ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಂದಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ಆರು ದಿನಗಳ ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾಂದಿ ಫೌಂಡೇಶನ್‌ನ ಜಂಟಿ ಸಂಪರ್ಕ ಅಧಿಕಾರಿ ಪ್ರೀತಿ ಲೇಖಾ ಸಮಾರೋಪ ನುಡಿಗಳನ್ನಾಡಿದರು. ತರಬೇತುದಾರ ದಾಮೋದರ್ ತಮ್ಮ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿ ತಿಮ್ಮಪ್ಪ ಡಿ.ಎಸ್. ಉಪಸ್ಥಿತರಿದ್ದರು.
ಅಂತಿಮ ಬಿಸಿಎ ವಿದ್ಯಾರ್ಥಿನಿ ರಿಶಿತಾ ಪ್ರಾರ್ಥಿಸಿ, ಬಿಬಿಎ ವಿದ್ಯಾರ್ಥಿನಿ ಅಕ್ಷಿತಾ ಸ್ವಾಗತಿಸಿ, ಅಂತಿಮ ಬಿ.ಕಾಂ. ಮಿಥಿಲೇಶ್ ನಿರೂಪಿಸಿ, ಸನ್ಮಿತಾ ವಂದಿಸಿದರು.










