Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕನ್ನಡದ ಕವಿ ಮತ್ತು ಬರಹಗಾರರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ಕನ್ನಡ ಸರಸ್ವತ ಲೋಕಕ್ಕೆ ತಮ್ಮದೇ ಆದ ಚಾಪನ್ನು ಮೂಡಿಸಿರುವ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿಯವರಿಗೆ ಭಾವಪೂರಕವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು, ನಮ್ಮನ್ನು ಅಗಲಿದ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಸಾಧನೆಯನ್ನು ಕುರಿತು ಬಿಇಡಿ ಪ್ರಶಿಕ್ಷಣಾರ್ಥಿಗಳು ಮಾತನಾಡಿದರು. ಇನ್ನು ಕೆಲವು ವಿದ್ಯಾರ್ಥಿಗಳು ಅವರು ರಚಿಸಿದ ಭಾವಗೀತೆಗಳನ್ನು ಹಾಡುವ ಮೂಲಕ ಗೀತ ಗೌರವವನ್ನೂ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಿದ್ದಪ್ಪ ಕೆ. ಎಸ್. ಅವರು ಭಾಗವಹಿಸಿ ಮಾತನಾಡಿ, ಮರಣಿಸಿರುವ ವ್ಯಕ್ತಿಗಳನ್ನು ಅಂದರೆ ಸಾಧಕರನ್ನು ಸ್ಮರಿಸಿಕೊಳ್ಳಬೇಕು ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿಸ್ ಸಮೂಹ ಶಿಕ್ಷಣದ ಅಧ್ಯಕ್ಷರು ಆದ ಅಬ್ದುಲ್ ರೆಹಮಾನ್ ಅವರು ವಹಿಸಿದ್ದರು. ಪ್ರವೀಣ್ ಕುಮಾರ್ ಕೆಪಿ ಉಪ ಪ್ರಾಂಶುಪಾಲರು ಮತ್ತು ದಾಖಲಾತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಭಕ್ತರೋರ್ವರು ಕಾಣಿಕೆ ರೂಪದಲ್ಲಿ ನೀಡಿದ 1 ಕೆ.ಜಿ. (90 ಲಕ್ಷ ರೂ. ಮೌಲ್ಯ) ತೂಕದ ನವರತ್ನ ಕಲ್ಲುಗಳುಳ್ಳ ಚಿನ್ನದ ಮುಖವಾಡವನ್ನು ಬುಧವಾರ ಶ್ರೀದೇವಿಗೆ ಸಮರ್ಪಿಸಲಾಯಿತು. ತುಮಕೂರು ಜಿಲ್ಲೆಯಶಿರಾದ ಡಾ| ಕೆ. ಲಕ್ಷ್ಮೀನಾರಾಯಣ ಕುಟುಂಬ ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಬೆಳಗ್ಗೆ ರಥಬೀದಿಯಿಂದ ವಾದ್ಯಘೋಷ ಗಳೊಡನೆ ಚಿನ್ನದ ಮುಖವಾಡವನ್ನು ದೇಗುಲಕ್ಕೆ ತರಲಾಯಿತು. ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್, ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀದೇವಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾ‌ರ್ ಶೆಟ್ಟಿ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ ಸುಧಾ ಮತ್ತಿತರರು ಇದ್ದರು. ಜೂ. 10ರಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಮುಖವಾಡಕ್ಕೆ ಶೃಂಗೇರಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಆಯುರ್ವೇದ ವೈದ್ಯ ಡಾ। ಕೆ.