Author: ನ್ಯೂಸ್ ಬ್ಯೂರೋ

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಪ್ರಕೃತಿ ವಿಕೋಪ, ಮನೆ ನಿವೇಶನ, ಪಡಿತರ ಚೀಟಿ, ಆಧಾರ್ ಕಾರ್ಡು ಹಾಗೂ ಇತರ ಇಲಾಖೆಗಳ ಪ್ರಗತಿಗಯ ಬಗ್ಗೆ ಅವಲೋಕಿಸಿದ ಬಳಿಕ ಮಾತನಾಡಿ ಈ ಬಾರಿಯ ಇಲಾಖೆಗಳ ಅಂಕಿ ಅಂಶಗಳನ್ನು ಅವಲೋಕಿಸುವಾಗ ಕಳೆದ ಬಾರಿಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಿರುವುದು ಕಂಡು ಬಂದಿದ್ದು, ಮುಂದೆಯೂ ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿಗಾವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ವರದಿ ನೀಡಿ ಸುಮಾರು ರೂ. 49.18 ಲಕ್ಷ ಮೊತ್ತವನ್ನು ಪ್ರಕೃತಿ ವಿಕೋಪದ ಪರಿಹಾರವಾಗಿ ನೀಡಿದ್ದು ಇನ್ನು ಸುಮಾರು 7 ಲಕ್ಷ ರೂ. ಬಾಕಿ ಇದೆ. ಪಡಿತ ಚೀಟಿ ಹಳೆ ಅರ್ಜಿಗಳೆಲ್ಲಾ ವಿಲೇವಾರಿಯಾಗಿದ್ದು ಹೆಚ್ಚೆಚ್ಚು ಹೊಸ ಅರ್ಜಿಗಳು ಬರುತ್ತಿದ್ದು ಶೀಘ್ರ ವಿಲೇವಾರಿಗೆ ಶ್ರಮಿಸುತ್ತಿದ್ದೇವೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ| ವಿಶಾಲ್ ಮಾತನಾಡಿ ಉಡುಪಿ…

Read More

ಕುಂದಾಪುರ: ಕಸ್ತೂರಿ ರಂಗನ್ ವರದಿಯ ಬಗ್ಗೆ ಮತ್ತೆ ಸಾಕಷ್ಟು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರಕ್ಕೆ ಜನವಸತಿ ಪ್ರದೇಶವನ್ನು ವರದಿಯಿಂದ ಹೊರಗಿಡುವಂತೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು, ನಮ್ಮ ಆಕ್ಷೇಪಣೆಯನ್ನು ಪುನಃ ಮನವರಿಕೆ ಮಾಡಲಾಗುವುದು. ಅಲ್ಲದೇ ಸಿ.ಆರ್.ಜೆಡ್ ವಿಚಾರದಲ್ಲಿ ಕೇರಳ, ಗೋವಾ ಮಾದರಿಯಂತೆ ರಿಯಾಯತಿ ನೀಡಲು ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಉಡುಪಿ ಜಲ್ಲಾಡಳಿತ ಹಾಗೂ, ಜಿ.ಪಂ. ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನ ಸಂಪರ್ಕ ಸಭೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮರಳಿನ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲಗಳಿದ್ದು, ಇವುಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಏಕರೂಪದ ಮರಳು ನೀತಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುವ ಕೆಲಸ ಆಗಿದೆ. ಶೀಘ್ರ ಜಿಲ್ಲೆಯಲ್ಲಿ ಏಕರೂಪದ ಮರಳಿ ನೀತಿ ಅನುಷ್ಠಾನಗೊಳ್ಳಲಿದೆ. ಮನೆ ನಿವೇಶನಗಳನ್ನು ನೀಡುವ ಸಲುವಾಗಿ ತಾಲೂಕಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ವಿಶ್ವದ ಜನಪ್ರಿಯ ಸಾಮಾಜಿಕ ತಾಣ ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಜುಕರ್ಬರ್ಗ್ ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಡಿಜಿಟಲ್ ಇಂಡಿಯಾ’ವನ್ನು ಬೆಂಬಲಿಸಿ ತನ್ನ ಪ್ರೋಪೈಲ್ ಪೋಟೋವನ್ನು ಬದಲಿಸಿಕೊಂಡಿದ್ದಾರೆ. ಭಾರತದ ಯೋಜನೆಗಳನ್ನು ವಿಶ್ವದ ಜನ ಬೆರಗುಗಣ್ಣಿನಿಂದ ನೋಡಿ ಬೆಂಬಲ ಸೂಚಿಸುತ್ತಿರುವುದಕ್ಕೆ ಇದೊಂದು ನಿದರ್ಶನ. ವಿದೇಶಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಕುರಿತು ವಿವಿಧ ಸಾಫ್ಟ್ವೇರ್ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿದ್ದು, ಭಾರತದಲ್ಲಿ ಬಂಡವಾಳ ಹೂಡಲು ಕಂಪೆನಿಗಳು ಒಪ್ಪಿಕೊಂಡಿರುವ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. [quote bgcolor=”#ffffff”]ಗ್ರಾಮೀಣ ಪ್ರದೇಶಗಳಿಗೂ ಅಂತರ್ಜಾಲ ಬಳಕೆಯನ್ನು ವಿಸ್ತರಿಸುವ ಮತ್ತು ಹೆಚ್ಚಿನ ಸೇವೆಗಳನ್ನು ಅಂತರ್ಜಾಲದಡಿಯಲ್ಲಿ ತರುವ ಭಾರತ ಸರಕಾರದ ಶ್ರಮ ಶ್ಲಾಘನಾರ್ಹ. ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೇಸ್ಬುಕ್ ಕಛೇರಿಯಲ್ಲಿ ಮಾತನಾಡಲು ಕಾಯುತ್ತಿದ್ದೇನೆ ಎಂದು ಜುಕರ್ಬರ್ಗ್ ತಮ್ಮ ಪೇಜಿನಲ್ಲಿ ಬರೆದುಕೊಂಡಿದ್ದಾರೆ.[/quote] ಇದು ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಹಲವು ಮಂದಿಯ ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಸೂಚಿಸಿದ್ದರು. 30 ನಿಮಿಷಗಳಲ್ಲಿ 63,500…

Read More

ಕುಂದಾಪುರ: ಕಸ್ತೂರಿ ರಂಗನ್ ವರದಿಯನ್ನು ಸುಪ್ರಿಂ ಕೋರ್ಟ್ ಸೂಚನೆಯಂತೆ ವರದಿಗೆ ಒಳಪಡುವ ವ್ಯಾಪ್ತಿಯಲ್ಲಿ ಇರುವ ಜನವಸತಿ ಪ್ರದೇಶ, ಕಾಡು, ಈ ಭಾಗದ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅವಲೋಕಿಸಿ ಗ್ರಾಮವಾರು ಸರ್ವೇ ಮಾಡಿ ಎಂದು ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚನೆ ನೀಡುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದೇ ಪೂರ್ಣ ಪ್ರಮಾಣದ ವರದಿ ನೀಡಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಸರಕಾರ ಜನಸಾಮಾನ್ಯರಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದೆ ಎಂದು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ 10 ದಿನದ ಹಿಂದೆ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ರಾಜ್ಯದ ಈ ವರದಿ ಮಂಜೂರು ಮಾಡಲು ಯೋಗ್ಯವಿಲ್ಲ ಎಂದು ಹೇಳಿದೆ. ಆದರೆ ರಾಜ್ಯ ಸರಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಸಲ್ಲಿಸಲು ಇನ್ನೂ ಒಂದು ಅವಕಾಶವಿದ್ದು, ಮುಂದಿನ 50 ದಿನಗಳಲ್ಲಿ ಕೇರಳ ಮಾದರಿಯ ವರದಿಯನ್ನು ಸಿದ್ಧಪಡಿಸಿ ತಕ್ಷಣ ಕೇಂದ್ರ ಸರಕಾರ ಹಾಗೂ ಸುಪ್ರಿಂ…

