ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸ್ನೇಹ ಕೂಟದ ಸಾಮಾಜಿಕ ಕಾರ್ಯಗಳು ಜನಮನ್ನಣೆ ಗಳಿಸಿವೆ ಅದರಲ್ಲೂ ಪ್ರಸ್ತುತ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸಕರ, ಇವರ ಸಾಮಾಜಿಕ ಕಾರ್ಯಗಳು ದಶ ದಿಕ್ಕಿನಲ್ಲೂ ಪಸರಿಸಲಿ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹೇಳಿದರು. ಅವರು ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಎಂ. ಎನ್ ಮಧ್ಯಸ್ಥ ಮಾತನಾಡಿ, ಸ್ನೇಹಕೂಟ ವಿಭಿನ್ನವಾಗಿ ಈ ಸಮಾಜದಲ್ಲಿ ಗುರುತಿಸಿಕೊಂಡಿದೆ,ಇದೀಗ ದಶಮ ಸಂಭ್ರದಲ್ಲಿದೆ ಈ ಹತ್ತು ವರ್ಷಗಳಲ್ಲಿ ಅವರ ಕೈಗೊಂಡ ಕಾರ್ಯಗಳು ಅರ್ಥಪೂರ್ಣವಾಗಿದೆ ಇನ್ಬಷ್ಟು ವಿಶಿಷ್ಟ ರೀತಿಯ ಕಾರ್ಯಕ್ರಮಗಳೊಂದಿಗೆ ಸಮಾಜ ಜನಮಾನಸದಲ್ಲಿ ಈ ಸಂಸ್ಥೆ ನೆಲೆಯಾಗಲಿ ಎಂದು ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ. ಮಯ್ಯ ವಹಿಸಿ ದಶಮಾನೋತ್ಸವ ಲಾಂಛನದ ರೂಪುರೇಷೆಗಳ ಬಗ್ಗೆ ತಿಳಿಸಿದರು ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ, ಸ್ನೇಹಕೂಟದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಜ್ಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ಅಲೆಮಾರಿ ಜನಾಂಗದವರಿಗೆ ಮೀಸಲಾತಿ ಸೌಲಭ್ಯ ಹಾಗೂ ಕೇಂದ್ರ ಸರ್ಕಾರದ ಅರ್ಥಿಕ ನೆರವಿನೊಂದಿಗೆ ಅಲೆಮಾರಿ ಜನಾಂಗದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಲೆಮಾರಿ ಜನಾಂಗದವರ ಸಲಹಾ ಸಮಿತಿಯನ್ನು ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಗತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು ಸಲಹಾ ಸಮಿತಿಯನ್ನು ಪುನರ್ ರಚಿಸಿ ಜಿಲ್ಲಾ ಮಟ್ಟದ ಮತ್ತು ತಾಲೂಕು ಅಲೆಮಾರಿ ಜನಾಂಗದ ಅಭಿವೃದ್ಧಿ ಸಂಸ್ಥೆಯ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಿದೆ. ಅದರಂತೆ ಜಿಲ್ಲೆಯ ಅಲೆಮಾರಿ/ ಅರೆಅಲೆಮಾರಿ ಜನಾಂಗದ ಆಸಕ್ತ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರದೊಂದಿಗೆ ಮನವಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 304, ಎರಡನೇ ಮಹಡಿ, ಬಿ ಬ್ಲಾಕ್, ರಜತಾದ್ರಿ, ಮಣಿಪಾಲ, ಉಡುಪಿ ಇಲ್ಲಿಗೆ ಮೇ 10 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಂತಾರ ಚಾಪ್ಟರ್ – 1 ಸಿನಿಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದ ಕೇರಳ ಮೂಲಕ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಎಂ.ಎಫ್. ಕಪಿಲ್ ಮೃತಪಟ್ಟಿದ್ದಾರೆ. ಶೂಟಿಂಗ್ ಮುಗಿಸಿ ಮಧ್ಯಾಹ್ನದ ಊಟದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಅವರು ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದರು. ಈ ವೇಳೆ ಅವರು ಮುಳುಗಿ ಸಾವಿಗೀಡಾಗಿದ್ದಾರೆ. ಸಂಜೆ ಅವರ ಮೃತದೇಹವನ್ನು ಅಗ್ನಿಶಾಮಕ ದಳದ ಸಹಾಯದಿಂದ ಮೇಲಕ್ಕೆತ್ತಲಾಯಿತು. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಪ್ರಶ್ನಿಸುವ ತಾಕತ್ತು ರಾಜ್ಯದ ಯಾವ ಬಿಜೆಪಿಯ ನಾಯಕರಿಗೂ ಇಲ್ಲ. ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಅಕಾರ ನಡೆಸುತ್ತಿರುವ ಎನ್ಡಿಎ ಸರ್ಕಾರವು ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ಮಾಡಿರುವುದಲ್ಲದೇ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹೇರಿರುವುದರಿಂದ ಸಹಜವಾಗಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ, ಇದು ದೇಶದ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಅವರು ಬಡವರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ಇಲ್ಲಿನ ಜೆಎನ್ಆರ್ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬೈಂದೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ಗಾಂಧಿ ಭಾರತ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ನಡೆದ ಜನಾಕ್ರೋಶ ಮತ್ತು ಪ್ರತಿಭಟನೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾತನಾಡಿ, ರಾಜ್ಯದ ಕಾಂಗ್ರೇಸ್ ಸರ್ಕಾರ ಪಂಚ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವರಪ್ರಸಾದ್ ಎಂ. ಬಿಜೂರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಏಳನೇ ರ್ಯಾಂಕ್ ಪಡೆದಿದ್ದು, ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಉಪ್ಪುಂದ ಕಲ್ಯಾಣಿ ಪರಮೇಶ್ವರ ಭಟ್ ಟ್ರಸ್ಟ್ ಬೆಂಗಳೂರು ಇವರ ಆಶ್ರಯದಲ್ಲಿ ವಿದ್ಯಾರ್ಥಿಯ ಸ್ವಗೃಹದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ದೀಟಿ ಸೀತಾರಾಮ ಮಯ್ಯ, ನಿವೃತ್ತ ಶಿಕ್ಷಕರಾದ ರಾಜಾರಾಮ್ ಭಟ್, ಆನಂದ ಗಾಣಿಗ, ವೆಂಕಟರಮಣ ಶೇರುಗಾರ್, ಮಂಜು ದೇವಾಡಿಗ ಅರೆಹಾಡಿ, ಗಣೇಶ್ ಉಪ್ಪುಂದ, ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ಅನಿಲ್ ಡಿ. ಉಪ್ಪುಂದ, ಶಿಕ್ಷಕರಾದ ಮಂಜುನಾಥ್ ಶೇರುಗಾರ್, ಭಾರತಿ ಮೊದಲಾದವರು ಉಪಸ್ಥಿತರಿದ್ದರು. ಯು ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯದಲ್ಲಿನ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿನ ಇ- ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಿಬ್ಬಂದಿಗಳನ್ನು ಕೈ ಬಿಡುವ ವಿಚಾರ ಸದ್ಯಕ್ಕೆ ತಡೆಹಿಡಿಯಲಾಗಿದ್ದು ಇರುವ ಸಿಬ್ಬಂದಿಗಳನ್ನೇ ಮುಂದುವರಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ. ಇ- ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಿಬ್ಬಂದಿಗಳನ್ನು ಕೈ ಬಿಡುವ ವಿಚಾರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಗಮನಕ್ಕೆ ಬಂದ ನಂತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ, ಮನವಿಯನ್ನ ಸಲ್ಲಿಸಿದ್ದು ಕುಂದಾಪುರ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದ 5ಜನ ಡಾಟಾ ಎಂಟ್ರಿ ಆಪರೇಟರ್ ಮುಂದುವರಿಸುವ ಬಗ್ಗೆ ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದನೆ ನೀಡಿದ ಸಚಿವರು ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಯನ್ನ ಕಡಿತಗೊಳಿಸಿದಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 623 /625 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ನಿಧಿ ಪೈ ಅವರನ್ನು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಗ್ರಾಮದ ಹಿರಿಯರಾದ ಎಂ. ವಿಷ್ಣುಮೂರ್ತಿ ಮಯ್ಯ ಅವರು ಆಕೆಯ ಸಾಧನೆಯನ್ನು ಕೊಂಡಾಡಿ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ಅಲ್ಲದೆ ತನ್ನ ವೈಯಕ್ತಿಕ ನೆಲೆಯಲ್ಲಿ ನಗದು ಪುರಸ್ಕಾರವನ್ನೂ ನೀಡಿದರು. ಈ ವೇಳೆ ದೇವಳದ ವತಿಯಿಂದ ಶಾಲು ಹೊದೆಸಿ, ಫಲ ಪುಷ್ಪವನ್ನು ನೀಡಿ ಶ್ರೀ ದೇವರ ಗಂಧ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಅದೇ ರೀತಿಯಲ್ಲಿ ವಿದ್ಯಾರ್ಥಿಯ ಪೋಷಕರನ್ನು ಕೂಡ ಗೌರವಿಸಲಾಯಿತು. ನಿಧಿ ಪೈ ಮಣೂರಿನ ನಾರಾಯಣ ಪೈ ದಂಪತಿಗಳ ಸುಪುತ್ರಿಯಾಗಿದ್ದು ಸಭೆಯನ್ನು ಗಣ್ಯರು ವಿಶೇಷವಾಗಿ ಗುರುತಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹಾಗೂ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಮಹಾಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರು, ದೇವಳದ ಅರ್ಚಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಗೋವಿಂದ ರಾವ್ ಅವರ ಜಿಎನ್ ಕಾಂಪ್ಲೆಕ್ಸ್ನ ಹೊರ ಭಾಗದಲ್ಲಿ ಇರಿಸಿದ್ದ ಮಾರುತಿ ಸಿಫ್ಟ್ ಕಾರನ್ನು ಕಳವುಗೈದಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬೈಂದೂರು ಪೋಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಪೌಜಾನ್ ಅಹ್ಮದ್ ಎಂಬುವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ನಾಗೂರಿನ ಗೋವಿಂದ ರಾವ್ ಅವರ ಜಿಎನ್ ಕಾಂಪ್ಲೆಕ್ಸ್ನ ಹೊರ ಭಾಗದಲ್ಲಿ ಇರಿಸಿದ್ದ ಅಂದಾಜು ಮೌಲ್ಯ 8 ಲಕ್ಷದ ಮಾರುತಿ ಸಿಫ್ಟ್ ಕಾರನ್ನು ಮೇ.1ರಂದು ಬೆಳಗಿನ ಜಾವ 4.30 ಗಂಟೆಗೆ ಕಳವುಗೈಯಲಾಗಿತ್ತು. ಈ ಬಗ್ಗೆ ಕಾರು ಮಾಲಕ ಗಣೇಶ್ ಆಚಾರ್ಯ ಅವರು ನೀಡಿರುವ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಾರು ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡ ವಿಶೇಷ ತಂಡವು ಮೇ.2ರಂದು ಆರೋಪಿ ಪೌಜಾನ್ ಅಹ್ಮದ್ ಸಮೇತ ಕಾರನ್ನು ಪತ್ತೆ ಮಾಡಿ ಕಾರನ್ನು ಸ್ವಾದೀನಪಡಿಸಿಕೊಂಡಿರುತ್ತಾರೆ. ಹಾಗೂ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.ರಕ್ಷಕ್ ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸಲ್ಯೂಷನ್ ಅವರು ಕಾರ್ಯಾಚರಣೆಯಲ್ಲಿ ಸಹಕರಿಸಿರುತ್ತಾರೆ. ಈ ಪ್ರಕರಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾರತದಲ್ಲಿ ಎಸ್ಟಿಇಎಮ್ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯ ಕುರಿತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚಿಂತನ – ಮಂಥನ ಓದುಗರ ವೇದಿಕೆಯು ಅತಿಥಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಲಪತಿ ಹಾಗೂ ಪ್ರಖ್ಯಾತ ಭೌತಶಾಸ್ತ್ರಜ್ಞರಾದ ಡಾ. ಶರತ್ ಅನಂತಮೂರ್ತಿ ಅವರು ಭಾರತದಲ್ಲಿ ಎಸ್ಟಿಇಎಮ್ (ಸೈನ್ಸ್, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಶಿಕ್ಷಣದ ಸ್ಥಿತಿಗತಿಗಳು ಮತ್ತು ವಿಜ್ಞಾನ ಚಿಂತನೆಯ ಇತಿಹಾಸದ ಕುರಿತು ಮಾತನಾಡಿದರು. ಭಾರತೀಯ ಜಿಡಿಪಿಯ ಶೇ.0.3 ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಹೆಚ್ಚು ಹೂಡಿಕೆ ಮಾಡಿದರೆ ಉತ್ತಮ ಸಂಶೋಧನೆ ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಗಳು ಪಾರದರ್ಶಕವಾದ ಅಂತಾರಾಷ್ಟ್ರೀಯ ಸಂವಾದ ಹೊಂದಿರಬೇಕು ಹಾಗೂ ಸೃಜನಶೀಲತೆ, ಜ್ಞಾನ ವಿಕಾಸ ಮತ್ತು ಸಾಮಾಜಿಕ ಬದಲಾವನೆಗಳ ಕೇಂದ್ರಗಳಾಗಿರಬೇಕು ಎಂದರು. ಭಾರತೀಯರು ಯುರೋಪಿಯನ್ ಚಿಂತನೆಗಷ್ಟೇ ಆಧಾರವಾಗಿರುವ ಶಿಕ್ಷಣವನ್ನು ಅನುಸರಿಸುತ್ತಿದ್ದೇವೆ. ಭಾರತೀಯ ಜ್ಞಾನ ಪದ್ಧತಿಗೆ ಪರಿಸರ ಅಗತ್ಯವಿದೆ. ಅದು ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಬೇಕು ಮತ್ತು ಸತ್ಯತೆಯನ್ನು ಒಪ್ಪಿಕೊಳ್ಳುವಂತಿರಬೇಕು. ಕೌಶಲ್ಯ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ 2ನೇ ರ್ಯಾಂಕ್ ಪಡೆದ ಗಂಗೊಳ್ಳಿ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್. ಗಾಣಿಗ ಅವರನ್ನು ಅವರ ಮನೆಯಲ್ಲಿ ನಾಯಕವಾಡಿ-ಗುಜ್ಜಾಡಿ ಗಾಣಿಗ ಸಮಾಜ ಬಾಂಧವರ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಗಾಣಿಗ ಸಮಾಜದ ಮುಖಂಡರಾದ ನಾರಾಯಣ ಗಾಣಿಗ ಮೇಲಂಡಿ, ಸೀತಾರಾಮ ಗಾಣಿಗ ಗಂಗೊಳ್ಳಿ, ಪ್ರಮೋದ ಗಾಣಿಗ ಗಂಗೊಳ್ಳಿ, ಗುರುರಾಜ್ ಗಾಣಿಗ ಗುಜ್ಜಾಡಿ, ಸನತ್ ಗಾಣಿಗ, ಸುಮಿತ್ ಗಾಣಿಗ, ನಿತಿನ್ ಗಾಣಿಗ, ಉದಯ ಗಾಣಿಗ ಗಂಗೊಳ್ಳಿ, ಗಂಗಾಧರ ಗಾಣಿಗ ಗಂಗೊಳ್ಳಿ ಮತ್ತು ಗೋವಿಂದ ಗಾಣಿಗ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
