ಮೂಡ್ಲಕಟ್ಟೆ: ‘ಐಕ್ಯಂ’ ಕ್ರೀಡೋತ್ಸವ ಉದ್ಘಾಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಐಎಂ ಜಯರಾಮ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್, ಮೂಡ್ಲಕಟ್ಟೆ ಸಂಸ್ಥೆಯಲ್ಲಿ ಕಾಲೇಜಿನ ಕ್ರೀಡೋತ್ಸವ “ಐಕ್ಯಂ” ಉದ್ಘಾಟನೆ ಮತ್ತು ತಂಡಗಳ ಹೆಸರು ಮತ್ತು ಲಾಂಛನ ಅನಾವರಣ ಸಮಾರಂಭ ಜರುಗಿತು.

Call us

Click Here

ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು.

ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕ್ರೀಡೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾಧನವಾಗಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ನ ನಿರ್ದೇಶಕರಾದ ರಾಮಕೃಷ್ಣ ಹೆಗ್ಡೆಯವರು, ಐಎಂಜೆಐಎಸ್ಸಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ರವರು, ಐಎಂಜೆಐಎಸ್ಸಿ ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರೋ. ಜಯಶೀಲ ಕುಮಾರ್ರವರು, ಐಎಂಜೆ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ ಖಾರ್ವಿಯವರು ಉಪಸ್ಥಿತರಿದ್ದರು.

ಐಎಂಜೆಐಎಸ್ಸಿ ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿಗಳಾದ ಕುಮಾರಿ ಮೊಹಿನ್ ಸಭಾ ಸ್ವಾಗತಿಸಿ, ಕುಮಾರಿ ಹನಾ ಶೇಖ್ ವಂದಿಸಿದರು. ಬಿಸಿಎ ವಿದ್ಯಾರ್ಥಿನಿ ಶರೋನ್ ಕಾರ್ಯಕ್ರಮವನ್ನು ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply