ಆದಿತ್ಯ ಪ್ರಸಾದ್ | ಕುಂದಾಪ್ರ ಡಾಟ್ ಕಾಂ ಲೇಖನ.ವರ್ಷವೂ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಇದು ಬರಿಯ ಛಾಯಾಗ್ರಾಹಕರ ಆಚರಣೆಯ ದಿನವಾಗಿರದೇ ಛಾಯಾಗ್ರಹಣ ಕಲೆಯ ಇತಿಹಾಸ, ತಾಂತ್ರಿಕವಾಗಿ ಹೇಗೆ ಬೆಳೆದು ಅಭಿವೃದ್ಧಿ ಆಯ್ತು ಮತ್ತು ಛಾಯಾಗ್ರಹಣವು ಸಮಾಜದ ಮೇಲೆ ಯಾವ ರೀತಿ ಪ್ರಭಾವವನ್ನು ಬೀರಿದೆ ಎನ್ನುವ ಬಗ್ಗೆಯೂ ಸ್ಮರಿಸುವ ಹಾಗೂ ಛಾಯಾಗ್ರಾಹಕನ ಸೃಜನಶೀಲತೆಯನ್ನು ಗೌರವಿಸುವ ವಿಶೇಷ ಸಂದರ್ಭವಾಗಿದೆ. ಛಾಯಾಗ್ರಹಣ ಕೇವಲ ಚಿತ್ರಗಳನ್ನು ಸೆರೆಹಿಡಿಯುವ ಒಂದು ತಂತ್ರವಲ್ಲ, ಬದಲಿಗೆ ಕಲೆ, ವಿಜ್ಞಾನ ಮತ್ತು ಸಂಸೃತಿಯನ್ನು ಬೆಸೆಯುವ ಒಂದು ಮಾಧ್ಯಮ. ಮಾನವಕುಲದ ದೃಶ್ಯ ಸ್ಮರಣೆಯ ದಾಖಲೆಯಾಗಿ, ಛಾಯಾಗ್ರಹಣ ತನ್ನ ಅಸ್ತಿತ್ವವನ್ನು ಕಂಡುಕೊಂಡ ದಿನದಿಂದಲೂ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಅದು ನಿನ್ನೆಯ ಕಥೆಗಳನ್ನು ಹೇಳುವ, ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಇತಿಹಾಸವನ್ನು ದಾಖಲಿಸುವ ಒಂದು ಅದ್ಭುತ ಕಲೆ. ಮನುಷ್ಯನು ಬೆಳಕನ್ನು ಬಳಸಿ ಚಿತ್ರಗಳನ್ನು ರಚಿಸುವ ಕನಸು ಕಂಡ ದಿನದಿಂದ ಇಂದಿನ ಡಿಜಿಟಲ್ ಯುಗದವರೆಗೆ, ಛಾಯಾಗ್ರಹಣವು ನಿರಂತರವಾಗಿ ವಿಕಸನಗೊಂಡು ಬೆಳೆದು ಬಂದಿದೆ. ನಿನ್ನೆಯ ದಿನಗಳು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ರಿ. ಕರ್ನಾಟಕ – ಕೇರಳ ವತಿಯಿಂದ ಸೋಮವಾರ 18ನೇ ವರ್ಷದ ಕೊರಗರ ಭೂಮಿ ಹಬ್ಬ ಹೆಬ್ರಿ ಬಡಾಗುಡ್ಡೆ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಹೆಬ್ರಿ ಬಸ್ ನಿಲ್ದಾಣದಿಂದ ಬಡಾಗುಡ್ಡೆ ಸಮುದಾಯ ಭವನಕ್ಕೆ ಹೊರಟ ಕಾಲ್ನಡಿಗೆ ಜಾಥಕ್ಕೆ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರನಾಥ ಬಂಗೇರರವರು ಡೋಲು ಬಾರಿಸುವುದರೊಂದಿಗೆ ಚಾಲನೆ ನೀಡಿ, ಭೂಮಿ ಹಬ್ಬಕ್ಕೆ ಶುಭವನ್ನು ಕೋರಿದರು. ಜಾಥದಲ್ಲಿ ಡೋಲು, ಚೆಂಡೆ, ಕೊಳಲು ವಾದನಕ್ಕೆ ಮಕ್ಕಳು, ಮಹಿಳೆಯರು, ಯುವಜನರು, ವಯಸ್ಕರು ಸಂಭ್ರಮದಿಂದ ಕುಣಿದಾಡಿದರು. ಸುರಿಯುವ ಮಳೆಯನ್ನು ಲೆಕ್ಕಿಸದೆ ʼಆದಿವಾಸಿ ಕೀ ಜೈʼ, ʼಬಿರ್ಸ ಮುಂಡರಿಗೆ ಜೈʼ, ʼಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟಕ್ಕೆ ಜೈʼ ಎಂದು ಘೋಷಣೆ ಕೂಗುತ್ತ ಹೊರಟರು. ಬಡಾಗುಡ್ಡೆ ಸಮುದಾಯ ಭವನದ ಮುಂಭಾಗದಲ್ಲಿ ಭೂಮಿ ಹಬ್ಬದ ಧ್ವಜಾರೋಹಣವನ್ನು ಸಮುದಾಯದ ಮುಖಂಡರಾದ ಬೊಗ್ರ ಕೊಕ್ಕರ್ಣೆರವರು ನೆರವೇರಿಸಿ ಭೂಮಿ ಹಬ್ಬದ ಮಹತ್ವ ಮತ್ತು ವಿಶೇಷತೆಯನ್ನು ಸಾರಿದರು. ನಂತರ ಕಾರ್ಯಕ್ರಮದಲ್ಲಿ ಭಾಗಿಯಾದ ಸಮುದಾಯ ಬಾಂಧವರೆಲ್ಲರಿಗೂ ಸಮುದಾಯದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹಿಂದೂ ವಿರೋಧಿ ಶಕ್ತಿಗಳು ಅಪಪ್ರಚಾರ ಈ ಹಿಂದಿನಿಂದ ಮಾಡುತ್ತಾ ಬಂದಿದ್ದು ಈ ವಿಚಾರವಾಗಿ ಧರ್ಮಸ್ಥಳದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಬಿಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ತೇಜೋವಧೆ ಮಾಡುವ ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಎಂದು ಬೈಂದೂರು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾ ಸಂಘದ ಕಾರ್ಯದಲ್ಲಿ ನಿರತರಾಗಿ, ದೇಶದ ಪರವಾದ ವಿಚಾರಧಾರೆಯ ಧ್ಯೇಯವಿಟ್ಟುಕೊಂಡು ಮನೆ ಮಠವನ್ನು, ಕುಟುಂಬವನ್ನು ತ್ಯಜಿಸಿ ದೇಶಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಬಿಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರಿಗೆ ಯಾವುದೇ ನೈತಿಕತೆ ಇಲ್ಲ, ಇದೆಲ್ಲವೂ ಧರ್ಮ ಕಾರ್ಯದಲ್ಲಿ ತೊಡಗಿಕೊಂಡವರ ತೇಜೋವಧೆ ಮಾಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಎಂದು ಗುಡುಗಿದ್ದಾರೆ. ಬಾಲ್ಯದಿಂದಲೂ ದೇಶದ ಪರ ಚಿಂತನೆಗಳು, ಹಿಂದುತ್ವದ ವಿಚಾರಧಾರೆಗಳೊಂದಿಗೆ ಬೆಳೆದು ಇಂಜಿನಿಯರಿಂಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.18: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಗಸ್ಟ್ 19ರಂದು ಅಂಗನವಾಡಿ, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯುಸಿ ಮತ್ತು ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ. ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮಾಜ ಎಂದು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಸಮಾಜದ ಹಿಂದೆ ಬೆನ್ನಲುಬಾಗಿ ನಿಲ್ಲಬೇಕಾಗಿದೆ. ಕೋಟೇಶ್ವರ ಘಟಕವು ಎಲ್ಲಾ ಘಟಕಗಳಿಗೂ ಮಾದರಿಯಾಗಿ ತನ್ನ ಕೆಲಸವನ್ನು ಮಾಡುತ್ತಿದೆ. ಬಡವರ ಕಲ್ಯಾಣದ ಜೊತೆಗೆ ಶೈಕ್ಷಣಿಕ ನೆರವು ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ಚಾಚಿದಾಗ ಮಾತ್ರ ಸಮಾಜ ಸೇವೆಗೊಂದು ಬೆಲೆ ಇರುತ್ತದೆ. ನಾವು ಮಾಡುವ ಇತಂಹ ಸಮಾಜ ಸೇವೆಯೇ ನಮಗೆ ದೊಡ್ಡ ಶ್ರೀರಕ್ಷೆಯಾಗಲಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು. ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ಇವರ ಆಶ್ರಯದಲ್ಲಿ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 20ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕೋಟೇಶ್ವರ ಘಟಕದ ಅಧ್ಯಕ್ಷ ನಾಗರಾಜ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಒಟ್ಟು 13.92 ಕೋಟಿ ರೂ. ನಷ್ಟ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅನುಮತಿ ನೀಡಿದ್ದಾರೆ. ಕಾರ್ಖಾನೆಗೆ ಒಟ್ಟು 13.92 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಲು ಆಡಳಿತ ಮಂಡಳಿ, ಟೆಂಡರ್ ಕಮ್ ಹರಾಜಿನ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಆಗಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಿ. ನಾಯಕ್ ಮತ್ತು ಜಿ. ಎನ್. ಲಕ್ಷ್ಮೀನಾರಾಯಣ ಅವರ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಲ್ಲಿ ಕಂಡು ಬಂದಿದೆ. ಹೀಗಾಗಿ ಈ ಹಿಂದೆ ದಾಖಲಾಗಿರುವ ಕ್ರಿಮಿನಲ್‌ಮೊಕದ್ದಮೆಗೆ ಸಂಬಂಧಿಸಿದಂತೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ . ನಾಯ್ಕ ಹಾಗೂ ಜಿ. ಎನ್. ಲಕ್ಷ್ಮೀನಾರಾಯಣ ಅವರ ವಿರುದ್ಧ ಕ್ರಿಮಿನಲ್‌ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಹಾಗೂ ಈ ಇಬ್ಬರು ಅಧಿಕಾರಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯ ಸರಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ “ಯುವ ನಿಧಿ” ಯೋಜನೆಯ ಮಾಹಿತಿಯ ಬ್ಯಾನರ್ ಹಾಗೂ ಪೋಸ್ಟರ್‌ನ್ನು ಹಸ್ತಾಂತರಿಸಲಾಯಿತು. ಈ ಬ್ಯಾನರನ್ನು ಗ್ರಾಮ ಪಂಚಾಯತಿ ಆವರಣದಲ್ಲಿ ಅಳವಡಿಸಲಾಗಿದೆ. ಹಾಗೂ 2024-25 ನೇ ಸಾಲಿನ “ಯುವ ನಿಧಿ”ಯ ನೊಂದಣಿ ಅಭಿಯಾನವನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಸಲು ಅನುಮತಿಯನ್ನು ಕೋರಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಕುಂದಾಪುರ ತಾಲೂಕು ಸದಸ್ಯರಾದ ಝಹೀರ್ ನಾಖುದಾ ಗಂಗೊಳ್ಳಿ, ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾದ ಅನೂಪ್ ಶೇಟ್, ಸಿಬ್ಬಂದಿಗಳಾದ ಸಂದೀಪ್, ಕಾರ್ತಿಕ್, ರಂಜಿತ್, ನಫೀಜ್, ಸುನಿಲ್, ಭಾಗ್ಯ, ಚೈತ್ರ ಹಾಗೂ ಇತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕವಿಗಳ ಕವಿ ಗೊಪಾಲಕೃಷ್ಣ ಅಡಿಗರ ಹುಟ್ಟು ಪರಿಸರದ ಭಾಷೆ ಬದುಕಿನ ಸೊಗಡನ್ನೊಳಗೊಂಡಿರುವ ಯಾವುದೇ ಉತ್ತಮ ಪುಸ್ತಕಕ್ಕೆ ಮೊಗೇರಿ ಸಮಷ್ಟಿ ವಾರ್ಷಿಕ ಪುಸ್ತಕ ಪುರಸ್ಕಾರವನ್ನು ನೀಡಲಾಗುವುದು ಎಂದು ಮೊಗೇರಿ ಅಡಿಗರ ಸಮಷ್ಟಿ ಬಳಗದ ಮುಖ್ಯಸ್ಥರಾದ ಎಂ. ಜಯರಾಮ ಅಡಿಗರು ಮೊಗೇರಿ ಸ್ವಾಣಿ ಹಬ್ಬದಲ್ಲಿ ಪ್ರಕಟಿಸಿದರು. ಮೊದಲ ಪುರಸ್ಕಾರಕ್ಕೆ ಕೆ. ಪುಂಡಲೀಕ ನಾಯಕ್‌ರ ‘ಭಾವ ಸ್ಮೃತಿ’ ಆತ್ಮಕಥನ ಆಯ್ಕೆ ಆಗಿದೆ ಎಂದರು. ಪ್ರತಿ ವರ್ಷ ಯುಗಾದಿಯ ಮುಂಚೆ ಹಿಂದಿನ ವರ್ಷ ಸಿದ್ಧವಾದ ಹೊಸ ಪುಸ್ತಕದ ಹಸ್ತ ಪ್ರತಿ ಅಥವಾ ಡಿಟಿಪಿ ಪ್ರತಿಗಳನ್ನು ಪ್ರಕಾಶನ ಪೂರ್ವದಲ್ಲಿ ಪರಿಶೀಲಿಸಿ ಮೊಗೇರಿ ಸಮಷ್ಟಿ ಪುರಸ್ಕಾರವನ್ನು ಸ್ವಾಣಿ ಹಬ್ಬದಲ್ಲಿ ಪ್ರಕಟಿಸಲಾಗುತ್ತದೆ. ಮೊಗೇರಿ ಸ್ವಾಣಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಲೇಖಕಿ, ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಕಮಲಶಿಲೆ ನಿರ್ದೇಶಕತ್ವದಲ್ಲಿ ಗೃಹಿಣೀ ಶಕ್ತಿ, ಮಕ್ಕಳ ಅಭಿ ವ್ಯಕ್ತಿ ಕಾರ್ಯಕ್ರಮ ಸರಣಿಯನ್ನು ಉದ್ಘಾಟಿಸಲಾಯಿತು. ಅಧ್ಯಕ್ಷತೆ ವಹಿಸಲಿದ್ದ ಶಾಸಕ ಗುರುರಾಜ ಗಂಟಿಹೊಳಿ ಅವರು ಮುಂಜಾನೆ ಧರ್ಮಸ್ಥಳದಲ್ಲಿ ಇರಬೇಕಾದ ಸಂದರ್ಭ ಉಂಟಾದ್ದರಿಂದ ಹಿಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಗೀತೆಯ ಸಾರ ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿದೆ. ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಾರೆ, ನೋಡಿ ಕಲಿಯುತ್ತಾರೆ. ಆದ್ದರಿಂದ ಹಿರಿಯರು ಉತ್ತಮ ಸಂಸ್ಕಾರಗಳನ್ನು ಮಕ್ಕಳಿಗೆ ನೀಡಬೇಕು. ಚಂಚಲ ಮನಸ್ಸಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರು ದಾರಿ ತಪ್ಪುದನ್ನು ತಡೆಯಬಹುದು ಮತ್ತು ಅವರ ಜೀವನವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥೆ ಕಲ್ಪನಾ ಭಾಸ್ಕರ ಹೇಳಿದರು. ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ ವತಿಯಿಂದ ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಜೇಸಿಐ ಗಂಗೊಳ್ಳಿ ಸಹಯೋಗದೊಂದಿಗೆ ಗಂಗೊಳ್ಳಿಯ ಶ್ರೀ ವೀರವಿಠಲ ಸಭಾಗೃಹದಲ್ಲಿ ಶನಿವಾರ ನಡೆದ 39ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು. ಮಕ್ಕಳಲ್ಲಿ ಭಗವಂತನ ಮೇಲೆ ಶ್ರದ್ಧಾ ಭಕ್ತಿಯನ್ನು ಬೆಳೆಸಿದರೆ ಅವರು ಸನ್ಮಾರ್ಗದಲ್ಲಿ ಮುನ್ನಡೆದು ಸತ್ಪ್ರಜೆಗಳಾಗಿ ಸಮಾಜದಲ್ಲಿ ಜೀವಿಸಲು ಸಾಧ್ಯವಿದೆ. ಪರಿಸರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೆದೂರು ಸರಕಾರಿ ಪ್ರೌಢಶಾಲೆ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭ ಇತ್ತೀಚಿಗೆ ನೆರವೇರಿತು. ರೋಟರಿ ಕ್ಲಬ್ ನ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಇಂಟರ್ಯಾಕ್ಟ್ ನ ನೂತನ ಆಧ್ಯಕ್ಷರಾದ ರಶ್ವಿತಾ ಮತ್ತು ಕಾರ್ಯದರ್ಶಿ ಭವಿಷ್ ಅವರು ಪದ ಪ್ರದಾನ ನೆರವೇರಿಸಿ ಕೊಟ್ಟು ಮಾತನಾಡಿ, ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜ ಸೇವೆಯ ಕನಸು ಕಾಣಬೇಕು ಎಂದರು. ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ರಂಜಿತ್ ಕುಮಾರ್ ಶೆಟ್ಟಿ ಮಾತನಾಡಿ, ರೋಟರಿ ಕ್ಲಬ್ ಮತ್ತು ಇಂಟರ್ಯಾಕ್ಟ್ ಕ್ಲಬ್ ನ ಇತಿಹಾಸ ಹಾಗೂ ಉದ್ದೇಶಗಳನ್ನು ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್ ನ ಕಾರ್ಯದರ್ಶಿ ಸುಕುಮಾರ್ ಶೆಟ್ಟಿ,…
