೆ ನೀರನ್ನು ಸಂಗ್ರಹಣೆ ಮಾಡಬಹುದು, ಅಂತರ ಜಲವನ್ನು ಹೇಗೆ ಕಾಪಾಡಿಕೊಂಡು ಹೋಗಬಹುದು ಅದರಿಂದ ಏನೆಲ್ಲ ಪ್ರಯೋಜನೆಗಳಿವೆ ಎಂಬುದರ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದ ಬಗ್ಗೆ ತಾಲೂಕಿನ ಕೃಷಿ ಅಧಿಕಾರಿ ರಾಘವೇಂದ್ರ ಪ್ರಾತ್ಯಕ್ಷಿತೆಯ ಮೂಲಕ ಯಾವು ತರದಲ್ಲಿ ಮಳೆ ನೀರನ್ನು ಸಂಗ್ರಹಣೆ ಮಾಡಬಹುದು, ಅಲ್ಲದೆ, ಅದರ ಪ್ರಯೋಜನ ಹಾಗೂ ಮಳೆ ನೀರನ್ನು ಯಾವ ತರದಲ್ಲಿ ಸಂಗ್ರಹಣೆ ಮಾಡಿ , ಬೇಕಾದ ವಿಧಗಳನ್ನು ವಿವಿಧ ರೀತಿಯಲ್ಲಿ ತೋರಿಸಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಲಾಸಂಸ್ಥೆಯಾದ ಸುರಭಿ ರಿ. ಬೈಂದೂರು ಇದರ ಬೆಳ್ಳಿ ಹಬ್ಬದ ವರ್ಷದ ಅಂಗವಾಗಿ “ರಜತಯಾನ-2025” ಇದರ ಸವಿ ನೆನಪಿಗಾಗಿ ರಾಜ್ಯ ಮಟ್ಟದಲ್ಲಿ ನಡೆಸುತ್ತಿರುವ ಕಥಾ ಸ್ಪರ್ಧೆಯ ಸ್ಪರ್ಧಾ ನೀತಿಯನ್ನೊಳಗೊಂಡ ಮಾಹಿತಿ ಪತ್ರದ ಬಿಡುಗಡೆ ಸಮಾರಂಭವನ್ನು ನಡೆಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಉಡುಪಿ ಜಿಲ್ಲಾ ಕ.ಸಾ.ಪ.ದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿ ಕಥಾಸ್ಪರ್ಧೆಯ ಅಗತ್ಯತೆ ಬಗ್ಗೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರವನ್ನು ತಿಳಿಸಿದರು. ಸುರಭಿ ರಿ ಬೈಂದೂರು ಅಧ್ಯಕ್ಷ ಆನಂದ ಮದ್ದೂಡಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದು, ಕಥಾಸ್ಪರ್ಧೆಯ ಬಗ್ಗೆಮಾಹಿತಿ ನೀಡಿದರು. ವೇದಿಕೆಯಲ್ಲಿ ಸುರಭಿಯ ರಂಗ ನಿರ್ದೇಶಕ ಗಣೇಶ್ ಮಂದಾರ್ತಿ, ಖಜಾಂಚಿ ರಾಘವೇಂದ್ರ ಕೆ. ಉಪಸ್ಥಿತರಿದ್ದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕುದ್ರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕುಂದಾಪುರ  ವೃತ್ತ ಮಟ್ಟದ 14ರ ವಯೋಮಾನದ ಬಾಲಕಿಯರ  ತ್ರೋಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಕಲಚೇತನ ವ್ಯಕ್ತಿಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನ ಸಂಘಗಳು ಕಡ್ಡಾಯವಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಕಾಯ್ದೆಯ ಸೆಕ್ಷನ್ 50, 51 ಮತ್ತು 52 ರ ಪ್ರಕಾರ ಸೇವಾಸಿಂಧು ತಂತ್ರಾಂಶದ ಮೂಲಕ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೋಂದಣಿ ಮಾಡಿಸಿಕೊಳ್ಳಬೇಕು. ಈ ರೀತಿ ನೋಂದಣಿಯಾದ ಸಂಸ್ಥೆಗಳು ತಮ್ಮ ನೋಂದಣಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಬೇಕಾಗಿರುತ್ತದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಪ್ರಕಾರ ನೋಂದಣಿಯಾಗದೆ ವಿಕಲಚೇತನ ವ್ಯಕ್ತಿಗಳಿಗೆ ಕಾರ್ಯನಿರ್ವಹಿಸುತ್ತಿದ್ದು, ನೋಂದಣಿ ಮಾಡಿಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ/ ನವೀಕರಣ ಚಾಲ್ತಿಯಲ್ಲಿ ಇಲ್ಲದಿರುವ ಸಂಸ್ಥೆಗಳ ವಿರುದ್ಧ ನೇರವಾಗಿ ಸಂಬಂಧಪಟ್ಟ ಆರಕ್ಷಕ ಠಾಣೆಗಳಲ್ಲಿ ಎಫ್.ಐ.ಆರ್ ದಾಖಲಿಸಲು ಅವಕಾಶವಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ವಿಕಲಚೇತನ ಮಕ್ಕಳು ಮತ್ತು ವ್ಯಕ್ತಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಮತ್ತು ವಿಕಲಚೇತನ ಸಂಘಗಳು ಕಡ್ಡಾಯವಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016 ರ ಕಾಯ್ದೆಯ ಅಡಿ ಸೇವಾಸಿಂಧು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಿಂದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಸಿ.ಎಮ್.ಎ. (Cost and Management Accounting) ಕೋರ್ಸ್‌ನ ಮಹತ್ವದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬೆಂಗಳೂರು ಜಿ.ಸಿ, ರಾವ್ ಅಕಾಡೆಮಿ ಇದರ ಮುಖ್ಯಸ್ಥರಾದ ಸಿ.ಎ, ಸಿ.ಎಮ್‌ಎ, ಜಿ.ಸಿ. ರಾವ್ ಅವರು ಮಾತನಾಡಿ, ಉದ್ಯೋಗಕ್ಕಾಗಿ ಪೈಪೋಟಿ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಕೇವಲ ಸರಕಾರಿ ಉದ್ಯೋಗಕ್ಕಾಗಿ ಕಾಯದೇ ವೃತ್ತಿಪರ ಕೋರ್ಸ್ ಆದ ಕೋಸ್ಟ್ ಎಂಡ್ ಮ್ಯಾನೇಜ್‌ಮೆಂಟ್ ಅಕೌಂಟಿಂಗ್‌ ನತ್ತ ಗಮನ ಹರಿಸಿದರೆ ಉತ್ತಮ ಸಂಪಾದನೆ ಜೊತೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಗಳಿಸಬಹುದು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನಾಡಿದರು. ಇನ್ನೋರ್ವ ಅತಿಥಿ ಬೆಂಗಳೂರು ಜಿ.ಸಿ. ರಾವ್ ಅಕಾಡೆಮಿ ಅಧ್ಯಾಪಕ ನರೇಶ್ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಸಿಎಮ್‌ಎ ಕೋರ್ಸ್‌ನ್ನು ಸುಲಭವಾಗಿ ತೇರ್ಗಡೆಗೊಳ್ಳಬಹುದು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ದಕ್ಷಿಣ ಕನ್ನಡ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ನಡೆದ ದಕ್ಷಿಣ ಕನ್ನಡ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ವಿದ್ಯಾರ್ಥಿಗಳು 22 ಚಿನ್ನ, 21 ಬೆಳ್ಳಿ, 12 ಕಂಚಿನ ಪದಕದೊಂದಿಗೆ ಒಟ್ಟು 55 ಪದಕಗಳನ್ನು ಪಡೆದುಕೊಂಡರು. ಆಗಸ್ಟ್ 23 