Read More

ಕುಂದಾಪುರ: ಛಾಯಾಗ್ರಾಹಕರು ಸಮಾಜದ ಕಣ್ಣಿದ್ದಂತೆ. ಆಗುಹೋಗುಗಳನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಅವರ ಕ್ಯಾಮರಾ ಕಣ್ಣನ್ನು ತಪ್ಪಿ ನಡೆಯಲು ಸಾಧ್ಯವಿಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಷನ್ ಇದರ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎಸ್.ಕೆ.ಪಿ.ಎ ಕುಂದಾಪುರ ವಲಯದ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗದ ಸಹಯೋಗದೊಂದಿಗೆ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಆಯೋಜಿಸಲಾದ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗರಿಷ್ಠ ರಕ್ತದಾನವನ್ನು ಮಾಡುವ ಮೂಲಕ ರಕ್ತದಾನಿಗಳ ಜಿಲ್ಲೆ ಎಂಬ ಹೆಸರನ್ನು ಪಡೆದಿರುವ ಉಡುಪಿ ಜಿಲ್ಲೆ, ಈಗ ನೇತ್ರದಾನದ ಅರಿವು ಮೂಡಿಸಲು ಮುಂದಾಗಿರುವುದು ಜಿಲ್ಲೆಯ ಜನರಲ್ಲಿನ ಆರೋಗ್ಯ ಜಾಗೃತಿಯನ್ನು ಸೂಚಿಸುತ್ತದೆ ಎಂದವರು…

Read More

ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯ ಸರಕಾರದ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾಣೆಯ ಕೌನ್ಸಿಲಿಂಗ್‌ನ ಭ್ರಷ್ಟ ನಾಟಕ ನಡೆಯಿತು. ಪರಸ್ಪರ ವರ್ಗಾವಣೆ; ನಗರ ಗ್ರಾಮಾಂತರ ಪ್ರದೇಶ ಬದಲಾವಣೆ; ದಂಪತಿಗಳು ಒಂದೇ ಕಡೆ ಕೆಲಸ ನಿರ್ವಹಿಸುವ ಅವಕಾಶ; ಅನಾರೋಗ್ಯದ ನೆಲೆಯಲ್ಲಿ ವರ್ಗಾವಣೆ; ನೇರವಾಗಿ ಖಾಲಿ ಇರುವ ಸ್ಥಳಕ್ಕೆ ವರ್ಗಾವಣೆ ಹೀಗೆ ಹಲವು ಪ್ರಕಾರಗಳಿವೆ. ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆಗೆ ಅರ್ಹರಾದವರ ಪಟ್ಟಿ ಪ್ರಕಟಿಸಲಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆಗೆ ಅರ್ಹರಾದವರ ಪಟ್ಟಿಯಿಂದ ಹಿಡಿದು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೌನ್ಸಿಲಿಂಗ್ ನಡೆದು ವರ್ಗಾವಣೆಯ ಅಂತಿಮ ಆದೇಶ ಹೊರಡಿಸುವ ವರೆಗೆ ಸಾಕಷ್ಟು ಗೋಲ್‌ಮಾಲ್ ನಡೆದಿದೆ. ದಂಪತಿಗಳು ಒಂದೇ ತಾಲೂಕಿನ ಒಳಗೆ ದೂರ ದೂರದ ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ವರ್ಗಾವಣೆಗೆ ಅವಕಾಶ ಇದ್ದರೂ ಕೆಲವರಿಗೆ ವರ್ಗಾವಣೆ ನಿರಾಕರಿಸಲಾಗಿದೆ. ಸೇವಾ ಹಿರಿತನಕ್ಕೆ ಬೆಲೆ ಇಲ್ಲ. 10-15 ವರ್ಷ ದೂರದ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದವರಿಗೆ ಹತ್ತಿರದ ನಗರ ಪ್ರದೇಶಕ್ಕೆ ಅವಕಾಶವಿದ್ದರೂ ವರ್ಗಾವಣೆ ನಿರಾಕರಿಸಲಾಗಿದೆ. ವರ್ಗಾವಣೆ ಬಯಸಿದ 5ರಿಂದ 10 ಶೇಕಡಾ ಉಪನ್ಯಾಸಕರಿಗೆ…

