Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಆಗಬೇಕು. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮಕ್ಕಳಿಲ್ಲದೆ ಅನೇಕ ಸರಕಾರಿ ಶಾಲೆಗಳನ್ನು ಇಂದು ಮುಚ್ಚುವಂತಹ ಪರಿಸ್ಥಿತಿ ಬಂದೊದಗುತ್ತಿದೆ. ಸರಕಾರ ಇಂದು ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ ಆದರೂ ಸಹ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು ಅವರು ಇಲ್ಲಿನ ಕರ್ಕುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ 2025-26 ಹೊಂಗಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಗ್ರಾಮಸ್ಥರು. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಇಂದು ಆಂಗ್ಲ ಮಾಧ್ಯಮ ಶಾಲೆಗಳಿಗೆ ನಾವೇ ಹಣವನ್ನು ಕೊಟ್ಟು, ಶಿಕ್ಷಕರಿಗೆ ಸಂಬಳವನ್ನು ಕೊಟ್ಟು ಶಾಲೆಗಳನ್ನು ನಡೆಸುವಂತೆ ಮಾಡಿ ನಮ್ಮ ಮಕ್ಕಳನ್ನು ಅವರ ಶಾಲೆಗೆ ಕಳುಸುತ್ತೇವೆ, ಆದರೆ ಇಂದು ಸರಕಾರಿ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಬಹಳಷ್ಟು ಮೆರಿಟ್‌ನ ಶಿಕ್ಷಕರು ಬರುತ್ತಿದ್ದಾರೆ. ಆದರೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಹಾಲು ಹಬ್ಬ ಗೆಂಡೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು. ದೇಗುಲದಲ್ಲಿ ನೆರದಿದ್ದ ಸಾವಿರಾರು ಭಕ್ತಾಧಿಗಳು ಹರಕೆ ರೂಪದಲ್ಲಿ ಗೆಂಡೋತ್ಸವ ಕಾರ್ಯದಲ್ಲಿ ಭಾಗಿಯಾದರು. ದೇವಿ ಅಮೃತೇಶ್ವರೀಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ತಾಯಿಯನ್ನು ಸಂದರ್ಶಿಸಿ ಶ್ರೀನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿ ನಂತರ ಭಕ್ತಾಧಿಗಳು ಹರಕೆ ಸಂದಾಯಗೊಳಿಸಿಕೊಂಡರು. ದೇಗುಲದ ಅರ್ಚಕ ವರ್ಗ ಜೋಗಿ ಸಮುದಾಯ ಈ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಮಂಡಳಿಯ ಸದಸ್ಯರಾದ ರತನ್ ಐತಾಳ್, ಸುಭಾಶ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ. ಕಾಂಚನ್, ಸುಧಾ ಎ. ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಮತ್ತು ಮಾಜಿ ಟ್ರಸ್ಟಿಗಳು, ಗ್ರಾಮದ ಪ್ರಮುಖರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿತು. ರಾತ್ರಿ ಮಹಾಅನ್ನಸಂತರ್ಪಣೆ ಸಾವಿರಾರು ಭಕ್ತಾಧಿಗಳು ಪ್ರಸಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್‌ಯಾದ ಕುವೈಟ್‌ನ ನೇರಂಬಳ್ಳಿ ಸುರೇಶ್ ರಾವ್ ಅವರಿಗೆ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ – 2026” ಲಭಿಸಿದೆ. ಗಲ್ಫ್ ರಾಷ್ಟ್ರ ಕುವೈಟ್‌ನಲ್ಲಿ ಕರ್ನಾಟಕ ಮೂಲದ ಹಲವಾರು ಸಂಘ-ಸಂಸ್ಥೆ ಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಗಲ್ಫ್ ಕನ್ನಡಿಗರ ಒಕ್ಕೂಟ (GKO) ಕುವೈತ್ ಉಪಾಧ್ಯಕ್ಷರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (KPCC) ಕುವೈತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾಖಲೆಯ ಸ್ವಯಂ ರಕ್ತದಾನಕ್ಕಾಗಿ ಹಾಗೂ ಕ್ವಿಜ್ ವಿಜೇತನಾಗಿ ಭಾರತೀಯ ರಾಯಭಾರಿ ಕಚೇರಿ ಕುವೈಟ್‌ನಿಂದ ಪ್ರಸಂಶಾ ಪತ್ರಗಳು, ಕರ್ನಾಟಕ ರಾಜ್ಯ ಸರಕಾರದಿಂದ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2020”, ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ ಅವರು ಭಾಗವಹಿಸಿದ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ – 2023ರಲ್ಲಿ ಸನ್ಮಾನ ಸ್ವೀಕಾರ, ಕನ್ನಡ ಸಂಘ ಮಸ್ಕತ್ ಹಾಗೂ ಕೆಪಿಸಿಸಿ ಯಿಂದ “ವಿಶ್ವಮಾನ್ಯ ಪ್ರಶಸ್ತಿ –…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ ಅವರು 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮಶೇಖರ್‌ ಅವರು ಪತ್ರಿಕೋದ್ಯಮದಲ್ಲಿ ಸುಮಾರು ಮೂರು ದಶಕಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಇವರು ಕನ್ನಡದ ಮೊದಲ ಕ್ರೀಡಾ ವೆಬ್‌ಸೈಟ್ sportsmail.net ನ ಸಂಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಎ ಪದವೀಧರರಾದ ಅವರು ಈ ಹಿಂದೆ ಅವರು ಮುಂಬೈ ಹಾಗೂ ಕರ್ನಾಟಕದಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಕನ್ನಡ ಪ್ರಭ’ ಸೇರಿದಂತೆ ವಿವಿಧ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಕಬಡ್ಡಿ, ಫುಟ್‌ಬಾಲ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು,‌ ತಮ್ಮ ವರದಿಗಳ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ► ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರಿಗೆ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ – https://kundapraa.com/?p=94758 .

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಕಲಾವಿದ ಸತೀಶ್‌ ಆಚಾರ್ಯ ಅವರು 2025ನೇ ಸಾಲಿನ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ಆ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ್ಯ ಅವರು. ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್‌ಗಳಲ್ಲಿ ಅವರ ವ್ಯಂಗ್ಯಚಿಂತ್ರಗಳು ಪ್ರಕಟವಾಗಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಅವರು ಮುಂಬೈನಲ್ಲಿ ವೃತ್ತಿ ಬದುಕಿನ ರೇಸ್ ಆರಂಭಿಸಿದ್ದರು. 