Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ – ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಹಪ್ಪಳ, ಉಪ್ಪಿನಕಾಯಿ ಹಾಗೂ ವಿವಿಧ ರೀತಿಯ ಮಸಾಲ ಪೌಡರ್ ತಯಾರಿಕೆ ತರಬೇತಿಯ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಸಹಾಯಕ ಮಹಾ ಪ್ರಭಂದಕರಾದ ಮಾಲಿನಿ ಸುವರ್ಣ ಅವರು ಮಾತನಾಡಿ, ಬ್ಯಾಂಕಿನ ಹೆಚ್ಚಿನ ಯೋಜನೆಗಳು ಕಿರು ಉದ್ಯಮಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದರ ಬಗೆಗೆ ಪ್ರಯತ್ನ ಮಾಡಿ, ಹಾಗೂ ಉತ್ಪನ್ನವನ್ನು ತಯಾರಿಸುವಾಗ ಗುಣಮಟ್ಟದೊಂದಿಗೆ ಶುಚಿತ್ವದ ಕಡೆಗೆ ಗಮನ ನೀಡಿ ಎಂದರು. ನಂತರ ನಾವು ತಯಾರಿಸುವ ಉತ್ಪನ್ನಗಳಲ್ಲಿ ಹಿಂದಿನ ಕಾಲದ ಅಡುಗೆಯ ರುಚಿ ಹಾಗು ಉತ್ಪನ್ನದಲ್ಲಿ ವೈವಿಧ್ಯತೆಯ ಜೊತೆಗೆ ಶುಚಿತ್ವದ ಕಡೆಗೆ ಗಮನ ಕೊಟ್ಟರೆ, ಗ್ರಾಹಕರು ತಮ್ಮನ್ನು ಹುಡುಕಿಕೊಂಡು ಬರುವ ಮಟ್ಟಿಗೆ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮುಖ್ಯವಾಗಿ ಈಗಿನ ಉದ್ಯಮದಾರರು ತ್ವರಿತ ಯಶಸ್ಸಿಗೆ ಹಾಗೂ ಲಾಭಕ್ಕಾಗಿ ಹಾತೊರೆದು, ಉತ್ಪನ್ನದ ಗುಣಮಟ್ಟವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಂಗಿಯ ಮನೆಯಲ್ಲಿ ಅಣ್ಣನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಿದ್ದಾಪುರದಲ್ಲಿ ಗುರುವಾರ ನಡೆದಿದೆ. ಸಿದ್ದಾಪುರ ಗ್ರಾಮದ ಐರಬೈಲು ನಿವಾಸಿ ಬಸವ ಕುಲಾಲ (66) ಆತ್ಮಹತ್ಯೆ ಮಾಡಿಕೊಂಡವರು. ಹಲವು ವರ್ಷಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದ ಬಸವ ಕುಲಾಲ್ ನ.13ರಂದು ಸಿದ್ದಾಪುರ ಐರಬೈಲಿನಲ್ಲಿರುವ ತನ್ನ ತಂಗಿಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾಂಗ್ರೆಸ್‌ನ ಹಿರಿಯ ಮುಂದಾಳು, ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರಾದ ಡಾ. ಅಭಿಷೇಕ್ ಮನು ಸಿಂಘ್ವಿ ಯವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಶಿಫಾರಸಿನೊಂದಿಗೆ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಸಿ. ಎಂ. ಧನಂಜಯ ಅವರು ನೇಮಕಾತಿ ಮಾಡಿ ಆದೇಶ ನೀಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗೌಡ ಸಾರಸ್ವತ ಸಮಾಜ ಬಾಂಧವರು ಆರಾಧಿಸಿಕೊಂಡು ಬರುತ್ತಿರುವ ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸುತ್ತುಪೌಳಿ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ದೇವಳದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸುತ್ತುಪೌಳಿ ನವೀಕರಣ ಕಾಮಗಾರಿಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ‌ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಗಣಪತಿ ಭಟ್ ರವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಗಣೇಶ ಪ್ರಭು, ಉಪಾಧ್ಯಕ್ಷ ರವಿಕಾಂತ ಶ್ಯಾನುಭಾಗ, ಕಾರ್ಯದರ್ಶಿ ನಾಗರಾಜ ವೆಂಕಟದಾಸ ಪ್ರಭು, ಕೋಶಾಧಿಕಾರಿ ನಾಗರಾಜ ರತ್ನಾಕರ ಪ್ರಭು, ಮಹಿಳಾ ಮಂಡಳಿ ಅಧ್ಯಕ್ಷೆ ಮೇಘಾ ಪೈ, ಕಾರ್ಯದರ್ಶಿ ಅಶ್ವಿನಿ‌ ಕಾಮತ್, ಹಿರಿಯರಾದ ಬಾಬುರಾಯ ಕಾಮತ್, ಪ್ರಕಾಶ ಪ್ರಭು, ವೆಂಕಟೇಶ ಪ್ರಭು, ಚಂದ್ರಕಾಂತ ನಾಯಕ್ ಜಿ.