ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ಇದರ 36ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷರಾಗಿ ದಯಾನಂದ ಚಂದನ್ ಹಾಗೂ ಕಾರ್ಯದರ್ಶಿಯಾಗಿ ಸಂತೋಷ್ ಆಚಾರ್ಯ ಆಯ್ಕೆಯಾಗಿದ್ದಾರೆ. 36ನೇ ವರ್ಷದ ಶಾರದೋತ್ಸವವು ದಿನಾಂಕ ಸೆ.29, 30, ಅ.01 ರಂದು ನಡೆಯಲಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಭೂಗೋಳ ಮತ್ತು ಗಣಿತಶಾಸ್ತ್ರದ ಪ್ರಯೋಗಾಲಯವನ್ನು ಅಕಾಡೆಮಿಕ್ಸ್ ಮತ್ತು ಟ್ರೈನಿಂಗ್ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್, ಬೆಂಗಳೂರಿನ ನಿರ್ದೇಶಕರಾದ ಡಾ. ಸಿ. ಕೆ. ಮಂಜುನಾಥ್ ಅವರು ಉದ್ಘಾಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಸ್ಪಷ್ಟಪ್ರತಿಪತ್ತಿಗೆ ಪ್ರಯೋಗಾಲಯಗಳು ಅತ್ಯಂತ ಸಹಕಾರಿಗಳಾಗುತ್ತವೆ. ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಗಣಿತ ಮತ್ತು ಭೂಗೋಳ ಅಧ್ಯಾಪಕರ ಬೇಡಿಕೆಯಂತೆ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಮುತುವರ್ಜಿಯಿಂದ ಈ ’ಮಿಹಿರ’ ಎಂಬ ನಾಮಾಂಕಿತವಾದ ಪ್ರಯೋಗಾಲಯ ಸಿದ್ಧವಾಗಿತ್ತು. ಬೋಧನೆಗೆ ಅಗತ್ಯ ಪರಿಕರಗಳು, ವೃತ್ತವೇ ಮೊದಲಾದ ಆಕೃತಿಗಳ ಪರಿಚಯಾತ್ಮಕವಾದ ಪ್ರತಿಕೃತಿಗಳು, ಭಾರತೀಯ ಗಣಿತ ಸಾಧಕರ ಛಾಯಾಚಿತ್ರಗಳು, ಭೌಗೋಳಿಕವಾದ ಪರಿಸರಜ್ಞಾನ, ಭೂಮಿಯ ಒಳಪದರಗಳ ಪ್ರತಿಕೃತಿಗಳು, ಸೌರಮಂಡಲಾದಿ ಆಕಾಶಕಾಯಗಳ ಗತಿ ಬೋಧಕ ಸಾಮಗ್ರಿಗಳು, ದೇಶ ವಿದೇಶಗಳ ಪ್ರದೇಶ ಪರಿಚಯಾತ್ಮಕ ಛಾಯಾಚಿತ್ರಗಳನ್ನು ಇದು ಒಳಗೊಂಡಿದೆ. ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 2024 -25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನ ಮತ್ತು 100%ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜರುಗಿತು. ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವಿದ್ಯಾವಂತರೂ,ಸಂಸ್ಕಾರವಂತರೂ ಆಗಿ ಹೆತ್ತವರು ಮತ್ತು ಗುರುಗಳ ಕೃಪೆಗೆ ಪಾತ್ರರಾಗಿ ಸತ್ಪ್ರಜೆಗಳಾಗಿ ಬಾಳಬೇಕು” ಎಂದರು. ಶಾಲಾ ಉಪ ಪ್ರಾಂಶುಪಾಲರಾದ ಮೋಹನ್ ರಾವ್ ಎಂ.ಜೆ.ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಶೈಕ್ಷಣಿಕ ಸಾಧನೆಗೆ ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪಾಲಕರ ಪರಿಶ್ರಮವೇ ಕಾರಣ, ಶಿಕ್ಷಕರು ಮತ್ತು ಪೋಷಕರು ಜೊತೆಗೂಡಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸುವುದರೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಮುಖ್ಯ ಅತಿಥಿಗಳೂ, ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಡಾ. ಸಚ್ಚಿದಾನಂದ ವೈದ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ಬಸ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ 5 ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರವನ್ನು ಕೆನರಾ ಬ್ಯಾಂಕ್ ಕುಂದಾಪುರ ಶಾಖೆಯ ಮುಖ್ಯ ಪ್ರಬಂಧಕರಾದ ರಾಜು ಕೆ. ಉದ್ಘಾಟಿಸಿ, ಕಾಲೇಜು ನೀಡುತ್ತಿರುವ ಈ ತರಬೇತಿಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ಕಳೆದ 3 ವಷಗಳಿಂದ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಈ ತರಬೇತಿ ಕಾರ್ಯಾಗಾರಗಳ ಮೂಲಕ ಪಡೆದುಕೊಳ್ಳಬೇಕು ಎಂದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಹಾಗೂ ಮ್ಯಾಜಿಕ್ ಬಸ್ ಫೌಂಡೇಶನ್ ತರಬೇತುದಾರರಾದ ಜೋಶ್ವ ಡೆನಿಯಲ್ ಉಪಸ್ಥಿತರಿದ್ದರು. ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಕಾವ್ಯ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀಅಘೋರೇಶ್ವರ ಮೆಲೋಡಿಸ್ ಗ್ರೂಪ್ ಕೋಟ ಇವರ 13ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಸಾಲಿಗ್ರಾಮದ ಹೊಸಬದುಕು ಆಶ್ರಮದಲ್ಲಿ ಇತ್ತೀಚಿಗೆ ಜರುಗಿತು. ಅಘೋರೇಶ್ವರ ಸಂಸ್ಥೆಯ ವತಿಯಿಂದ ಆಶ್ರಮದ ನಿವಾಸಿಗಳಿಗೆ ದಿನನಿತ್ಯದ ದಿನಸಿ ಸಾಮಗ್ರಿಗಳು ಹಾಗೂ ಬಟ್ಟೆಯನ್ನು ನೀಡಿತು. ಕಾರ್ಯಕ್ರಮದಲ್ಲಿ ನೆರವು ಹಸ್ತಾಂತರ ಮಾಡಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ ಸಂಗೀತ ಸಂಸ್ಥೆ ಒಂದು ವರ್ಷದಲ್ಲಿ ಸಂಪಾದಿಸಿದ ಅದರ ಅರ್ಧ ಭಾಗ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುತ್ತಿರುವುದು ಅದರಲ್ಲೂ ಆಶ್ರಮಕ್ಕೆ ನೆರವು ಕಾರ್ಯ ಶ್ಲಾಘನೀಯ ಎಂದರು. ಶ್ರೀ ಅಘೋರೇಶ್ವರ ಸಂಸ್ಥೆಯ ಸಂಸ್ಥಾಪಕರಾದ ರವಿ ಬನ್ನಾಡಿ ಮಾತನಾಡಿ, ಅಣ್ಣನ ಕನಸು ಇದೀಗ ನನಸಾಗಿದೆ. ಆ ಕನಸು ನನಸು ಮಾಡಬೇಕೆನ್ನುವಂತಹ ಛಲವನ್ನ ಇಟ್ಟುಕೊಂಡು ಸಂಗೀತ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇನೆ. ಈ ಸಂಸ್ಥೆ ಹಲವಾರು ವರ್ಷದಿಂದ ಸಂಗೀತ ಆಸಕ್ತರನ್ನು ಹೊರ ತರುವಂತೆ ಮಾಡುತ್ತಿದೆ.ಈ ಸಂಸ್ಥೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳಾಗಿ, ಮುಂದಿನ ದಿನದಲ್ಲಿ ಅದ್ಭುತ ಗಾಯಕರಾಗಿ ಹೊರಹೊಮ್ಮುತ್ತಾರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಸಂಸ್ಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಸತಿಯುತ ಹೋಟೆಲ್ ಮ್ಯಾನೆಜ್‌ಮೆಂಟ್ ವೃತ್ತಿಪರ ತರಬೇತಿಯನ್ನು ಬೆಂಗಳೂರಿನ ಇನ್ಸಿಟಟ್ಯೂಟ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್ ನಲ್ಲಿ ನೀಡಲಾಗುತ್ತಿದ್ದು, ಸದರ ತರಬೇತಿ ಪಡೆಯಲಿಚ್ಚಿಸುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/sevasindhu/DepartmentServices ಅಥವಾ https://dom.