Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ದಕ್ಷಿಣ ಭಾರತದ ಖ್ಯಾತ ಪಂಚಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕುಟುಂಬಿಕರು ಹಾಗೂ ಮಹರ್ಷಿ ಆನಂದ ಗುರೂಜಿ ಕೊಲ್ಲೂರಿಗೆ ಭೇಟಿ ನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪತ್ನಿ, ಪುತ್ರ ಹಾಗೂ ಸೊಸೆ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮರಳಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ವರದಿ. ಮೂಡುಬಿದಿರೆ: ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಉದ್ಯೋಗದ ಅವಕಾಶಗಳನ್ನು ತೆರೆದಿಟ್ಟು, ಬದುಕು ಭದ್ರಪಡಿಸಿಕೊಳ್ಳುವ ಮಹತ್ತರ ಘಟ್ಟಕ್ಕೆ ಸುಲಭ ಮುನ್ನುಡಿ ಬರೆದಿದ್ದ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಯಶಸ್ವಿಯಾಗಿ ಒಂಬತ್ತನೇ ವರ್ಷವೂ ಆಯೋಜನೆಗೊಂಡಿದ್ದು, ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಜುಲೈ 2 ಹಾಗೂ 3ರಂದು ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪ್ರತಿವರ್ಷದಂತೆ ನೂರಾರು ಕಂಪೆನಿಗಳು ಭಾಗವಹಿಸಲಿದ್ದು, ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಕಳೆದ ಎಂಟು ವರ್ಷದ ಹಿಂದೆ ಗ್ರಾಮೀಣ ಪ್ರದೇಶದ ಯುವಜನತೆಗೆ ಸೂಕ್ತ ಉದ್ಯೋಗವಕಾಶವನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭಗೊಂಡ ಆಳ್ವಾಸ್ ಪ್ರಗತಿ, ಇಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಪಕ್ವ ವೇದಿಕೆಯನ್ನು ನಿರ್ಮಿಸಿರುವುದಲ್ಲದೇ, ಕಂಪನಿಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಯಶಕಂಡಿದೆ. ಎಂಟು ವರ್ಷದ ಹಿಂದೆ, 38 ಕಂಪನಿಗಳೊಂದಿಗೆ ಆರಂಭವಾಗಿರುವ ಆಳ್ವಾಸ್ ಪ್ರಗತಿಯಲ್ಲಿ ಕಳೆದ ವರ್ಷ 272 ಕಂಪನಿಗಳು ಭಾಗವಹಿಸಿದ್ದವು. 18,000 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ 5,525 ಜನರಿಗೆ ಉದ್ಯೋಗ ದೊರಕಿದೆ. 2015-16ರ ಶೈಕ್ಷಣಿಕ ವರ್ಷದಲ್ಲಿ 106 ಕಂಪನಿಗಳು ಈಗಾಗಲೇ 1042 ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡಿವೆ. ಕುಂದಾಪ್ರ ಡಾಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಂಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದ್ದು, ಹಂಗಾರಕಟ್ಟೆ ಮೂಲದ ವ್ಯಕ್ತಿಯೋರ್ವರು ಮೃತರಾಗಿದ್ದಾರೆ. ಸಾಸ್ತಾನ ಕಡೆಯಿಂದ ಸಾಲಿಗ್ರಾಮದ ಕಡೆಗೆ ಸೈಕಲ್‌ನಲ್ಲಿ ಸಾಗುತ್ತಿದ್ದ ಕೃಷ್ಣ (45) ಅವರಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ, ಸೈಕಲ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪದ್ಮನಾಭ ಹಾಗೂ ಕೃಷ್ಣ ಎಂಬುವವರೊಂದಿಗೆ ಹಂಗಾರಕಟ್ಟೆಯಿಂದ ಪಾರಂಪಳ್ಳಿಗೆ ಮೀನು ಹಿಡಿಯುವ ಉದ್ದೇಶಕ್ಕೆ ಶನಿವಾರ ಮುಂಜಾನೆ ೬ರ ಸುಮಾರಿಗೆ ಸೈಕಲಿನಲ್ಲಿ ಹೋಗುತ್ತಿದ್ದಾಗ, ವಿಶ್ವಕರ್ಮ ಸಭಾಭವನದ ಎದುರುಗಡೆ ಏಕಮುಖ ಸಂಚಾರದ ರಾಪ್ಟ್ರೀಯ ಹೆದ್ದಾರಿ ೬೬ ರ ಪಶ್ಚಿಮ ಬದಿಯ ರಸ್ತೆಯಲ್ಲಿ ಉಡುಪಿ ಕಡೆಯಿಂದ ಅತೀ ವೇಗದಿಂದ ಬಂದ ಶೆರ್ವಲೆ ಬೀಟ್ ಕಾರು, ರಸ್ತೆಯ ಎಡಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸುವ ಬಂದು ಕೃಷ್ಣ ಎನ್ನುವವರ ಸೈಕಲ್‌ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಅವರು ಸೈಕಲ್ ಸಮೇತ ಡಾಂಬರು ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸೈಕಲ್‌ಗೆ ಢಿಕ್ಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದುಬೈನ ಭಾರತೀಯ ವಿದ್ಯಾಸಂಸ್ಥೆ ಏಷಿಯನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ನಾಯ್ಕನಕಟ್ಟೆ ಮೂಲದ ಸ್ವಾತಿ ಪೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದುಬೈನಲ್ಲಿ ದ್ವಿತೀಯ ಪಿಯುಸಿ ಕಲಿತವರಲ್ಲಿ ಟಾಪರ್ ಆಗಿದ್ದಾರೆ. ಇದರೊಂದಿಗೆ ಬಯೋಲಜಿಯಲ್ಲಿ ಶೇ.100 ಅಂಕಗಳಿಸಿದ್ದು, ಚಿನ್ನದ ಪದಕನ್ನೂ ಪಡೆದಿದ್ದಾರೆ. ಕೆರ್ಗಾಲು ಗ್ರಾಮದ ಬೈಲ್‌ಕೆರೆಯ ಗಣೇಶ್ ಪೈ ಹಾಗೂ ಜ್ಯೋತಿ ಜಿ. ಪೈ ಪುತ್ರಿಯಾದ ಸ್ವಾತಿ ಕರ್ನಾಟಕದಲ್ಲಿ ಸಿಇಟಿ ವೈದ್ಯಕೀಯ ಪರೀಕ್ಷೆಯ 1463ನೇ ರ‍್ಯಾಂಕ್ ಪಡೆದಿದ್ದಾರೆ. ಸ್ವಾತಿ ಅವರ ತಂದೆ ಕಳೆದ 15 ವರ್ಷಗಳಿಂದ ದುಬೈನ ನೆಸ್ಲೆ ಕಂಪೆನಿಯ ಉದ್ಯೋಗಿಯಾಗಿದ್ದು, ಕುಟುಂಬವೂ ಅವರೊಂದಿಗೆ ವಾಸವಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಸೇವಾ, ಸಾಂಸ್ಕೃತಿಕ ವೇದಿಕೆ ’ಸಾಧನಾ’ ಆಶ್ರಯದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ನಿವಾರಣಾ ವಿಭಾಗದ ನೆರವಿನೊಂದಿಗೆ ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ ರವಿವಾರ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಜೋಯಲ್ ಶಿಬಿರವನ್ನು ಉದ್ಘಾಟಿಸಿದರು. ಸಾಧನಾ ಅಧ್ಯಕ್ಷ ಗುರುದಾಸ್ ವಿ. ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ೮೮ ಜನರು ಕಣ್ಣು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ ೧೮ ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಮಾಡಲಾಯಿತು. ಸಾಧನಾ ಸದಸ್ಯ ಜತೀಂದ್ರ ಮರವಂತೆ ಸ್ವಾಗತಿಸಿ, ವಂದಿಸಿದರು. ಸಾಧನಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Read More

ಚಂದ್ರಲೇಖಾ ರಾಕೇಶ್ | ಕುಂದಾಪ್ರ ಡಾಟ್ ಕಾಂ ಲೇಖನ ಪ್ರತಿ ವರ್ಷದಂತೆ ಪರಿಸರ ಕಾಳಜಿ ಬಗೆಗಿನ ಉದ್ದುದ್ದ ವಾಕ್ಯಗಳು. ಗಿಡ ನೆಡುವ ಸಡಗರ. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು. ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ… ಮರು ವರ್ಷದ ಪರಿಸರ ದಿನಾಚರಣೆಯ ಹೊತ್ತಿಗೆ ನಗರವನ್ನು ಹಸಿರು ಕಾನನ ಮಾಡಿಬಿಡುತ್ತೇವೆಂಬ ಧಾವಂತ. ಹಾಗೆ ದಿನಗಳೆದಂತೆ ಆಡಿದ ಮಾತು, ಪರಿಸರದ ಬಗೆಗಿನ ಕಾಳಜಿಯನ್ನೇ ನೆನಪಿಸದ ಜಾಣ ಮರೆವು. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ! ಪರಿಸರ, ಪಕೃತಿ ನಮಗೆ ಯಾವುದನ್ನು ನೀಡಲ್ಲ ಹೇಳಿ. ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರಕೃತಿ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬರೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ನಿಷ್ಕಾಳಜಿ. ಹಸಿರನ್ನು ಉಳಿಸಲು ಇದೆಯೆ ನಮಗೆ ಇಚ್ಚಾ ಶಕ್ತಿ? ದಿನದಿಂದ ದಿನಕ್ಕೆ ಮಾಲಿನ್ಯ…

Read More

ಕುಂದಾಪ್ರ ಡಾಟ್ ಕಾಂ ವರದಿ. ಗುಣಮಟ್ಟದ ಶಿಕ್ಷಣ ಕನಸು ಹೊತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಳೆದೆರಡು ದಶಕಗಳಿಂದ ಉತ್ಕೃಷ್ಟ ಹಾಗೂ ಶಿಸ್ತುಬದ್ಧ ಶಿಕ್ಷಣವನ್ನು ಕಲ್ಪಿಸಿ ಸಾರ್ಥಕತೆ ಕಂಡುಕೊಂಡ ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯು ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವೆನಿಸಿಕೊಂಡಿದೆ. ಸಮುದ್ರ ತೀರದ ನಯನಮನೋಹರ ಪ್ರಾಕೃತಿಕ ಮಡಿಲಿನಲ್ಲಿರುವ ಸಂಸ್ಥೆಯು ಉತ್ಕೃಷ್ಠ ಶೈಕ್ಷಣಿಕ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡುವ ಮಹತ್ಕಾರ್ಯದಲ್ಲಿ ಸಾರ್ಥಕ್ಯ ಕಂಡಿದೆ. ಶುಭದಾ ಎಜ್ಯುಕೇಶನ್ ಟ್ರಸ್ಟ್ ರಿ. ಆಡಳಿತಕ್ಕೊಳಪಟ್ಟ ಶುಭದಾ ಆಂಗ್ಲ ಶಾಲೆಯು ನಾವುಂದ ಮತ್ತು ಕಿರಿಮಂಜೇಶ್ವರ ಗ್ರಾಮಗಳ ಗಡಿಭಾಗವಾದ ಮಸ್ಕಿ ಎಂಬಲ್ಲಿ 1996ರಲ್ಲಿ ಸ್ಥಾಪಿಸಲ್ಪಟ್ಟಿದೆ. ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪರಿಸರದಲ್ಲಿ ತನ್ನ ಉತ್ಕೃಷ್ಠ ಶಿಕ್ಷಣ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಔಪಚಾರಿಕ ಶಿಕ್ಷಣದೊಂದಿಗೆ ಮಕ್ಕಳ ಕ್ರಿಯಾಶೀಲ ಮತ್ತು ಸೃಜನಶೀಲ ಪ್ರವೃತ್ತಿಯನ್ನು ಪೋಷಿಸುವ ನಿಟ್ಟಿನಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ ಮುಂತಾದ ಹತ್ತು-ಹಲವು ರಚನಾತ್ಮಕ ಚಟುವಟಿಕೆಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಟಿ.ಟಿ.ರಸ್ತೆ ಶೀ ವಿಘೇಶ್ವರ ಯುವಕ ಸಂಘದ ರಜತ ಸಂಭ್ರಮ ಸಮಾರಂಭ ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಮುಂಬ್ಮಯಿ ಉದ್ಯಮಿ ಸುರೇಶ ಡಿ.ಪಡುಕೋಣೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ಪುರಸಭೆಯ ಅದ್ಯಕ್ಷರಾದ ವಸಂತಿ ಮೋಹನ ಸಾರಂಗ ವಹಿಸಿದ್ದರು. ಮುಖ್ಯತಿಧಿಗಳಾಗಿ ಕಲಾಕ್ಷೇತ್ರ ಕುಂದಾಪುರ ಬಿ. ಕಿಶೋರ ಕುಮಾರ, ಸಹನಾ ಕನ್ವೆನ್ಷನ್ ಸೆಂಟರ್ ಅಂಕದಕಟ್ಟೆಯ ಸುರೇಂದ್ರಶೆಟ್ಟಿ, ಬಿಲಿಂಡರ್ ಚಲನಚಿತ್ರ ತಂಡದ ಓಂಗುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಯದರ್ಶಿ ನಾಗರಾಜ ರಾಯಪ್ಪನಮಠ, ಸಂಸ್ಧೆಯ ಗೌರವಾದ್ಯಕ್ಷ ಶಿವಾನಂದ ವೇದಿಕೆಯಲ್ಲಿ ಉಪಸ್ಧಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಸಾಹಸಿಗ ಜೋತಿರಾಜ್, ಭಾರತೀಯ ಸೇನೆಯ ರಾಜೇಶ ದಾರಿಮನೆ, ಬಿಲಿಂಡರ್ ಚಿತ್ರ ತಂಡವನ್ನು ಹಾಗೂ ರಾಷ್ಟ್ರ ಮಟ್ಟದ ವಾಲ್ ಕ್ಲೈಮಿಂಗ್ ಸ್ಪರ್ದೆಯ ಚಿನ್ನದ ಪದಕ ವಿಜೇತ ಅರ್ಜುನ ಇವರನ್ನು ಸನ್ಮಾನಿಸಲಾಯಿತು. ಸಂಸ್ಧೆಯ ಅದ್ಯಕ್ಷ ಕೃಷ್ಣ ದೇವಾಡಿಗ ಸ್ವಾಗತಿಸಿದರು. ಮಾಜಿ ಅದ್ಯಕ್ಷ ದಿನೇಶ ದೇವಾಡಿಗ ಸನ್ಮಾನಿತರ ಪರಿಚಯ ಮಾಡಿದರು. ಗುರುರಾಜ ಗಾಣಿಗ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿಯವರು ನಿವೃತ್ತ ಜೀವನಕ್ಕೆ ಪಾದಾರ್ಪಣೆ ಮಡುತ್ತಿರುವ ಸಂದರ್ಭದಲ್ಲಿ ಬೈಂದೂರಿನ ರೋಟರಿ ಭವನದಲ್ಲಿ ಜೀವವಿಮಾ ಪ್ರತಿನಿಧಿ ಬಳಗದ ವತಿಯಿಂದ ಬೀಳ್ಕೋಡುಗೆ ಸಮಾರಂಭ ನಡೆಯಿತು. ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅದಿಕಾರಿಯಾಗಿ ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿಕೊಂಡು, ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿ, ಮುಂದಿನ ನಿವೃತ್ತ ಜೀವನವು ಶುಭದಾಯಕವಾಗಿರಲಿ ಎಂದು ಕೆ. ಕರುಣಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಸಂಪರ್ಕ ಶಾಖೆಯ ಶಾಖಾಧಿಕಾರಿ ಜಿ. ಶಶಿಧರ ಹೆಗ್ಡೆ, ಕುಂದಾಪುರ ಶಾಖೆಯ ಉಪ ಶಾಖಾಧಿಕಾರಿ ಗುರುರಾಜ್ ಉಪಸ್ಥಿತರಿದ್ದರು. ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಬಿ.ಸೋಮಶೇಖರ ಶೆಟ್ಟಿ ಪರಿಚಯಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಡಿ.ಸತೀಶ್, ಸೋಮನಾಥನ್, ಸುರೇಶ್ ಪೂಜಾರಿ, ಮಾರ್ಟಿನ್ ಡಯಾಸ್, ಚಿತ್ತೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರ ಸರಕಾರಿ ನೌಕರರಿಗೆ ಸಮನಾದ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ರಾಜ್ಯ ಸರಕಾರವೂ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಕಛೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರು ತಮ್ಮ ಕಛೇರಿಗೆ ಗೌರು ಹಾಜರಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Read More