Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶ್ರೀ ಕ್ಷೇತ್ರ ವತ್ತಿನಕಟ್ಟೆ – ನೂತನ ಯಕ್ಷಗಾನ ಮೇಳಕ್ಕೆ ಚಾಲನೆ.‌ ಪ್ರಥಮ ದೇವರ ಸೇವೆಯಾಟ
    ಊರ್ಮನೆ ಸಮಾಚಾರ

    ಶ್ರೀ ಕ್ಷೇತ್ರ ವತ್ತಿನಕಟ್ಟೆ – ನೂತನ ಯಕ್ಷಗಾನ ಮೇಳಕ್ಕೆ ಚಾಲನೆ.‌ ಪ್ರಥಮ ದೇವರ ಸೇವೆಯಾಟ

    Updated:27/11/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ‌ ಸುದ್ದಿ.
    ಬೈಂದೂರು:
    ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ನೂತನ ಯಕ್ಷಗಾನ ಮೇಳ, ಶ್ರೀ ಮಹಾಸತಿ ಅಮ್ಮನವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ವತ್ತಿನಕಟ್ಟೆ ಇದರ ಪ್ರಥಮ ದೇವರ ಸೇವೆಯಾಟ ದೇವಳದ ಆವರಣದಲ್ಲಿ ಗುರುವಾರ ಜರುಗಿತು.

    Call us

    Click Here

    ಹಿರಿಯ ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ ಅವರು ನೂತನ ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ದೇವಳದ ಭಕ್ತರ ಪ್ರೋತ್ಸಾಹ, ಆಡಳಿತ ಮಂಡಳಿಯ ಸಹಕಾರ ಹಾಗೂ ಉತ್ತಮ ಕಲಾವಿದರ ಉಪಸ್ಥಿತಿಯಲ್ಲಿ ಯಕ್ಷಗಾನ ಮೇಳ ಯಶಸ್ವಿಯಾಗಿ ಸಾಗಲು ಸಾಧ್ಯವಿದೆ. ವತ್ತಿನಕಟ್ಟೆ ಮೇಳ ಯಶಸ್ಸು ಸಾಧಿಸುವಂತಾಗಲಿ ಎಂದು ಶುಭಹಾರೈಸಿದರು.

    ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ‌ ಅವರು ಪ್ರಸ್ತಾವಿಕ ಮಾತುಗಳನ್ನಾಡಿ, ವತ್ತಿನಕಟ್ಟೆ ಶ್ರೀ ಮಹಾಸತಿ ಅಮನವರು ಶಕ್ತಿಮಾತೆಯಾಗಿದ್ದು, ನಂಬಿದ ಭಕ್ತವರ್ಗವನ್ನು ಕರುಣಿಸುತ್ತಾ ಬಂದಿದ್ದಾಳೆ. ಕಳೆದ ಒಂದೂವರೆ ದಶಕದಲ್ಲಿ ದೇವಸ್ಥಾನ ವಿವಿಧ ಧಾರ್ಮಿಕ ಚಟುವಟಿಕೆಗಳ ಮೂಲಕ ಇನ್ನಷ್ಟು ಉನ್ನತಿಕಂಡಿದೆ. ನೂತನ ಯಕ್ಷಗಾನ ಮೇಳದ ಮೂಲಕ ದೇವಳದ ಐತಿಹ್ಯವನ್ನು ಸಾರುವ‌, ಕಲಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾಗಿದ್ದು, ಭಕ್ತರ ನಿರಂತರ ಸಹಕಾರ ಅಗತ್ಯ ಎಂದರು.

    ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಅಣ್ಣಪ್ಪ ಶೇರುಗಾರ್, ಜಿ.ಪಂ‌. ಮಾಜಿ ಸದಸ್ಯ ಸುರೇಶ್ ಬಟವಾಡಿ, ಬೈಂದೂರು ಸೇನೇಶ್ವರ ದೇವಳ‌ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್, ಮೇಳದ ವ್ಯವಸ್ಥಾಪಕ ಗುಂಡು ಕಾಂಚನ್ ವೇದಿಕೆಯಲ್ಲಿದ್ದರು.

    ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ‌ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ, ಸದಸ್ಯರಾದ ನಾಗರಾಜ ಗಾಣಿಗ, ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ, ಮಂಜುನಾಥ ಆಚಾರ್ಯ, ಮೇಳದ ಸಂಚಾಲಕ ಕಿರಣ್ ಆಚಾರ್ ಕೋಟೇಶ್ವರ ಉಪಸ್ಥಿತರಿದ್ದರು.

    Click here

    Click here

    Call us

    ಶಿಕ್ಷಕ ಪ್ರಭಾಕರ ಬಿಲ್ಲವ ವಂದಿಸಿ, ಶಿಕ್ಷಕ ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ನೂತನ ಮೇಳದ ಆರಂಭ ಪ್ರಯಕ್ತ ಬೆಳಿಗ್ಗೆ ಗಣಪತಿ‌‌ ಹೋಮಾದಿ ಸತ್ಕಾರಗಳು, ಶ್ರೀ ಮಹಾಸತಿ ಅಮ್ಮನವರಿಗೆ ವಿಶೇಷ ಪೂಜೆ, ಸಂಜೆ ಗಣಪತಿ ಪೂಜೆ ಬಳಿಕ ಮೇಳಕ್ಕೆ ಚಾಲನೆ ದೊರೆಯಿತು. ಪ್ರಥಮ ಸೇವೆಯಾಟವಾಗಿ ಧರ್ಮಾಂಗದ ದಿಗ್ವಿಜಯ – ಮಾಯಾಪುರಿ, ವೀರಮಣಿ ಮೀನಾಕ್ಷಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಂಡಿತು. ಡಿಸೆಂಬರ್ 04ರಂದು ಶ್ರೀ ವತ್ತಿನಕಟ್ಟೆ ಕ್ಷೇತ್ರ ಮಹಾತ್ಮೆ ಪ್ರಸಂಗ ಪ್ರದರ್ಶನಗೊಳ್ಳಲಿದೆ.

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೋಟ ವಿವೇಕ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ನಿನಾದ – 2026 ಸಂಭ್ರಮಕ್ಕೆ ಚಾಲನೆ

    27/11/2026

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

    27/11/2026

    ತೆಕ್ಕಟ್ಟೆ ವಿಶ್ವ ವಿನಾಯಕ ವಿದ್ಯಾಸಂಸ್ಥೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

    27/11/2026
    Leave A Reply Cancel Reply

    seventeen − fifteen =

    Call us

    Click Here

    Call us

    Call us

    Call us
    Highest Viewed Recently
    • ಶ್ರೀ ಕ್ಷೇತ್ರ ವತ್ತಿನಕಟ್ಟೆ – ನೂತನ ಯಕ್ಷಗಾನ ಮೇಳಕ್ಕೆ ಚಾಲನೆ.‌ ಪ್ರಥಮ ದೇವರ ಸೇವೆಯಾಟ
    • ಕೋಟ ವಿವೇಕ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ನಿನಾದ – 2026 ಸಂಭ್ರಮಕ್ಕೆ ಚಾಲನೆ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
    • ರಕ್ತದಾನ ಜೀವ ಉಳಿಸುವ ಶ್ರೇಷ್ಠ ಮಾನವೀಯ ಸೇವೆ: ಡಾ. ಮಹಾಬಲ ಶೆಟ್ಟಿ
    • ಭಾರತ್ ನೆಟ್‌ ಹಂತ-3 ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.