Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದ ಕನ್ನಡ ಭಾಷಾಭಿವೃದ್ಧಿ ಸಮಿತಿಯ ಸದಸ್ಯತ್ವ ಅಭಿಯಾನಕ್ಕೆ ಅಧ್ಯಕ್ಷ ಶ್ರೀ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಚಾಲನೆ ನೀಡಿದರು. ಸದಸ್ಯತ್ವ ಸ್ವೀಕರಿಸುವ ಮೂಲಕ ಹಾಗೂ ಸಂಘಟನೆಯ ಪೋಷಕರಾಗುವ ಮೂಲಕ ಅವರು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಉದ್ದೇಶಕ್ಕೆ ಶುಭ ಕೋರಿದರು. “ಕುಂದಾಪ್ರ ಕನ್ನಡ ಭಾಷಾಭಿಮಾನಿಗಳು ಕುಂದಾಪ್ರ ಕನ್ನಡ ಸಾಹಿತ್ಯ, ಕಲೆ, ಜಾನಪದ ಸಂಸ್ಕೃತಿ ಉಳಿಸುವಲ್ಲಿ ಒಗ್ಗೂಡಿ ನಮ್ಮತನ ಉಳಿಸಿ ಬೆಳೆಸಬೇಕು.” ಎಂದರು. ಸಮಿತಿಯ ಖಜಾಂಚಿ ಕೆ. ಆರ್. ನಾಯ್ಕ, ಬಿ. ಅಪ್ಪಣ್ಣ ಹೆಗ್ಡೆ ಅವರಿಗೆ ಪ್ರಥಮ ರಶೀದಿ ಹಸ್ತಾಂತರಿಸಿದರು. ಸಮಿತಿ ಸಂಚಾಲಕ ಯು. ಎಸ್. ಶೆಣೈ ಬಿ. ಅಪ್ಪಣ್ಣ ಹೆಗ್ಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಬಿ. ಅಪ್ಪಣ್ಣ ಹೆಗ್ಡೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ. ರಾಮಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಇವರ ವತಿಯಿಂದ ಡ್ರೋನ್ ಆಧಾರಿತ ಫೋಟೊಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಗಾಗಿ ಪರಿಶಿಷ್ಟ ಪಂಗಡದ ಯುವಕ ಹಾಗೂ ಯುವತಿಯರಿಂದ (ಮೂಲನಿವಾಸಿ, ಅಲೆಮಾರಿ, ಅರೆ ಅಲೆಮಾರಿ & ಸೂಕ್ಷ್ಮ/ ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಅದ್ಯತೆ) ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 23 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಐ.ಟಿ.ಡಿ.ಪಿ ಕಚೇರಿ, ರಜತಾದ್ರಿ, ಮಣಿಪಾಲ ಉಡುಪಿ ದೂ.ಸಂಖ್ಯೆ: 0820-2574814 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಅಹಿಂಸೆಯು ಹಿಂಸೆಯ ಬದಲಿ ಅಥವಾ ಪ್ರತಿ ಅಲ್ಲ. ಅದು ಪರಿಪೂರ್ಣ ಜೀವನ ದರ್ಶನ. ಮನುಷ್ಯ ಜೀವನ ನಿರ್ವಹಿಸುವ ವಿಧಾನ ಎಂದು ವಿಶ್ರಾಂತ ಪ್ರಾಧ್ಯಾಪಕ ರಾಜಾರಾಮ ತೋಳ್ಪಾಡಿ ವಿಶ್ಲೇಷಿಸಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಆಶ್ರಯದಲ್ಲಿ ನಡೆದ ’ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು’ ವಿಚಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಹಿಂಸೆ ಎನ್ನುವುದು ಅಧ್ಯಾತ್ಮ. ಆದರೆ, ಅದಕ್ಕೆ ಲೋಕ ಹಾಗೂ ವಾಸ್ತವದ ಸ್ಪರ್ಶ ಇದೆ ಎಂದು ಉಲ್ಲೇಖಿಸಿದ ಅವರು, ಹಿಂಸೆಯ ಮೂಲಕ ಸ್ವಾತಂತ್ರ್ಯ ಗಾಂಧಿಗೆ ಬೇಕಾಗಿರಲಿಲ್ಲ. ಉಗ್ರ ಹೋರಾಟಗಾರರು ಜನರ ಜೊತೆ ಬೆರೆತು ಹೋರಾಡುತ್ತಿರಲಿಲ್ಲ. ಜನರ ಭಾಗವಹಿಸುವಿಕೆ ಗಾಂಧೀಜಿಗೆ ಬಹುಖ್ಯವಾಗಿತ್ತು ಎಂದರು. ಮಾಂಸಾಹಾರ ಮಾಡುವುದೇ ಹಿಂಸೆಯ ಭಾಗ ಅಲ್ಲ. ಹಿಂಸೆ ಎಂಬುದು ಬದುಕಿನಲ್ಲಿ ಹಾಸುಹೊಕ್ಕ ಅನೇಕ ವರ್ತನೆಗಳು ಎಂದರು. ಅಹಿಂಸೆ ಎಂದರೆ ಒಂದು ಬಾಂಧವ್ಯ. ಹಿಂಸೆ ಮಾಡದೇ ಇರುವುದು ಅಹಿಂಸೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಉಡುಪಿ ಜಿಲ್ಲೆಯ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ. ಮೊದಲ ಬಾರಿಗೆ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷ ಏಳು ತಿಂಗಳು ಪೂರ್ಣಗೊಳಿಸಿ, ಐದನೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ಷೇತ್ರದ ಜನರಿಗೆ ನೂತನವಾಗಿ ಆಯ್ಕೆಯಾದ ನಮ್ಮೆಲ್ಲರ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಾಗೂ ನಿರ್ವಹಣೆಯ ಕೆಲಸಗಳಿಗೆ ಜನರಿಂದ ದಿನಂಪ್ರತಿ ಮನವಿಗಳನ್ನು ಸ್ವೀಕರಿಸುತ್ತಿದ್ದು, ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕ್ಷೇತ್ರದಲ್ಲಿ ಹೊಸ ಅಗತ್ಯ ಯೋಜನೆಗಳನ್ನು ಪ್ರಾರಂಭಿಸಲು ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ನಾವು ಶಾಸಕರಾದ ಆಗಿನಿಂದಲೂ ಯಾವುದೇ ಗಮನಾರ್ಹ ಅನುದಾನ ಲಭಿಸದೆ ಜನರ ಆದ್ಯತೆಯ ಬೇಡಿಕೆಗಳಿಗೆ, ತುರ್ತು ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳು ನಿಧಾನಗತಿಯಲ್ಲಿದ್ದು ಅಥವಾ ಸ್ಥಗಿತಗೊಂಡಿದೆ. ಆದ್ದರಿಂದ ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ನಮ್ಮ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ ಜೊತೆಯಲ್ಲಿ ಆಂತರಿಕ ಭದ್ರತಾ ಕಾರ್ಯಗಳನ್ನು ಗೃಹ ರಕ್ಷಕ ದಳದವರು ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು  ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶ್ಲಾಘಿಸಿದರು. ಅವರು ಅಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ಇವರ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸ್ ಸಿಬ್ಬಂದಿಗಳ ಕೊರತೆ ಅಥವಾ ಸಂಕಷ್ಟ ಸಂದರ್ಭದಲ್ಲಿ ಜಿಲ್ಲಾಡಳಿತದ ಜೊತೆ ಗೃಹ ರಕ್ಷಕ ದಳದವರು ಕೈಜೋಡಿಸಿ, ಸಮಾಜಕ್ಕೆ ಉತ್ತಮ ಸೇವೆಯನ್ನು ಗೃಹ ರಕ್ಷಕ ದಳದವರು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೃಹರಕ್ಷಕ ದಳದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಕುಟುಂಬ ವರ್ಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿ, ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದರ ಜೊತೆಗೆ ತಾವುಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ, ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿ, ಕಾಲಕಾಲಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸಿಟ್ಯೂಟ್ (ಈಅI) ಮೈಸೂರು ಹಾಗೂ ಇನ್ಸಿಟಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (Iಊಒ) ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯಾದ್ಯಂತ 20 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಂದ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ವಿವರ: ಫುಡ್ ಮತ್ತು ಬಿವರೇಜ್ ಸರ್ವೀಸ್ ಸ್ಟೀವರ್ಡ್ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ -100 ಹಾಗೂ ಪರಿಶಿಷ್ಟ ಪಂಗಡದ – 49 ಅಭ್ಯರ್ಥಿಗಳ ಗುರಿ ನಿಗಧಿಪಡಿಸಲಾಗಿದ್ದು, ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು, ರೂಮ್ ಅಟೆಂಡೆಂಟ್ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ – 30 ಹಾಗೂ ಪರಿಶಿಷ್ಟ ಪಂಗಡದ – 19 ಅಭ್ಯರ್ಥಿಗಳ ಗುರಿ ನಿಗಧಿಪಡಿಸಲಾಗಿದ್ದು, ಕನಿಷ್ಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಂಬರ್ ಗ್ರೀಸ್ ಕಳ್ಳ ಸಾಗಾಣಿಕೆಯ ಮಾಹಿತಿ ಆಧರಿಸಿ ಕೋಡಿ ಗ್ರಾಮದ ಮಧ್ಯ ಕೋಡಿಗೆ ಮಪ್ತಿಯಲ್ಲಿ ತೆರಳಿದ್ದ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳ ಮೇಲೆ ತಪ್ಪು ಗ್ರಹಿಕೆಯಿಂದ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳು ಗುರುತು ಪರಿಚಯ ಹೇಳಿಕೊಳ್ಳದೇ ವಯೋವೃದ್ಧ ವ್ಯಕ್ತಿಗೆ ಗನ್‌ ತೋರಿಸಿರುವುದು ಸಂಘರ್ಷಕ್ಕೆ ಕಾರಣವಾಗಿದ್ದು, ಸ್ಥಳೀಯರು ಆಕ್ರೋಶಗೊಂಡು ಮುಗಿಬಿದ್ದು ತಳ್ಳಾಟ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನ 2:30ರ ಸಮಾರಿಗೆ ಎನ್‌.ಎನ್‌.ಎಂ. ಸೌಹಾರ್ದ ಭವನದ ಎದುರಿನ ಐಸ್‌ಕ್ರೀಮ್‌ ಅಂಗಡಿ ಎದುರು 2 ಕಾರುಗಳು ಬಂದಿತ್ತು. ಕಾರಿನಲ್ಲಿ ಒಬ್ಬರು ಮಹಿಳೆ ನಾಲ್ವರು ಪುರುಷರು ಇಳಿದು ಅಂಗಡಿ ಬಳಿ ಇದ್ದ 3 ಮಂದಿ ಯುವಕರು ಹಾಗೂ ಓರ್ವ ವೃದ್ಧರಿಗೆ ಗನ್‌ ತೋರಿಸಿ ಕಾರು ಹತ್ತುವಂತೆ ಹೇಳಿದರು. ಆ ಸಂದರ್ಭ ಮಪ್ತಿಯಲ್ಲಿದ್ದ ಅಧಿಕಾರಿಗಳ ಬಳಿ ಐಡಿ ಕಾರ್ಡ್‌ ತೋರಿಸುವಂತೆ ಕೇಳಿದ್ದಾರೆ. ಆದರೆ ಅವರು ತೋರಿಸದೇ ಗನ್‌ ಹಿಡಿದಿದ್ದರಿಂದ ನಾಲ್ವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನವರಿ 10 ರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಭಿಯಂತರರಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಳ್ಳಲು 2018 ರಿಂದಲೇ ಕಾಮಗಾರಿಗಳನ್ನು ಕೈಗೊಳ್ಳಲು ಪತ್ರ ವ್ಯವಹಾರಗಳು ನಡೆದಿದ್ದವು, ಕಳೆದ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿದ್ದರೂ ಸಹ ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಹೆಚ್ಚಿನ ವ್ಯತ್ಯಯ ಉಂಟಾಗಿ ಪ್ರತೀ ದಿನವೂ ಜಿಲ್ಲಾಡಳಿತಕ್ಕೆ ದೂರುಗಳು ಕೇಳಿ ಬರುತ್ತಿವೆ. ಹಾಗೂ ಅಪಘಾತಗಳು ಸಹ ಕಾಮಗಾರಿಯ ವಿಳಂಬದಿಂದಾಗಿ ಉಂಟಾಗಿವೆ. ಇವಕ್ಕೆಲ್ಲಾ ಅಭಿಯಂತರರುಗಳು, ಗುತ್ತಿಗೆದಾರರೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಟ ಕಂಡುಬಂದಿದೆ. ಮಂಗಳವಾರ ರಾತ್ರಿ ಹಾಗೂ ಬುಧವಾರ ಮುಂಜಾನೆ ಹೊಂಬಾಡಿ-ಮಂಡಾಡಿ, ಹಾಗೂ ಹಳ್ಳಾಡಿ-ಹರ್ಕಾಡಿ ಗ್ರಾಮ ವ್ಯಾಪ್ತಿಯ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕವನ್ನುಂಟುಮಾಡಿದೆ. ಹೊಂಬಾಡಿ-ಮಂಡಾಡಿಯ ಕರಿನಕಟ್ಟೆ ರಾಮದಾಸ ಭಂಡಾರಿ ಎನ್ನುವರ ಮನೆಯ ಬಾಗಿಲಿನ ತನಕ ಮಂಗಳವಾರ ಮಧ್ಯರಾತ್ರಿ ವೇಳೆಗೆ ಚಿರತೆ ತೆರಳಿದ್ದು, ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬುಧವಾರ ಮುಂಜಾನೆ ವೇಳೆಯೂ ಕೂಡ ಇಲ್ಲಿಗೆ ಸಮೀಪದ ಹಳ್ಳಾಡಿ-ಹರ್ಕಾಡಿ ಗರಿಕೆಮಠ, ಸಿರಿಮಠ ಎಂಬಲ್ಲಿ ಚಿರತೆ ಓಡಾಟ ಮಾಡಿರುವ ಬಗ್ಗೆ ತಿಳಿದ ಜನರು ಆತಂಕ್ಕೀಡಾಗಿದ್ದಾರೆ. ಬೋನ್ ಇರಿಸಿದ ಇಲಾಖೆ:ಅರಣ್ಯ ಇಲಾಖೆಯ ಮೊಳಹಳ್ಳಿ ಶಾಖೆಗೊಳಪಡುವ ಹೊಂಬಾಡಿ – ಮಂಡಾಡಿ ಭಾಗದಲ್ಲಿ ಕಾಡಿಗೆ ಸಮೀಪದ ಮನೆಯ ಸುತ್ತ ಆಗಾಗ್ಗೆ ಚಿರತೆಗಳು ಆಹಾರವನ್ನರಿಸಿ ಓಡಾಟ ಮಾಡತ್ತಿರುವುದು ಕಂಡಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು, ಆಯಕಟ್ಟಿನ ಸ್ಥಳದಲ್ಲಿ ಬೋನು ಇರಿಸಿ ಚಿರತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಕ್ಷರದ ಒಡನಾಟದಿಂದ ಶಿಕ್ಷಣ ದೊರತರೆ, ರಂಗಭೂಮಿ ಬದುಕನ್ನು ಕಟ್ಟಿಕೊಡುತ್ತದೆ. ಇಲ್ಲಿ ನೋವು ಮರೆತು ನಲಿವು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ರಂಗ ಸಂಚಲನದ ಮೂಲಕ ಹೊಸೂರಿನ ಮರಾಠಿ ಸಮುದಾಯದ ಯುವಕರು ಹೊಸ ಸಾಧ್ಯತೆನ್ನು ಕಂಡುಕೊಂಡಿರುವುದು ಶ್ಲಾಘನಾರ್ಹ ಎಂದು ಗಂಗೊಳ್ಳಿ ಎಸ್‍.ವಿ. ಕಾಲೇಜು ಉಪನ್ಯಾಸಕರಾದ ಸುಜಯೀಂದ್ರ ಹಂದೆ ಹೇಳಿದರು. ಅವರು ಮಂಗಳವಾರ ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಲಾದ ವನಸಿರಿಯಲ್ಲೊಂದು ರಂಗ ಸುಗ್ಗಿ 3 ದಿನಗಳ ರಾಜ್ಯಮಟ್ಟದ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿ ಎಂದರೆ ಕೇವಲ ನಾಟಕವಲ್ಲ, ಅಲ್ಲಿ ಸಂಗೀತ, ನೃತ್ಯ, ಯಕ್ಷಗಾನ ಎಲ್ಲವೂ ಇದೆ. ರಂಗ ಪ್ರದರ್ಶನಗಳನ್ನು ಸ್ವೀಕರಿಸುವ ಮನೋಭೂಮಿಕೆಯು ಸಾಕ್ಷರತೆಯ ಪ್ರತೀಕವಾಗಿದೆ ಎಂದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅವರು ವಹಿಸಿದ್ದರು. ಈ ವೇಳೆ ಸಮಾಜ ಸೇವಕ ಲಿಜೋ ಇ.ಜೆ ಅಂಬಿಕಾನ್‍ ಹಾಗೂ ಕೊಲ್ಲೂರು ಶ್ರೀ…

Read More