2015ರಲ್ಲಿ ಪೋರ್ಬ್ಸ್ ಇಂಡಿಯಾ ಗುರುತಿಸಿದ 24 ಅಗ್ರಗಣ್ಯರಲ್ಲಿ ಸತೀಶ್ ಆಚಾರ್ಯ ಓರ್ವರಾಗಿದ್ದರು. ತಮ್ಮ ಹುಟ್ಟೂರನ್ನೇ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಮೊನಚಾದ ಹಾಗೂ ತಮ್ಮ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕ ಆಳುವ ಸರಕಾರಗಳಿಗೆ ಚಾಟಿ ಬೀಸುವ ಛಾತಿಯನ್ನು, ಪ್ರಪಂಚದ ವಾಸ್ತವಗಳನ್ನು ತೆರದಿಡುವ ದಿಟ್ಟತನವನ್ನು ಅವರು ಮುಂದುವರಿಸಿದ್ದಾರೆ. ಕುಂದಾಪುರದಲ್ಲಿ ಸತೀಶ್‌ ಅವರ ನೇತೃತ್ವದಲ್ಲಿ ಕೆಲ ವರ್ಷಗಳಿಂದ ಕಾರ್ಟೂನು ಹಬ್ಬ ನಡೆಯುತ್ತಿದ್ದು, ಯುವ ಕಲಾವಿದರು ಹಾಗೂ ಕಾರ್ಟೂನಿಷ್ಟರಿಗೆ ವೇದಿಕೆ ಓದಗಿಸಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮೂಡಹಡು ಇವರ ನೇತೃತ್ವದಲ್ಲಿ ಕಲ್ಪತರು ಸ್ವ ಸಹಾಯ ಸಂಘಗಳಿಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಇತ್ತೀಚಿಗೆ ಜರುಗಿತು. ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಇದರ ನಿರ್ದೇಶಕ ಡಾ. ಬೊಮ್ಮಯ್ಯ ರುಡ್ಸೆಟ್ ಸಂಸ್ಥೆ ಅಲ್ಲಿ ದೊರೆಯುವ ತರಬೇತಿ ಹಾಗೂ ಉಪಯೋಗದ ಬಗ್ಗೆ ಮಾಹಿತಿ ತಿಳಿಸಿದರು. ರಾಜ್ಯ ಗುಪ್ತಚರ ಉಡುಪಿ ವಿಭಾಗದ ಮಹಿಳಾ ಪೋಲಿಸ್ ಕಾನ್ಸ್‌ಟೇಬಲ್ ಅಪೂರ್ವ ಅವಿನಾಶ್ ಪೂಜಾರಿ ಪೊಲೀಸ್ ಇಲಾಖೆ ಬಗ್ಗೆ ಅದರ ಕಾನೂನು ವ್ಯವಸ್ಥೆ ಬಗ್ಗೆ ಮಾಹಿತಿ ಒದಗಿಸಿದರು. ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಹಾಗೂ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ಉಪಸ್ಥಿತರಿದ್ದರು. ಸಂಘದ ಉಷಾ ಗಣೇಶ್ ಪೂಜಾರಿ ಸ್ವಾಗತಿಸಿ, ಸೀಮಾ ವಿಜಯ್ ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಘಟಕ ಸುರೇಶ್ ಪಾಂಡೇಶ್ವರ ಕಾರ್ಯಕ್ರಮ ಸಂಯೋಜಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಬೈಂದೂರು: ಶಾಸಕರ ಪರಿಕಲ್ಪನೆಯ ಬೈಂದೂರು ಉತ್ಸದ ಅಂಗವಾಗಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿಯೂ ಕೂಡ ಗ್ರಾಮೋತ್ಸವ ಆಯೋಜಿಸಿದ್ದು, ಇದರ ಮೂಲಕ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಮತ್ತು ಅನುಕೂಲಗಳನ್ನು ನೇರವಾಗಿ ಪಡೆಯುವ ಅವಕಾಶ ದೊರಕಿದಂತಾಗಿದೆ. ಈ ಉತ್ಸವ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಹಾಗೂ ಈ ಉತ್ಸವಗಳು ಮನೋರಂಜನೆಯ ಜೊತೆಗೆ ಬೈಂದೂರು ಅಭಿವೃದ್ಧಿಗೆ ಮುನ್ನುಡಿಯಾಗಲಿ ಎಂದ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳೀದಾರ್ ಹೇಳಿದರು. ಅವರು ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮೆಸ್ಕಾಂ, ಆಯುರ್ವೇದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆ ಹಾಗೂ ಕ್ಲೀನ್ ಕಿನಾರಾ ಸಹಭಾಗಿತ್ವದಲ್ಲಿ ಸೋಮವಾರ ಕೋಟೆಬಾಗಿಲು ಸ.ಹಿ.ಪ್ರಾ ಶಾಲಾ ಆವರಣದಲ್ಲಿ ನಡೆದ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು.  