ಎಸ್.ಬಿ.ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ನವೆಂಬರ್ 26 ರ ಒಳಗಾಗಿ ಇಲಾಖೆಯ ಕಛೇರಿಗೆ ಖುದ್ದಾಗಿ ಅಥವಾ https://udupi.nic.in ವೆಬ್‌ಸೈಟ್ ನಲ್ಲಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಮತ್ತು ಸರಾಸರಿ ಕನಿಷ್ಠ ಶೇ.45 ಅಂಕಗಳೊAದಿಗೆ ಉತ್ತೀರ್ಣರಾಗಿರುವ ಪ್ರವರ್ಗ-1 ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಹಾಗೂ ಪ್ರವರ್ಗ-2ಎ, 3ಎ ಮತ್ತು 3ಬಿ ಕುಟುಂಬದ ವಾರ್ಷಿಕ ಆದಾಯ ರೂ. 1.00 ಲಕ್ಷ ಮೀರದ 26-11-2005 ರಿಂದ 26-11-2008ರ ನಡುವಿನ ಅವಧಿಯಲ್ಲಿ ಜನಿಸಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ತರಬೇತಿಯನ್ನು ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಿಜೂರು ಗ್ರಾಮದ ಕಂಚಿಕಾನ ನಿವಾಸಿ ಸುರೇಂದ್ರ (31) ಎನ್ನುವ ವ್ಯಕ್ತಿಯು ಅ.27ರಂದು ಬೆಳಿಗ್ಗೆ 8 ಗಂಟೆಗೆ ಕೆಲಸದ ನಿಮಿತ್ತ ಕುಂದಾಪುರಕ್ಕೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಕನ್ನಡ ಮಾತನಾಡ ಬಲ್ಲವರಾಗಿದ್ದು ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಬೈಂದೂರು ಪೋಲಿಸ್ ಠಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಲ್ಲಿ  ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿಎಸ್ಆರ್ ನಿಧಿಯಿಂದ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿಗೆ  10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಆಫ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಇದರ ಉದ್ಘಾಟನಾ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇದರ ಉಪಾಧ್ಯಕ್ಷರಾದ ಪ್ರಶಾಂತ್ ಜೋಯಿಶಿ ನೆರವೇರಿಸಿದರು. ಇದರ ಜೊತೆಗೆ ಕಾಲೇಜಿನ ನೂತನ ಕೊಠಡಿಗಳ ಲೋಕಾರ್ಪಣೆಯನ್ನು ಶಾಸಕರು ಗಣ್ಯರ ಜೊತೆಗೂಡಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕರು ಮಾತನಾಡಿ, ಕ್ಷೇತ್ರದ ಸರಕಾರಿ ಶಾಲಾ, ಕಾಲೇಜುಗಳಿಗೆ ಕ್ಯಾನ್ ಫಿನ್ ಸಂಸ್ಥೆ ಇದುವರೆಗೆ 1 ಕೋಟಿಗೂ ಅಧಿಕ ಮೊತ್ತದ ವಿವಿಧ ರೀತಿಯ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ತನ್ನ ಸಿ. ಎಸ್.