ನಾಡ: ಸಂವಿಧಾನದತ್ತ ಹಕ್ಕುಗಳನ್ನು ಪಡೆದು ಸರ್ವಾಂರ್ಗೀಣ ಅಭಿವೃದ್ಧಿಯತ್ತ ಸಾಗಲು ದಲಿತರಿಗೆ ದಲಿತರೇ ಇಂದು ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದಲಿತರಲ್ಲಿನ ಒಗ್ಗಟ್ಟನ್ನು ಮುರಿದು ದಲಿತ ಚಳವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ಗಲಾಟೆ-ಗದ್ದಲ, ಕೇಸು, ಕೋರ್ಟು-ಕಚೇರಿ ಎಂದಷ್ಟೇ ತಪ್ಪುತಿಳಿಯುವಂತಾಗಿದೆ. ದಲಿತ ಸಂಘಟನೆ ಎಂದರೆ ದಲಿತರ ಸ್ವಾಭಿಮಾನ ಜಾಗೃತಿಯೇ ವಿನಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಗೊಂದಲವನ್ನು ಸೃಷ್ಟಿಸುವುದಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಹೇಳಿದರು.
Author: ನ್ಯೂಸ್ ಬ್ಯೂರೋ
ಜೀ ಟಿವಿ ಹಿಂದಿ ವಾಹಿನಿಯು ನಡೆಸುತ್ತಿದ್ದ ಸರಿಗಮಪ ಲಿಟಲ್ ಚಾಂಪ್ಸ್-5 ರಿಯಾಲಿಟಿ ಶೋಗೆ ತೆರೆಬಿದ್ದಿದ್ದು ಈ ಬಾರಿಯ ಲಿಟಲ್ ಚಾಂಪ್ಸ್ ಪಟ್ಟವನ್ನು ಕರ್ನಾಟಕದ ಏಕೈಕ ಸ್ವರ್ಧಿಯಾಗಿದ್ದ ಉಡುಪಿಯ ಪ್ರತಿಭೆ ಗಗನ್ ಗಾಂವ್ಕರ್ ಅಲಂಕರಿಸಿದ್ದಾರೆ.
ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಹೆಸರು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜಿನ್ ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದ್ದು ಕುಂದಾಪುರಕ್ಕೆ ಮತ್ತೊಂದು ಗರಿ ಬಂದಂತಾಗಿದೆ. ತನ್ನ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕವೇ ಪ್ರಸಿದ್ಧಿ ಹೊಂದಿದ್ದ ಸತೀಶ್ ಆಚಾರ್ಯ ಅವರ ಹೆಸರು ಫೋರ್ಬ್ಸ್ ನಲ್ಲಿ ಕಾಣಿಸಿಕೊಂಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಏನು ಹೇಳಿದೆ ಫೋರ್ಬ್ಸ್ ಮ್ಯಾಗಜಿನ್? ಫೋರ್ಬ್ಸ್ ಮ್ಯಾಗಜಿನ್ ನ ವೇಗದಲ್ಲಿ ಬದಲಾಗುತ್ತಿರುವ ಭಾರತವನ್ನು ಜಗತ್ತಿಗೆ ಅಸಾಧಾರಣವಾಗಿ ವರ್ಣಿಸುತ್ತಿರುವ, ಭಾರತೀಯ ಮೂಲದ ವಿಶ್ವವಿಖ್ಯಾತ ಚಿಂತಕರೆಂದು ಹೇಳಲಾಗಿರುವ 24 ಮಂದಿ ಖ್ಯಾತನಾಮರ ಪಟ್ಟಿಯಲ್ಲಿರುವ ಭಾರತದ ಸತೀಶ್ ಆಚಾರ್ಯ ಅವರ ಹೆಸರೂ ಇದೆ. ಮಂಗಳೂರು ಮೂಲದ ಚತುರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಭಾರತದ ರಾಜಕಾರಣ ಮತ್ತು ಭಾರತೀಯ ಕ್ರೀಡಾ ಲೋಕವನ್ನು ತಮ್ಮ ಅದ್ಭುತವಾದ ಕಾರ್ಟೂನ್ ಗೆರೆಗಳ ಮೂಲಕ ಸಮಗ್ರವಾಗಿ ಹಿಡಿದಿಡುತ್ತಾರೆ ಎಂದು ಹೇಳಿದೆ.
