ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆರಿಗೆಯಾಗುವ ಮೊದಲು ಆರೋಗ್ಯವಂತವಾಗಿದ್ದ ಗರ್ಭಿಣಿ ಹಾಗೂ ಸಹಜ ಬೆಳವಣಿಗೆ ಹೊಂದಿದ್ದ ಮಗು ಹೆರಿಗೆ ಸಮಯದಲ್ಲಿ ಮೃತಪಟ್ಟಿರುವ ಬಗ್ಗೆ ಮಹಿಳೆಯ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆ ವೇಳೆ ಶಿಶುವಿನ ಸಾವು ಸಂಭವಿಸಲು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ತಾಲೂಕಿನ ಇಡೂರು-ಕುಂಜ್ಞಾಡಿಯ ಮಂಜುಳಾ ಆಚಾರ್ ಎಂಬವರು ಕಳೆದ ಒಂದೂವರೆ ವರ್ಷಗಳ ಹಿಂದೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಕಾರ್ಪೆಂಟರ್ ಆಗಿರುವ ಗಣೇಶ್ ಆಚಾರ್ ಎಂಬವರನ್ನು ವಿವಾಹವಾಗಿದ್ದು ಚೊಚ್ಚಲ ಗರ್ಭಿಣಿಯಾಗಿದ್ದ ಅವರನ್ನು ಭಾನುವಾರ ತಡರಾತ್ರಿ ಅವರಿಗೆ ನೋವು ಕಾಣಿಸಿಕೊಂಡಿದ್ದು ಆ ಕೂಡಲೇ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಮೂರು ಗಂಟೆ ವೇಳೆಗೆ ವಿಪರೀತ ನೋವು ಕಾಡಿದರೂ ರಾತ್ರಿ ಡ್ಯೂಟಿಯಲ್ಲಿದ್ದ ದಾದಿ ಮಾತ್ರವೇ ಮಂಜುಳಾರ ನೋಡಿಕೊಂಡಿದ್ದಳೆನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಳಿಗ್ಗೆ ಸುಮಾರಿಗೆ ಬಂದ ಹೆರಿಗೆ ವೈದ್ಯ ಚಂದ್ರ ಮರಕಲ ಅವರು ಮಂಜುಳಾರನ್ನು ಪರೀಕ್ಷಿಸಿ ಕೂಡಲೇ ಶಸ್ತ್ರ ಚಿಕಿತ್ಸೆ ಒಳಪಡಿಸಿದರೂ ಫಲಕಾರಿಯಾಗದೇ ಶಿಶು ಮರಣವನ್ನಪ್ಪಿತ್ತು. ಇದಕ್ಕೆ ಹೊಕ್ಕುಳ ಬಳ್ಳಿ ಹೊರಗೆ ಬಂದಿದ್ದೇ ಕಾರಣ ಎಂದು ವೈದ್ಯರು ಹೇಳಿದರಾದರೂ ಅದಕ್ಕೊಪ್ಪದ ಮಂಜುಳಾರ ಮನೆಯವರು ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶಕ್ಕಿಳಿದಿದ್ದರು. ನಾವು ನೋವು ಕಾಣಿಸಿದ ಕೂಡಲೇ ಅಸ್ಪತ್ರೆಗೆ ಆಗಮಿಸಿದರೂ ರಾತ್ರಿ ವೇಳೆ ಬರಲು ಇದು ಖಾಸಗಿ ಆಸ್ಪತ್ರೆಯಲ್ಲಾ ಎಂದು ತೀರಾ ನಿರ್ಲಕ್ಷ್ಯ ತೋರಿದ ವೈದ್ಯರು ದಾದಿ ಮುಖಾಂತರ ಚಿಕಿತ್ಸೆ ನೀಡಿ ಬೆಳಿಗ್ಗೆ ವೇಳೆ ಬಂದು ತರಾತುರಿಯಿಂದ ಶಸ್ತ್ರ ಚಿಕಿತ್ಸೆಗೆ ಒಳ ಪಡಿಸಿದ್ದಾರೆ. ರಾತ್ರಿಯೇ ಬಂದಿದ್ದರೆ ಅನಾಹುತ ನಡೆಯುತ್ತಿರಲಿಲ್ಲಾ ಮಗುವಿನ ಜೀವ ಉಳಿಸಬಹುದಿತ್ತು ಅಸಮಾಧಾನ ವ್ಯಕ್ತಪಡಿಸಿ ಮುಂದೆ ಇಲ್ಲಿ ದಾಖಲಾಗುವ ಬಡ ರೋಗಿಗಳ ಬಗ್ಗೆ ವೈದ್ಯರು ಇಂತಹ ನಿರ್ಲಕ್ಷ್ಯ ತಾಳದಿರಲಿ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ವೈದ್ಯರ ನಿರ್ಲಕ್ಷ ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ. ಹೆರಿಗೆ ವೇಳೆ ಹೊಕ್ಕಳು ಬಳ್ಳಿ ಹೊರಕ್ಕೆ ಬಂದ ಕಾರಣ ಮಗುವಿನ ಉಸಿರಾಟದಲ್ಲಿ ಏರುಪೇರಾಗಿತ್ತು. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಗುವನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಸುಮಾರು ಎರಡು ಸಾವಿರ ಹೆರಿಗೆ ಪ್ರಕರಣಗಳನ್ನು 1 ಅಥವಾ 2 ಇಂತಹ ಪ್ರಕರಣಗಳು ಇದಿರುಗೊಳ್ಳುತ್ತವೆ. ಕರಳು ಬಳ್ಳಿ ಹೊರಕ್ಕೆ ಬಂದರೆ ಮಗುವನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಕೆಲವು ಪ್ರಕರಣಗಳನ್ನು ಉಳಿಸಿಕೊಂಡ ಉದಾಹರಣೆಗಳೂ ಇದೆ. ಆದರೆ ಈ ಪ್ರಕರಣದಲ್ಲಿ ಸಾಧ್ಯವಾಗಿಲ್ಲ. ಇಲ್ಲಿ ನಿರ್ಲಕ್ಷ ಮಾಡಿದ್ದೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು ೫೦ಕ್ಕೂ ಹೆಚ್ಚಿನ ಹೆರಿಗೆಯನ್ನು ಯಶಸ್ವಿಯಗಿದೆ ಮಾಡಲಾಗುತ್ತಿದೆ. – ಚಂದ್ರ ಮರಕಲ, ವೈದ್ಯ,