ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಣಿಪಾಲದಲ್ಲಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ವರ್ಗದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ನವೀಕರಣ ವಿದ್ಯಾರ್ಥಿಗಳ ಸೀಟು ಹಂಚಿಕೆಯಾಗಿ ಉಳಿಕೆ ಸೀಟುಗಳ ಪ್ರವೇಶಾತಿಗೆ ಸ್ಟೇಟ್ ಹಾಸ್ಟೆಲ್ ಪೋರ್ಟಲ್ ತಂತ್ರಾಂಶದ ಮೂಲಕ ಸಾಮಾನ್ಯ ಪದವಿ ಮಟ್ಟದ ಕೋರ್ಸಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಮಾತ್ರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಮಂಜೂರಾತಿ ಸೀಟುಗಳಲ್ಲಿ ಶೇ.75 ಅಲ್ಪಸಂಖ್ಯಾತರು ಮತ್ತು ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷಗಳ ಒಳಗಿರುವ ವಿದ್ಯಾರ್ಥಿಯು ಅರ್ಜಿ ನಮೂನೆಯ ಜೊತೆಗೆ ವಿದ್ಯಾರ್ಥಿಯ ಜಾತಿ/ಆದಾಯ ಪ್ರಮಾಣ ಪತ್ರ, ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ವರ್ಗಾವಣೆ ಪ್ರಮಾಣ ಪತ್ರದ ದೃಢೀಕೃತ ಪ್ರತಿ, ವಾಸಸ್ಥಳದಿಂದ ಪ್ರವೇಶ ಕೋರಿರುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಬನ್ನಾಡಿ ಗ್ರಾಮದ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ವಿಶೇಷ ಅಗತ್ಯವಿರುವ ಫಲಾನುಭವಿಗಳಿಗೆ ವೀಲ್ಚೇರ್ ಹಾಗೂ ವಿವಿಧ ಆರೋಗ್ಯ ಸಂಬಂಧಿತ ಸಹಾಯಕ ಸಾಧನಗಳನ್ನು ವಿತರಿಸುವ ಸಮಾಜಮುಖಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅವರು ಮಾತನಾಡಿ, ಸಮಾಜದ ದುರ್ಬಲ ವರ್ಗದವರಿಗೆ ನೆರವಾಗುವುದು ರೋಟರಿಯ ಪ್ರಮುಖ ಧ್ಯೇಯವಾಗಿದ್ದು, ಅಗತ್ಯವಿರುವವರಿಗೆ ಆರೋಗ್ಯ ಸಹಾಯಕ ಸಾಧನಗಳನ್ನು ಒದಗಿಸುವ ಮೂಲಕ ಅವರ ದೈನಂದಿನ ಬದುಕನ್ನು ಸುಗಮಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇಬ್ಬರು ಫಲಾನುಭವಿಗಳಿಗೆ ವೀಲ್ಚೇರ್ ಸೇರಿದಂತೆ ಅಗತ್ಯ ಆರೋಗ್ಯ ಪರಿಕರಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ವಲಯ ಸೇನಾನಿ ದಯಾನಂದ ಆಚಾರ್, ಸದಸ್ಯರಾದ ಡಾ. ಗಣೇಶ್, ವೆಂಕಟೇಶ್ ಆಚಾರ್ , ಭಾಸ್ಕರ್ ಪೂಜಾರಿ, ಪ್ರಕಾಶ್ ಹಂದಟ್ಟು, ಪ್ರಥ್ವಿನ್ ಸಿ. ಮೆಂಡನ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) 2026-27ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಒಳಗೊಂಡಂತೆ) ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ವೇಳಾಪಟ್ಟಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು / ತಿದ್ದುಪಡಿ (EDIT) ಮಾಡಲು ಪ್ರಾರಂಭದ ದಿನಾಂಕ: 11.07.2026, ಅರ್ಜಿ ಸಲ್ಲಿಸಲು / ತಿದ್ದುಪಡಿ ಮಾಡಲು ಕೊನೆಯ ದಿನಾಂಕ: 18.07.2026, ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ: 19.07.2026, ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು EDIT ಮಾಡಲು ಅವಕಾಶ: 19.07.2026 ರಿಂದ 22.07.2026, ತಾತ್ಕಾಲಿಕ ಕಾರ್ಯಭಾರ (Workload) ಪ್ರಕಟಿಸುವ ದಿನಾಂಕ: 25.07.2026, ಕೌನ್ಸಿಲಿಂಗ್ ಮೆರಿಟ್ ಪಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಅವರ ನೇತ್ರತ್ವದಲ್ಲಿ ಬೈಂದೂರು ರೈತರ ನಿಯೋಗ ಸಚಿವ ಯು.ಟಿ. ಖಾದರ್ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ರೈತರು ಪಪಂ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ಕಳೆದ 292 ದಿನಗಳಿಂದ ತಾಲೂಕು ಆಡಳಿತ ಕಛೇರಿ ಎದುರು ಧರಣಿ ನಡೆಸುತ್ತಿದ್ದು ಸಚಿವರು ಸಂಪೂರ್ಣ ಮಾಹಿತಿ ಪಡೆದು ರಾಜ್ಯ ಅಧೀನ ಕಾರ್ಯದರ್ಶಿ ಜೊತೆ ಸ್ಥಳದಲ್ಲೆ ಮಾತನಾಡಿದರು ಮತ್ತು ಸರಕಾರದ ಮಟ್ಟದಲ್ಲಿ ಮಾಹಿತಿ ಪಡೆದು ರೈತರ ಹೋರಾಟಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಬೈಂದೂರಿಗೆ ತಾಲೂಕು ಆಸ್ಪತ್ರೆ:ಬೈಂದೂರು ಅತ್ಯಂತ ವಿಸ್ತಾರವಾದ ಕ್ಷೇತ್ರವಾಗಿದ್ದು ಬಹುತೇಕ ಗ್ರಾಮೀಣ ಭಾಗಗಳನ್ನು ಹೊಂದಿದೆ ಹೀಗಾಗಿ ಈ ಭಾಗದಲ್ಲಿ ತಾಲೂಕು ಆಸ್ಪತ್ರೆ ಅತ್ಯಗತ್ಯವಾಗಿದೆ ಶೀಘ್ರ ಬೈಂದೂರಿಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡಲಾಗುವುದು ಎಂದರು. ತಾಲೂಕು ರಕ್ಷಾ ಸಮಿತಿ ಪರವಾಗಿ ವೀರಭದ್ರ ಸಚಿವರಿಗೆ ಮನವಿ ನೀಡಿದರು. ಈ ಸಂಧರ್ಭದಲ್ಲಿ ಮುಖಂಡರಾದ ಅರುಣ್ ಕುಮಾರ ಶಿರೂರು, ಮ್ಯಾಥ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ ಬ್ರಹ್ಮಾವರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುಕ್ತಾ ಬಾಯಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿ, ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಪ್ರತಿಯೊಬ್ಬರೂ ಸ್ವತಃ ಜಾಗೃತರಾಗುವುದರ ಜೊತೆಗೆ ತಮ್ಮ ಸುತ್ತಮುತ್ತಲಿನವರಲ್ಲೂ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತು, ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ. ಮಾತನಾಡಿ, ದೇಶದ ಅಭಿವೃದ್ಧಿಗೆ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅತ್ಯಗತ್ಯವಾಗಿದೆ. ಕಾನೂನು ಜಾರಿಯಲ್ಲಿದ್ದರೂ ಸಮಾಜ ವಿರೋಧಿ ಶಕ್ತಿಗಳು ಯುವಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಆತಂಕಕಾರಿ. ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ತಕ್ಷಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಹಲವು ದಿನಗಳಿಂದ ಪತ್ರಿಕೆಗಳಲ್ಲಿ ವರದಿಯಾದಂತೆ ಕಾಡು ಹಂದಿಗಳು ಸಾವಿನ ಬಗ್ಗೆ ಇಲಾಖೆಗಳು ಕೈಗೊಳ್ಳುತ್ತಿರುವ ಮುಂಜಾಗೃತೆ ಕ್ರಮಗಳ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ, ಪಶು ವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಮತ್ತು ಸ್ಥಳಿಯಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರೋಗ ನಿಯಂತ್ರಣಕ್ಕೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿ: ಅರಣ್ಯ, ಆರೋಗ್ಯ, ಪಶು ಇಲಾಖೆ ಹಾಗೂ ಸ್ಥಳೀಯಾಡಳಿತಕ್ಕೆ ಸೂಚನೆ:ಪ್ರಸ್ತುತ ಬೈಂದೂರು ಕ್ಷೇತ್ರದ ನಾಡ, ಹಟ್ಟಿಯಂಗಡಿ, ಆಲೂರು, ಹೆಮ್ಮಾಡಿ ಹಾಗೂ ಹಕ್ಲಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ 8 ಹಂದಿಗಳ ಕಳೇ ಬರ ಪತ್ತೆಯಾಗಿದ್ದು, ಅದರಲ್ಲಿ ಕಾಡು ಹಂದಿಗಳ ಜೊತೆಗೆ ನಾಡ ಹಂದಿಗಳೂ ಇರುವುದಾಗಿದೆ ಪತ್ತೆಯಾದ ಸಂಪೂರ್ಣ ಕೊಳೆತು ಹೋದವುಗಳನ್ನು ಹೊರತು ಪಡಿಸಿ ಉಳಿದ ಮೃತ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಹಾಗೂ ಸ್ಯಾಂಪಲ್ ಪಡೆದು ಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸಾವಿಗೆ ನಿಖರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂರು ದಿನಗಳ ಕಾಲ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇಲ್ಲಿನ ಬೋಧಕರುಗಳಾದ ಅಂಜಿದ ಪರ್ವೀನ್, ಡಾ. ಚೈತ್ರ ಎಚ್.ಸಿ ಮತ್ತು ದೀಪಾ ಓ. ಇವರುಗಳು ವಂಡ್ಸೆಯ ನಿರಾಮಯ ಸೊಸೈಟಿಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಸಮುದಾಯ ಉಪಶಮನ ಆರೈಕೆ ಕೇಂದ್ರವನ್ನು ಅಧ್ಯಯನ ಮಾಡಿ, ಕ್ಷೇತ್ರಕ್ಕೆ ಭೇಟಿ ನಡೆಸಿ, ಇದೇ ರೀತಿ ರಾಜ್ಯದ ಬೇರೆ ಗ್ರಾಮ ಪಂಚಾಯತ್ಗಳಲ್ಲಿ ಅನುಷ್ಠಾನ ಮಾಡಲು ಸರಕಾರ ಯೋಚಿಸಿರುವುದರಿಂದ ಸರಕಾರಕ್ಕೆ ವರದಿ ನೀಡಲು ನಿರಾಮಯ ಸೊಸೈಟಿಗೆ ಭೇಟಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮತ್ತು ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆಜಿ ಅವರೊಂದಿಗೂ ಸಹ ಈ ಬಗ್ಗೆ ಚರ್ಚಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಈ ದಿಸೆಯಲ್ಲಿ ರಕ್ತದ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು. ಇದರಿಂದ ಒಂದಿಷ್ಟು ಜೀವ ಉಳಿಸಲು ಸಾಧ್ಯವಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು. ಅವರು ಭಾನುವಾರ ಮಾಂಗಲ್ಯ ಮಂದಿರ ಕೋಟದಲ್ಲಿ ಮೊಗವೀರ ಯುವ ಸಂಘಟನೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ರಕ್ತನಿಧಿ ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಇವರುಗಳ ಜಂಟಿ ಆಶ್ರಯದಲ್ಲಿ ವಿವಿಧ ಸ್ಥಳೀಯ ಸಂಘಟನೆಗಳಾದ ಬಾರಿಕೆರೆ ಯುವಕ ಮಂಡಲ ಕೋಟ, ಅರಮನೆ ವಿಜಯ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಪಡುಕರೆ, ಬಾಳೆಬೆಟ್ಟು ಫ್ರೆಂಡ್ಸ್, ಹರ್ತಟ್ಟು ಯುವಕ ಮಂಡಲ ಕೋಟ ಹಾಗೂ ವಿನಾಯಕ ಫ್ರೆಂಡ್ಸ್ ಕೋಟತಟ್ಟು ಪಡುಕರೆ ಇವರುಗಳ ಸಹಯೋಗದೊಂದಿಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮೊಗವೀರ ಯುವ ಸಂಘಟನೆ ರಕ್ತದಾನದಂತ ಸಾಮಾಜಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಮಾವಿನಕಟ್ಟೆ ಇಲ್ಲಿನ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಸಮಾರಂಭವು ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಕುಂದಾಪುರದ ಖ್ಯಾತ ವಕೀಲರು ಮತ್ತು ನೋಟರಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆಗಳು ಅತ್ಯಂತ ಅವಶ್ಯಕ. ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆಯಲ್ಲಿ ಅಭಾಗವಹಿಸುದರಿಂದ ಮುಂದಿನ ದಿನಗಳಲ್ಲಿ ಪ್ರಜ್ಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ನಾಯಕರಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು. ಮುಖ್ಯೋಪಾಧ್ಯಾಯರಾದ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದುರ್ಗಾಪರಮೇಶ್ವರಿ ದೇವಸ್ಥಾನ ಸೌಕೂರ ಇಲ್ಲಿನ ವ್ಯವಸ್ಥಾನ ಮಂಡಳಿ ಸದಸ್ಯರಾದ ಜಾಡ್ಕಟು ಅಶೋಕ ಶೆಟ್ಟಿ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮನೋಹರ ದೇವಳದ ವತಿಯಿದ ಕೊಡಮಾಡಿದ ಪಠ್ಯ ಪುಸ್ತಕ ಮತ್ತು ನೋಟ್ಸ್ ಪುಸ್ತಕ ವಿತರಿಸಿದರು. ಶಿಕ್ಷಕಿಯರಾದ ಗೀತಾ ಹೆಚ್. ಕಾಂತಿ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಮೋದಾ ಶೆಟ್ಟಿ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೊರ್ಗಿ ಗ್ರಾಮದ ಮಣೂರು ಮನೆ ಪ್ರದೇಶದಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಬಿ.ಎಸ್. ಅವರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ರವಿವಾರ ನಡೆದಿದೆ. ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲೇ ಕೋಳಿ ಅಂಕ ಜುಗಾರಿ ಆಡುತ್ತಿದ್ದ 1. ತಲ್ಲೂರಿನ ಮಂಜುನಾಥ್ (45) 2. ಮಣೂರು ಗ್ರಾಮದ ಸುಕ್ಷಯ್ (29) 3. ಬೇಳೂರು ಗ್ರಾಮದ ಶರಣ್ (27) 4. ಕೊರ್ಗಿ ಗ್ರಾಮದ ರಮೇಶ್ (32) 5. ಕೆದೂರು ಗ್ರಾಮದ ರಜತ್ (27) ಎಂಬುವರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಆರೋಪಿಗಳಿಂದ 1,600 ನಗದು, 2 ಜೀವಂತ ಕೋಳಿ ಹುಂಜಗಳು, ಒಂದು ಕೋಳಿ ಬಾಳು, ಕೋಳಿಗಳ ಕಾಲಿಗೆ ಕತ್ತಿ ಕಟ್ಟಲು ಬಳಸಿದ ಹಗ್ಗ, ಎರಡು ಬೀಣಿ ಕೈಚೀಲಗಳು ಸೇರಿದಂತೆ ಹೊಂಡಾ ಶೈನ್ ಬೈಕ್, ಕೆಂಪು…