ಆರ್ ನಿಧಿಯಿಂದ ಒದಗಿಸಿದೆ. ಸಂಸ್ಥೆಯ ಈ ಕೊಡುಗೆ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಇದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೆಂಗಳೂರು: ರಾಜಾಜಿನಗರದಲ್ಲಿ ಡಿಸೆಂಬರ್ 19,20,21ರಂದು ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದು ಅಭಯಸೇವಾ ಫೌಂಡೇಶನ್ ಅಧ್ಯಕ್ಷ ಯುಬಿ ಉಮೇಶ್ ಶೆಟ್ಟಿ ಹೇಳಿದ್ದಾರೆ. ಅವರು ಬೆಂಗಳೂರಿನ ಬಂಟರ ಸಂಘದಲ್ಲಿ ನಡೆದ ಸೇವಾ ಸಂಕಲ್ಪ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಜಯಪ್ರಸಾದ್ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಲ್.ಎನ್.ಹೆಗಡೆ, ಅಭಯ ಸೇವಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಬಿ.ಉಮೇಶ್ ಶೆಟ್ಟಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು, ಬಿಜೆಪಿ ಮುಖಂಡರಾದ ಬೇಳೂರು ರಾಘವೇಂದ್ರ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರಾದ ಕಾಂತಿ ಶೆಟ್ಟಿ, ಕನ್ನಡ ಪರ ಹೋರಾಟಗಾರ ಶಿವಾನಂದ್ ಶೆಟ್ಟಿ, ಆರ್.ಎಸ್.ಎಸ್.ಮುಖಂಡರಾದ ಸುರೇಶ್, ಸ್ಥಳೀಯ ಮುಖಂಡರಾದ ಸಂತೋಷ್ ಶೆಟ್ಟಿ ಅವರು ಭಾಗಿಯಾಗಿ ಸೇವಾ ಸಂಕಲ್ಪ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಈ ವೇಳೆ ವರಸಿದ್ದಿ ವಿನಾಯಕನಿಗೆ ರಂಗಪೂಜೆ, ಭಜನೆ ಕುಣಿತ, ಬೀದಿ ನಾಟಕ ಸೇರಿ ವಿವಿಧ ಕಾರ್ಯಕ್ರಮ ನಡೆಯಿತು.ಕಾರ್ಯಕ್ರದಲ್ಲಿ ಎಂ.ಬಿ.ಉಮೇಶ್ ಶೆಟ್ಟಿ ಮಾತನಾಡಿ ಅಭಯ ಸೇವಾ ಫೌಂಡೇಷನ್…

Read More

ನಾಗರಾಜ್ ಕೋಡಿ | ಕುಂದಾಪ್ರ ಡಾಟ್ ಕಾಂ ಲೇಖನಮೀನುಗಾರರ ಕುಟುಂಬದಲ್ಲಿ ಜನಿಸಿದ ಗೋಪಾಲ ಖಾರ್ವಿ ಎಂಬ ವ್ಯಕ್ತಿ, ತನ್ನ ವೃತ್ತಿ ಹಾಗೂ ಬದುಕಿನ ಮಧ್ಯೆ ವಿಶಿಷ್ಟವಾದದ್ದನ್ನು ಸಾಧಿಸಬೇಕೆಂಬ ಛಲದಿಂದ ಸಾಗಿ ಗೆದ್ದ ಕಡಲವೀರ. ಉಡುಪಿ ಜಿಲ್ಲೆಯ ಕೋಡಿಕನ್ಯಾನ ಗ್ರಾಮದ ನಾಗೇಶ್ ಖಾರ್ವಿ ಮತ್ತು ರಾಧ ಖಾರ್ವಿ ದಂಪತಿಗಳ ಪುತ್ರರಾದ ಗೋಪಾಲ ಖಾರ್ವಿ ಅವರು, ಈಜಿನಲ್ಲಿ ಅನೇಕ ಸಾಧನೆಗಳನ್ನು ಮಾಡಿ ಹೆಸರು ಗಳಿಸಿದ್ದಾರೆ. ಮೀನುಗಾರರ ಕುಟುಂಬದಲ್ಲಿ ಜನಿಸಿದ ಗೋಪಾಲ ಖಾರ್ವಿಯ ಜೀವನ ಸುಲಭದ ಹಾದಿಯಲ್ಲ. ತಂದೆಯವರು ಆರೋಗ್ಯ ಸಮಸ್ಯೆಯಿಂದ ಮೀನುಗಾರಿಕೆ ನಿಲ್ಲಿಸಿದಾಗ, ಬಾಲ್ಯದಲ್ಲಿಯೇ ಕುಟುಂಬದ ಹೊಣೆಗಾರಿಕೆ ಗೋಪಾಲ ಅವರ ಹೆಗಲೇರಿತು. ಏಳನೇ ತರಗತಿವರೆಗೂ ಓದಿ, ನಂತರ ಕುಟುಂಬದ ಬಾಧ್ಯತೆಗಾಗಿ ವಿದ್ಯಾಭ್ಯಾಸವನ್ನು ಬಿಟ್ಟು ಜೀವನಯಾನಕ್ಕೆ ಕಾಲಿಟ್ಟರು. ಅಕ್ಕ-ತಂಗಿಯರ ವಿವಾಹವನ್ನೂ ನೆರವೇರಿಸಿ, ಎಲ್ಲರಿಗೂ ಸುಖ ಜೀವನ ಕಟ್ಟಿಕೊಟ್ಟವರು ಇವರೇ. ಬಡತನದ ನಡುವೆ ಬೆಳೆದರೂ, ಎದುರಾದ ಸಂಕಷ್ಟಗಳಿಗೆ ಮಣಿಯದೆ, ಸಾಧನೆ ಮಾಡಬೇಕೆಂಬ ಛಲದಿಂದ ಇಂದಿಗೂ ಮುಂದುವರಿಯುತ್ತಿದ್ದಾರೆ. ಬಾಲ್ಯದಲ್ಲಿ ಊರಿನ ಕೆರೆಯಲ್ಲೇ ಈಜು ಪ್ರಾರಂಭಿಸಿದ ಗೋಪಾಲ ಖಾರ್ವಿ, ಮೊದಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನವೆಂಬರ್ ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ U14 ವಯೋಮಿತಿಯ ಹುಡುಗರ ವಿಭಾಗದಲ್ಲಿ ಕಶ್ವಿ ಚೆಸ್ ಸ್ಕೂಲ್ ವಿದ್ಯಾರ್ಥಿಯಾದ ಅವನೀಷ್ ಪ್ರಸಾದ್ ಕೆ. ನಾಲ್ಕನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

Read More