Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬ್ರಹ್ಮಾವರ ತಾಲೂಕಿನ ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಆಡುತ್ತಿದ್ದ ಜನರನ್ನು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುಧಾಪ್ರಭು ಅವರು ಬಂಧಿಸಿದ್ದಾರೆ. ಆರೋಪಿಗಳಾದ ರಾಜು, ರಮಾನಂದ, ರಾಜು , ಸಂತೋಷ್, ರಾಜೀವ್ ಹಾಗೂ ಕೃಷ್ಣ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 15,450 ರೂಪಾಯಿ, ಕಾರು-3, ಸ್ಕೂಟರ್‌ -2, ರೌಂಡ್‌ ಟೇಬಲ್‌ -1,ಪ್ಲಾಸ್ಟೀಕ್‌ ಚೇರಗಳು-6, ಇಸ್ಪೀಟ್‌ ಎಲೆಗಳನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗೇಶ್ ಪುತ್ರನ್ ಅವರನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಲಬ್ ನ ನೂತನ ಅಧ್ಯಕ್ಷರಾದ ಲ. ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಮಾಜಿ ಜಿಲ್ಲಾ ಗವರ್ನರ್ ಲ. ಎಂಜೆಎಫ್ ದಿವಾಕರ ಶೆಟ್ಟಿ, ಪಿಎಂಜೆಎಫ್ ಲ. ರಂಜನ್ ಕಲ್ಕೂರ, ಪ್ರಾಂತಿಯ ಅಧ್ಯಕ್ಷರಾದ ಲ. ರಜತ ಹೆಗ್ಡೆ, ವಲಯ ಅಧ್ಯಕ್ಷರಾದ ಲ. ವಸಂತರಾಜ್ ಶೆಟ್ಟಿ, ಎಕ್ಸ್ಟೆಂಶನ್ ಚೇರ್ಮನ್ ಲ. ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಲ. ಏಕನಾಥ ಬೋಳಾರ್, ಸ್ಥಾಪಕ ಅಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ, ಮಾಜಿ ಅಧ್ಯಕ್ಷರಾದ ಲ .ಉದಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಲ. ವೆಂಕಟರಮಣ ನಾಯಕ್, ಕೋಶಾಧಿಕಾರಿ ಲ. ಅರುಣ್ ಕುಮಾರ್ ಶೆಟ್ಟಿ ನೂತನ ಕಾರ್ಯದರ್ಶಿ ಲ.ಭುಜಂಗ ಶೆಟ್ಟಿ ರಟ್ಟಾಡಿ, ಕೋಶಾಧಿಕಾರಿ ಲ. ಅಣ್ಣಪ್ಪ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಗರದ ಸಂತೆ ಮಾರ್ಕೆಟ್ ಬಳಿ ಜು.14ರ ಮಧ್ಯರಾತ್ರಿ  2.30 ಸುಮಾರಿಗೆ ಅಂಗಡಿಯ ಶಟ‌ರ್ ಬಾಗಿಲು ಒಡೆದು, 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್‌, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರು ಕಳ್ಳರನ್ನು ಕುಂದಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಾದ ಮಂಗಳೂರಿನ ಸರ್ಫರಾಜ್ (33), ಜಾಕೀರ್ (36), ಮೊಹಮ್ಮದ್ ಅಲ್ಪಾಜ್ (26) ಹಾಗೂ ಮಂಜನಾಡಿಯ ಮೊಹಮ್ಮದ್ ರಿಯಾಜ್ (44) ಅವರನ್ನು ಉಡುಪಿಯ ಸಂತೆಕಟ್ಟೆಯಲ್ಲಿ ಬಂಧಿಸಲಾಗಿದೆ. ಕುಂದಾಪುರ ನಗರ ಠಾಣಾ ಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ, ಸಂಚಾರ ಎಸ್‌ಐ ನೂತನ್, ಸಿಬಂದಿ ಮೋಹನ್, ಸಂತೋಷ್, ಪ್ರೀನ್ಸ್, ನಾಗೇಶ್, ಮಹಾಬಲ, ರೇವತಿ, ಘನಶ್ಯಾಮ್, ಸತೀಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 34 ಕೆಜಿ ತೂಕದ ತಾಮ್ರದ ಸರಿಗೆ, 64 ಕೆಜಿ ತೂಕದ ಹಿತ್ತಾಳೆಯ ವಸ್ತು, 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಜ್ ಕಂಪ್ರಸರ್, 45 ಹಳೆಯ ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಉಡುಪಿ: ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ  ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಾಮಾನ್ಯ ಪದವಿ ಕೋರ್ಸಿನಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ https://bcwd.karnataka.gov.in/ ಅಥವಾ ಸಹಾಯವಾಣಿ ಸಂಖ್ಯೆ: 8050770004 ಮತ್ತು 8050770005 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ಅಪಾಯ, ಸೈಬರ್ ಭದ್ರತೆ, ರಸ್ತೆ ಸುರಕ್ಷತೆಯ ನಿಯಮಗಳು ಮತ್ತು ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮವು ಪೊಲೀಸ್ ಇಲಾಖಾ ಅಧಿಕಾರಿ ವರ್ಗದವರ ಸಹಕಾರದೊಂದಿಗೆ ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಂಕರನಾರಾಯಣ ಠಾಣೆಯ  ಉಪ ನಿರೀಕ್ಷಕ ತನಿಖಾಧಿಕಾರಿಗಳಾದ  ಶಂಭುಲಿಂಗಯ್ಯ ಅವರು ಮಾತನಾಡಿ “ಮಾದಕ ವ್ಯಸನದಿಂದ ದೂರವಿದ್ದು ಜೀವನವನ್ನು ಸಂತೋಷದಿಂದ ಅನುಭವಿಸಿ ” ಎಂದು ಹಿತನುಡಿಗಳನ್ನಾಡಿದರು. ಶಂಕನಾರಾಯಣ ಪೊಲೀಸ್ ಉಪನಿರೀಕ್ಷಕರಾದ ನಾಸಿರ್ ಹುಸೈನ್ ಅವರು ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದಾಗಿ ಹಾಗೂ ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ಅನಾಹುತಗಳು, ಮೊಬೈಲ್ ಗೇಮಿಂಗ್ ಅಪಾಯಗಳ ಬಗ್ಗೆ ತಿಳಿ ಹೇಳುವುದರ ಮೂಲಕ ಅದನ್ನು ಹೇಗೆ ಜವಾಬ್ದಾರಿಯಿಂದ ಬಳಸಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಂದಾಪುರ ಪೋಲಿಸ್ ವೃ ತ್ತ ನಿರೀಕ್ಷಕರಾದ ಜಯರಾಮ್ ಬಿ. ಗೌಡ ಅವರು ರಸ್ತೆ ನಿಯಮಗಳ ಉಲ್ಲಂಘನೆಯಿಂದಾಗಿ ಆಗುವ ಅನಾಹುತಗಳ ಬಗ್ಗೆ ಮಾತನಾಡುತ್ತಾ ನಮ್ಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೇವೆ, ಸಂಸ್ಕೃತಿ, ಸಮ್ಮಿಲನ ಎಂಬ ಧ್ಯೇಯದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಮೂಲದ ಉತ್ಸಾಹಿ ಯುವ ಸಮೂಹದ ತಂಡ – ́ಟೀಮ್ ಕುಂದಾಪುರಿಯನ್ಸ್ʼ ನೇತೃತ್ವದಲ್ಲಿ ಪ್ರತಿವರ್ಷದಂತ ಈ ಭಾರಿಯೂ ʼಕುಂದಾಪ್ರ ಕನ್ನಡ ಉತ್ಸವ 2025ʼ ಅದ್ದೂರಿಯಾಗಿ ಆಯೋಜಿಸಲಾಗಿದೆ. ವಿಶ್ವ ಕುಂದಾಪ್ರ ಕನ್ನಡದ ದಿನಾಚರಣೆ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಉತ್ಸವವು ಜುಲೈ 20ರ ಭಾನುವಾರ ಬೆಳಿಗ್ಗೆ 8:30ರಿಂದ ಮೊದಲ್ಗೊಂಡು ಸಂಜೆಯ ತನಕ ಬೆಂಗಳೂರು ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ನಡೆಯಲಿದೆ. ಕ್ರೀಡೆ, ಸಂಸ್ಕೃತಿ, ನಡಿತೋರಣ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ದಿನವಿಡಿ ಕುಂದಾಪ್ರ ಕನ್ನಡ ಉತ್ಸವದಲ್ಲಿ ಇರಲಿವೆ. ಮೆರವಣಿಗೆಯೊಂದಿಗೆ ಚಾಲನೆ:ಜು.20ರ ಬೆಳಿಗ್ಗೆ 8.30ಕ್ಕೆ ಆರಂಭ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ನೇತಾಜಿ ಮೈದಾನದವರೆಗೆ ಕೊಲ್ಲೂರು ತಾಯಿ ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ – ಸಂಕಲ್ಪ ಯಾತ್ರೆ ನಡೆಯಲಿದ್ದು, ಪೇಜಾವರ ‌ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ನಿರಂಜನಿ ಅಖಾಡ ನಾಗಸಾಧು ಶ್ರೀ ಧನಂಜಯಗಿರಿ ಮಹಾರಾಜ್ ಅವರ ದಿವ್ಯ ಸಾನಿಧ್ಯವಿರಲಿದೆ. ವೈವಿದ್ಯಮಯ ಕಾರ್ಯಕ್ರಮಗಳುಉದ್ಘಾಟನಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕುಂದಾಪ್ರ ಭಾಷೆ ಹಾಗೂ ಬದುಕಿನ ಸೊಗಡನ್ನು ಮುಂದಿನ ತಲೆಮಾರಿಗೆ ನೀಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಸಾಹಿತಿ, ಶಿಕ್ಷಕ ಕುಂದಗನ್ನಡ ಭಾಷಾ ಜ್ಞಾನಿ ನರೇಂದ್ರ ಕುಮಾರ್ ಕೋಟ ಕರೆ ನೀಡಿದರು. ಅವರು ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಇದೇ ಬರುವ ಅ. ೧೦ರಂದು ಹಂದಟ್ಟು ಗೆಳೆಯರ ಬಳಗ ದಾನಗುಂದು ಸಭಾಂಗಣದಲ್ಲಿ ನಾಲ್ಕನೇ ವರ್ಷದ ಆಸಾಡಿ ಒಡ್ರ್ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಭಾಷೆ ಹಾಗೂ ಜೀವನ ಪದ್ದತಿ ಮತ್ತು ಜನಾಂಗ ಇವುಗಳು ಅಳಿಯಬಾರದು ಇದಕ್ಕಾಗಿ ಪ್ರತಿ ಮನೆಯಲ್ಲಿ ನಮ್ಮ ಗ್ರಾಮ್ಯ ಭಾಷೆ ಬದುಕಿನ ರೀತಿ ನೀತಿಯನ್ನು ತಲೆಮಾರಿಗೆ ತಿಳಿಹೇಳುವ ತನ್ಮೂಲಕ ಅದರ ಉಳಿಯುವ ಕಾರ್ಯ ಮಾಡಬೇಕಿದೆ,ಇಂತಹ ಕಾರ್ಯಕ್ರಮ ನಿತ್ಯನಿರಂತರವಾಗಿ ಪ್ರತಿ ಊರಲ್ಲಿ ಪ್ರಜ್ವಲಿಸಲಿ ಎಂದು ಪಂಚವರ್ಣ ಮಹಿಳಾ ಮಂಡಲದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು. ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಜು.18 : ಅಡಿಕೆ ಬೆಳೆಗಾರರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಡಿಕೆಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿ, ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿರುವುದು ತೋಟಗಾರಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದ್ದಾರೆ. ಕಳೆದ ತಿಂಗಳಲ್ಲಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವು ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ರೈತರನ್ನು ಬೆಂಬಲಿಸಲು ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸುವಂತೆ ಮನವಿಯನ್ನು ಮಾಡಲಾಗಿತ್ತು. ಅಲ್ಲದೇ ಪತ್ರ ಬರೆದು ಒತ್ತಾಯಿಸಲಾಗಿತ್ತು ಎಂದ ಅವರು ನಮ್ಮ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಅಡಿ ಟೆಲಿಸ್ಕೊಪಿಕ್ ಟ್ರಿ-ಪ್ರೂನರ್ (Carbon Doti)ಗೆ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ ಎಂದವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರ ಬೈಪಾಸ್‌ನಿಂದ ಹೆಜಮಾಡಿವರೆಗೆ 26 ಕಿಮೀ ಸರ್ವೀಸ್ ರಸ್ತೆ ಮತ್ತು 3 ಕಡೆ ಪೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕೋಟೇಶ್ವರದಿಂದ ಬೀಜಾಡಿ ಕ್ರಾಸ್ ವರೆಗೆ 830 ಮೀ., ಅನ್ನಪೂರ್ಣ ಹೊಟೇಲ್‌ನಿಂದ ಸಾನ್ವಿ ಏಜೆನ್ಸಿ ತೆಕ್ಕಟ್ಟೆವರೆಗೆ 3,500 ಮೀ ಎರಡು ಕಡೆ, ತೆಕ್ಕಟ್ಟೆ ಸೇವಾ ಸಂಗಮ ಶಿಶು ಮಂದಿರದಿಂದ 1020 ಮೀ ಎರಡು ಕಡೆ, ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರದ ವರೆಗೆ 400 ಮೀ ಎರಡು ಕಡೆ, ಸಂತೆಕಟ್ಟೆ ಇಂದ್ರ ಸರ್ವೀಸ್ ಸ್ಟೇಷನ್‌ನಿಂದ ಮಂದಾರ ವುಡ್ ಇಂಡಸ್ಟ್ರೀಜ್‌ವರೆಗೆ 1,000 ಮೀ ಎರಡು ಕಡೆ, ಉದ್ಯಾವರ ಜಂಕ್ಷನ್‌ನಿಂದ ದೇಶ್ನ ಬ್ಯಾಂಕಿನವರೆಗೆ ಬಲಬದಿ ಮಾತ್ರ 325 ಮೀ., ಉದ್ಯಾವರ ಕಿಯಾ ಶೋರೂಂ ವರೆಗೆ 164 ಮೀ ಎರಡು ಕಡೆ, ಎರ್ಮಾಳ್ ಮಸೀದಿ ಹತ್ತಿರ 2 ಕಿ.ಮೀ, ಎರಡುಕಡೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಕುಲ ಕಸುಬುದಾರರಿಗೆ ಆರ್ಥಿಕ ನೆರವು ನೀಡಲು ಹಾಗೂ ಸಾಮಾಜಿಕವಾಗಿ ಹಿಂದುಳಿದ ಬಡವರ್ಗದ ಜನರಿಗೆ ಗ್ರಾಮಗಳಲ್ಲಿಯೇ ಜೀವನಾಧಾರ ಕಲ್ಪಿಸಲು ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ಶುಕ್ರವಾರದಂದು ತಾಲೂಕು ಪಂಚಾಯಿತ್‌ ಸಭಾಂಗಣದಲ್ಲಿ ನಡೆದ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿ, ತಾವು ಇದನ್ನು ಸಮರ್ಪಕವಾಗಿ ಕಿಟ್ ಅನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗವನ್ನು ಮಾಡುವ ಸಲುವಾಗಿ ಈ ಉದ್ದೇಶದಿಂದ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹೊಲಿಗೆ ಯಂತ್ರ ವಿಸ್ತರಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕೈಗಾರಿಕಾ ವಿಸ್ತರಣಾ ಅಧಿಕಾರಿ ಮಂಜುನಾಥ್ ಹೆಗಡೆ  ಉಪಸ್ಥಿತರಿದ್ದರು. 133 ಫಲಾನುಭವಿಗಳಿಗೆ 9 ವಿವಿಧ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹಾಗೂ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

Read More