ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ನಿರ್ವಹಣಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ವಿದ್ಯಾಗಿರಿ ಆವರಣದಲ್ಲಿ ’ಸ್ಪೆಕ್ಟಾಕಲ್ʼ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿಯ ಸಿಇಒ ಕಾರ್ತಿಕ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ವಲಯವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಕರವಾಗಿ ಕಾರ್ಯನಿರ್ವಹಿಸುತ್ತಿದ್ದು, ಆದರೆ ಈ ಕ್ಷೇತದಲ್ಲಿರುವ ಅವಕಾಶಗಳನ್ನು ಅನ್ವೇಷಿಸಲು ನಾವು ಸೋತಿದ್ದೇವೆ ಎಂದರು. ನವಮಂಗಳೂರು ಬಂದರಿನ ಜೆಎಸ್ಡಬ್ಲ್ಯೂ ಕಂಟೇನರ್ ಟರ್ಮಿನಲ್ನೊಂದಿಗೆ ಅವರ ಅನುಭವವನ್ನು ಹಂಚಿಕೊಂಡ ಅವರು ಸ್ಥಳೀಯ ಕೌಶಲ್ಯವಂತ ಪ್ರತಿಭೆಗಳ ಕೊರತೆಯಿಂದ ಅನಿವಾರ್ಯವಾಗಿ ಗುಜರಾತ್ ಮತ್ತು ತಮಿಳುನಾಡಿನ ಸಿಬ್ಬಂದಿಯನ್ನು ನೇಮಿಸಬೇಕಾಯಿತು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನವೀನ ಉದ್ಯಮಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು, ಎಂದು ಅಭಿಪ್ರಾಯಪಟ್ಟರು. ಮುಖ್ಯವಾಗಿ ಈ ಉದ್ಯಮದಲ್ಲಿ ಕುತೂಹಲ, ಹೊಂದಿಕೊಳ್ಳುವಿಕೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಸ್ಪಷ್ಟ ಸಂವಹನ ಹಾಗೂ ತಂಡದ ಕಾರ್ಯತಂತ್ರ ಈ ಎಲ್ಲ ಕೌಶಲ್ಯಗಳು ನಿರ್ಣಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ಲಾಜಿಸ್ಟಿಕ್ಸ್ ನಂತಹ ಉದಯೋನ್ಮುಖ ವಲಯಗಳನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯಾದಾನದ ಮೂಲಕ ಸಾಧನೆಗೈಯ್ಯುತ್ತಾ ಇಂದು ವಿಶ್ವಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ನ್ಯಾಷನಲ್ ಸ್ಕೂಲ್ ಅವಾರ್ಡ್ 2025 ರಲ್ಲಿ ರಾಷ್ಟ್ರೀಯ ಮಟ್ಟದ ಬೆಸ್ಟ್ ಡೇ ಕಮ್ ಬೋರ್ಡಿಂಗ್ ಸ್ಕೂಲ್ ಅವಾರ್ಡ್ ಮತ್ತು ಬೆಸ್ಟ್ ಪ್ರಿನ್ಸಿಪಾಲ್ ಪ್ರಮೋಟ್ಸ್ ಪ್ರೋಗ್ರೇಸ್ಸಿವ್ ಲರ್ನಿಂಗ್ – 2025 ಅವಾರ್ಡ್ ಎಂಬ ರಾಷ್ಟ್ರೀಯ ಮಟ್ಟದ ಗೌರವ ಪುರಸ್ಕಾರಕ್ಕೆ ಭಾಜನವಾಯಿತು. ಬೆಂಗಳೂರಿನ ಹೆಬ್ಬಾಳದ ಕೋರ್ಟ್ಯಾಟ್ ಮ್ಯಾರಿಯೋಟ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಡಾ. ರಾಜ್ ಕತ್ರೀ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಶಿಖಾ ದಿಲನ್ ಎಕ್ಸಿಕ್ಯೂಟಿವ್ ನಿರ್ದೇಶಕರು, ಅವರಿಂದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪರವಾಗಿ ಸಂಯೋಜಕರಾದ ಲತಾ ದೇವಾಡಿಗ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಐಐಟಿ ಬೆಂಗಳೂರು ಅಧ್ಯಕ್ಷ ಡಾ. ಸೌಮ್ಯ ನಾರಾಯಣನ್, ಟ್ರೇಡ್ ಕಮಿಷನರ್ ಡಾ. ಎಮ್.