ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಮ್ಮ ಸಮಾಜ ಸೇವೆ, ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತರಾದ ಬಾಬಣ್ಣ ಎಂದೇ ಕರೆಯಲ್ಪಡುತ್ತಿದ್ದ ಗೆಳೆಯರ ಬಳಗ ಹಂಗ್ಳೂರು ಸಂಸ್ಥೆಯ ಅಧ್ಯಕ್ಷ ವಿ. ಬಾಬು ಶೆಟ್ಟಿ (೮೧) ಇವರು ಕೋಟೇಶ್ವರ ಅಂಕದಕಟ್ಟೆಯ ಸ್ವಗೃಹದಲ್ಲಿ ಸೋಮವಾರ ಎ. ೧೭ರಂದು ನಿಧನರಾದರು. ಗೆಳೆಯರ ಬಳಗ ಹಂಗ್ಳೂರು ಸಂಘ ಸ್ಥಾಪನೆಯಾದ ೧೯೬೫ ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಇವರು ೫೮ ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಂಗ್ಳೂರು ವಿನಾಯಕ ಟಾಕೀಸ್ ಬಳಿ, ಸಂಘದ ಸ್ವಂತ ಕಟ್ಟಡದ ನಿರ್ಮಾಣಗೊಂಡ ನಂತರ ಶಿಕ್ಷಣ, ಸಂಗೀತ, ನಾಟಕ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಚಟುವಟಿಕೆ ನಡೆಸುವ ಕೇಂದ್ರವನ್ನಾಗಿ ಗೆಳೆಯರ ಬಳಗವನ್ನು ರೂಪಿಸಿದವರು ಬಾಬು ಶೆಟ್ಟಿಯವರು. ಸಂಗೀತ ಭಾರತಿ ಸಂಸ್ಥೆಗೆ ೨೦ ವರ್ಷಗಳ ಕಾಲ ಸಂಗೀತ ಶಾಲೆ ನಡೆಸಲು ಅವಕಾಶ ನೀಡಿದ್ದರು. ಮಕ್ಕಳಿಗಾಗಿ ಬಾಲವಾಡಿ ನಡೆಸುತ್ತಿದ್ದರು. ಶಿಶು ಮಂದಿರ ಆರಂಭಿಸಿದರು. ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ಮಾಡಿದ್ದರು. ಇವರ ನೇತೃತ್ವದಲ್ಲಿ ರಂಗ ಭೂಮಿ ಚಟುವಟಿಕೆಗೆ ಬಹಳ ಪ್ರೋತ್ಸಾಹ ದೊರೆತು, ಪ್ರತಿಭಾವಂತರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅರುಣ್ ದೀಪಕ್ ಮೆಂಡೋನ್ಸಾ ನಾಮಪತ್ರ ಸಲ್ಲಿಸಿದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಶ್ಮಿ ನಾಮಪತ್ರ ಸ್ವೀಕರಿಸಿದರು. ಈ ವೇಳೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುರಾಜ ಶೆಟ್ಟಿ ಸೋಮವಾರ ನಾಮಪತ್ರ ಸಲ್ಲಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ನಾಮಪತ್ರ ಸ್ವೀಕರಿಸಿದರು. ಈ ವೇಳೆ ಈ ವೇಳೆ ಉಪಚುನಾವಣಾಧಿಕಾರಿ ಪ್ರಭುಸ್ವಾಮಿ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು, ಹಿರಿಯರಾದ ಚನ್ನಕೇಶವ ಉಪಾಧ್ಯಾಯ, ಬಿಜೆಪಿ ಹಿಂದುಳಿದ ಮೊರ್ಚಾ ಅಧ್ಯಕ್ಷ ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತದ ರಾಜ್ಯಗಳು, ರಾಜಧಾನಿ, ಪ್ರಧಾನಮಂತ್ರಿಗಳ ಹೆಸರು, ಕರ್ನಾಟಕದ ಜಿಲ್ಲೆಗಳು, ನದಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟಪಟನೆ ಉತ್ತರಿಸುವ ಹಾಗೂ ಗುರುತಿಸುವ ಸ್ಕಂದ, ಅಧಿಕ ಜ್ಞಾಪನಾ ಶಕ್ತಿಯ ಕಾರಣಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಈ ದಾಖಲೆ ಮಾಡಿದ್ದಾನೆ. ಮೂಲತಃ ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿಯಾಗಿರುವ ಪ್ರಸ್ತುತ ಪ್ರಸ್ತುತ ಧಾರವಾಡ ದಲ್ಲಿ ನೆಲೆಸಿರುವ ಉಳ್ತೂರು ಸಾವಂತರಮನೆ ಸುನೀತಾ ಮತ್ತು ಹರೀಶ್ ಶೆಟ್ಟಿ ಇವರ ಪುತ್ರ 5 ವರ್ಷ 11 ತಿಂಗಳು ಪ್ರಾಯದ ಸ್ಕಂದ ಆರ್. ಶೆಟ್ಟಿ ಈ ಸಾಧನೆ ಮಾಡಿದ್ದಾನೆ. ಕರ್ನಾಟಕದ 31 ಜಿಲ್ಲೆಗಳು, 24 ನದಿಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, 28 ಭಾರತದ ರಾಜ್ಯಗಳು ಮತ್ತು ಅದರ ರಾಜಧಾನಿಗಳನ್ನು ಹಾಗೂ ಭಾರತದ 15 ಪ್ರಧಾನ ಮಂತ್ರಿಗಳನ್ನು ಹಾಗೂ 10 ಶ್ಲೋಕಗಳು ಮತ್ತು 10 ಭಜನೆ ಗಳನ್ನು ಪಠಣ ಮಾಡಿದ್ದಕ್ಕಾಗಿ ಸ್ಕಂದ ಹೆಚ್ ಶೆಟ್ಟಿ ಗೆ ಇಂಡಿಯಾ ಬುಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಎಂ ಜಯರಾಮ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್, ಮೂಡ್ಲಕಟ್ಟೆ ಸಂಸ್ಥೆಯಲ್ಲಿ ಕಾಲೇಜಿನ ಕ್ರೀಡೋತ್ಸವ “ಐಕ್ಯಂ” ಉದ್ಘಾಟನೆ ಮತ್ತು ತಂಡಗಳ ಹೆಸರು ಮತ್ತು ಲಾಂಛನ ಅನಾವರಣ ಸಮಾರಂಭ ಜರುಗಿತು. ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕ್ರೀಡೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾಧನವಾಗಿದೆಯೆಂದು ಹೇಳಿದರು. ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ನ ನಿರ್ದೇಶಕರಾದ ರಾಮಕೃಷ್ಣ ಹೆಗ್ಡೆಯವರು, ಐಎಂಜೆಐಎಸ್ಸಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ರವರು, ಐಎಂಜೆಐಎಸ್ಸಿ ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರೋ. ಜಯಶೀಲ ಕುಮಾರ್ರವರು, ಐಎಂಜೆ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ ಖಾರ್ವಿಯವರು ಉಪಸ್ಥಿತರಿದ್ದರು. ಐಎಂಜೆಐಎಸ್ಸಿ ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿಗಳಾದ ಕುಮಾರಿ ಮೊಹಿನ್ ಸಭಾ ಸ್ವಾಗತಿಸಿ, ಕುಮಾರಿ ಹನಾ ಶೇಖ್ ವಂದಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರ ಪಡೆದ ಸಿದ್ಧವಾಗಿದ್ದು, ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು. ಭಾನುವಾರ ಕುಂದಾಪ್ರ ಡಾಟ್ ಕಾಂನೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳುಗಳಿಂದ ಕಾಂಗ್ರೆಸ್ ಬಿರುಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪಿದ್ದು, ನಾಮಪತ್ರ ಸಲ್ಲಿಸಿದ ಬಳಿಕ ಮತ್ತೆ ಪ್ರಚಾರ ನಡೆಸಲಿದ್ದೇವೆ ಎಂದರು. ಎಪ್ರಿಲ್ 18ರ ಮಧ್ಯಾಹ್ನ ನಾಮಪತ್ರ ಸಲ್ಲಿಸಲಾಗುತ್ತಿದ್ದು, ಇದಕ್ಕೂ ಪೂರ್ವಭಾವಿಯಾಗಿ ಬೆಳಿಗ್ಗೆ ತ್ರಾಸಿಯಲ್ಲಿ ಸಭೆ ಮೆರವಣಿಗೆ ನಡೆಯಲಿದೆ ಎಂದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಸಹಭಾಗಿತ್ವದಲ್ಲಿ ಕಶ್ವಿ ಚೆಸ್ ಸ್ಕೂಲ್ (ರಿ.) ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ ನಡೆಯಿತು. ಈ ಶಿಬಿರದಲ್ಲಿ 38 ಯೂನಿಟ್ ರಕ್ತದಾನ ಸಂಗ್ರಹಣೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.15: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪೂರ್ವಾನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಚಾರಪಡಿಸುವ ಪೂವಾನುಮತಿ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿವ ಆಭ್ಯರ್ಥಿಗಳು, ಚುನಾವಣಾ ಜಾಹೀರಾತುಗಳನ್ನು ಪ್ರಚಾರ ಮಾಡುವ ಮುನ್ನ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಾಮಾಣೀಕರಣ ಪಡೆದು ಪ್ರದರ್ಶಿಸಬೇಕು ಎಂದರು. ಜಾಹೀರಾತಿನಲ್ಲಿ ಇತರರಿಗೆ ದೂರುವುದು, ಅಸ್ಪಷ್ಟ ಅಥವಾ ಮಾನ ಹಾನಿಕರ, ಹಿಂಸೆ ಪ್ರಚೋದನೆ, ನ್ಯಾಯಾಲಯ ನಿಂದನೆ, ರಾಷ್ಟ್ರದ ಏಕತೆ ಸಾರ್ವಭೌಮತ್ವಕ್ಕೆ ವಿರುದ್ದ ಹೇಳಿಕೆ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಚಿತ್ರಣ, ದೇಶದ ಸೇನಾಪಡೆಯ ಹಾಗೂ ಸೇನಾ ವ್ಯಕ್ತಿಗಳ ಚಿತ್ರ ಮತ್ತಿತರ ನಿರ್ಬಂಧಿತ ವಿಷಯಗಳನ್ನು ಒಳಗೊಂಡಿರಬಾರದು ಎಂದರು. ಕಾರ್ಯಗಾರದಲ್ಲಿ ತರಬೇತಿ ನೀಡಿದ ಮಾಸ್ಟರ್ ಟ್ರೇನರ್ ಡಾ.ಅಶೋಕ್ ಕಾಮತ್ ಮಾತನಾಡಿ, ಅರ್ಜಿ ಸಲ್ಲಿಸುವವರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿಯ ಜೊತೆಯಲ್ಲಿ ಜಾಹಿರಾತು ಒಳಗೊಂಡ ಸಿ.ಡಿ.ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಈ ಭಾರಿ ನನಗೆ ಬಿಜೆಪಿ ಪಕ್ಷ ಬೈಂದೂರು ಎಂಎಲ್ಎ ಟಿಕೆಟ್ ನೀಡಬಹುದೆಂಬ ನಿರೀಕ್ಷೆ ಇತ್ತು ಆದರೆ ಅದು ಈಡೇರಿಲ್ಲ. ಪಕ್ಷದ ನಾಯಕರೇ ಕರೆದು ಚುನಾವಣೆಗೆ ತಯಾರಾಗುವಂತೆ ಹೇಳಿ ಈಗ ಟಿಕೆಟ್ ನೀಡದಿರುವುದು ಮನಸ್ಸಿಗೆ ನೋವಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಹೇಳಿದರು. ಅವರು ಉಪ್ಪಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಛೇರಿಯಲ್ಲಿ ಶನಿವಾರ ಕಾರ್ಯಕರ್ತರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ಬಿಜೆಪಿ ಪಕ್ಷದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡು, ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಕಾರ್ಯಕರ್ತರು ಹಾಗೂ ಹಿತೈಶಿಗಳ ಆಶಯದಂತೆ ನಾನು ಕಳೆದ ಆರು ವರ್ಷಗಳಿಂದ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೆ. ನನ್ನದೇ ಆದ ನೆಲೆಯಲ್ಲಿಯೂ ಪಕ್ಷ ಸಂಘಟನೆಯನ್ನೂ ಮಾಡಿದ್ದೇನೆ ಎಂದರು. ಟಿಕೆಟ್ ಘೋಷಣೆಯ ಬಳಿಕ ಕೆಲವರು ಬಂಡಾಯ ಸಭೆಗೆ ನನ್ನನ್ನು ಆಹ್ವಾನಿಸಿದ್ದರೂ ನಾನು ಹೋಗಿಲ್ಲ. ಆದರೆ ಪಕ್ಷದ ಯಾರೊಬ್ಬ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ಮೂರು ದಿನಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಲು ಬೈಂದೂರು ವಿಧಾನಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪ್ರಸಾದ್ ಶನಿವಾರ ನಾಮಪತ್ರ ಸಲ್ಲಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಅಭ್ಯರ್ಥಿಯ ನಾಮಪತ್ರ ಸ್ವೀಕರಿಸಿದರು. ಬೈಂದೂರು ತಾಲೂಕಿನ ಆಲೂರು ಗ್ರಾಮದ 28 ವರ್ಷದ ಯುವಕ ಪ್ರಸಾದ್ ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
