Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ವಕ್ವಾಡಿ ಮಾಗಣೆಯ ಸಭೆಯಲ್ಲಿ ದೇಗುಲದ ಆಡಳಿತ ಮೊಕ್ತೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು. ವಕ್ವಾಡಿ ಮಾಗಣೆಯ ವ್ಯಾಪ್ತಿಗೆ ಸೇರಿದ ಕುಂಭಾಶಿ, ಗೋಪಾಡಿ, ಹೂವಿನಕೆರೆ, ಅಸೋಡು, ಕೋಟೇಶ್ವರ, ಕಾಳಾವರ, ನೂಜಿ, ಹೆಸ್ಕುತ್ತೂರು, ಇದರ ಸಭೆಯು ಹೂವಿನಕೆರೆ ಭಾವಿಸಮೀರ ಗುರು ಸಾರ್ವಭೌಮ ವಾದಿರಾಜ ಮಠದ ಹತ್ತಿರ ವಾದೀಶ್ ಭಟ್ ಅವರ ಸಭಾಗ್ರಹದಲ್ಲಿ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ಮಾಗಣೆಯ ಕುಟುಂಬದವರಿಗೆ ಮೂಲ ಕ್ಷೇತ್ರದ ಪ್ರಸಾದ ವಿತರಿಸಲಾಯಿತು. ದೇವಸ್ಥಾನದಲ್ಲಿ ನಡೆಯಲಿರುವ ಶಾಶ್ವತ ಪೂಜೆ, ವಿವಿಧ ಪೂಜಾ ಕೈಂಕರ್ಯ, ಜಾತಿ ಗಣತಿ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿ, ಮಾಹಿತಿ ನೀಡಲಾಯಿತು. ಸಭೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ. ಗೋಪಾಲ್, ವೀರೇಶ್ವರ ಸಮಿತಿಯ ಅಧ್ಯಕ್ಷ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2025ರ ಶೈಕ್ಷಣಿಕ ಸಾಲಿನ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಕ-ಪಾಲಕ-ವಿದ್ಯಾರ್ಥಿಗಳ ಪ್ರಥಮ ಸಭೆಯನ್ನು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ದಿಕ್ಕನ್ನು ತೀರ್ಮಾನಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿ, ಗುರಿ ಮುಟ್ಟುವೆಡೆಗೆ ಶ್ರಮಿಸಬೇಕು. ಈ ಪ್ರಯಾಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋ?ಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರವು ಬಹಳ ಮಹತ್ವದ್ದಾಗಿದೆ ಎಂದರು. ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುತ್ತಾನೆ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸೂಕ್ತವಲ್ಲ ಎಂದರು. ಮನಸ್ಸಿನ ಸಮತೋಲನ ಅಗತ್ಯ:”ಬಾಲ್ಯಾವಸ್ಥೆಗಿಂತ ಪ್ರೌಢಾವಸ್ಥೆ ವಿಭಿನ್ನ ಮನೋಧರ್ಮದಿಂದ ಕೂಡಿರುತ್ತದೆ. ದೈಹಿಕವಾಗಿ ಶಕ್ತಿಶಾಲಿಯಾದರೂ, ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಅಧ್ಯಯನ ಸಮಯವನ್ನು ಕಟ್ಟುನಿಟ್ಟಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪರಿಸರದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿಸಬೇಕು ಅದಕ್ಕಾಗಿ ಈಗಿಂದಿಗಲೇ ಗಿಡ ನಡುವ ಕಾಯಕಕ್ಕೆ ವೇಗ ನೀಡಿ ಎಂದು ಪಾಂಡೇಶ್ವರದ ಯೋಗ ಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ವಿಜಯ ಮಂಜರ್ ಕರೆ ನೀಡಿದರು. ಅವರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಪಾಂಡೇಶ್ವರ ಇವರ ಸಂಯೋಜನೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇವರ ಸಹಭಾಗಿತ್ವದಡಿ 263ನೇ ಭಾನುವಾರ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಕೃತಕ ಆಕ್ಸಿಜನ್ ತೆಗೆದುಕೊಂಡ ದಿನಗಳನ್ನು ನೆನಪಿಸಿದ ಅವರು ಪಂಚವರ್ಣ ಸಂಘಟನೆಯವರು ಪ್ರಕೃತಿಗಾಗಿ ಪ್ರಜ್ವಲಿಸುವ ದೀಪದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥಹ ಸಂಘಟನೆಗಳಿಗೆ ನಮ್ಮದೊಂದು ಸೆಲ್ಯೂಟ್ ನೀಡಬೇಕಾಗಿದೆ. ಪರಿಸರಕ್ಕೆ ಪೂರಕವಾದ ಅಂಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಪ್ರಕೃತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಹಟ್ಟಿಅಂಗಡಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ರಾಮಕೃಷ್ಣ ಉಡುಪರವರು ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುಪೂರ್ಣಿಮೆಯ ಹಿನ್ನೆಲೆ ಹಾಗೂ ಗುರುವಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ನಂತರ ಶಾಲಾ ಶಿಕ್ಷಕಿಯರು ಗುರುವಿಗೆ ಗೌರವ ಸಲ್ಲಿಸುವ ಹಾಡನ್ನು ಹಾಡಿದರು. ಶಂಕರಾಚಾರ್ಯ ವಿರಚಿತ ಗುರ್ವಷ್ಟಕವನ್ನು ವಿದ್ಯಾರ್ಥಿಗಳಿಗೆ ಕೇಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾನಿಯಾದ ಸುಜಾತಾ ಸದಾರಾಮ, ಶಿಕ್ಷಕ ವೃಂದದವರು ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಯಣ: ಗುರು ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ. ಗುರು ಶಿಷ್ಯರ ನಡುವೆ ಇರುವ ಪವಿತ್ರ ಬಾಂಧವ್ಯದ ಪ್ರತೀಕವಾದ ಗುರುಪೂರ್ಣಿಮೆ ದಿನವನ್ನು ಮದರ್ ತೆರೆಸಾ ಮೆಮೋರಿಯಲ್ ಶಾಲಾ ವಿಭಾಗದಲ್ಲಿ ಇತ್ತೀಚಿಗೆ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುವಿನ ಮೇಲೆ ಇರುವ ಭಕ್ತಿ ಹಾಗೂ ಗುರು ಶಿಷ್ಯರ ನಡುವಿನ ಬಾಂಧವ್ಯವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಪ್ರಹಸನ , ಭಾಷಣ ನೃತ್ಯ ಹಾಗೂ ಸಂಗೀತದ ಮೂಲಕ ತಿಳಿಸಿದರು. ಗುರುಗಳ ಆಶೀರ್ವಾದವನ್ನು ಪಡೆದ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಜೊತೆಗಿರುವ ಸಂಸ್ಕಾರವನ್ನು ಗುರುತಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಗುರುವಿನ ಮಹತ್ವವನ್ನು ಸಾರುವ ಮೂಲಕ ಗುರು ಪೂರ್ಣಿಮಾ ಕಾರ್ಯಕ್ರಮವು ಅರ್ಥ ಪೂರ್ಣ ವಾಗಿ ನೆರವೇರಿತು. ಈ ಸಂಭ್ರಮಾಚರಣೆಯಲ್ಲಿ ಆಡಳಿತ ಮಂಡಳಿಯವರು ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997 ರ ಕಲಂ 25 ರನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಬಿ ಗೆ ಸೇರಿದ 01 ಹಾಗೂ ಸಿ ಗೆ ಸೇರಿದ 22 ಒಟ್ಟು 23 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ ಬಿ. ದೇವಸ್ಥಾನದ ವಿವರ:ಬ್ರಹ್ಮಾವರ ತಾಲೂಕು ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಪ್ರವರ್ಗ ಸಿ. ದೇವಸ್ಥಾನದ ವಿವರ:ಬೈಂದೂರು ತಾಲೂಕು ನಾವುಂದ ಗ್ರಾಮದ ಅರೆಹೊಳೆ ಶ್ರೀ ವಿನಾಯಕ ದೇವಸ್ಥಾನ, ಹೇರಂಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಮಸ್ಕಿ ಹೆರಂಜಾಲು ಶ್ರೀ ಗೋಪಾಲ ಮತ್ತು ವಿನಾಯಕ ದೇವಸ್ಥಾನ. ಕುಂದಾಪುರ ತಾಲೂಕು ಮೊಳಹಳ್ಳಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಸೇನಾಪುರದ ಬೆಳವಿನಮಕ್ಕಿ ಶ್ರೀ ಮಹಾಗಣಪತಿ ದೇವಸ್ಥಾನ, ಕೊಡ್ಲಾಡಿ ಕೂಡಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಇಕೋ ಕ್ಲಬ್, ಸ್ಪೋರ್ಟ್ಸ್ ಕ್ಲಬ್, ಸಾಂಸ್ಕತಿಕ ಸಂಘ, ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಉದ್ಘಾಟನೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಮಕೃಷ್ಣ ನರ್ಸಿಂಗ್ ಹೋಮ್ ಕುಂದಾಪುರ ಇಲ್ಲಿನ ಪ್ರಧಾನ ಸಲಹೆಗಾರರು ಮತ್ತು ಸಮಗ್ರ ಚರ್ಮರೋಗ ತಜ್ಞರಾದ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಅಜಿತ್ ಎಂ. ಅವರಿಂದ ಮಕ್ಕಳಿಗೆ ಪ್ರೇರಣಾತ್ಮಕ ಉಪನ್ಯಾಸವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ ಲಗಳೂರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಜೀವನ್ ಕುಮಾರ್ ಶೆಟ್ಟಿ, ಅರ್ಥಶಾಸ್ತ್ರ ಉಪನ್ಯಾಸಕರಾದ ನೇತ್ರಾವತಿ, ಕನ್ನಡ ಉಪನ್ಯಾಸಕರಾದ ನಾಗೇಶ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಉಮೇಶ್ ಕುಂದರ್ ಮತ್ತು ಲೋಕೇಶ್, ಮೆಡಿಕಲ್ ರೆಪ್ರೆಸೆಂಟೇಟಿವ್ ಸುಕುಮಾರ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾವಿತ್ರಿ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತಶಾಸ್ತ್ರ ಇತಿಹಾಸ ಉಪನ್ಯಾಸಕರಾದ ಗಣೇಶ್ ನಿರೂಪಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಗಾಯತ್ರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಸಂಸತ್ತಿನ ರಚನೆಯನ್ನು ಮಾಡಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದಗ್ರಹಣ ಮಾಡಿ ಮಾತನಾಡಿ, ವಿದ್ಯಾರ್ಥಿ ನಾಯಕರನ್ನು ಅಭಿನಂದಿಸಿ ಉತ್ತಮ ನಾಯಕತ್ವವನ್ನು ನಡೆಸಲು ಶಿಸ್ತು ಪಾಲನೆ ಬಹುಮುಖ್ಯ. ವಿದ್ಯಾರ್ಥಿ ಸಂಸತ್ತಿನ ಜವಾಬ್ದಾರಿಗಳು ಹಾಗೂ ಕಾರ್ಯ ವೈಖರಿಯ ಕುರಿತು ವಿವರಿಸಿದರು. ಇತರರನ್ನು ಮುನ್ನಡೆಸಿ ಮುನ್ನಡೆಯುವುದೇ ನಿಜವಾದ ನಾಯಕತ್ವ. ಉತ್ತಮ ನಾಯಕನಲ್ಲಿ ಜೀವನ ಮೌಲ್ಯಗಳು, ಮಾನವೀಯ ಮೌಲ್ಯಗಳು ಹೊಂದಿದ್ದು ಇತರರನ್ನು ಅರಿತುಕೊಂಡು ಮುನ್ನಡೆಯುವ ಮನೋಭಾವನೆ ಇರಬೇಕು. ಪ್ರತೀಯೊಬ್ಬರಿಗೂ ಈ ದೇಶದ ಸಂವಿಧಾನ ಹಾಗೂ ಕಾನೂನಿನ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತಾ ಕಾನೂನುಗಳು ಹಾಗೂ ಮಾದಕ ವ್ಯಸನ, ಲೈಂಗಿಕ ದೌರ್ಜನ್ಯ, ಸೈಬರ್ ವಂಚನೆಗಳ ಕುರಿತು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದ್ದು, ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2025” ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ನಂತರ “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಜನರೇಟ್ ಓ.ಟಿ.ಪಿ ಆಯ್ಕೆಯನ್ನು ಮಾಡಬೇಕು. ನಂತರದಲ್ಲಿ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ.ಟಿ.ಪಿ ಯನ್ನು ದಾಖಲಿಸಬೇಕು. ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್‌ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ಇದರ 2025-26ನೇ ಸಾಲಿನ ನೂತನ  ಪದಾಧಿಕಾರಿಗಳ ಪದಗ್ರಹಣ ಸಮಾರಂಭವು  ಬಂಟರೆ ಯಾನೆ  ನಾಡವರ ಸಂಕೀರ್ಣದ ಆರ್ ಎನ್ ಶೆಟ್ಟಿ ಸಭಾಭವನದ ಎಸ್. ಎಸ್ ಹಾಲ್ ನಲ್ಲಿ ನಡೆಯಿತು. 317 ಸಿಯ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ದಿವಾಕರ ಶೆಟ್ಟಿ ಭದ್ರಾವತಿ ಪದಗ್ರಹಣ ನೆರವೇರಿಸಿದರು. ಡಾ. ಅಂಪಾರು ನಿತ್ಯಾನಂದ ಶೆಟ್ಟಿ ನೂತನ ಅಧ್ಯಕ್ಷರಾಗಿ, ಭುಜಂಗ ಶೆಟ್ಟಿ ರಟ್ಟಾಡಿ ಕಾರ್ಯದರ್ಶಿಯಾಗಿ, ಅಣ್ಣಪ್ಪ ಶೆಟ್ಟಿ ಯರುಕೋಣೆ ಕೋಶಾಧಿಕಾರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಂತೀಯ ಅಧ್ಯಕ್ಷರಾದ ರಜತ್ ಹೆಗ್ಡೆ, ವಲಯ ಅಧ್ಯಕ್ಷರಾದ ವಸಂತರಾಜ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಪರ್ಸನ್ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಏಕನಾಥ್ ಬೋಳಾರ್, ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಸಂಸಾಡಿ ಶುಭಾಶಂಸನೆಗೈದರು. ನಮಿತಾ ಪ್ರಭಾಕರ ಶೆಟ್ಟಿ ಅವರ ಪ್ರಾರ್ಥನೆ ಮೂಲಕ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸದಸ್ಯರಾದ ಪ್ರಶಾಂತ್…

Read More