ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಕ್ಷರದ ಒಡನಾಟದಿಂದ ಶಿಕ್ಷಣ ದೊರತರೆ, ರಂಗಭೂಮಿ ಬದುಕನ್ನು ಕಟ್ಟಿಕೊಡುತ್ತದೆ. ಇಲ್ಲಿ ನೋವು ಮರೆತು ನಲಿವು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ರಂಗ ಸಂಚಲನದ ಮೂಲಕ ಹೊಸೂರಿನ ಮರಾಠಿ ಸಮುದಾಯದ ಯುವಕರು ಹೊಸ ಸಾಧ್ಯತೆನ್ನು ಕಂಡುಕೊಂಡಿರುವುದು ಶ್ಲಾಘನಾರ್ಹ ಎಂದು ಗಂಗೊಳ್ಳಿ ಎಸ್.ವಿ. ಕಾಲೇಜು ಉಪನ್ಯಾಸಕರಾದ ಸುಜಯೀಂದ್ರ ಹಂದೆ ಹೇಳಿದರು.

ಅವರು ಮಂಗಳವಾರ ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಲಾದ ವನಸಿರಿಯಲ್ಲೊಂದು ರಂಗ ಸುಗ್ಗಿ 3 ದಿನಗಳ ರಾಜ್ಯಮಟ್ಟದ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿ ಎಂದರೆ ಕೇವಲ ನಾಟಕವಲ್ಲ, ಅಲ್ಲಿ ಸಂಗೀತ, ನೃತ್ಯ, ಯಕ್ಷಗಾನ ಎಲ್ಲವೂ ಇದೆ. ರಂಗ ಪ್ರದರ್ಶನಗಳನ್ನು ಸ್ವೀಕರಿಸುವ ಮನೋಭೂಮಿಕೆಯು ಸಾಕ್ಷರತೆಯ ಪ್ರತೀಕವಾಗಿದೆ ಎಂದರು



ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅವರು ವಹಿಸಿದ್ದರು.
ಈ ವೇಳೆ ಸಮಾಜ ಸೇವಕ ಲಿಜೋ ಇ.ಜೆ ಅಂಬಿಕಾನ್ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ ಅವರನ್ನು ಸನ್ಮನಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೈಂದೂರು ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಕುಂದಾಪ್ರ ಡಾಟ್ ಕಾಂ ಸಂಪದಕರಾದ ಸುನೀಲ್ ಹೆಚ್.ಜಿ. ಬೈಂದೂರು, ಯಡ್ತರೆ ಬಿಲ್ಲವ ಸಮಾಜ ಸೇವ ಸಂಘದ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ, ಮರಾಠಿ ಸಮುದಾಯದ ಗುರಿಕಾರರಾದ ಗಣೇಶ ಮರಾಠಿ, ಮುಲ್ಲಿಬಾರು ಸ.ಹಿ.ಪ್ರಾ. ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಸುಮತಿ ಗಣೇಶ ಆಚಾರಿ, ಕೊಲ್ಲೂರು ಸ.ಹಿ.ಪ್ರಾ. ಶಾಲೆ ಅಧ್ಯಾಪಕರಾದ ಶಿವರಾಮ ಮರಾಠಿ ಹೊಸೂರು, ಹೊಸೂರು ಶ್ರೀ ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ಅಧ್ಯಕ್ಷರಾದ ನಾರಾಯಣ, ಹೊಸೂರು ಸಾರ್ವಜನಿಕ ಶ್ರೀ ಗಣೀಶೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಮರಾಠಿ, ಉಪಸ್ಥಿತರಿದ್ದರು.
ಸಂಚಲನ ಸಂಸ್ಥೆಯ ನಾಗಪ್ಪ ಮಾರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿಯಾದ ರಾಜು ಮರಾಠಿ ಸ್ವಾಗತಿಸಿ, ಶಿಕ್ಷಕ ಸುಧಾಕರ ಪಿ. ನಿರೂಪಿಸಿದರು.