Read More

ಉಡುಪಿ: ರಸ್ತೆ ಅಪಘಾತ ನಡೆದಾಗ ಅಲ್ಲಿ ಬಿದ್ದವರ ಪೊಟೋ ಕ್ಲಿಕ್ಕಿಸಿ ಅದನ್ನು ಫೇಸ್‌ಬುಕ್‌, ವಾಟ್ಸ್‌ಪ್‌ಗೆ  ಅಪ್‌ಲೋಡ್‌ ಮಾಡಿ ಅನಾಗರೀಕತೆ ತೋರ್ಪಡಿಸುವ ಬದಲಿಗೆ ಆ ಸಮಯದಲ್ಲಿ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆಯಬೇಕು ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಕರೆ ನೀಡಿದರು. ಅಪಘಾತ ನಡೆದ ಕೂಡಲೇ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೆಲವರು ಪೊಲೀಸ್‌, ಕೋರ್ಟ್‌ ಭಯದಿಂದ ಹಿಂಜರಿಯುತ್ತಾರೆ. ಹೀಗೆ ಭಯಪಡಬೇಕಾಗಿಲ್ಲ. ಅಪಘಾತವನ್ನು ಮೊದಲು ನೋಡಿದವನನ್ನಾಗಲಿ, ಆಸ್ಪತ್ರೆಗೆ ದಾಖಲಿಸಿದವನನ್ನಾಗಲಿ ಪೊಲೀಸರು ಒತ್ತಾಯಪಡಿಸಿ ಸಾಕ್ಷಿದಾರನನ್ನಾಗಿ ಮಾಡುವಂತಿಲ್ಲ. ನ್ಯಾಯಾಲಯ ಕೂಡ ಪ್ರಶ್ನಿಸುವುದಿಲ್ಲ. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೆ ಸಹಾಯ ಮಾಡಬಹುದು. ಒಂದು ವೇಳೆ ಅಗತ್ಯ ಬಿದ್ದಾಗ ಸಾಕ್ಷಿ ಹೇಳಿದರೆ ಅಪಘಾತದಿಂದ ನಿಜವಾಗಿ ಅನ್ಯಾಯಕ್ಕೊಳಗಾದವನಿಗೆ ವಿಮಾ ಪರಿಹಾರ ಮತ್ತಿತರ ಪರಿಹಾರ ಧನ ದೊರೆಯಲು ಸಹಾಯವಾಗುತ್ತದೆ. ಸಹಾಯ ಮಾಡಿದವರು ಬಯಸಿದರೆ ಮಾತ್ರ ಸಾಕ್ಷಿಯಾಗುತ್ತಾರೆ ಎಂದು ಅವರು ರಸ್ತೆ ಅಪಘಾತ ದೇಶದ ದೊಡ್ಡ ರೋಗದಂತಾಗಿದೆ. ನಾಲ್ಕು ನಿಮಿಷ ಕ್ಕೋರ್ವರು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ಇಂತಹ ಅಪಘಾತಗಳಾದಾಗ ಸಾರ್ವಜನಿಕರ ತುರ್ತು ಸ್ಪಂದನದಿಂದ ಕೆಲವು ಜೀವಗಳನ್ನು ಉಳಿಸಲು…

Read More

ಕುಂದಾಪುರ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಮತ್ತು ಘಟ್ಟದಕೋರೆ) ಮೂಡಲಪಾಯ, ಯಕ್ಷಗಾನ ಗೊಂಬೆಯಾಟ (ಸೂತ್ರದ ಮತ್ತು ತೊಗಲುಗೊಂಬೆ) ಶ್ರೀಕೃಷ್ಣಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾಪ್ರಕಾರಗಳಲ್ಲಿ 2014 ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಪುಸ್ತಕಕ್ಕೆ ರೂ 5,000/- ಬಹುಮಾನವನ್ನು ನೀಡಲಾಗುವುದ. ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ) ಸಂಶೋಧನೆ, ವಿಮರ್ಶೆ ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕೆ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು. ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು – 560 002 ಇವರಿಗೆ 2015 ರ…