ಲಕ್ಷ್ಮೀನಾರಾಯಣ ಅವರು 45 ವರ್ಷಗಳ ಹಿಂದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಮಹತ್ಮಾ ಜ್ಯೋತಿಬಾಪುಲೆ ಕೊರಗರ ಕಲಾ ವೇದಿಕೆ ನೇತೃತ್ವದಲ್ಲಿ ತಾಲೂಕಿನ ಕೊರಗರ ಭೂಮಿ ಸಮಸ್ಯೆ ಮತ್ತು ಇತರ ಬೇಡಿಕೆ ಆಗ್ರಹಿಸಿ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನಾ ರ್ಯಾಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯಿತು. ಈ ಸಂದರ್ಭ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿ, ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು. ತಾಲೂಕಿನ ಕೊರಗ ಸಮುದಾಯದ ಹಲವು ಕುಟುಂಬಗಳು ಭೂಮಿಯಿಂದ ವಂಚಿತರಾಗಿದ್ದಾರೆ. ಕೊರಗರಿಗೆ ಭೂಮಿ ನೀಡುವ ಬಗ್ಗೆ ಹಲವು ಬಾರಿ ಸಭೆ ನಡೆದಿದ್ದರೂ ಕೂಡ ಈವರೆಗೆ ಯಾವ ಕುಟುಂಬಗಳಿಗೂ ಭೂಮಿ ನೀಡುವ ಕಾರ್ಯ ನಡೆದಿಲ್ಲ ಶೀಘ್ರ, ಕೊರಗ ಸಮುದಾಯದವರಿಗೆ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಭೂಮಿ ನೀಡಬೇಕು ಹಾಗೂ ಮೂಲ ಸೌಕರ್ಯ ಕಲಿಸಬೇಕು ಎಂದು ಆಗ್ರಹಿಸಿದರು. ಪ್ರತೀ ಎರಡು ತಿಂಗಳಿಗೊಮ್ಮೆ ಕೊರಗರ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಕೊರಗರ ಭೂಮಿ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆಯಬೇಕು. ಆ ಸಭೆಯಲ್ಲಿ ಕಂದಾಯ ಇಲಾಖೆಯ ಗ್ರಾಮಆಡಳಿತಾಧಿಕಾರಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಯ ಮುಂದಿನ ಶಿಕ್ಷಣ ಸಾಧನೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿವೇತನ ಪಡೆದುಕೊಳ್ಳುವಾಗ ಆಗುವ ಖುಷಿಯೇ ವಿಶಿಷ್ಟವಾದುದು. ಮುಂದೆ ಈ ವಿದ್ಯಾರ್ಥಿಗಳು ಸಾಧನೆಯ ಪಥಕ್ಕೇರಿದ ಬಳಿಕ ಪ್ರೋತ್ಸಾಹಿಸಿದ ಸಂಸ್ಥೆಗಳನ್ನು ಮರೆಯಬಾರದು, ಸಮಾಜಕ್ಕೆ ಸ್ಪಂದಿಸುವ ಸಮಾಜಮುಖಿತ್ವ ಮೈಗೂಡಿಸಿಕೊಳ್ಳಬೇಕು ಎಂದು ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಹೇಳಿದರು. ಅವರು ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ವತಿಯಿಂದ ಬೈಂದೂರು ವತ್ತಿನಕಟ್ಟೆಯ ಮಹಾಸತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಪುಸ್ತಕ, ಕಲಿಕೋಪಕರಣ, ಕೊಡೆ ವಿತರಣೆ, ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ಇದರ ಅಧ್ಯಕ್ಷರಾದ ಕೆ. ರಮೇಶ ಗಾಣಿಗ ಕೊಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಲ್ಲಿ ಯಾರೂ ಕೂಡಾ ವಂಚಿತರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಸಮಾಜದ ಸತ್ಪ್ರಜೆಗಳಾಗಿ ರೂಪಿಸಿ. ಮಕ್ಕಳಿಗೆ ಸಮಾಜಮುಖಿ ಚಿಂತನೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಒಂದೇ ತರಗತಿಯ ಇಬ್ಬರು ಹೆಣ್ಣುಮಕ್ಕಳು ಜಪಾನ್‌ನ ಅಂತರಾಷ್ಟ್ರೀಯ ವೇದಿಕೆಗೆ ಆಯ್ಕೆಯಾಗಿರುವುದು ಲಿಂಗ ಸಮಾನತೆಯನ್ನು ಸಾಕಾರಗೊಳಿಸುವಲ್ಲಿ ದೇಶದ ನಾರಿ ಶಕ್ತಿಗೆ ದೊರಕಿರುವ ಅತ್ಯದ್ಭುತ ಪ್ರೇರಣೆಯಾಗಿದ್ದು, ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲದ ರಜತಾದ್ರಿಯ ತಮ್ಮ ಕಚೇರಿಯಲ್ಲಿ, ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯವು ನಡೆಸುವ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯ ರಾಷ್ಟ್ರಮಟ್ಟದ ವಿಭಾಗದಲ್ಲಿ ವಿಜೇತರಾಗಿ, ಜೂನ್ 15 ರಿಂದ 21 ರ ವರೆಗೆ ಜಪಾನ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾದ ಜಿಲ್ಲೆಯ ಕಾರ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಹಾಗೂ ನಿಕಿತಾ ಅವರುಗಳಿಗೆ ಅಭಿನಂದನೆ ಸಲ್ಲಿಸಿ, ಮಾತನಾಡಿದರು. ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ಫ್ಲಡ್ ಡಿಟೆಕ್ಟರ್ ಪೋಲ್ ಹಾಗೂ ರೋಪೋ ಮೀಟರ್ ಎಂಬ ಅನ್ವೇಷಣೆಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಬೆಂಗಳೂರು: ಪತ್ರಿಕೋದ್ಯಮಕ್ಕೆ ಹಾಗೂ ಮಾಧ್ಯಮ ಜಗತ್ತಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಆಸಕ್ತರು, ವಿಶೇಷವಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ತಿಳಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯು ಕೆಲವು ದಶಕಗಳಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು, ಮಾರಾಟಕ್ಕೆ ಲಭ್ಯವಿವೆ. ಹಿರಿಯ ಪತ್ರಕರ್ತರು, ಪರಿಣತರು ಬರೆದಿರುವ ಈ ಪುಸ್ತಕಗಳು ಯುವ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಈ ಪುಸ್ತಕಗಳ ಮೇಲೆ ಶೇ. 20 ರ ವರೆಗೆ ರಿಯಾಯಿತಿಯೂ ನೀಡಲಾಗುತ್ತಿದೆ. ಆಸಕ್ತರು ಪುಸ್ತಕಗಳ ಕುರಿತ ಮಾಹಿತಿಯನ್ನು X, instagram ಮತ್ತು ಫೇಸ್ಬುಕ್ ಗಳಲ್ಲಿನ ಅಕಾಡೆಮಿಯ ಖಾತೆ @karmediaacademy/ Karnataka Media Academy ಗಳಲ್ಲಿ ಪಡೆಯಬಹುದಾಗಿದೆ. ಆಸಕ್ತರು, ಪತ್ರಿಕೋದ್ಯಮ ಬೋಧಿಸುವ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಸಗಟು ಖರೀದಿ ಮಾಡಲು ಬಯಸುವವರು ಅಕಾಡೆಮಿಯ ಕಚೇರಿಯನ್ನು ದೂರವಾಣಿ ಸಂಖ್ಯೆ 080…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಿಗಮದ ವಿವಿಧ ಯೋಜನೆಗಳಾದ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಹಾಗೂ ಹೊಲಿಗೆ ಯಂತ್ರ ವಿತರಣೆ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸ ಬಯಸುವ ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಂದ ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯ ಸೌಲಭ್ಯ ಪಡೆಯಲು ವೆಬ್‌ಸೈಟ್ https://www.kaushalkar.com/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ www.dbcdc.karnataka.gov.in…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ನೀರಾವರಿ ನೀತಿಗಳನ್ನು ರೂಪಿಸಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ವತಿಯಿಂದ 7 ನೇ ಸಣ್ಣ ನೀರಾವರಿ ಗಣತಿ ನೀರಿನ ಮೂಲಗಳ ಸಮೀಕ್ಷೆಯನ್ನು ಮೇ ಯಿಂದ ಅಕ್ಟೋಬರ್ ಅಂತ್ಯದ ವರೆಗೆ ನಡೆಯಲಿದ್ದು, ಸಾರ್ವಜನಿಕರು ಈ ಗಣತಿಗೆ ಸಹಕರಿಸುವುದರೊಂದಿಗೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ತಿಳಿಸಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಏಳನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕಾರ್ಯಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ವಿಧದ ಸಣ್ಣ ನೀರಾವರಿ ಯೋಜನೆಗಳ, ನೀರಿನ ಆಸರೆಗಳ ಸಮಗ್ರ ಹಾಗೂ ನಂಬಲಾರ್ಹ ಮೂಲಕಗಳ ಅಂಕಿ-ಅಂಶಗಳ ಸಂಗ್ರಹಣೆ, ಭವಿಷ್ಯದಲ್ಲಿ ಅವುಗಳ ಸದ್ಬಳಕೆ, ನಿರ್ವಹಣೆ ಹಾಗೂ ಆದಾಯ ಸಂಗ್ರಹಣೆ, ಹೊಸ ಯೋಜನೆಗಳಿಗೆ ರೂಪ ಕೊಡುವುದು ಸೇರಿದಂತೆ ಪರಿಣಾಮಕಾರಿ ಯೋಜನೆಗಳು ಮತ್ತು ನೀತಿಗಳ ನಿರೂಪಣೆ ಕೈಗೊಳ್ಳಲು ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ಕುಲ ಕಸುಬುಗಳಿಗೆ ಕೇಂದ್ರ ಸರಕಾರ ಮರುಜೀವದ ಕಾಯಕಲ್ಪ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಜಿಲ್ಲಾಡಳಿತ ಉಡುಪಿ ಜಿಲ್ಲೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪಿ. ಎಂ. ವಿಶ್ವಕರ್ಮ ಯೋಜನೆಯ ಸೌಲಭ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ಈ ಯೋಜನೆಗಾಗಿ 12ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿ ಜನಸಾಮಾನ್ಯರ ಕಣ್ತೆರೆಸುವ ಕಾರ್ಯವನ್ನು ಮಾಡಿದೆ. ಇದು ಗ್ರಾಮಮಟ್ಟದ ಶಕ್ತಿಯೋಜನೆಯಾಗಿ ಹೊರಹೊಮ್ಮಿದೆ. ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಪಕ್ಷಭೇದ ಮರೆತು ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಕಾರ್ಯ ಶ್ಲಾಘನೀಯವಾದದ್ದು ಎಂದರು. ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪಿ.ಎಂ ಯೋಜನೆಯ ಕಿಟ್ ವಿತರಿಸಿ ವಿಕಸಿತ ಭಾರತಕ್ಕೆ ಪಿ.ಎಂ ಯೋಜನೆ ಸಹಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.11: ಜಿಲ್ಲೆಯಲ್ಲಿ ನಾಲ್ಕೈದು ದಿನ ರೆಡ್ ಅಲರ್ಟ್ ಇರುವುದರಿಂದ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್.12ರಂದು ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಉಳಿದಂತೆ ಪಿಯುಸಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳಿಗೆ ಎಂದಿನಂತೆ ತರಗತಿಗಳು‌ ಇರಲಿದ್ದು, ಹಾಜರಾತಿ ಕಡ್ಡಾಯವಿರುವುದಿಲ್ಲ. ಬುಧವಾರ ಮಧ್ಯಾಹ್ನದಿಂದ ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಶುಕ್ರವಾರ ಶನಿವಾರ, ಭಾನುವಾರ ಸೋಮವಾರ, ಮಂಗಳವಾರ ರೆಡ್ ಅಲರ್ಟ್ ಹಾಗೂ ಗುರುವಾರ, ಶನಿವಾರ ರೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read More