ಎಸ್. ಪ್ರಕಾಶ್, ಟ್ರಸ್ಟಿಗಳು, ರಾಷ್ಟ್ರೀಯ ಶಿಕ್ಷಣ ಸಮಿತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸಿದ್ಧಿ ಶೈಕ್ಷಣಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡಹಡು ಹಿಂದೂ ರುದ್ರ ಭೂಮಿಯ ಮೇಲ್ಛಾವಣಿ ಶಿಥಿಲಗೊಂಡಿರುವುದನ್ನ ಮನಗಂಡ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಸುಮಾರು 70,000 ವೆಚ್ಚದಲ್ಲಿ ಮೇಲ್ಚಾವಣಿಯೊಂದಿಗೆ ನವೀಕರಣಗೊಳಿಸಿ ಹಿಂದೂ ರುದ್ರ ಭೂಮಿ ಟ್ರಸ್ಟಿಗೆ ಇತ್ತೀಚಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಿಂದೂ ರುದ್ರ ಭೂಮಿಯ ಟ್ರಸ್ಟಿನ ಅಧ್ಯಕ್ಷ ನಾರಾಯಣ ಆಚಾರ್, ಸದಸ್ಯರಾದ ಪ್ರತಾಪ್ ಶೆಟ್ಟಿ, ಶಂಕರ್ ಕುಲಾಲ್ ಹಾಗೂ ಪಾಂಡೇಶ್ವರ ಪಂಚಾಯತಿನ ಅಧ್ಯಕ್ಷ ಸುಶೀಲ ಪೂಜಾರಿ, ಉಪಾಧ್ಯಕ್ಷ ವೈ.ಬಿ ರಾಘವೇಂದ್ರ, ಚಂದ್ರಮೋಹನ್ ಪೂಜಾರಿ, ರವೀಶ್ ಶ್ರೀಯಾನ್, ಸುಜಾತ ವೆಂಕಟೇಶ್, ರೋಟರಿ ಕ್ಲಬ್ನ ಅಧ್ಯಕ್ಷ ಲೀಲಾವತಿ ಗಂಗಾಧರ ಹಾಗೂ ಕಾರ್ಯದರ್ಶಿ ಸುಲತ ಹೆಗ್ಡೆ, ಉಪಾಧ್ಯಕ್ಷ ರತ್ನ ಜೆ ರಾಜ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಟ್ರಸ್ಟ್ ಹಾಗೂ ಸ್ಥಳೀಯಾಡಳಿತ ರೋಟರಿ ಕ್ಲಬ್ಗೆ ಕೃತಜ್ಞತೆ ಸಲ್ಲಿಸಿತು. ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ವತಿಯಿಂದ ಪಾಂಡೇಶ್ವರ ಮೂಡಹಡು ಹಿಂದೂ ರುದ್ರ ಭೂಮಿಯ ನವೀಕರಿಸಿ ಇತ್ತೀಚಿಗೆ ಹಸ್ತಾಂತರಿಸಿತು.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್. ಇ ಸ್ಕೂಲ್ನಲ್ಲಿ ಮಾದಕ ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಯು ಮಾದಕ ವ್ಯಸನದಿಂದ ದೂರವಿದ್ದು ತಮ್ಮ ಅಮೂಲ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಶಾಲಾ ಪ್ರಾಂಶುಪಾಲ ನಿತಿನ್ ಡಿ ಅಲ್ಮೇಡಾ ಅವರು ಮಾದಕ ವ್ಯಸನದ ಬಗ್ಗೆ ವಿವರಿಸಿದರು. ವಿವಿಧ ಮಾದಕ ಪದಾರ್ಥಗಳ ಕುರಿತು ತಿಳಿಸಿ ಅದರ ಸೇವನೆಯಿಂದ ಮನುಷ್ಯನ ಮೆದುಳಿನ ಮೇಲಾಗುವ ಪರಿಣಾಮ ಹಾಗೂ ಅನಾಹುತಗಳ ಬಗ್ಗೆ ನಿದರ್ಶನಗಳೊಂದಿಗೆ ವಿವರಿಸಿದರು. ವಿದ್ಯಾರ್ಥಿಗಳು ಇಂತಹ ಮಾದಕ ವಸ್ತುಗಳ ಕುರಿತು ಅರಿವನ್ನು ಹೊಂದಿದ್ದು ಅದರಿಂದ ದೂರವಿರಬೇಕು ಎಂದು ತಿಳಿಸಿದರು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ನಿತಿನ್ ಡಿ’ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ಸರಕಾರದ 9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಮತ್ತು ವಿದ್ಯುತ್ ದರದ ಕುರಿತು ಬಿಜೆಪಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸಲಿದ್ದೇವೆ. ಗ್ರಾಮ ಪಂಚಾಯತಿಯ ಮುಂದೆ ಬಿಜೆಪಿ ಸುಳ್ಳು ಹೇಳಿ ನಡೆಸಿದ ಪ್ರತಿಭಟನೆಗೆ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ ಹಮ್ಮಿಕೊಂಡಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು. ಅವರು ಕುಂದಾಪುರ ಪುರಸಭೆ ಎದುರು ನಡೆದ ಕಾಂಗ್ರೆಸ್ ಪಕ್ಷದ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ ಮೊದಲ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 2 ವರ್ಷದ ಹಿಂದೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಜಾರಿಗೆ ತಂದ 9/ 11 ಏಕ ನಿವೇಶನ , ಅಕ್ರಮ – ಸಕ್ರಮ ಯೋಜನೆಯಲ್ಲಿ 53 ಮತ್ತು 57 ರಲ್ಲಿ ಅರ್ಜಿ ತಿರಸ್ಕರಿಸಲು ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉದ್ಯೋಗದಲ್ಲಿ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ ಅತೀ ಮುಖ್ಯವಾದ ಅಂಗಗಳು. ಜೊತೆಗೆ ಶಿಸ್ತು ಪಾಲನೆ ಹಾಗೂ ಸಮಯ ಪ್ರಜ್ಞೆಯನ್ನೂ ಅಳವಡಿಸಿಕೊಂಡಾಗ ಯಶಸ್ವೀ ಉದ್ಯಮಿಯಾಗಿ ಇತರರಿಗೂ ಮಾದರಿಯಾಗಿ ಬೆಳೆಯಬಹುದು. ಜೀವನೋಪಾಯಕ್ಕಾಗಿ ಮಾಡುವ ನಮ್ಮ ಉದ್ಯೋಗವನ್ನು ಮೊದಲು ನಾವು ಗೌರವಿಸಬೇಕು. ಆಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದು ಹಿರಿಯ ರಂಗ ಕಲಾವಿದ, ನಿರ್ದೇಶಕ ಕಂಚಿಕಾನ್ ರವೀಂದ್ರ ಕಿಣಿ ಹೇಳಿದರು. ಅವರು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಮಂಗಳವಾರ ನಡೆದ ಬೈಂದೂರು ವಲಯದ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ 14ನೇ ವಾರ್ಷಿಕ ಮಹಾಸಭೆಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಟನೆಯ ತಾಕತ್ತು ಬಲಗೊಳ್ಳುತ್ತದೆ. ಈ ಸಂಘಟನೆಯಲ್ಲಿ ಉದ್ಯಮದ ಮಾಲೀಕನೇ ನೌಕರನಾಗಿ ದುಡಿಯುತ್ತಿರುತ್ತಾನೆ. ಧ್ವನಿ ಮತ್ತು ಬೆಳಕು ಇಲ್ಲವಾದರೆ ಯಾವುದೇ ಸಮಾರಂಭಗಳು ಕಾರ್ಯಗಳು ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಪೈಪೋಟಿಗಿಳಿಯದೇ ಧನಾತ್ಮಕ ಚಿಂತನೆಗಳ ಮೂಲಕ ಸೌಹಾರ್ದಯುತವಾಗಿ ಸಮಾಜಕ್ಕೂ ನ್ಯಾಯ ಸಿಗುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಮಾಜಿಕ ಜಾಲತಾಣದ ಜನಪ್ರಿಯ ಪೋರ್ಟಲ್ ಗಳಲ್ಲೆಲ್ಲ ಬಳಕೆದಾರ ಸ್ನೇಹಿ ತಂತ್ರಾಂಶ ಭಾಷೆ ಪೈತಾನ್ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಗಳನ್ನೇ ಹೆಚ್ಚಾಗಿ ಬಳಸುತ್ತಾರೆ ಎಂದು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಡೀನ್ ಎಕಾಡೆಮಿಕ್ಸ್ ಸಹಾಯಕ ಪ್ರಾಧ್ಯಾಪಕರಾದ ಗಿರಿರಾಜ್ ಭಟ್ ಅವರು ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ವಿಭಾಗ ಆಯೋಜಿಸಿದ ‘ಪೈತಾನ್ ಓರಿಯಂಟೇಶನ್ ‘ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಾಗುತ್ತಿರುವ ಕಲ್ಪನಾತೀತ ಬೆಳವಣಿಗೆ ಆವಿಷ್ಕಾರಗಳು ತಕ್ಷಣದಲ್ಲಿ ಉದ್ಯೋಗಾವಕಾಶಕ್ಕೆ ಧಕ್ಕೆ ಎನಿಸಿದರೂ, ಕಾಲಾಂತರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದೂ ಖಚಿತ. ಪ್ರತಿಭೆ ಮತ್ತು ಶ್ರಮದಿಂದ ಕೆಲಸ ಮಾಡಿದರೆ ಬೇರೆ ಕ್ಷೇತ್ರಗಳಿಗಿಂತ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಉನ್ನತ ಸ್ಥಾನ ತಲುಪಬಹುದು ಎಂದರು. ಕುಂದಾಪುರದ ಎಮ್ಐಸಿಇ ಕಂಪ್ಯೂಟರ್ ಸಂಸ್ಥೆಯ ಪ್ರಾಂಶುಪಾಲರಾದ ವಾಲ್ಟರ್ ಫೆರ್ನಾಂಡೀಸ್ ಅವರು ಕಂಪ್ಯೂಟರ್ ತರಬೇತಿ ನೀಡುವ ತಮ್ಮ ಸುದೀರ್ಘ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 19 ವರ್ಷಗಳಿಂದ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಜಿ. ದಯಾನಂದ ಗಾಣಿಗ ಅವರನ್ನು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಬೀಳ್ಕೊಡಲಾಯಿತು. ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಅವರು ದಯಾನಂದ ಗಾಣಿಗ ಅವರ ಸೇವೆಯನ್ನು ಶ್ಲಾಘಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷ ವಾಸುದೇವ ಶೇರುಗಾರ್, ನಿರ್ದೇಶಕರಾದ ಹರೀಶ ಮೇಸ್ತ, ಗೋಪಾಲ ನಾಯ್ಕ್, ನಾಗರಾಜ ಎಂ., ಲಕ್ಷ್ಮಣ, ಯಮುನಾ, ಪ್ರೇಮಾ ಪೂಜಾರಿ, ಚಂದ್ರಮತಿ ಹೆಗ್ಡೆ, ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜಗೋಪಾಲ ಪೂಜಾರಿ, ಆಶಾಲತಾ ಡಿ.