ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಸರಕಾರಿ ಪದವಿ ಪೂರ್ವ ಕಾಲೇಜಿನ 1990ರ ಎಸ್.ಎಸ್.ಎಲ್.ಸಿ ಸಮಾನ ಮನಸ್ಕ ವಿದ್ಯಾರ್ಥಿಗಳ SSLC-1990LM ಫ್ಯಾಮಿಲಿ ವಾಟ್ಸಪ್ಪ್ ಬಳಗದ 6ನೇ ಕುಟುಂಬ ಮಿಲನ ಕಾರ್ಯಕ್ರಮವು ಬಳಗದ ಸದಸ್ಯರಾದ ಸಿದ್ದಾಪುರ ಮೇಲ್ ಕಡ್ರಿ ವಿದ್ವಾನ್ ಗಣೇಶ್ ಅಡಿಗರ ಮನೆಯಲ್ಲಿ ನೆರವೇರಿತು.
ಸುಮಾರು 50ಕ್ಕೂ ಅಧಿಕ ಕುಟುಂಬ ಸದಸ್ಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ತಮಾಷೆಯ ಪಂದ್ಯಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು.

2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ 92% ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾದ ಹೊಸಂಗಡಿ ಕಾಲೇಜಿನ ಸುವಿಧಾ ಗಣಪತಿ ಶೆಟ್ಟಿ ಅವರಿಗೆ ನಗದು ಪುರಸ್ಕಾರದೊಂದಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಶಾಲೆಗಳಲ್ಲಿ ಕಲಿತು ಉತ್ತಿರ್ಣರಾದ ಬಳಗದ ಸದಸ್ಯರ ಮಕ್ಕಳಾದ ಪ್ರಣಮ್ಯ ಗುರುಪ್ರಸಾದ್ ಉಪ್ಪೂರ್, ಶ್ರೇಯಾಂಕಾ ಶಂಕರ್ ಚಿಟ್ಟೆ, ಅಂಶು ಯೋಗೇಂದ್ರ ನಾಯ್ಕ್, ಸ್ಕಂದ ಸುಭಾಸ್ ರಾವ್ ಅವರನ್ನು ಅಭಿನಂದಿಸಿ ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು.
ತಸ್ಮಯಿ ಎನ್. ತಲ್ಲಂಜೆ ಮತ್ತು ತನ್ಮಯಿ ಎನ್. ತಲ್ಲಂಜೆ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾವಾಯಿತು. ಇದರ ಅಧ್ಯಕ್ಷತೆಯನ್ನು ಬಳಗದ ಮಹಿಳಾ ಎಡ್ಮಿನ್ ಜಯಂತಿ ರಾಜೀವ್ ಐರೋಡಿ ವಹಿಸಿದ್ದರು. ಅಡ್ಮಿನ್ ನಾಗರಾಜ್ ತಲ್ಲಂಜೆ ಪ್ರಾಸ್ತಾವಿಕ ಮಾತಗಳನ್ನಾಡಿ ಬಳಗದ ಆರಂಭ, ಒಂದೇ ಕುಟುಂಬದ ಸದಸ್ಯರಂತೆ ಪರಸ್ಪರ ನಂಬಿಕೆ, ಸಹಾಯ, ಸಹಕಾರ ಗಳೊಂದಿಗೆ ಬಳಗವು ನಡೆದುಕೊಂಡು ಬಂದ ಹಾದಿಯನ್ನು ವಿವರಿಸಿದರು.
