ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿಯಲ್ಲಿ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ದೋಣಿ ಮಗುಚಿ ಮೂವರು ಸಮುದ್ರಪಾಲಾಗಿದ್ದು, ಓರ್ವ ವ್ಯಕ್ತಿ ಈಜಿ ದಡ ಸೇರಿರುವ ಘಟನೆ ನಡೆದಿದೆ. ಘಟನೆಯಲ್ಲಿ ಗಂಗೊಳ್ಳಿ ನಿವಾಸಿಗಳಾದ ಸುರೇಶ್ ಖಾರ್ವಿ (48), ಲೋಹೀತ್ ಖಾರ್ವಿ (34), ಜಗದೀಶ್ ಖಾರ್ವಿ (50) ಎಂಬ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಕಿರುದೋಣಿಯಲ್ಲಿ ನಾಲ್ವರು ಮೀನುಗಾರರು ಎಂದಿನಂತೆ ಮೀನುಗಾರಿಕೆಗಾಗಿ ತೆರಳಿದ್ದು, ಮೀನು ತುಂಬಿಸಿಕೊಂಡು ಗಂಗೊಳ್ಳಿ ಬಂದರಿಗೆ ಹಿಂದಿರುಗುತ್ತಿದ್ದ ವೇಳೆ ಬ್ರೇಕ್ ವಾಟರ್ ತುದಿಯಲ್ಲಿ ಈ ಅವಘಡ ನಡೆದಿದೆ. ಹಿಂದಿರುಗುವಾಗ ಗಾಳಿ ಹಾಗೂ ಅಬ್ಬರ ತೆರೆಗಳ ರಭಸಕ್ಕೆ ದೋಣಿಯಲ್ಲಿದ್ದ ಓರ್ವ ಮೀನುಗಾರ ಕೆಳಕ್ಕೆ ಬಿದ್ದಿದ್ದರು. ಅವರನ್ನು ರಕ್ಷಣೆ ಮಾಡುವ ಸಲುವಾಗಿ ದೋಣಿಯಲ್ಲಿ ತಿರುಗಿಸಲಾಗಿದ್ದು, ಅದೇ ವೇಳೆದ ಅಬ್ಬರದ ಅಲೆಗಳು ಹೊಡೆದು ದೋಣಿ ಮಗುಚಿದೆ. ಘಟನೆಯಲ್ಲಿ ಸುರೇಶ್ ಖಾರ್ವಿ, ಲೋಹೀತ್, ಜಗದೀಶ್ ಎಂಬ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಸಂತೋಷ ಖಾರ್ವಿ (35) ಎಂಬುವವರು ಈಜಿಕೊಂಡು ದಡ ಸೇರಿದ್ದಾರೆ. /ಕುಂದಾಪ್ರ ಡಾಟ್ ಕಾಂ/…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಫ್ ಎಂ ರೇಡಿಯೋಗಳು ಉಡುಪಿ ಜಿಲ್ಲೆಯಲ್ಲೂ ಅತ್ಯಂತ ಉತ್ತಮವಾಗಿ ಕೇಳುಗರಿಗೆ ದೊರೆಯುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರು ಪ್ರಯತ್ನ ಪಡಲಿ ಎಂದು ಎಫ್ ಎಂ ಕೇಳುಗರ ಪರವಾಗಿ ಕುಂದಾಪುರದ ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹ ಮಾಡಿದ್ದಾರೆ. ಹಲವಾರು ಎಫ್ ಎಂ ರೇಡಿಯೋ ಚಾನಲ್ ಗಳು ಮಂಗಳೂರಿನಲ್ಲಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದರೂ ಸಹ ಉಡುಪಿ ಜಿಲ್ಲೆಯಲ್ಲಿ ಮಂಗಳೂರಿನ ಎಫ್ ಎಂ ರೇಡಿಯೋ ತರಂಗಾಂತರಗಳು ಸುಲಲಿತವಾಗಿ ಕೇಳುಗರಿಗೆ ಸಿಗುತ್ತಿಲ್ಲ. ಬ್ರಹ್ಮಾವರದಲ್ಲಿನ ಮಂಗಳೂರು ಆಕಾಶವಾಣಿ ಕೇಂದ್ರವು ಎಫ್ ಎಂ ರೇಡಿಯೋ ತರಂಗಾಂತರಳನ್ನು ಉಡುಪಿ ಜಿಲ್ಲೆಯ ಕೇಳುಗರಿಗೆ ಸುಲಲಿತವಾಗಿ ಸಿಗುವಂತೆ ಮಾಡಬೇಕು ಹಾಗೂ ಇದರಿಂದ ಉಡುಪಿ ಜಿಲ್ಲೆ ಮಾತ್ರವಲ್ಲದೆ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಹಾಗೂ ಶಿವಮೊಗ್ಗ ಜಿಲ್ಲೆಯ ಹಲವು ತಾಲ್ಲೂಕುಗಳಿಗೂ ಇದರಿಂದ ಉಪಯುಕ್ತವಾಗುತ್ತದೆ. ಈ ಬಗ್ಗೆ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕ್ರಮವಹಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗೃಹಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಳ್ನಾಡು ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅರಿವನ್ನು ಪಡೆದುಕೊಂಡರು . ಹಳ್ನಾಡಿನ ಸಮೀಪದ, ಮೊಗವೀರ ಸಂಘಟನೆಯ ಅಧ್ಯಕ್ಷರು, ಕೃಷಿಕರಾದ ನಾಗೇಶ್ ಮೊಗವೀರ ಇಅವರ ಗದ್ದೆಯಲ್ಲಿ ಶನಿವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ 6, 7 ಮತ್ತು 8ನೇ ತರಗತಿ ಮಕ್ಕಳು ಭಾಗವಹಿಸಿ ಕೃಷಿ ಜ್ಞಾನ, ಪ್ರಸ್ತುತ ಕೃಷಿ ಭೂಮಿಯಲ್ಲಿ ರೈತರ ಸಮಸ್ಯೆ, ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಮುಂತಾದ ಮಾಹಿತಿಗಳನ್ನು ತಿಳಿದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಮುಂಚೂಣಿಯಲ್ಲಿ ಈ ಕೃಷಿ ಪ್ರಾತ್ಯಕ್ಷಿಕೆ ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಶಿಕ್ಷಕೇತರ ಸಿಬ್ಬಂದಿ, ಹಾಗೂ ಶಿಕ್ಷಕರು ಈ ಪ್ರಾತ್ಯಕ್ಷಿಕೆಯಲ್ಲಿ ಮಕ್ಕಳ ಜೊತೆಯಲ್ಲಿದ್ದರು. ಸುರಿಯುವ ಮಳೆಯ ನಡುವೆಯೂ ನಾಟಿ ಮಾಡುವ ಮೂಲಕ ಮಕ್ಕಳು ಕೃಷಿ ಸಂಭ್ರಮವನ್ನು ಅನುಭವಿಸಿದರು. ಶಾಲಾ ಆಟಪಾಠಗಳ ಜೊತೆ ನೈಜ ಬದುಕಿನಲ್ಲಿ ಕೃಷಿ ಕಲಿಕೆಯನ್ನು ಅರ್ಥಮಾಡಿಸುವ ನಿಟ್ಟಿನಲ್ಲಿ ಅನ್ನ ಮೂಲದ ಅರಿವನ್ನು ಮಕ್ಕಳಲ್ಲಿ ತಿಳಿಸಲು ತುಳಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಆನ್ಲೈನ್ ತರಗತಿಗಳಿಗೆ ಹೋಲಿಸಿದರೆ ವಿದ್ಯಾರ್ಥಿ ಶಿಕ್ಷಕರ ನೇರ ಮುಖಾಮುಖಿ ಸಂವಹನ ಸಾಧ್ಯವಾಗುವ ಭೌತಿಕ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಪೂರಕವಾದ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಬದ್ಧತೆಯಿಂದ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರಿನ ಅರ್ಜುನ್ ಅಕಾಡೆಮಿಯ ಸಹಯೋಗದಲ್ಲಿ ಆರಂಭಗೊಂಡ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಅರ್ಜುನ್ ಅಕಾಡೆಮಿಯ ಪ್ರದೀಪ್ ಎನ್. ಎಸ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಂಗ್ಲ ಭಾಷೆ ಉಪನ್ಯಾಸಕ ಥಾಮಸ್ ಪಿ. ಎ., ವಿಜ್ಞಾನ ವಿಭಾಗದ ಉಪನ್ಯಾಸಕಿಯರಾದ ಪವಿತ್ರ, ರಮ್ಯ ಮತ್ತು ಪಲ್ಲವಿ ಉಪಸ್ಥಿತರಿದ್ದರು. ನರೇಂದ್ರ ಎಸ್. ಗಂಗೊಳ್ಳಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಕೊಡಮಾಡುವ ಉಚಿತ ನೋಟ್ ಪುಸ್ತಕ, ಸಮವಸ್ತ್ರ, ಬೆಲ್ಟ್ ಮತ್ತು ಹೆಚ್ಚುವರಿ ಕಲಿಕೆಗೆ ಅಗತ್ಯವಾದ ಪಠ್ಯ ಪುಸ್ತಕಗಳ ವಿತರಣೆ ಕಾರ್ಯಕ್ರಮವು ಸೋಮವಾರ ಜರುಗಿತು. ಉಚಿತ ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ ಕೃಷ್ಣಮೂರ್ತಿ ಮಂಜರು, ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದು ಸಚ್ಚಾರಿತ್ರ್ಯವಂತರಾಗಿ ಎಂದು ಶುಭಹಾರೈಸಿದರು. ಟ್ರಸ್ಟಿನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಮಾತನಾಡಿ, ಶಾಲೆಯ ಏಳಿಗೆಗೆ ಕೃಷ್ಣಮೂರ್ತಿ ಮಂಜರ ಕೊಡುಗೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ನಾಗೇಂದ್ರ ಉಡುಪ, ಸದಸ್ಯರಾದ ಸತೀಶ್, ಆಶಾ, ಆಶಾರಾಣಿ, ಶ್ರೀಧರ್, ನಯನಾ ಮತ್ತು ಆಶಾ, ಪ್ರಭಾರ ಮುಖ್ಯ ಶಿಕ್ಷಕ ರಾಜು ಎನ್ ಉಪಸ್ಥಿತರಿದ್ದರು. ಶಿಕ್ಷಕ ಸದಾಶಿವ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಇಂದಿರಾ ಸ್ವಾಗತಿಸಿ, ಶಿಕ್ಷಕಿ ಭಾರತಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಂಘಗಳ ಶ್ರೇಯಸ್ಸಿಗೆ ಒಗ್ಗಟ್ಟು ಅಗತ್ಯ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧ್ಯ ಎಂದು ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು. ಅವರು ಭಾನುವಾರ ಕೋಟ ಸಿ.