ರಿಂದ 25ರವರೆಗೆ ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕಿರಿಯರ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಕಿರಿಯರ ವಿಭಾಗದಲ್ಲಿ 60 ವಿದ್ಯಾರ್ಥಿಗಳು ಹಾಗೂ ಹಿರಿಯರ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 90 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಲ್ಲಿ ಅತೀ ಹೆಚ್ಚು ಕ್ರೀಡಾಪಟುಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಪ್ರತಿನಿಧಿಸುತ್ತಿದ್ದಾರೆ. ಫಲಿತಾಂಶ:14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಸುಭಾಷ್ – ತ್ರಯತ್ಲನ್ ಸಿ (ಪ್ರಥಮ), ಕುಬೇರ – ತ್ರಯತ್ಲನ್ ಬಿ (ತೃತೀಯ), ಪ್ರಣವ್ – ತ್ರಯತ್ಲನ್ ಎ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮಂಚಿ ಮಣಿಪಾಲ ಇವರು 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಅಮರ ವೀರ ಗೀತ ಗಾಯನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರದಂದು ಕರಕುಶಲ ಕಲೆಗಳ ಪ್ರಾತ್ಯಕ್ಷತೆಯ ಕಾರ್ಯಕ್ರಮವು ’ಜ್ಞಾನನಿಕೇತನ’ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ ಸರಕಾರದ ಜವಳಿ ಸಚಿವಾಲಯದ ಸಹಾಯಕ ನಿರ್ದೇಶಕರಾದ ರಾಜೇಶ್ವರಿ ಕೆ. ಎಮ್. ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಡಿಜಿಟಲೀಕರಣ ಇರುವುದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೇ ವಿನಃ ಮನೋರಂಜನೆಗಾಗಿ ಅಲ್ಲ. ಭಾರತೀಯ ಪರಂಪರೆಯಲ್ಲಿ ಕರಕುಶಲಕಲೆಗಳು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದುಕೊಂಡಿವೆ. ಈ ಕಲೆಗಳು ನಿಮ್ಮ ಜೀವನಕ್ಕೆ ಸಹಾಯಕವಾಗಿವೆ. ಮುಂದೆ ನೀವು ಉದ್ಯೋಗಕ್ಕೆ ಸೇರುವಾಗ ನಿಮ್ಮ ಪಠ್ಯವಿಷಯವು ಮಾತ್ರ ಕಾರಣವಾಗದೇ ನಿಮ್ಮ ಕೈಚಳಕ, ಆಸಕ್ತಿಗಳೂ ಕಾರಣವಾಗುತ್ತವೆ. ಈ ಕರಕುಶಲತೆಗಳು ಜೀವನಕ್ಕೆ ಬೆಳಕಾಗುತ್ತವೆ. ಎನ್ನುತ್ತಾ ವಿದ್ಯಾರ್ಥಿಗಳನ್ನು ಕರಕುಶಲತೆಗಳ ಅಧ್ಯಯನಕ್ಕೆ ಹುರಿದುಂಬಿಸಿದರು. ಸಂಪನ್ಮೂಲ ವ್ಯಕ್ತಿಯಾದ ಜನಾರ್ದನ ರಾವ್ ಹಾವಂಜೆ ಮಾತನಾಡಿ, ಕೊಂಕಣ ಕರಾವಳಿ ಭಾಗದ ಪುರಾತನ ಕಲೆ ಕಾವಿಕಲೆ. 13ನೇ ಶತಮಾನದಿಂದಲೂ ಈ ಕಲೆ ಬಹಳವಾಗಿ ಬಳಕೆಯಾಗುತ್ತಿದ್ದು, ಸುಣ್ಣದ ಗಾರೆಯನ್ನು ನಡೆಸಿದ ಕಟ್ಟಡಗಳಲ್ಲಿ ಇದನ್ನು ನಡೆಸುತ್ತಿದ್ದರು. ಮನೆ ಮತ್ತು ದೇವಾಲಯಗಳ ನಿರ್ಮಾಣದಲ್ಲಿ ಸುಣ್ಣದ…

Read More