ಅತಿಥಿಯೇಯರಾದ ವಿದ್ವಾನ್ ಗಣೇಶ್ ಅಡಿಗರು ಮಾತನಾಡಿ, ಇದು ಕೇವಲ ಹಳೇ ವಿದ್ಯಾರ್ಥಿಗಳ ವಾಟ್ಸಪ್ಪ್ ಬಳಗದ ಸಹಮಿಲನ ಕಾರ್ಯಕ್ರಮ ಅಲ್ಲಾ ಇದು ಒಂದು ಕುಟುಂಬ ಸದಸ್ಯರ ಕುಟುಂಬ ಮಿಲನ ಕಾರ್ಯಕ್ರಮದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಒಂದೇ ಕುಟುಂಬದಲ್ಲಿ ಕೂಡ ಈ ರೀತಿಯ ಒಗ್ಗಟ್ಟು ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ಈ sslc-1990 ಕುಟುಂಬದ ಸದಸ್ಯರಲ್ಲಿ ಇರುವ ಅನನೋನ್ಯತೆ, ಭಾಂದವ್ಯ, ಪರಸ್ಪರ ಕಾಳಜಿ ಮತ್ತು ವಿಶ್ವಾಸ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಇದು ನಿರಂತರವಾಗಿರಲಿ. ಪ್ರತಿ ವರ್ಷವೂ ಇದೆ ರೀತಿಯ ಕುಟುಂಬ ಮಿಲನ ಕಾರ್ಯಕ್ರಮ ನಮ್ಮ ಮನೆಯಲ್ಲಿ ನಾನು ನಡೆಸಲು ಸಿದ್ಧ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತ ಗುಂಪಿನ ಅಡ್ಮಿನ್ ವಕೀಲರಾದ ಯೋಗೇಂದ್ರ ನಾಯ್ಕ್ ಮಾತನಾಡಿ, ನಮ್ಮದು ಈ ವಾಟ್ಸಪ್ಪ್ ಬಳಗ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದೆ. ಪ್ರತಿ ಕುಟುಂಬ ಸದಸ್ಯರ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಲ್ಲೂ ಕನಿಷ್ಠ ಹತ್ತಾರು ಜನ ಸದಸ್ಯರು ಭಾಗವಹಿಸುವುದರೊಂದಿಗೆ ನಾವುಗಳೂ ಆಯಾ ಕುಟುಂಬದ ಒಂದು ಭಾಗವಾಗಿದ್ದೇವೆ. ಈ ನಮ್ಮ ಬಳಗ ನಮ್ಮ ಮಕ್ಕಳ ಕಾಲಕ್ಕೂ ಕೂಡ ಈ ಬಳಗ ಇದೇ ರೀತಿಯ ಈ ಒಗ್ಗಟ್ಟಿನೊಂದಿಗೆ ಮುಂದುವರೆದುಕೊಂಡು ಹೋಗುವ ಭರವಸೆ ಇದೆ ಎಂದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಯೋಜಕರಾದ ವಿದ್ವಾನ್ ಗಣೇಶ್ ಅಡಿಗ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯರಾದ ASI ಶಂಕರ್ ಚಿಟ್ಟೆ, ಬೆಂಗಳೂರು ಉದ್ಯಮಿ ಗುರುಪ್ರಸಾದ್ ಉಪ್ಪೂರ್, ಮುಂಬೈ ಉದ್ಯಮಿ ಉದಯ ಶೆಟ್ಟಿ ಕೊಕ್ಕೋಡು, ವಿಜಯಲಕ್ಷ್ಮಿ ಸೋಮಯಾಜಿ ಬೆಂಗಳೂರು, ಆರೋಗ್ಯ ಇಲಾಖೆಯ ಸುಭಾಸ್ ರಾವ್, ಶಶಿಕಲಾ ಶಂಕರ್, ಗಣಪತಿ ಶೆಟ್ಟಿ ಜಾಂಬ್ಳಿ, ಸೆಲ್ಕೋ ಸೋಲಾರ್ ನ ಸುರೇಶ್ ನಾಯ್ಕ್, ಬೆಂಗಳೂರು ನಿವಾಸಿ ಭಾಸ್ಕರ್ ನಾಯ್ಕ್, ವಾಣಿ ಸುಭಾಸ್ ರಾವ್ ಬಳ್ಕೂರು, ಚಂದ್ರಶೇಖರ ಹೆಗ್ಡೆ ಕಲ್ಗದ್ದೆ, ಉದಯ ಕುಪ್ಪಾರು ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಾಟ್ಸಪ್ಪ್ ಬಳಗದ ಅಡ್ಮಿನ್ ತ್ರಯರಾದ ಯೋಗೇಂದ್ರ ನಾಯ್ಕ್, ನಾಗರಾಜ್ ತಲ್ಲಂಜೆ ಮತ್ತು ಜಯಂತಿ ಐರೋಡಿ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಉದಯ ಕುಪ್ಪಾರು ಸ್ವಾಗತಿಸಿ, ಸುಭಾಸ್ ರಾವ್ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ ಹೆಗ್ಡೆ ವಂದಿಸಿದರು.
