ಎ. ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಭಾಭವನ ಇಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಮಂಗಳೂರು ಇದರ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿ ಸಾದರಪಡಿಸುವ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಕುಲದ ಸೌಂದರ್ಯ ಹೆಚ್ಚಿಸಲು ಟೈಲರ್ಸಗಳ ಪಾತ್ರ ಬಹುಮುಖ್ಯವಾದದ್ದು. ಅಂತಹ ಟೈಲರ್ಸ್‌ಗಳ ಬೇಡಿಕೆಗಳನ್ನು ಸರಕಾರದ ಜನಪ್ರತಿನಿಧಿಗಳು ಆಲಿಸಬೇಕಾಗಿದೆ, ವೃತ್ತಿ ಕಾಯಕದ ನಡುವೆ ಗೌರವಿಸುವ ಗುರುತಿಸುವ, ಸಹಾಯಹಸ್ತ ಚಾಚುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಸಭೆಯ ಅಧ್ಯಕ್ಷತೆಯನ್ನು ಕೆ.ಎಸ್.ಟಿ.ಎ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ವಹಿಸಿದ್ದರು. ಟೈಲರ್ ವೃತ್ತಿ ಕಾಯಕದ ಕುಟುಂಬದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲಾಯಿತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಪ್ರತಿ ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುತ್ತಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆ ಸ್ಪರ್ಧೇಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸ್ಫರ್ಧಿಗಳಿಂದ ಪಡೆಯಲಾಗುತ್ತಿದ್ದು, ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್‌ನಡಿ ಆರ್.ಎಸ್.ಕೆ ಅಥವಾ ಸಿಟಿಝನ್ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಸೇವಾ ಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಹಾಗೂ ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್.ಐ.ಡಿ ಬಳಸಿಕೊಂಡು ಆನ್‌ಲೈನ್ ಮೂಲಕ ಆಗಸ್ಟ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ಹಾಗೂ ರೆವಿನ್ಯೂ ದಾಖಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಜ್ಯ ಸರಕಾರ ಜಾರಿಗೆ ತಂದಿರುವ ಹೆಣ್ಣು ಮಕ್ಕಳ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪುಷ್ಠಿ ನೀಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು. ಅವರು ಅಂದು ಉಡುಪಿ ನಗರದ ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿ ಉಡುಪಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ವತಿಯಿಂದ, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ 500 ಕೋಟಿ ಮಹಿಳಾ ಪ್ರಯಾಣಿಕರು ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಸಂಚಾರ ಮಾಡಿರುವ ಹಿನ್ನೆಲೆ, ಆಯೋಜಿಸಲಾದ ಶಕ್ತಿ ಯೋಜನೆಯ ಸಂಭ್ರಮ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಯಶಸ್ವಿಯಾಗಿ ಜಾರಿಗೊಳಿಸಿದೆ. 2023 ರ ಜೂನ್ 11 ರಂದು ಶಕ್ತಿ ಯೋಜನೆಗೆ ಮೊದಲು ಜಾರಿಗೆ ತರಲಾಗಿದ್ದು, ಅಂದಿನಿಂದ ರಾಜ್ಯದ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ. ಈ ಯೋಜನೆ ಜಾರಿಯಾದಾಗಿನಿಂದ ಈವರೆಗೆ 500 ಕೋಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಬರುವ ವಿದ್ಯಾ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪೋಷಕರಿಗೆ ಮಕ್ಕಳ ಬೆಳೆವಣಿಗೆ, ಭಾವನಾತ್ಮಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಸ್ಪಷ್ಟ ಅರಿವನ್ನು ನೀಡುವ ಗುರಿಯನ್ನು ಹೊಂದಿತ್ತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಸೇವೆ ನೀಡುತ್ತಿರುವ ಗಿರೀಶ್ ಎಂ. ಎನ್. ಅವರು ಭಾಗವಹಿಸಿದ್ದರು. ಅವರು ಮಕ್ಕಳಲ್ಲಿ ಕಂಡುಬರುವ ಆತ್ಮವಿಶ್ವಾಸದ ಕೊರತೆ, ಒತ್ತಡ, ತಂತ್ರಜ್ಞಾನದ ಇತಿಮಿತಿಯ ಬಳಕೆ ಮುಂತಾದ ಸಮಸ್ಯೆಗಳ ಬಗ್ಗೆ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದರು. ಪೋಷಕರು ಮಕ್ಕಳ ಭಾವನೆಗಳನ್ನು ಗುರುತಿಸುವುದು, ಸಹಾನುಭೂತಿಯಿಂದ ವರ್ತಿಸುವುದು ಮತ್ತು ಉತ್ತಮ ಮಾರ್ಗದರ್ಶನ ನೀಡುವುದು ಹೇಗೆ ಎಂಬುದರ ಕುರಿತು ಉದಾಹರಣೆಗಳ ಸಹಿತ ಸಲಹೆಗಳನ್ನು ನೀಡಿದರು. ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ, ಇಂದಿನ ಪೋಷಕರಿಗೆ ಇಂತಹ ಸಂವಾದಗಳು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಉತ್ತಮ ಶಿಕ್ಷಣ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ಐಎಂಎ ಯ ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಐಎಂಎ ಯ ನಿಯೋಜಿತ ರಾಜ್ಯ ಉಪಾಧ್ಯಕ್ಷರೂ ಆಗಿರುವ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಸಮಾಜಮುಖಿ ವೈದ್ಯಕೀಯ ಸೇವೆ, ಸಮುದಾಯ ಸೇವೆ ಹಾಗೂ ಸಾಮಾಜಿಕ ಸಂಘಟನೆಗಾಗಿ ಈ ಬಾರಿ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ ಲಭಿಸಿದೆ. ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರ ಘಟಕದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಡಾ. ಬಿ ಸಿ ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರವನ್ನು ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ , ಇಂಡಿಯಾ ದ ಸಬಾಂಗಣದಲ್ಲಿ ಜರುಗಿದ ಸಭೆಯಲ್ಲಿ ನೀಡಿ ಗೌರವಿಸಲಾಯಿತು. ಕೇಂದ್ರ ಸೈನ್ಸ್ ಅಂಡ್ ಟೆಕ್ನಾಲಜಿ ಸಚಿವರೂ, ಸ್ವತಃ ಹಿರಿಯ ಐಎಂಎ ನಾಯಕರೂ, ವೈದ್ಯರೂ, ವೈದ್ಯಕೀಯ ಶಿಕ್ಷಕರೂ ಆಗಿರುವ ಡಾ. ಜಿತೇಂದ್ರ ಸಿಂಗ್, ದೆಹಲಿಯ ಶಾಸಕರೂ, ಖುದ್ದು ದೆಹಲಿಯ ತಜ್ಞ ಖ್ಯಾತ ಹಿರಿಯ ಯೂರಾಲಜಿಸ್ಟ್, ಹಿರಿಯ ಐಎಂಎ ನಾಯಕರೂ ಆಗಿರುವ ಡಾ. ಅನಿಲ್ ಗೋಯಲ್,…