ಗಾಣಿಗ, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ವ್ಯವಸ್ಥಾಪಕ ಮುತ್ತ ಕುಂದರ್, ಬ್ಯಾಂಕಿನ ಮಾಜಿ ನಿರ್ದೇಶಕರು, ಬ್ಯಾಂಕಿನ ವಿವಿಧ ಶಾಖೆಗಳ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜಗೋಪಾಲ ಪೂಜಾರಿ ಸ್ವಾಗತಿಸಿದರು. ಬ್ಯಾಂಕಿನ ಸಿಬ್ಬಂದಿ ಜಗದೀಶ ಪೂಜಾರಿ ಪ್ರಾಸ್ತಾವಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧಿಕೃತ ವೆಬ್ಸೈಟ್ ಹಾಗೂ ನೂತನ ಗ್ರಂಥಾಲಯದ ಉದ್ಘಾಟನೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಾಲ್ಗದ್ದೆ ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕುದ್ರುಕೊಡು, ಗೋಕುಲ್ ಶೆಟ್ಟಿ ಉಪ್ಪುಂದ, ಕರುಣಾಕರ್ ಶೆಟ್ಟಿ ತಗ್ಗರ್ಸೆ, ಮಾಜಿ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ ಪದಾಧಿಕಾರಿಗಳಾದ ಚುಚ್ಚಿನಾರಾಯಣ ಶೆಟ್ಟಿ ನಿತಿನ್ ಶೆಟ್ಟಿ ಬೈಂದೂರು, ಜೈರಾಮ್ ಶೆಟ್ಟಿ ಗಂಟಿಹೊಳೆ, ಜೈರಾಮ್ ಶೆಟ್ಟಿ ಬಿ., ಸಂತೋಷ್ ಶೆಟ್ಟಿ ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ದಿವಾಕರ್ ಶೆಟ್ಟಿ ನೆಲ್ಯಾಡಿ, ದಿವಾಕರ್ ಶೆಟ್ಟಿ ಉಪ್ಪುಂದ, ಮಹಿಳಾ ಪದಾಧಿಕಾರಿಗಳಾದ ಮಮತಾ ಶೆಟ್ಟಿ ಉಷಾ ಶೆಟ್ಟಿ ಕುಂದಾಪುರದ ಫೋರ್ಥ್ ಫೋಕಸ್ ಸಂಸ್ಥೆಯ ನಿರ್ದೇಶಕರಾದ ವಿ.ಗೌತಮ್ ನಾವಡ ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರು ಸ್ವಾಗತಿಸಿದರು. ಜಯರಾಮ್ ಶೆಟ್ಟಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಶ್ರೀ ಪಟ್ಟಾಭಿರಾಮಚಂದ್ರ ದೇಗುಲದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತವನ್ನು ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಜು. 5 ರಂದು ಶ್ರೀ ಕಾಶಿ ಮಠಾಧೀಶರು ಕೋಟೇಶ್ವರಕ್ಕೆ ಆಗಮಿಸಲಿದ್ದು, ಜು. 15 ರಂದು ಚಾತುರ್ಮಾಸ ವ್ರತ ಸ್ವೀಕರಿಸುವರು. 100 ದಿನಗಳ ಅಖಂಡ ಭಜನೆ:ಸತತ 85 ವರ್ಷಗಳಿಂದ ಪ್ರತಿದಿನ ಭಜನೆ ಹಾಗೂ ವಸಂತ ಪೂಜೆ ಇಲ್ಲಿ ನಡೆಯುತ್ತಿದೆ. ಈ ಬಾರಿ 100 ದಿನಗಳ ಕಾಲ ಅಖಂಡ ಭಜನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ದೇಶ ವಿದೇಶದ ಗೌಡ ಸಾರಸ್ವತ ಸಮಾಜ ಬಾಂಧವರ ಭಜನ ಮಂಡಳಿಗಳು ಶತ ದಿವಸ ಅಖಂಡ ಭಜನೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುವರು. ಶತನಮನ, ಶತಸ್ಮರಣ:ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಾಬ್ಧ ಮಹೋತ್ಸವದ ಅಂಗವಾಗಿ ನೂರು ಮಂದಿ ಕಲಾವಿದರ ಶತನಮನ, ಶತಸ್ಮರಣ ಸಂಗೀತ ಕಾರ್ಯಕ್ರಮ ಅ. 18 ರಂದು ನಡೆಯಲಿದೆ. 4 ತಿಂಗಳ ಅವಧಿಯಲ್ಲಿ ಕೋಟೆ…