ಬೈಂದೂರು ಪಪಂ ನಾಮ ನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಶೀಲ್ದಾರ್ ಲತಾ ಶೆಟ್ಟಿ, ಟಿಎಚ್‌ಒ ಡಾ. ಪ್ರೇಮಾನಂದ, ಕೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ) ಯು ಕಾರ್ಕಳದ ಸರಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಸಿ.ಎನ್.ಸಿ ಟರ್ನಿಂಗ್ ಆಪರೇಷನ್, ಸಿ.ಎನ್.ಸಿ ಮಿಲ್ಲಿಂಗ್ ಆಪರೇಷನ್ ಹಾಗೂ ಫೀಲ್ಡ್ ಟೆಕ್ನೀಷನ್ ನೆಟ್ವರ್ಕ್ ಸ್ಟೋರೇಜ್ ಒಳಗೊಂಡಂತೆ ಅಲ್ಪಾವಧಿ ಕೋರ್ಸುಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡುತ್ತಿದ್ದು, ಐ.ಟಿ.ಐ., ಡಿಪ್ಲೋಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂಖ್ಯೆ: 08258-200451, 8277741731 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಕಚೇರಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಿ, ಇನ್ನಷ್ಟು ಯೋಜನೆಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದ್ದು, ಪ್ರತೀ ಗ್ರಾಮಗಳಲ್ಲಿ ಉತ್ಸವದ ಮೂಲಕ ಗ್ರಾಮದ ಭೌತಿಕ ಬೆಳವಣಿಗೆ ಜತೆಗೆ ಸಂಜೀವಿನಿ ಸಂಘಗಳಿಗೆ ಸ್ವಾವಲಂಬನೆ ನೀಡಬೇಕು ಹಾಗೂ ಕ್ಷೇತ್ರದ ಪ್ರತಿಯೊಬ್ಬರೂ ಉತ್ಸವದ ಭಾಗವಾಗಬೇಕು ಎಂಬ ಉದ್ದೇಶದಿಂದ ಗ್ರಾಮೋತ್ಸವಗಳನ್ನು ಆಯೋಜಿಸಿದ್ದಾರೆ. ಈ ಅಭಿಯಾನ ದೇಶದಲ್ಲಿ ಪ್ರಥಮ ಎಂದು ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು. ಅವರು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಹಾಗೂ ಬ್ಯಾಂಕಿಂಗ್ ಇಲಾಖೆಯ ಸಹಭಾಗಿತ್ವದಲ್ಲಿ ಸೋಮವಾರ ನಡೆದ ಕಿರಿಮಂಜೇಶ್ವರ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಸಾಧಕರು ಮತ್ತು ಆರು ವಿಕಲಚೇತನರನ್ನು ಸನ್ಮಾನಿಸಲಾಯಿತು. ಪುರುಷ ಹಾಗೂ ಮಹಿಳೆಯರಿಗಾಗಿ ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೋಡೆಲ್ ಅಧಿಕಾರಿ ರಮೇಶ ಕುಲಾಲ್, ಬೈಂದೂರು ಉತ್ಸವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿ ರಸ್ತೆಯ ಬಾಳಿಕೆರೆ ಸಮೀಪ ಶ್ರೀ ಸ್ವಾಮಿ ಜಾಡಿ ಹೈಗುಳಿ ದೇವಸ್ಥಾನದ ಜಾಡಿ ರಸ್ತೆಯ ಬಳಿ ಮಂಗಳವಾರ ನಡೆದ ಕಾರು ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಗುಡ್ಡಮ್ಮಾಡಿಯ ರಾಘವೇಂದ್ರ ಹಾಗೂ ನಾಗರತ್ನ ದಂಪತಿಯ ಪುತ್ರ ದರ್ಶಿತ್ (3) ಮೃತ ಬಾಲಕ. ಈತ ತಂದೆ ತಾಯಿ ಜತೆ ಬೈಕಿನಲ್ಲಿ ಕೊಲ್ಲೂರು ಕಡೆಯಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ಹೆಮ್ಮಾಡಿ ಕಡೆಯಿಂದ ಜೋಶಿ ವಿ. ತೋಮಸ್ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿಯಾಗಿತ್ತು. ಪರಿಣಾಮ ಬೈಕ್ ಸವಾರ ರಾಘವೇಂದ್ರ, ನಾಗರತ್ನ ಹಾಗೂ ದರ್ಶಿತ್ ಗಾಯಗೊಂಡಿದ್ದರು. ಮೂವರನ್ನೂ ಆಸ್ಪತ್ರೆಗೆ ಸೇರಿಸಿದ್ದು, ದರ್ಶಿತ್ ಮೃತಪಟ್ಟಿದ್ದಾನೆ. ರಾಘವೆಂದ್ರ ಹಾಗೂ ನಾಗರತ್ನ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More