ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಮ್ಮಾಡಿ ರಸ್ತೆಯ ಬಾಳಿಕೆರೆ ಸಮೀಪ ಶ್ರೀ ಸ್ವಾಮಿ ಜಾಡಿ ಹೈಗುಳಿ ದೇವಸ್ಥಾನದ ಜಾಡಿ ರಸ್ತೆಯ ಬಳಿ ಮಂಗಳವಾರ ನಡೆದ ಕಾರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಗುಡ್ಡಮ್ಮಾಡಿಯ ರಾಘವೇಂದ್ರ ಹಾಗೂ ನಾಗರತ್ನ ದಂಪತಿಯ ಪುತ್ರ ದರ್ಶಿತ್ (3) ಮೃತ ಬಾಲಕ.
ಈತ ತಂದೆ ತಾಯಿ ಜತೆ ಬೈಕಿನಲ್ಲಿ ಕೊಲ್ಲೂರು ಕಡೆಯಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ಹೆಮ್ಮಾಡಿ ಕಡೆಯಿಂದ ಜೋಶಿ ವಿ. ತೋಮಸ್ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿಯಾಗಿತ್ತು. ಪರಿಣಾಮ ಬೈಕ್ ಸವಾರ ರಾಘವೇಂದ್ರ, ನಾಗರತ್ನ ಹಾಗೂ ದರ್ಶಿತ್ ಗಾಯಗೊಂಡಿದ್ದರು. ಮೂವರನ್ನೂ ಆಸ್ಪತ್ರೆಗೆ ಸೇರಿಸಿದ್ದು, ದರ್ಶಿತ್ ಮೃತಪಟ್ಟಿದ್ದಾನೆ. ರಾಘವೆಂದ್ರ ಹಾಗೂ ನಾಗರತ್ನ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










