Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಿಷ್ಪಕ್ಷಪಾತವಾದ ವರದಿಗಳ ಮುಂಗಾರು ಪತ್ರಿಕೆಗೆ ತನ್ನದೇ ಆದ ಘನತೆ ತಂದುಕೊಟ್ಟಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ನಿರ್ಭಿತ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಪತ್ರಕರ್ತರಾಗಿದ್ದರು. ಅವರ ಆದರ್ಶ, ಧ್ಯೇಯ ಧೋರಣೆಗಳನ್ನು ಇಂದಿನ ಪತ್ರಕರ್ತರು ಮನಗಾಣಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಜ್ಞಾನವಸಂತ ಶೆಟ್ಟಿ ಬ್ರಹ್ಮಾವರ ತಿಳಿಸಿದರು. ವಡ್ಡರ್ಸೆ ಮಹಾಲಿಂಗೇಶ್ವರ ಸಭಾಭವನದಲ್ಲಿ ನಿಮ್ಮ ಅಭಿಮತ ಪಾಕ್ಷಿಕ ಪತ್ರಿಕೆ ಹಾಗೂ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಡ್ಡರ್ಸೆಯವರ ಬದುಕು, ಬರಹದ ಕುರಿತು ಅವರು ಮಾತನಾಡಿದರು. ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ ವಡ್ಡರ್ಸೆಯವರು, ಮುಂದೆ ಮುಂಗಾರು ಪತ್ರಿಕೆ ಆರಂಭಿಸುವ ಮೂಲಕ ಹಲವಾರು ಪತ್ರಕರ್ತರಿಗೆ ಅವಕಾಶ ಒದಗಿಸಿದ್ದಾರೆ. ಪತ್ರಿಕೋಧ್ಯಮದ ಜವಾಬ್ದಾರಿ, ಕರ್ತವ್ಯ, ಪತ್ರಕರ್ತನ ಜವಾಬ್ದಾರಿ ಇತ್ಯಾದಿಗಳನ್ನು ಅವರ ವರದಿ, ಬರಹಗಳ ಮೂಲಕ ಮನಗಾಣಬಹುದು ಎಂದರು. ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಭಾಕರ ಆಚಾರ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರಿಗೆ ನೂತನವಾಗಿ ರಚನೆಗೊಂಡ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಗೋಪಾಲ ಪೂಜಾರಿ ಅವರ ಅಭಿಮಾನಿಗಳು ಬೈಂದೂರು ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ನಾಲ್ಕು ಭಾರಿ ಶಾಸಕರಾಗಿ ಹತ್ತಾರು ಜನಪರ ಯೋಜನೆಗಳನ್ನು ಈ ಭಾಗದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಲ್ಲದೇ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಶಾಸಕರನ್ನು ಈ ಭಾರಿಯೂ ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ. ಮುಖ್ಯಮಂತ್ರಿಗಳ ಈ ನಡೆಯನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ವಿಶೇಷ ಪುಷ್ಪಲಂಕಾರ ಸೇವೆಯು ಭಕ್ತಾಧಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಸುಮಾರು 25 ಸಾವಿರ ರೂ. ಮೌಲ್ಯದ ಮಲ್ಲಿಗೆ ಹೂಗಳಿಂದ ಶ್ರೀ ದೇವಿಯನ್ನು ಅಲಂಕರಿಸಿ, ಮಂಗಳ ವಾದ್ಯ ಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಳದ ಅರ್ಚಕ ಗಣಪತಿ ಸುವರ್ಣ ಪೂಜೆ ನೆರವೇರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿ ಬೈಂದೂರು, ವಂಡ್ಸೆ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ಹಾಗೂ ಕೋಟದ ವತಿಯಿಂದ ನಾಲ್ಕನೇ ಭಾರಿಗೆ ರಾಜ್ಯಸಭೆಗೆ ಆಯ್ಕೆಯಾದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಕಟ್‌ಬೆಲ್ತೂರು ಶ್ರೀ ಭದ್ರಮಹಾಕಾಳಿ ಸಭಾಭವನ ಹಾಗೂ ಕುಂದಾಪುರದ ಆರ್.