Read More

ಕುಂದಾಪುರ: ಅವರಿಬ್ಬರೂ ಜೀವದ ಗೆಳೆಯರು. ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಮ್ಮಾಡಿಯಲ್ಲಿಯೂ ಮನೆಮಾತಾದವರು. ತಮ್ಮದೇ ಉದ್ಯೋಗ-ವ್ಯವಹಾರವನ್ನು ಮಾಡಿಕೊಂಡು ಚನ್ನಾಗಿಯೇ ಇದ್ದರು. ಆದರೆ ವಿಧಿಗೆ ಇವರು ಬದುಕುವುದು ಬೇಕಿರಲಿಲ್ಲ. ಬದುಕಿನ ನೂರಾರು ಕನಸು ಹೊತ್ತ ಈ ಸ್ನೇಹಿತರು ಸಾವುನಲ್ಲೂ ಜೊತೆಯಾದರು. ನೆಚ್ಚಿನ ಬೈಕಿನಲ್ಲಿ ಹೊರಟಿದ್ದ ಅವರು ಜೀವಂತವಾಗಿ ಮರಳಲೇ ಇಲ್ಲ. ಸಂಜೆ ಬೈಕ್ ಹಾಗೂ 407 ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಸಹಸವಾರಾಗಿದ್ದ ಸುರೇಂದ್ರ ಗಾಣಿಗ ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದಸಂಪತ್ ಪೂಜಾರಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ವಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ. ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಹೊಸ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಮೇಲ್ಸೆತುವೆ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ…

Read More

ಬೈಂದೂರು: ಆ ಶಾಲೆಯ ಕಟ್ಟಡದ ಒಂದು ಬದಿ ಸಂಪೂರ್ಣ ಬಿದ್ದು ಹೋಗಿದೆ. ವಿದ್ಯುತ್ ಸಂಪರ್ಕದ ತಂತಿಗಳು ಕಿತ್ತು ಹೋಗಿದೆ. ಆದರೂ ಸಹ ಇಲ್ಲಿನ ಶಿಕ್ಷಕರು ಮತ್ತೊಂದು ಕಟ್ಟಡದ ಇರುವ ಎರಡು ಕೊಠಡಿಗಳಲ್ಲಿಯೇ ಮಕ್ಕಳನ್ನು ತುಂಬಿಸಿಕೊಂಡು ನಿಶ್ಚಿಂತೆಯಿಂದ ಪಾಠ ಮಾಡುತ್ತಿದ್ದಾರೆ. ದುರಸ್ತಿಗಳೊಸಬೇಕಾದ ಇಲಾಖೆ ಸುಮ್ಮನೆ ಕುಳಿತಿದೆ. ಬೈಂದೂರು ವಲಯ ಉಪ್ಪುಂದ ಗ್ರಾಮದ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಪ್ರಸಕ್ತ ಸಾಲಿನಲ್ಲಿ 42 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ನಲಿಕಲಿ ಯೋಜನೆಯಡಿಯಲ್ಲಿ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದುದರಿಂದ ಹೊಸ ಕಟ್ಟಡದ ಒಂದು ಕೊಠಡಿಯನ್ನು ಬಳಸಿಕೊಂಡಿದ್ದಾರೆ. ಆದರೆ ಸಮುದ್ರ ತೀರಕ್ಕೆ ಹತ್ತಿರವೇ ಇರುವ ಶಾಲೆಯ ಹಳೆಯ ಕಟ್ಟಡದ ಒಂದು ಒದಿ ಬಿದ್ದು ಹೋಗಿರುವುದರಿಂದ ಮತ್ತು ಮಳೆ-ಗಾಳಿಯ ರಭಸಕ್ಕೆ ಅದೇ ಕಟ್ಟಡದ ಇನ್ನೊಂದು ಬದಿಯಲ್ಲಿ ಮಕ್ಕಳನ್ನು ಕುರಿಸಿಕೊಂಡು ಪಾಠ ಮಾಡುವುದು ಕಷ್ಟವಾದ್ದರಿಂದ 4 ಮತ್ತು 5ನೇ ತರಗತಿಯ ಮಕ್ಕಳನ್ನು ಒಟ್ಟಾಗಿಸಿ ಹೊಸ…

Read More