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 2 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2573596 ಅಥವಾ ಸಹಾಯವಾಣಿ ಸಂಖ್ಯೆ: 8277799990, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ದೂ.ಸಂಖ್ಯೆ: 0820-2574596, ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದು.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಡ್ತರೆ ಗ್ರಾಮದ ಹಡವಿನಗದ್ದೆ ಎಂಬಲ್ಲಿ ಮಸೂದ್ ಪಟೇಲ್ ಅವರ ಗೋಡೌನ್‌ನಲ್ಲಿದ್ದ ಸುಮಾರು 5 ಲಕ್ಷ 60 ಸಾವಿರ ರೂ. ಮೌಲ್ಯದ ಅಡಿಕೆ ಕದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ನೂಜಿ ಬಾಳ್ತಿಲ ಗ್ರಾಮದ ಸಂತೋಷ್ (35), ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಿನಗೆರೆಯವನಾಗಿದ್ದು ಪ್ರಸ್ತುತ ಭಟ್ಕಳದಲ್ಲಿ ವಾಸವಾಗಿರುವ ಶಾನೂರು ಬಾಬುಲಾಲ್ ನವಾಜ್ ಘಜ್ನಿ (31), ಭಟ್ಕಳದ ಖ್ವಾಜಾ ಮಹಮ್ಮದ್ (26) ಮತ್ತು ಭಟ್ಕಳದ ಮಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಗಳು. ಆರೋಪಿಗಳಿಂದ ಕಳವಾಗಿದ್ದ 455 ಕೆಜಿ ಅಡಿಕೆ ಮತ್ತು ಸಾಗಾಟಕ್ಕೆ ಬಳಸಿದ ಕಾರನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮಸೂದ್ ಅವರು ಯಡ್ತರೆ ಗ್ರಾಮದ ಹಡಿನಗದ್ದೆಯಲ್ಲಿ 60 ಎಕ್ರೆ ಸ್ಥಳದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆಳೆದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಸಹಿತ ಅಡಿಕೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಗೋಡೌನ್‌ನಲ್ಲಿ ಇರಿಸಿದ್ದರು. ಮೇ. 22ರಂದು ಬೆಳಗ್ಗೆ ಗೋಡೌನ್‌ಗೆ ಹೋಗಿ ನೋಡಿದಾಗ ಎದುರಿನ ಕಬ್ಬಿಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪ್ರ ಕನ್ನಡ ಸಂಸ್ಕೃತಿ, ಮುಖ್ಯವಾಗಿ ಭಾಷೆ, ಸಾಹಿತ್ಯ, ಕಲೆ, ಜಾನಪದ ಸೊಗಡು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಈ ವಿಷಯದಲ್ಲಿ ಅಧ್ಯಯನ ನಡೆಸಬೇಕು. ಗಾದೆ ಹೇಳಲು, ಕುಂದಾಪ್ರ ಕನ್ನಡ ಶಬ್ದಗಳನ್ನು ಬರೆಯಲು ಕುಂದಾಪುರ ತಾಲೂಕಿನಿಂದ ನೂರಾರು ಮಂದಿ ಆಗಮಿಸಿರುವುದು ಸಂತೋಷ ತಂದಿದೆ. ತಮ್ಮ ಊರು, ತಮ್ಮ ಭಾಷೆ, ತಮ್ಮ ಕುಟುಂಬದ ವೃತ್ತಿ, ಮನೆ ಕೆಲಸ, ಪರಿಸರ ರಕ್ಷಣೆ ಎಲ್ಲವನ್ನೂ ಕಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಹಾಗೂ ಭಂಡಾರ್‌ಕಾರ‍್ಸ್ ಕಾಲೇಜು, ಕುಂದಾಪುರ ವಿದ್ಯಾರ್ಥಿಗಳಿಗೆ ಕುಂದಾಪ್ರ ಕನ್ನಡದ ಬಗ್ಗೆ ಆಸಕ್ತಿ ಬೆಳೆಸುತ್ತಿರುವುದು ಅಭಿನಂದನೀಯ ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ, ಕೊರ್ಗಿ ವಿಠಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಕೊರ್ಗಿ ವಿಠಲ ಶೆಟ್ಟಿ ಹೇಳಿದರು. ಅವರು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಸಭಾಂಗಣದಲ್ಲಿ ಏರ್ಪಡಿಸಿದ ಕುಂದಾಪ್ರ ಕನ್ನಡ ಗಾದೆಗಳನ್ನು ಹೇಳುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ಚೆಸ್ ದಿನದ ಪ್ರಯುಕ್ತ ಮದರ್ ತೆರೆಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯಿತು. 6ರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು. ಕಾರ್ಯಕ್ರಮವನ್ನು ಶಾಲೆಯ ಆಡಳಿತ ಮಂಡಳಿಯವರು, ಅತಿಥಿಗಳು ಹಾಗೂ ಚೆಸ್ ಚಾಂಪಿಯನ್‌ಶಿಪ್ ಉಸ್ತುವಾರಿ ಹೊತ್ತ ಸತೀಶ್ ದೈಹಿಕ ಶಿಕ್ಷಣ ಶಿಕ್ಷಕರು ಚದುರಂಗದ ಕಾಯಿಗಳನ್ನ ನಡೆಸುವ ಮೂಲಕ ಉದ್ಘಾಟಿಸಿದರು. ಈ ವಿಶಿಷ್ಟ ಉದ್ಘಾಟನೆಯು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿತು. ಕಾರ್ಯಕ್ರಮವನ್ನು ನಡೆಸಿಕೊಡಲು ನಾರಾಯಣ ಗುರು ಚೆಸ್ ಸ್ಕೂಲ್‌ನ ಸಾಕ್ಷಾತ್ ಮತ್ತು ರಾಹುಲ್ ಆಗಮಿಸಿದ್ದರು. ಶ್ರೀ ನಾರಾಯಣ ಗುರು ಸ್ಕೂಲ್ ನ ತರಬೇತುದಾರರಾಗಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಸ್ಪರ್ಧಿಗಳನ್ನು ರಾಜ್ಯ ಅಂತರ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಗಳಲ್ಲಿ ವಿಜೇತರನ್ನಾಗಿಸಿದ ಉತ್ತಮ ಚೆಸ್ ತರಬೇತುದಾರರಾದ ಶ್ರೀಯುತ ಸಾಕ್ಷಾತ್ ಇವರು ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಅತ್ಯುತ್ತಮ ಸಿ.ಇ.ಟಿ ಮತ್ತು ನೀಟ್ ಕೋಚಿಂಗ್ ಪಡೆಯುವಂತಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪ್ರಯತ್ನದಿಂದ ಅತ್ಯುತ್ತಮ ಫಲಿತಾಂಶ ಪಡೆದು ಒಳ್ಳೆಯ ಹೆಸರು ಮಾಡುವ ಆಶಯ ಹೊಂದಿದ್ದೇವೆ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಕಾಲೇಜಿನ ಸಂಚಾಲಕರಾದ ಬಿ.ಎಮ್. ಸುಕುಮಾರ್ ಶೆಟ್ಟಿ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎಸಿಸಿಇ ಅಕಾಡೆಮಿಯ ಸಹಭಾಗಿತ್ವದಲ್ಲಿ ಆರಂಭವಾದ ಸಿಇಟಿ, ಎನ್‌ಇಇಟಿ, ಜೆಇಇ ಪರೀಕ್ಷಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಸೀತಾರಾಮ್ ನಕ್ಕತ್ತಾಯರವರು ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸಿಸಿಇ ಅಕಾಡೆಮಿಯ ನಿರ್ದೇಶಕರಾದ ಲಾತವ್ಯ ಆಚಾರ್ಯ ಅವರು ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೋ, ತಂದೆತಾಯಿಯವರೊಂದಿಗೆ ಆತ್ಮೀಯತೆಯಲ್ಲಿ ಮಾತಾಡಿ ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬಹುದು ಎನ್ನುತ್ತಾ, ತರಬೇತಿಯ ರೂಪುರೇಷೆ ಮತ್ತು ಯೋಜನೆಗಳನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೀತೇಶ್ ಶೆಟ್ಟಿ, ಎಸಿಸಿಇ…