ಎನ್. ಶೆಟ್ಟಿ ಮಿನಿ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಕಟ್‌ಬೆಲ್ತೂರಿನಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಯು.ಆರ್.ಸಭಾಪತಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಹಿರಿಯಣ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಜ್ಯೋತಿ, ತಾಪಂ ಸದಸ್ಯ ರಾಜು ದೇವಾಡಿಗ, ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಂ.ಎ.ಗಫೂರ್, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ತಾಲೂಕು ಕೆಡಿಪಿ ಸದಸ್ಯ ಪ್ರಸನ್ನಕುಮಾರ್, ಸೇವಾದಳ ಅಧ್ಯಕ್ಷ ಅಶೋಕ್ ಕೊಡವೂರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರಿಗೆ ಯಕ್ಷರಸವನ್ನು ಸವಿಯುವ ಸದಾವಕಾಶ ಸಾಕಷ್ಟು ಒದಗಿ ಬರುತ್ತಿದೆ. ಜೂನ್. 18ರ ಶನಿವಾರ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಸಮಾಗಮ ನಡೆಯಲಿದೆ. ಸುದೀಪ್ ಶೆಟ್ಟಿ ಹೆಬ್ಬಾಡಿ ಹಾಗೂ ಮೋಹನ್ ಅಂಪಾರು ಅವರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಯಕ್ಷಗಾನದಲ್ಲಿ ಮೂರು ಪ್ರಸಂಗಗಳಿದ್ದು ಯುಕ್ತಿ ವಿಜಯದಲ್ಲಿ ತೆಂಕು ಬಡಗಿನ ಸವ್ಯಸಾಚಿ ರವೀಂದ್ರ ಶೆಟ್ಟಿ ಹೊಸಂಗಡಿ ಅವರ ಗಾನ, ಸೀತರಾಂ ಕುಮಾರ್, ಅರುಣ್ ಕುಮಾರ್ ಜಾರ್ಕಳ, ಕ್ಯಾದಗಿ ಮಹಾಬಲೇಶ್ವರ ಭಟ್ ಅವರುಗಳ ಹಾಸ್ಯ ರಂಜಿಸಲಿದೆ. ಶಿಷ್ಯ ವಿಜಯದಲ್ಲಿ ಅಂಕೋಲ ಮತ್ತು ಹಿಲ್ಲೂರರ ಸ್ವರ್ಧಾತ್ಮಕ ಭಾಗವತಿಕೆ, ಯಕ್ಷರಂಗದ ಅನುಭವಿ ಕಲಾವಿದರಾದ ಆರ‍್ಗೋಡು, ಕೃಷ್ಣಯಾಜಿ, ಪ್ರಸನ್ನ ಶಶಿಕಾಂತ್ ಅವರುಗಳ ಪಾತ್ರ ಮನಮೆಚ್ಚಲಿದೆ. ಭಕ್ತ ವಿಜಯದಲ್ಲಿ ಅಮೀನ್ ಹಾಗೂ ಮಯ್ಯರ ಸ್ನೇಹಪೂರ್ವಕ ದ್ವಂದ್ವ ಒಂದೆಡೆ, ಜಲವಳ್ಳಿ ಮಂಕಿ, ಬೆದ್ರಾಡಿ ಅವರುಗಳ ಮಾತು, ಗತ್ತು, ಗಾಂಭೀರ್ಯ ಯಕ್ಷಗಾನದ ಮೆರಗು ಹೆಚ್ಚಿಸಲಿದೆ. ಹೀಗೆ ಹತ್ತಾರು ವಿಶೇಷತೆಗಳಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ವಂಡ್ಸೆ: ಜನರಿಗೆ ಸೇವೆಗಳು ಹತ್ತಿರದಲ್ಲಿ ಸಿಗಬೇಕು ಎನ್ನುವ ಉದ್ದೇಶದಿಂದ ವಂಡ್ಸೆಯಲ್ಲಿ ಮೆಸ್ಕಾಂ ಸೆಕ್ಷನ್ ಕಛೇರಿಯನ್ನು ಆರಂಭಿಸಲಾಗುತ್ತಿದೆ. ವಂಡ್ಸೆ ಸೇರಿದಂತೆ ಬೈಂದೂರು ವಿಭಾಗದ ಶಿರೂರು, ನಾವುಂದ, ನಾಡದಲ್ಲಿ ಸೆಕ್ಷನ್ ಕಛೇರಿಯನ್ನು ಉದ್ಘಾಟಿಸಲಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಪೇಟೆಯ ಹಳೆ ಗ್ರಂಥಾಲಯದ ಹತ್ತಿರ ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿ ನಿ., ಇದರ ಶಾಖಾಧಿಕಾರಿಯವರ ಕಛೇರಿ ಉಧ್ಘಾಟಿಸಿ ಮಾತನಾಡಿದರು. ಮೆಸ್ಕಾಂ ನಿರ್ದೇಶಕರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರಿಯಾಜ್ ಆಹಮ್ಮದ್, ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಪುಟ್ಟಸ್ವಾಮಿ, ತಾ.ಪಂ.ಸದಸ್ಯ ಉದಯ ಜಿ. ಪೂಜಾರಿ, ರಾಜು ದೇವಾಡಿಗ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮೆಸ್ಕಾಂನ ಎಇಇ ಯಶವಂತ್, ಜೆಇ ರಾಜೇಶ, ಅಸಿಸೆಂಟ್ ಇಂಜಿನಿಯರ್ ವಿಜಯಕುಮಾರ್, ತಾ.ಪಂ.ಮಾಜಿ ಸದಸ್ಯರಾದ ಎಚ್.ಮಂಜಯ್ಯ ಶೆಟ್ಟಿ, ರಮೇಶ ಗಾಣಿಗ ಕೊಲ್ಲೂರು, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷರಾದ ಶಾರದಾ ರುದ್ರಯ್ಯ ಆಚಾರ್, ಸದಸ್ಯರಾದ ಗುಂಡು ಪೂಜಾರಿ,…

Read More

ಪದವೀಧರರ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಸಚಿವ ಕಿಮ್ಮನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿನ ಡಿ.ಇಡಿ., ಬಿ.ಇಡಿ., ಬಿ.ಪಿ.ಇಡಿ., ಎಂ.ಇಡಿ. ಎಂ.ಪಿ.ಇಡಿ. ಮುಂತಾದ ಶಿಕ್ಷಣ ಪದವೀಧರರ ನಿರುದ್ಯೋಗ ಮತ್ತು ಅಭದ್ರತೆ ನಿವಾರಣೆಗೆ ಕ್ರಮ, ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕ ಹುದ್ದೆ ಭರ್ತಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಹುದ್ದೆ ಭರ್ತಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಿಸಿಕೊಂಡ ೩೦ ಸಾವಿರ ಅತಿಥಿ ಶಿಕ್ಷಕರಿಗೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರೂ. ೧೩೬೫೦ ವೇತನ ಮತ್ತು ಪಿ.ಎಫ್. ಹಾಗೂ ಇ.ಎಸ್.ಐ. ವ್ಯವಸ್ಥೆ ಜಾರಿ, ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸರಕಾರದ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ, ಡಿ.ಇಡಿ., ಬಿ.ಇಡಿ. ಹಾಗೂ ಎಂ.ಇಡಿ. ಪದವೀಧರ ಶಿಕ್ಷಕರಿಗೆ ಉದ್ಯೋಗ ಭದ್ರತೆ ಅಥವಾ ನಿರುದ್ಯೋಗ ಭತ್ಯೆ ನೀಡಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ವರ್ಷ ಹೇನಬೇರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಅವರ ಕೊಲೆಯಾದಾಗ ಸ್ಥಳಕ್ಕೆ ಭೇಟಿನೀಡಿದ ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ಜನನಾಯಕರು ಹೇನಬೇರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆಯಿತ್ತಿದ್ದರು. ಅದನ್ನು ಅನುಸರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಡಾಂಬರು ರಸ್ತೆ ನಿರ್ಮಾಣವಾಗಿದೆ. ಸೋಲಾರ್ ದಾರಿದೀಪ ಅಳವಡಿಸಲಾಗಿದೆ. ಕುಡಿಯುವ ನೀರಿನ ಕೊರತೆ ನಿವಾರಿಸಲಾಗಿದೆ. ಅಕ್ಷತಾ ದೇವಾಡಿಗರ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಇದೀಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಓಡಿಸಲಾಗುತ್ತಿದೆ. ಆ ಮೂಲಕ ಆಗ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಪ್ರಥಮ ದರ್ಜೆ ಕಾಲೇಜು ಮಾರ್ಗವಾಗಿ ಹೇನಬೇರು ಮತ್ತು ಕುಂದಾಪುರ ನಡುವೆ ಓಡಾಡಲಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಅವರು ಸೋಮವಾರ ಉದ್ಘಾಟಿಸಿ, ಮಾತನಾಡಿದರು. ಎಲ್ಲರನ್ನು ಸ್ವಾಗತಿಸಿದ ಸಂಸ್ಥೆಯ ಕುಂದಾಪುರ ಡೀಪೊ ಮ್ಯಾನೇಜರ್ ಎಸ್. ತಾರಾನಾಥ್ ಕುಂದಾಪುರ ಶಿರೂರು ನಡುವೆ ಚಲಿಸುವ ಈ ಬಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆರಿಗೆಯಾಗುವ ಮೊದಲು ಆರೋಗ್ಯವಂತವಾಗಿದ್ದ ಗರ್ಭಿಣಿ ಹಾಗೂ ಸಹಜ ಬೆಳವಣಿಗೆ ಹೊಂದಿದ್ದ ಮಗು ಹೆರಿಗೆ ಸಮಯದಲ್ಲಿ ಮೃತಪಟ್ಟಿರುವ ಬಗ್ಗೆ ಮಹಿಳೆಯ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆ ವೇಳೆ ಶಿಶುವಿನ ಸಾವು ಸಂಭವಿಸಲು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ತಾಲೂಕಿನ ಇಡೂರು-ಕುಂಜ್ಞಾಡಿಯ ಮಂಜುಳಾ ಆಚಾರ್ ಎಂಬವರು ಕಳೆದ ಒಂದೂವರೆ ವರ್ಷಗಳ ಹಿಂದೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಕಾರ್ಪೆಂಟರ್ ಆಗಿರುವ ಗಣೇಶ್ ಆಚಾರ್ ಎಂಬವರನ್ನು ವಿವಾಹವಾಗಿದ್ದು ಚೊಚ್ಚಲ ಗರ್ಭಿಣಿಯಾಗಿದ್ದ ಅವರನ್ನು ಭಾನುವಾರ ತಡರಾತ್ರಿ ಅವರಿಗೆ ನೋವು ಕಾಣಿಸಿಕೊಂಡಿದ್ದು ಆ ಕೂಡಲೇ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಮೂರು ಗಂಟೆ ವೇಳೆಗೆ ವಿಪರೀತ ನೋವು ಕಾಡಿದರೂ ರಾತ್ರಿ ಡ್ಯೂಟಿಯಲ್ಲಿದ್ದ ದಾದಿ ಮಾತ್ರವೇ ಮಂಜುಳಾರ ನೋಡಿಕೊಂಡಿದ್ದಳೆನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಳಿಗ್ಗೆ ಸುಮಾರಿಗೆ ಬಂದ ಹೆರಿಗೆ ವೈದ್ಯ ಚಂದ್ರ ಮರಕಲ ಅವರು ಮಂಜುಳಾರನ್ನು ಪರೀಕ್ಷಿಸಿ ಕೂಡಲೇ ಶಸ್ತ್ರ ಚಿಕಿತ್ಸೆ ಒಳಪಡಿಸಿದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಕಲಾವಿದ ಹನಮಂತ ಪೂಜಾರ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ ‘ಆಯ್ಕೆ’ಗೆ ನಟ, ನಟಿಯರು ಬೇಕಾಗಿದ್ದು, ಬೈಂದೂರಿನ ಲಾವಣ್ಯ ರಂಗಮನೆಯಲ್ಲಿ ಕಲಾವಿದರ ಆಡಿಷನ್ ನಡೆಯಲಿದೆ. ಜೂನ್ ೧೪ ಮತ್ತು ೧೫ರ ಸಂಜೆ ೪ಗಂಟೆಯಿಂದ ಇತ್ತಿಚಿನ ಭಾವಚಿತ್ರದೊಂದಿಗೆ ಆಸಕ್ತ ಕಲಾವಿದರು ಸಂದರ್ಶಿಸುವಂತೆ ಕೋರಲಾಗಿದೆ. ಮಾಹಿತಿಗೆ 9686661618 ಸಂಪರ್ಕಿಸಬಹುದು.

Read More